Check out the new design

ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫ * - ߘߟߊߡߌߘߊ ߟߎ߫ ߦߌ߬ߘߊ߬ߥߟߊ

PDF XML CSV Excel API
Please review the Terms and Policies

ߞߘߐ ߟߎ߬ ߘߟߊߡߌ߬ߘߊ߬ߟߌ ߝߐߘߊ ߘߏ߫: ߛߎߘߐߛߣߍߡߊ   ߟߝߊߙߌ ߘߏ߫:
وَاِذَا مَسَّكُمُ الضُّرُّ فِی الْبَحْرِ ضَلَّ مَنْ تَدْعُوْنَ اِلَّاۤ اِیَّاهُ ۚ— فَلَمَّا نَجّٰىكُمْ اِلَی الْبَرِّ اَعْرَضْتُمْ ؕ— وَكَانَ الْاِنْسَانُ كَفُوْرًا ۟
ಕಡಲಲ್ಲಿ ನಿಮಗೇನಾದರೂ ತೊಂದರೆಯಾದರೆ ನೀವು ಅಲ್ಲಾಹನನ್ನು ಬಿಟ್ಟು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತೀರೋ ಅವರೆಲ್ಲರೂ ನಿಮ್ಮನ್ನು ಬಿಟ್ಟು ಹೋಗುವರು. ಆದರೆ ಅಲ್ಲಾಹು ನಿಮ್ಮನ್ನು ಸುರಕ್ಷಿತವಾಗಿ ದಡ ಸೇರಿಸಿದರೆ ನೀವು ವಿಮುಖರಾಗುತ್ತೀರಿ. ಮನುಷ್ಯನು ಮಹಾ ಕೃತಘ್ನನಾಗಿದ್ದಾನೆ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
اَفَاَمِنْتُمْ اَنْ یَّخْسِفَ بِكُمْ جَانِبَ الْبَرِّ اَوْ یُرْسِلَ عَلَیْكُمْ حَاصِبًا ثُمَّ لَا تَجِدُوْا لَكُمْ وَكِیْلًا ۟ۙ
ಅವನು ನಿಮ್ಮನ್ನು ದಡದ ಒಂದು ಭಾಗಕ್ಕೆ (ಒಯ್ದು) ಅಲ್ಲಿ ನಿಮ್ಮನ್ನು (ಭೂಮಿಯಲ್ಲಿ) ಹುಗಿಯುವಂತೆ ಮಾಡಲಾರನು ಅಥವಾ ಅವನು ನಿಮ್ಮ ಮೇಲೆ ಕಲ್ಲಿನ ಮಳೆಯನ್ನು ಸುರಿಸಲಾರನೆಂದು ನೀವು ನಿರ್ಭಯರಾಗಿದ್ದೀರಾ? ನಂತರ ನಿಮ್ಮ ಕಾರ್ಯನಿರ್ವಹಣೆ ಮಾಡಲು ನೀವು ಯಾರನ್ನೂ ಕಾಣಲಾರಿರಿ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
اَمْ اَمِنْتُمْ اَنْ یُّعِیْدَكُمْ فِیْهِ تَارَةً اُخْرٰی فَیُرْسِلَ عَلَیْكُمْ قَاصِفًا مِّنَ الرِّیْحِ فَیُغْرِقَكُمْ بِمَا كَفَرْتُمْ ۙ— ثُمَّ لَا تَجِدُوْا لَكُمْ عَلَیْنَا بِهٖ تَبِیْعًا ۟
ಅಥವಾ ಅವನು ನಿಮ್ಮನ್ನು ಮತ್ತೊಮ್ಮೆ ಕಡಲಿಗೆ ಒಯ್ದು, ನಿಮ್ಮ ಮೇಲೆ ಚಂಡಮಾರುತವನ್ನು ಕಳುಹಿಸಿ, ನೀವು ನಿಷೇಧಿಸಿದ್ದರಿಂದ ನಿಮ್ಮನ್ನು ಕಡಲಲ್ಲಿ ಮುಳುಗಿಸಿ ಬಿಡಲಾರನೆಂದು ನೀವು ನಿರ್ಭಯರಾಗಿದ್ದೀರಾ? ನಂತರ ಅದಕ್ಕಾಗಿ ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ನೀವು ಯಾರನ್ನೂ ಕಾಣಲಾರಿರಿ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَلَقَدْ كَرَّمْنَا بَنِیْۤ اٰدَمَ وَحَمَلْنٰهُمْ فِی الْبَرِّ وَالْبَحْرِ وَرَزَقْنٰهُمْ مِّنَ الطَّیِّبٰتِ وَفَضَّلْنٰهُمْ عَلٰی كَثِیْرٍ مِّمَّنْ خَلَقْنَا تَفْضِیْلًا ۟۠
ನಿಶ್ಚಯವಾಗಿಯೂ ನಾವು ಆದಮರ ಮಕ್ಕಳನ್ನು (ಮಾನವರನ್ನು) ಗೌರವಿಸಿದ್ದೇವೆ. ಅವರನ್ನು ಕಡಲಲ್ಲೂ, ನೆಲದಲ್ಲೂ ಸವಾರಿ ಮಾಡಿಸಿದ್ದೇವೆ. ಅವರಿಗೆ ಶುದ್ಧ ವಸ್ತುಗಳಿಂದ ಆಹಾರವನ್ನು ಒದಗಿಸಿದ್ದೇವೆ. ನಮ್ಮ ಅನೇಕ ಸೃಷ್ಟಿಗಳಿಗಿಂತ ಹೆಚ್ಚು ನಾವು ಅವರಿಗೆ ಶ್ರೇಷ್ಠತೆಯನ್ನು ನೀಡಿದ್ದೇವೆ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
یَوْمَ نَدْعُوْا كُلَّ اُنَاسٍ بِاِمَامِهِمْ ۚ— فَمَنْ اُوْتِیَ كِتٰبَهٗ بِیَمِیْنِهٖ فَاُولٰٓىِٕكَ یَقْرَءُوْنَ كِتٰبَهُمْ وَلَا یُظْلَمُوْنَ فَتِیْلًا ۟
ನಾವು ಎಲ್ಲಾ ಮನುಷ್ಯರನ್ನೂ ಅವರ ಮುಖಂಡರೊಂದಿಗೆ ಕರೆದು ಒಟ್ಟುಗೂಡಿಸುವ ದಿನ. ಆಗ ಯಾರಿಗೆ ಅವನ ಕರ್ಮಪುಸ್ತಕವನ್ನು ಅವನ ಬಲಗೈಯಲ್ಲಿ ನೀಡಲಾಗುತ್ತದೋ—ಅವರು ತಮ್ಮ ಕರ್ಮಪುಸ್ತಕವನ್ನು ಓದುವರು. ಅವರಿಗೆ (ಖರ್ಜೂರದ ಬೀಜದಲ್ಲಿರುವ) ನೂಲಿನಷ್ಟೂ ಅನ್ಯಾಯವಾಗುವುದಿಲ್ಲ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَمَنْ كَانَ فِیْ هٰذِهٖۤ اَعْمٰی فَهُوَ فِی الْاٰخِرَةِ اَعْمٰی وَاَضَلُّ سَبِیْلًا ۟
ಯಾರು ಈ ಲೋಕದಲ್ಲಿ ಕುರುಡನಾಗಿರುತ್ತಾನೋ ಅವನು ಪರಲೋಕದಲ್ಲೂ ಕುರುಡನಾಗಿರುತ್ತಾನೆ. ಅಷ್ಟೇ ಅಲ್ಲ, ಅತ್ಯಧಿಕ ದಾರಿತಪ್ಪಿದವನೂ ಆಗಿರುತ್ತಾನೆ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَاِنْ كَادُوْا لَیَفْتِنُوْنَكَ عَنِ الَّذِیْۤ اَوْحَیْنَاۤ اِلَیْكَ لِتَفْتَرِیَ عَلَیْنَا غَیْرَهٗ ۖۗ— وَاِذًا لَّاتَّخَذُوْكَ خَلِیْلًا ۟
ನಾವು ನಿಮಗೆ ನೀಡುತ್ತಿರುವ ಈ ದೇವವಾಣಿಯಿಂದ ನಿಮ್ಮನ್ನು ತಪ್ಪಿಸಿಬಿಡಲು ಅವರು ಬಯಸುತ್ತಾರೆ. ನೀವು ನಮ್ಮ ಮೇಲೆ ಇದಲ್ಲದ ಬೇರೇನಾದರೂ ಸುಳ್ಳುಗಳನ್ನು ಆರೋಪಿಸುವುದಕ್ಕಾಗಿ. ಹಾಗೇನಾದರೂ ಆದರೆ ಅವರು ನಿಮ್ಮನ್ನು ಆಪ್ತಮಿತ್ರನಾಗಿ ಸ್ವೀಕರಿಸುತ್ತಿದ್ದರು.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَلَوْلَاۤ اَنْ ثَبَّتْنٰكَ لَقَدْ كِدْتَّ تَرْكَنُ اِلَیْهِمْ شَیْـًٔا قَلِیْلًا ۟ۗۙ
ನಾವು ನಿಮ್ಮನ್ನು ದೃಢವಾಗಿ ನಿಲ್ಲಿಸದಿರುತ್ತಿದ್ದರೆ ನೀವು ಅವರ ಕಡೆಗೆ ಸ್ವಲ್ಪವಾದರೂ ವಾಲುತ್ತಿದ್ದಿರಿ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
اِذًا لَّاَذَقْنٰكَ ضِعْفَ الْحَیٰوةِ وَضِعْفَ الْمَمَاتِ ثُمَّ لَا تَجِدُ لَكَ عَلَیْنَا نَصِیْرًا ۟
ಹಾಗೇನಾದರೂ ಆದರೆ, ನಾವು ನಿಮಗೆ ಬದುಕಿರುವಾಗ ಇಮ್ಮಡಿ ಶಿಕ್ಷೆಯನ್ನು ಮತ್ತು ಮರಣದ ನಂತರ ಇಮ್ಮಡಿ ಶಿಕ್ಷೆಯನ್ನು ನೀಡುತ್ತಿದ್ದೆವು. ನಂತರ ನಮ್ಮ ವಿರುದ್ಧ ಸಹಾಯ ಮಾಡುವ ಯಾರನ್ನೂ ನೀವು ಕಾಣಲಾರಿರಿ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
 
ߞߘߐ ߟߎ߬ ߘߟߊߡߌ߬ߘߊ߬ߟߌ ߝߐߘߊ ߘߏ߫: ߛߎߘߐߛߣߍߡߊ
ߝߐߘߊ ߟߎ߫ ߦߌ߬ߘߊ߬ߥߟߊ ߞߐߜߍ ߝߙߍߕߍ
 
ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫ - ߘߟߊߡߌߘߊ ߟߎ߫ ߦߌ߬ߘߊ߬ߥߟߊ

ߡߊ߬ߥߊ߲߬ߡߊ߬ ߡߊ߬ߙߊ߲߬ߡߊ߬ ߞߊ߬ߟߊ߲߬ߡߊ߬ ߘߟߊߡߌߘߊ ߘߟߊߡߌߘߊ ߙߎ߬ߥߊ߯ߘߎ߫ ߢߍߡߌߘߊ ߓߟߏ߫ ߡߊ߬ߥߊ߲߬ߡߊ߬ ߡߊ߬ߙߊ߲߬ߡߊ߬ ߞߊ߬ߟߊ߲߬ߡߊ߬ ߘߟߊߡߌߘߊ ߘߟߊߡߌߘߊ ߙߎ߬ߥߊ߯ߘߎ߫ ߢߍߡߌߘߊ ߓߟߏ߫.

ߘߊߕߎ߲߯ߠߌ߲