Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: അൻആം   ആയത്ത്:
وَهُوَ الَّذِیْ یَتَوَفّٰىكُمْ بِالَّیْلِ وَیَعْلَمُ مَا جَرَحْتُمْ بِالنَّهَارِ ثُمَّ یَبْعَثُكُمْ فِیْهِ لِیُقْضٰۤی اَجَلٌ مُّسَمًّی ۚ— ثُمَّ اِلَیْهِ مَرْجِعُكُمْ ثُمَّ یُنَبِّئُكُمْ بِمَا كُنْتُمْ تَعْمَلُوْنَ ۟۠
ಮತ್ತು ಅವನೇ ರಾತ್ರಿಯಲ್ಲಿ ನಿಮ್ಮ ಆತ್ಮಗಳನ್ನು ವಶಪಡಿಸಿಕೊಳ್ಳುತ್ತಾನೆ. ಮತ್ತು ಹಗಲಿನಲ್ಲಿ ನೀವು ಮಾಡಿದ್ದನ್ನೆಲ್ಲ ಅವನು ಅರಿಯುತ್ತಾನೆ. ನಂತರ ಅವನು ನೀವು (ಆಯಸ್ಸಿನ) ನಿಶ್ಚಿತಾವಧಿ ಪೂರ್ತಿಗೊಳಿಸಲೆಂದು ನಿಮ್ಮನ್ನು ಮರುದಿನ ಹಗಲಿನಲ್ಲಿ ಎಚ್ಚರಗೊಳಿಸುತ್ತಾನೆ. ನಂತರ ಅವನೆಡೆಗೇ ನಿಮ್ಮ ಮರಳುವಿಕೆಯಿದೆ. ಅನಂತರ ಅವನು ನೀವು ಮಾಡುತ್ತಿದ್ದುದೆಲ್ಲವನ್ನು ನಿಮಗೆ ತಿಳಿಸಿ ಕೊಡುವನು.
അറബി തഫ്സീറുകൾ:
وَهُوَ الْقَاهِرُ فَوْقَ عِبَادِهٖ وَیُرْسِلُ عَلَیْكُمْ حَفَظَةً ؕ— حَتّٰۤی اِذَا جَآءَ اَحَدَكُمُ الْمَوْتُ تَوَفَّتْهُ رُسُلُنَا وَهُمْ لَا یُفَرِّطُوْنَ ۟
ಅವನು ತನ್ನ ದಾಸರ ಮೇಲೆ ಪರಮಾಧಿಕಾರವುಳ್ಳವನಾಗಿದ್ದಾನೆ. ನಿಮ್ಮ ಮೇಲೆ ಅವನು ದೂತರನ್ನು ಕಾವಲುಗಾರರನ್ನಾಗಿ ಕಳುಹಿಸುತ್ತಾನೆ. ನಿಮ್ಮೊಲ್ಲಬ್ಬನಿಗೆ ಮರಣಾಸನ್ನವಾದಾಗ ನಮ್ಮಿಂದ ನಿಯೋಗಿಸಲಾದ ದೂತರು ಅವನ ಅತ್ಮವನ್ನು ವಶಪಡಿಸಿಕೊಳ್ಳುವರು ಮತ್ತು ಅವರು ಸ್ವಲ್ಪವೂ ಕರ್ತವ್ಯಲೋಪ ಮಾಡಲಾರರು.
അറബി തഫ്സീറുകൾ:
ثُمَّ رُدُّوْۤا اِلَی اللّٰهِ مَوْلٰىهُمُ الْحَقِّ ؕ— اَلَا لَهُ الْحُكْمُ ۫— وَهُوَ اَسْرَعُ الْحٰسِبِیْنَ ۟
ನಂತರ ಅವರೆಲ್ಲರು ತಮ್ಮ ನೈಜ ಒಡೆಯನಾದ ಅಲ್ಲಾಹನೆಡೆಗೆ ಮರಳಿಸಲಾಗುವರು. ಕೇಳಿರಿ: ಆಜ್ಞಾಧಿಕಾರವು ಅಲ್ಲಾಹನದ್ದಾಗಿದೆ ಮತ್ತು ಅವನು ಅತೀ ಶೀಘ್ರವಾಗಿ ಲೆಕ್ಕ ವಿಚಾರಣೆ ನಡೆಸುವವನಾಗಿದ್ದಾನೆ.
അറബി തഫ്സീറുകൾ:
قُلْ مَنْ یُّنَجِّیْكُمْ مِّنْ ظُلُمٰتِ الْبَرِّ وَالْبَحْرِ تَدْعُوْنَهٗ تَضَرُّعًا وَّخُفْیَةً ۚ— لَىِٕنْ اَنْجٰىنَا مِنْ هٰذِهٖ لَنَكُوْنَنَّ مِنَ الشّٰكِرِیْنَ ۟
ಹೇಳಿರಿ: ನಿಮ್ಮನ್ನು ನೆಲ, ಜಲಗಳ ಅಂಧÀಕಾರಗಳಿAದ ರಕ್ಷಿಸುವವನು ಯಾರು? 'ನೀನು ನಮ್ಮನ್ನು (ಈ ಕಷ್ಟಕಾಲದಲ್ಲಿ) ರಕ್ಷಿಸಿದರೆ ಖಂಡಿತ ನಾವು ಕೃತಜ್ಞತೆ ಸಲ್ಲಿಸುವವರೊಂದಿಗೆ ಸೇರುವೆವು' ಎಂದು ದೈನ್ಯತೆಯಿಂದ, ರಹಸ್ಯವಾಗಿ ಅವನನ್ನು ನೀವು ಕರೆದು ಬೇಡುತ್ತೀರಿ.
അറബി തഫ്സീറുകൾ:
قُلِ اللّٰهُ یُنَجِّیْكُمْ مِّنْهَا وَمِنْ كُلِّ كَرْبٍ ثُمَّ اَنْتُمْ تُشْرِكُوْنَ ۟
ಹೇಳಿರಿ: ಅಲ್ಲಾಹನೇ ನಿಮ್ಮನ್ನು ಅವುಗಳಿಂದ ಮತ್ತು ಇತರೆಲ್ಲಾ ವಿಪತ್ತುಗಳಿಂದ ರಕ್ಷಿಸುತ್ತಾನೆ. ಆದರೂ ನೀವು ಸಹಭಾಗಿಗಳನ್ನು ಕಲ್ಪಿಸುತ್ತೀರಿ.
അറബി തഫ്സീറുകൾ:
قُلْ هُوَ الْقَادِرُ عَلٰۤی اَنْ یَّبْعَثَ عَلَیْكُمْ عَذَابًا مِّنْ فَوْقِكُمْ اَوْ مِنْ تَحْتِ اَرْجُلِكُمْ اَوْ یَلْبِسَكُمْ شِیَعًا وَّیُذِیْقَ بَعْضَكُمْ بَاْسَ بَعْضٍ ؕ— اُنْظُرْ كَیْفَ نُصَرِّفُ الْاٰیٰتِ لَعَلَّهُمْ یَفْقَهُوْنَ ۟
ಹೇಳಿರಿ: ನಿಮ್ಮ ಮೇಲ್ಭಾಗದಿಂದ ಅಥವಾ ನಿಮ್ಮ ಪಾದಗಳ ತಳಭಾಗದಿಂದ ನಿಮ್ಮ ಮೇಲೆ ಶಿಕ್ಷೆಯನ್ನು ಎರಗಿಸಲು ಅಥವಾ ನಿಮ್ಮನ್ನು ಹಲವು ಗುಂಪುಗಳನ್ನಾಗಿ ಮಾಡಿ ಮತ್ತು ನಿಮ್ಮಲ್ಲಿ ಕೆಲವರ ದೌರ್ಜನ್ಯವನ್ನು ಇನ್ನೂ ಕೆಲವರು ಅನುಭವಿಸುವಂತೆ ಮಾಡಲೂ ಅವನು ಸಾಮರ್ಥ್ಯವುಳ್ಳವನಾಗಿದ್ದಾನೆ. ನಾವು ದೃಷ್ಟಾಂತಗಳನ್ನು ವಿವಿಧ ರೂಪಗಳಲ್ಲಿ ಹೇಗೆ ವಿವರಿಸಿ ಕೊಡುತ್ತಿದ್ದೇವೆಂಬುದನ್ನು ನೋಡಿರಿ. ಪ್ರಾಯಶಃ ಅವರು ಗ್ರಹಿಸಿಕೊಳ್ಳಬಹುದು.
അറബി തഫ്സീറുകൾ:
وَكَذَّبَ بِهٖ قَوْمُكَ وَهُوَ الْحَقُّ ؕ— قُلْ لَّسْتُ عَلَیْكُمْ بِوَكِیْلٍ ۟ؕ
ಮತ್ತು ಪೈಗಂಬರರೇ ಇದು (ಕುರ್‌ಆನ್) ಸತ್ಯವಾಗಿದ್ದರೂ ನಿಮ್ಮ ಸಮುದಾಯವು ಅದನ್ನು ಸುಳ್ಳಾಗಿಸುತ್ತಿದೆ. ಹೇಳಿರಿ: ನಾನು ನಿಮ್ಮ ಜವಾಬ್ದಾರಿ ಹೊತ್ತವನಲ್ಲ.
അറബി തഫ്സീറുകൾ:
لِكُلِّ نَبَاٍ مُّسْتَقَرٌّ ؗ— وَّسَوْفَ تَعْلَمُوْنَ ۟
ಪ್ರತಿಯೊಂದು ಬರುವ ಘಟನೆಗೆ ಒಂದು ನಿಶ್ಚಿತ ಸಮಯವಿದೆ. ಸದ್ಯದಲ್ಲೇ ನೀವು ಮನಗಾಣುವಿರಿ.
അറബി തഫ്സീറുകൾ:
وَاِذَا رَاَیْتَ الَّذِیْنَ یَخُوْضُوْنَ فِیْۤ اٰیٰتِنَا فَاَعْرِضْ عَنْهُمْ حَتّٰی یَخُوْضُوْا فِیْ حَدِیْثٍ غَیْرِهٖ ؕ— وَاِمَّا یُنْسِیَنَّكَ الشَّیْطٰنُ فَلَا تَقْعُدْ بَعْدَ الذِّكْرٰی مَعَ الْقَوْمِ الظّٰلِمِیْنَ ۟
ಮತ್ತು ನಮ್ಮ ದೃಷ್ಟಾಂತಗಳನ್ನು ಅಪಹಾಸ್ಯ ಮಾಡುವವರನ್ನು ನೀವು ಕಂಡರೆ ಅವರು ಬೇರಾವುದಾದರೂ ವಿಚಾರದಲ್ಲಿ ತೊಡಗುವ ತನಕ ಅವರಿಂದ ದೂರವಿರಿ. ಒಂದುವೇಳೆ ಶೈತಾನನು ತಮ್ಮನ್ನು ಮರೆಯುವಂತೆ ಮಾಡಿದರೆ ಜ್ಞಾಪಕವಾದ ಬಳಿಕ ಅಕ್ರಮಿ ಜನರೊಂದಿಗೆ ಕುಳಿತುಕೊಳ್ಳಬೇಡಿರಿ.
അറബി തഫ്സീറുകൾ:
 
പരിഭാഷ അദ്ധ്യായം: അൻആം
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അവസാനിപ്പിക്കുക