Check out the new design

ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫ * - ߘߟߊߡߌߘߊ ߟߎ߫ ߦߌ߬ߘߊ߬ߥߟߊ

PDF XML CSV Excel API
Please review the Terms and Policies

ߞߘߐ ߟߎ߬ ߘߟߊߡߌ߬ߘߊ߬ߟߌ ߝߐߘߊ ߘߏ߫: ߛߎߘߐߛߣߍߡߊ   ߟߝߊߙߌ ߘߏ߫:
وَمَنْ یَّهْدِ اللّٰهُ فَهُوَ الْمُهْتَدِ ۚ— وَمَنْ یُّضْلِلْ فَلَنْ تَجِدَ لَهُمْ اَوْلِیَآءَ مِنْ دُوْنِهٖ ؕ— وَنَحْشُرُهُمْ یَوْمَ الْقِیٰمَةِ عَلٰی وُجُوْهِهِمْ عُمْیًا وَّبُكْمًا وَّصُمًّا ؕ— مَاْوٰىهُمْ جَهَنَّمُ ؕ— كُلَّمَا خَبَتْ زِدْنٰهُمْ سَعِیْرًا ۟
ಅಲ್ಲಾಹು ಯಾರಿಗೆ ಸನ್ಮಾರ್ಗವನ್ನು ತೋರಿಸುತ್ತಾನೋ ಅವನು ಸನ್ಮಾರ್ಗವನ್ನು ಪಡೆಯುತ್ತಾನೆ. ಅವನು ಯಾರನ್ನು ದುರ್ಮಾರ್ಗಿಯಾಗಿ ಮಾಡುತ್ತಾನೋ—ಅವರಿಗೆ ಅವನಲ್ಲದೆ ಬೇರೆ ರಕ್ಷಕರನ್ನು ನೀವು ಕಾಣಲಾರಿರಿ. ಪುನರುತ್ಥಾನ ದಿನದಂದು ನಾವು ಅವರನ್ನು ಅವರ ಮುಖದ ಮೇಲೆ ನಡೆಯುವವರಾಗಿ ಒಟ್ಟುಗೂಡಿಸುವೆವು. ಆಗ ಅವರು ಕುರುಡರು, ಮೂಕರು ಮತ್ತು ಕಿವುಡರಾಗಿರುವರು. ನರಕಾಗ್ನಿಯೇ ಅವರ ವಾಸಸ್ಥಳ. ಅದು ತಣ್ಣಗಾಗುವಾಗಲೆಲ್ಲಾ ನಾವು ಅದನ್ನು ಭುಗಿಲೇಳುವಂತೆ ಉರಿಸುವೆವು.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
ذٰلِكَ جَزَآؤُهُمْ بِاَنَّهُمْ كَفَرُوْا بِاٰیٰتِنَا وَقَالُوْۤا ءَاِذَا كُنَّا عِظَامًا وَّرُفَاتًا ءَاِنَّا لَمَبْعُوْثُوْنَ خَلْقًا جَدِیْدًا ۟
ಅದು ಅವರಿಗೆ ನೀಡಲಾಗುವ ಪ್ರತಿಫಲವಾಗಿದೆ. ಏಕೆಂದರೆ ಅವರು ನಮ್ಮ ವಚನಗಳನ್ನು ನಿಷೇಧಿಸಿದರು ಮತ್ತು ಅವರು ಕೇಳಿದರು: “ನಾವು ಮೂಳೆಗಳು ಮತ್ತು ಚಿಂದಿ ಅವಶೇಷಗಳಾಗಿ ಬಿಟ್ಟ ಬಳಿಕವೂ ನಮ್ಮನ್ನು ಹೊಸ ಸೃಷ್ಟಿಯಾಗಿ ಎಬ್ಬಿಸಲಾಗುವುದೇ?”
ߊߙߊߓߎߞߊ߲ߡߊ ߞߘߐߦߌߘߊ ߟߎ߬:
اَوَلَمْ یَرَوْا اَنَّ اللّٰهَ الَّذِیْ خَلَقَ السَّمٰوٰتِ وَالْاَرْضَ قَادِرٌ عَلٰۤی اَنْ یَّخْلُقَ مِثْلَهُمْ وَجَعَلَ لَهُمْ اَجَلًا لَّا رَیْبَ فِیْهِ ؕ— فَاَبَی الظّٰلِمُوْنَ اِلَّا كُفُوْرًا ۟
ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಅವರಂತಹ ಇನ್ನೊಂದು ಸೃಷ್ಟಿಯನ್ನು ಸೃಷ್ಟಿಸುವ ಶಕ್ತಿಯಿದೆಯೆಂದು ಅವರು ನೋಡುವುದಿಲ್ಲವೇ? ಅವನು ಅವರಿಗೆ ಒಂದು ಅವಧಿಯನ್ನು ನಿಶ್ಚಯಿಸಿದನು. ಅದರಲ್ಲಿ ಸಂಶಯವೇ ಇಲ್ಲ. ಆದರೆ ಅಕ್ರಮಿಗಳು ನಿಷೇಧಿಸುವುದನ್ನಲ್ಲದೆ ಬೇರೇನೂ ಮಾಡುವುದಿಲ್ಲ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
قُلْ لَّوْ اَنْتُمْ تَمْلِكُوْنَ خَزَآىِٕنَ رَحْمَةِ رَبِّیْۤ اِذًا لَّاَمْسَكْتُمْ خَشْیَةَ الْاِنْفَاقِ ؕ— وَكَانَ الْاِنْسَانُ قَتُوْرًا ۟۠
(ಪ್ರವಾದಿಯವರೇ) ಹೇಳಿರಿ: “ನನ್ನ ಪರಿಪಾಲಕನ (ಅಲ್ಲಾಹನ) ದಯೆಯ ಖಜಾನೆಗಳು ನಿಮ್ಮ ಅಧೀನದಲ್ಲಿರುತ್ತಿದ್ದರೆ ಖರ್ಚಾಗಿ ಬಿಡಬಹುದೆಂಬ ಭಯದಿಂದ ನೀವು ಅದನ್ನು ತಡೆಹಿಡಿಯುತ್ತಿದ್ದಿರಿ. ಮನುಷ್ಯನು ಕಡು ಜಿಪುಣನಾಗಿದ್ದಾನೆ.”
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَلَقَدْ اٰتَیْنَا مُوْسٰی تِسْعَ اٰیٰتٍۢ بَیِّنٰتٍ فَسْـَٔلْ بَنِیْۤ اِسْرَآءِیْلَ اِذْ جَآءَهُمْ فَقَالَ لَهٗ فِرْعَوْنُ اِنِّیْ لَاَظُنُّكَ یٰمُوْسٰی مَسْحُوْرًا ۟
ನಾವು ಮೂಸಾರಿಗೆ ಒಂಬತ್ತು ಸ್ಪಷ್ಟ ದೃಷ್ಟಾಂತಗಳನ್ನು ನೀಡಿದ್ದೆವು.[1] ನೀವು ಇಸ್ರಾಯೇಲ್ ಮಕ್ಕಳೊಡನೆ ಮೂಸಾ ಅವರ ಬಳಿಗೆ ಬಂದಾಗ ಸಂದರ್ಭದ ಬಗ್ಗೆ ಕೇಳಿ ನೋಡಿ. ಆಗ ಫರೋಹ ಹೇಳಿದನು: “ಓ ಮೂಸಾ! ನೀನು ಖಂಡಿತ ಮಾಟಕ್ಕೊಳಗಾಗಿದ್ದೀ ಎಂದು ನನಗೆ ತೋರುತ್ತಿದೆ.”
[1] ಒಂಬತ್ತು ದೃಷ್ಟಾಂತಗಳು ಎಂದರೆ ಸರ್ಪವಾಗಿ ಮಾರ್ಪಡುವ ಕೋಲು, ಬೆಳ್ಳಗಾಗುವ ಕೈ, ಬರಗಾಲ, ಹಣ್ಣುಗಳ ಅಭಾವ, ಚಂಡಮಾರುತ, ಮಿಡತೆ, ಹೇನು, ಕಪ್ಪೆ ಮತ್ತು ರಕ್ತ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
قَالَ لَقَدْ عَلِمْتَ مَاۤ اَنْزَلَ هٰۤؤُلَآءِ اِلَّا رَبُّ السَّمٰوٰتِ وَالْاَرْضِ بَصَآىِٕرَ ۚ— وَاِنِّیْ لَاَظُنُّكَ یٰفِرْعَوْنُ مَثْبُوْرًا ۟
ಮೂಸಾ ಹೇಳಿದರು: “ಭೂಮ್ಯಾಕಾಶಗಳ ಪರಿಪಾಲಕನೇ (ಅಲ್ಲಾಹನೇ) ಇವುಗಳನ್ನು ಸ್ಪಷ್ಟ ದೃಷ್ಟಾಂತಗಳಾಗಿ ಅವತೀರ್ಣಗೊಳಿಸಿದ್ದಾನೆಂದು ಖಂಡಿತವಾಗಿಯೂ ನಿನಗೆ ತಿಳಿದಿದೆ. ಓ ಫರೋಹ! ಖಂಡಿತವಾಗಿಯೂ ನೀನು ಸರ್ವನಾಶವಾಗುವೆ ಎಂದು ನನಗೆ ತೋರುತ್ತಿದೆ.”
ߊߙߊߓߎߞߊ߲ߡߊ ߞߘߐߦߌߘߊ ߟߎ߬:
فَاَرَادَ اَنْ یَّسْتَفِزَّهُمْ مِّنَ الْاَرْضِ فَاَغْرَقْنٰهُ وَمَنْ مَّعَهٗ جَمِیْعًا ۟ۙ
ಅವನು ಅವರನ್ನು (ಇಸ್ರಾಯೇಲ್ ಮಕ್ಕಳನ್ನು) ಭೂಮಿಯಿಂದ ಓಡಿಸಲು ನಿರ್ಧರಿಸಿದನು. ಆದರೆ ನಾವು ಅವನನ್ನು ಮತ್ತು ಅವನ ಸಂಗಡಿಗರನ್ನು (ಕಡಲಲ್ಲಿ) ಮುಳುಗಿಸಿದೆವು.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَّقُلْنَا مِنْ بَعْدِهٖ لِبَنِیْۤ اِسْرَآءِیْلَ اسْكُنُوا الْاَرْضَ فَاِذَا جَآءَ وَعْدُ الْاٰخِرَةِ جِئْنَا بِكُمْ لَفِیْفًا ۟ؕ
ಅವನ ಸಾವಿನ ನಂತರ ನಾವು ಇಸ್ರಾಯೇಲ್ ಮಕ್ಕಳೊಡನೆ ಹೇಳಿದೆವು: “ನೀವು ಈ ಭೂಮಿಯಲ್ಲಿ ವಾಸಿಸಿರಿ. ಪರಲೋಕದ ವಾಗ್ದಾನವು ಬಂದು ಬಿಟ್ಟರೆ ನಾವು ನಿಮ್ಮೆಲ್ಲರನ್ನೂ ಒಟ್ಟಾಗಿ ಕರೆತರುವೆವು.”
ߊߙߊߓߎߞߊ߲ߡߊ ߞߘߐߦߌߘߊ ߟߎ߬:
 
ߞߘߐ ߟߎ߬ ߘߟߊߡߌ߬ߘߊ߬ߟߌ ߝߐߘߊ ߘߏ߫: ߛߎߘߐߛߣߍߡߊ
ߝߐߘߊ ߟߎ߫ ߦߌ߬ߘߊ߬ߥߟߊ ߞߐߜߍ ߝߙߍߕߍ
 
ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫ - ߘߟߊߡߌߘߊ ߟߎ߫ ߦߌ߬ߘߊ߬ߥߟߊ

ߡߊ߬ߥߊ߲߬ߡߊ߬ ߡߊ߬ߙߊ߲߬ߡߊ߬ ߞߊ߬ߟߊ߲߬ߡߊ߬ ߘߟߊߡߌߘߊ ߘߟߊߡߌߘߊ ߙߎ߬ߥߊ߯ߘߎ߫ ߢߍߡߌߘߊ ߓߟߏ߫ ߡߊ߬ߥߊ߲߬ߡߊ߬ ߡߊ߬ߙߊ߲߬ߡߊ߬ ߞߊ߬ߟߊ߲߬ߡߊ߬ ߘߟߊߡߌߘߊ ߘߟߊߡߌߘߊ ߙߎ߬ߥߊ߯ߘߎ߫ ߢߍߡߌߘߊ ߓߟߏ߫.

ߘߊߕߎ߲߯ߠߌ߲