Check out the new design

ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫ * - ߘߟߊߡߌߘߊ ߟߎ߫ ߦߌ߬ߘߊ߬ߥߟߊ

PDF XML CSV Excel API
Please review the Terms and Policies

ߞߘߐ ߟߎ߬ ߘߟߊߡߌ߬ߘߊ߬ߟߌ ߝߐߘߊ ߘߏ߫: ߛߎߘߐߛߣߍߡߊ   ߟߝߊߙߌ ߘߏ߫:
اِلَّا رَحْمَةً مِّنْ رَّبِّكَ ؕ— اِنَّ فَضْلَهٗ كَانَ عَلَیْكَ كَبِیْرًا ۟
ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಯಿಂದಲೇ ಆಗಿದೆ. ನಿಜಕ್ಕೂ ನಿಮ್ಮ ಮೇಲೆ ಅವನು ಮಹಾ ಔದಾರ್ಯವನ್ನು ಹೊಂದಿದ್ದಾನೆ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
قُلْ لَّىِٕنِ اجْتَمَعَتِ الْاِنْسُ وَالْجِنُّ عَلٰۤی اَنْ یَّاْتُوْا بِمِثْلِ هٰذَا الْقُرْاٰنِ لَا یَاْتُوْنَ بِمِثْلِهٖ وَلَوْ كَانَ بَعْضُهُمْ لِبَعْضٍ ظَهِیْرًا ۟
ಹೇಳಿರಿ: “ಈ ಕುರ್‌ಆನಿನಂತಿರುವ ಒಂದು ಗ್ರಂಥವನ್ನು ರಚಿಸಿ ತರಲು ಮನುಷ್ಯರು ಮತ್ತು ಜಿನ್ನ್‌ಗಳು ಒಟ್ಟು ಸೇರಿದರೂ ಇಂತಹ ಒಂದು ಗ್ರಂಥವನ್ನು ತರಲು ಅವರಿಗೆ ಸಾಧ್ಯವಿಲ್ಲ. ಅವರು ಪರಸ್ಪರ ಸಹಾಯ ಮಾಡಿದರೂ ಸಹ.”
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَلَقَدْ صَرَّفْنَا لِلنَّاسِ فِیْ هٰذَا الْقُرْاٰنِ مِنْ كُلِّ مَثَلٍ ؗ— فَاَبٰۤی اَكْثَرُ النَّاسِ اِلَّا كُفُوْرًا ۟
ನಿಶ್ಚಯವಾಗಿಯೂ ಈ ಕುರ್‌ಆನ್‍ನಲ್ಲಿ ನಾವು ಜನರಿಗೆ ಎಲ್ಲಾ ರೀತಿಯ ಉದಾಹರಣೆಗಳನ್ನು ವಿವರಿಸಿದ್ದೇವೆ. ಆದರೆ ಜನರಲ್ಲಿ ಹೆಚ್ಚಿನವರು ನಿಷೇಧಿಸಲು ಮಾತ್ರ ಮುಂದಾಗುತ್ತಾರೆ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَقَالُوْا لَنْ نُّؤْمِنَ لَكَ حَتّٰی تَفْجُرَ لَنَا مِنَ الْاَرْضِ یَنْۢبُوْعًا ۟ۙ
ಅವರು ಹೇಳಿದರು: “ನೀನು ನಮಗೋಸ್ಕರ ಭೂಮಿಯಿಂದ ನೀರಿನ ಒರತೆಯನ್ನು ಚಿಮ್ಮಿ ಹರಿಸುವ ತನಕ ನಾವು ನಿನ್ನಲ್ಲಿ ವಿಶ್ವಾಸವಿಡುವುದೇ ಇಲ್ಲ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
اَوْ تَكُوْنَ لَكَ جَنَّةٌ مِّنْ نَّخِیْلٍ وَّعِنَبٍ فَتُفَجِّرَ الْاَنْهٰرَ خِلٰلَهَا تَفْجِیْرًا ۟ۙ
ಅಥವಾ ನಿನಗೆ ಖರ್ಜೂರ ಮತ್ತು ದ್ರಾಕ್ಷಿಯ ತೋಟವಿದ್ದು, ನೀನು ಅವುಗಳ ನಡುವೆ ಚಿಮ್ಮಿ ಹರಿಯುವ ನದಿಗಳನ್ನು ಹರಿಸುವ ತನಕ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
اَوْ تُسْقِطَ السَّمَآءَ كَمَا زَعَمْتَ عَلَیْنَا كِسَفًا اَوْ تَاْتِیَ بِاللّٰهِ وَالْمَلٰٓىِٕكَةِ قَبِیْلًا ۟ۙ
ಅಥವಾ ನೀನು ಬೆದರಿಸುವಂತೆ ಆಕಾಶವನ್ನು ನಮ್ಮ ಮೇಲೆ ತುಂಡು ತುಂಡಾಗಿ ಬೀಳಿಸುವ ತನಕ. ಅಥವಾ ನೀನು ಅಲ್ಲಾಹು ಮತ್ತು ದೇವದೂತರುಗಳನ್ನು ನಮ್ಮ ಮುಂಭಾಗಕ್ಕೆ ತರುವ ತನಕ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
اَوْ یَكُوْنَ لَكَ بَیْتٌ مِّنْ زُخْرُفٍ اَوْ تَرْقٰی فِی السَّمَآءِ ؕ— وَلَنْ نُّؤْمِنَ لِرُقِیِّكَ حَتّٰی تُنَزِّلَ عَلَیْنَا كِتٰبًا نَّقْرَؤُهٗ ؕ— قُلْ سُبْحَانَ رَبِّیْ هَلْ كُنْتُ اِلَّا بَشَرًا رَّسُوْلًا ۟۠
ಅಥವಾ ನಿನಗೆ ಬಂಗಾರದ ಮನೆಯುಂಟಾಗುವ ತನಕ, ಅಥವಾ ನೀನು ಆಕಾಶಕ್ಕೆ ಏರಿ ಹೋಗುವ ತನಕ. ನಮಗೆ ಓದಲಾಗುವ ಒಂದು ಪುಸ್ತಕವನ್ನು ನೀನು ನಮಗೆ ಇಳಿಸಿಕೊಡುವ ತನಕ ನೀನು ಏರಿ ಹೋಗಿದ್ದೀ ಎಂದು ನಾವು ಖಂಡಿತ ನಂಬುವುದಿಲ್ಲ.” (ಪ್ರವಾದಿಯವರೇ) ಹೇಳಿರಿ: “ನನ್ನ ಪರಿಪಾಲಕನು (ಅಲ್ಲಾಹು) ಪರಿಶುದ್ಧನು! ನಾನು ಒಬ್ಬ ಮನುಷ್ಯನಾದ ಸಂದೇಶವಾಹಕ ಮಾತ್ರವಾಗಿದ್ದೇನೆ.”[1]
[1] ಅಂದರೆ ನಾನು ನಿಮ್ಮಂತಹ ಒಬ್ಬ ಮನುಷ್ಯ. ನೀವು ಹೇಳುವ ಈ ಕಾರ್ಯಗಳನ್ನು ಮಾಡಲು ಮನುಷ್ಯನಿಗೆ ಸಾಧ್ಯವಿಲ್ಲ. ಆದ್ದರಿಂದ ಇವೆಲ್ಲವನ್ನೂ ಮಾಡಿ ತೋರಿಸಬೇಕೆಂದು ನೀವು ನನ್ನೊಡನೆ ಕೇಳುವುದರಲ್ಲಿ ಅರ್ಥವಿಲ್ಲ. ನಾನು ಅಲ್ಲಾಹನ ಸಂದೇಶವಾಹಕನಾಗಿದ್ದೇನೆ. ಅವನ ಸಂದೇಶಗಳನ್ನು ನಿಮಗೆ ತಲುಪಿಸಿಕೊಡುವುದು ಮಾತ್ರ ನನ್ನ ಕೆಲಸ. ನೀವು ಕೇಳುವಾಗಲೆಲ್ಲಾ ಪವಾಡಗಳನ್ನು ತೋರಿಸುವುದು ನನ್ನ ಕೆಲಸವಲ್ಲ. ಆದರೆ ಅಲ್ಲಾಹು ನನ್ನ ಮೂಲಕ ಪವಾಡ ತೋರಿಸಲು ಬಯಸಿದರೆ ನಾನು ಪವಾಡವನ್ನು ತೋರಿಸಬಲ್ಲೆ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَمَا مَنَعَ النَّاسَ اَنْ یُّؤْمِنُوْۤا اِذْ جَآءَهُمُ الْهُدٰۤی اِلَّاۤ اَنْ قَالُوْۤا اَبَعَثَ اللّٰهُ بَشَرًا رَّسُوْلًا ۟
ಜನರಿಗೆ ಸನ್ಮಾರ್ಗವು ಬಂದ ಬಳಿಕವೂ ಅವರು ಅದರಲ್ಲಿ ವಿಶ್ವಾಸವಿಡದಂತೆ ತಡೆಯಾಗಿರುವುದು, “ಅಲ್ಲಾಹು ಒಬ್ಬ ಮನುಷ್ಯನನ್ನು ಸಂದೇಶವಾಹಕನಾಗಿ ಕಳುಹಿಸಿದನೇ?” ಎಂಬ ಅವರ ಮಾತು ಮಾತ್ರವಾಗಿತ್ತು.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
قُلْ لَّوْ كَانَ فِی الْاَرْضِ مَلٰٓىِٕكَةٌ یَّمْشُوْنَ مُطْمَىِٕنِّیْنَ لَنَزَّلْنَا عَلَیْهِمْ مِّنَ السَّمَآءِ مَلَكًا رَّسُوْلًا ۟
ಹೇಳಿರಿ: “ಭೂಮಿಯಲ್ಲಿ ದೇವದೂತರುಗಳು ಸಮಾಧಾನದಿಂದ ನಡೆಯುತ್ತಲೂ ವಾಸ ಮಾಡುತ್ತಲೂ ಇದ್ದಿದ್ದರೆ ನಾವು ಅವರಿಗೆ ಆಕಾಶದಿಂದ ಒಬ್ಬ ದೇವದೂತನನ್ನೇ ಸಂದೇಶವಾಹಕನಾಗಿ ಇಳಿಸುತ್ತಿದ್ದೆವು.”
ߊߙߊߓߎߞߊ߲ߡߊ ߞߘߐߦߌߘߊ ߟߎ߬:
قُلْ كَفٰی بِاللّٰهِ شَهِیْدًا بَیْنِیْ وَبَیْنَكُمْ ؕ— اِنَّهٗ كَانَ بِعِبَادِهٖ خَبِیْرًا بَصِیْرًا ۟
ಹೇಳಿರಿ: “ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹು ಸಾಕು. ನಿಶ್ಚಯವಾಗಿಯೂ ಅವನು ತನ್ನ ದಾಸರ ಬಗ್ಗೆ ಸೂಕ್ಷ್ಮವಾಗಿ ತಿಳಿದವನು ಮತ್ತು ವೀಕ್ಷಿಸುವವನಾಗಿದ್ದಾನೆ.”
ߊߙߊߓߎߞߊ߲ߡߊ ߞߘߐߦߌߘߊ ߟߎ߬:
 
ߞߘߐ ߟߎ߬ ߘߟߊߡߌ߬ߘߊ߬ߟߌ ߝߐߘߊ ߘߏ߫: ߛߎߘߐߛߣߍߡߊ
ߝߐߘߊ ߟߎ߫ ߦߌ߬ߘߊ߬ߥߟߊ ߞߐߜߍ ߝߙߍߕߍ
 
ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫ - ߘߟߊߡߌߘߊ ߟߎ߫ ߦߌ߬ߘߊ߬ߥߟߊ

ߡߊ߬ߥߊ߲߬ߡߊ߬ ߡߊ߬ߙߊ߲߬ߡߊ߬ ߞߊ߬ߟߊ߲߬ߡߊ߬ ߘߟߊߡߌߘߊ ߘߟߊߡߌߘߊ ߙߎ߬ߥߊ߯ߘߎ߫ ߢߍߡߌߘߊ ߓߟߏ߫ ߡߊ߬ߥߊ߲߬ߡߊ߬ ߡߊ߬ߙߊ߲߬ߡߊ߬ ߞߊ߬ߟߊ߲߬ߡߊ߬ ߘߟߊߡߌߘߊ ߘߟߊߡߌߘߊ ߙߎ߬ߥߊ߯ߘߎ߫ ߢߍߡߌߘߊ ߓߟߏ߫.

ߘߊߕߎ߲߯ߠߌ߲