Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: അൻആം   ആയത്ത്:

ಅಲ್- ಅನ್ ಆಮ್

اَلْحَمْدُ لِلّٰهِ الَّذِیْ خَلَقَ السَّمٰوٰتِ وَالْاَرْضَ وَجَعَلَ الظُّلُمٰتِ وَالنُّوْرَ ؕ۬— ثُمَّ الَّذِیْنَ كَفَرُوْا بِرَبِّهِمْ یَعْدِلُوْنَ ۟
ಆಕಾಶಗಳನ್ನು, ಭೂಮಿಯನ್ನು ಸೃಷ್ಟಿಸಿದ ಹಾಗೂ ಅಂಧಕಾರಗಳನ್ನು ಮತ್ತು ಪ್ರಕಾಶವನ್ನು ಉಂಟುಮಾಡಿದ ಅಲ್ಲಾಹನಿಗೆ ಸರ್ವಸ್ತುತಿಗಳು ಹಾಗಿದ್ದೂ ಸತ್ಯನಿಷೇಧಿಗಳು ಇತರರನ್ನು ತಮ್ಮ ಪರಿಪಾಲಕ ಪ್ರಭುವಿಗೆ ಸಮಾನರೆಂದು ನಿರ್ಣಯಿಸುತ್ತಾರೆ.
അറബി തഫ്സീറുകൾ:
هُوَ الَّذِیْ خَلَقَكُمْ مِّنْ طِیْنٍ ثُمَّ قَضٰۤی اَجَلًا ؕ— وَاَجَلٌ مُّسَمًّی عِنْدَهٗ ثُمَّ اَنْتُمْ تَمْتَرُوْنَ ۟
ಅವನು ನಿಮ್ಮನ್ನು (ಮೊದಲಬಾರಿ) ಮಣ್ಣಿನಿಂದ ಸೃಷ್ಟಿಸಿದನು. ನಂತರ (ಮರಣದ) ಒಂದು ಅವಧಿಯನ್ನು ನಿಶ್ಚಯಿಸಿದನು ಮತ್ತು ಅವನ ಬಳಿ (ಪುನಃ ಜೀವಂತಗೊಳಿಸುವ) ನಿಶ್ಚಿತಾವಧಿಯಿದೆ. ಹಾಗಿದ್ದೂ ನೀವು ಸಂದೇಹಪಡುತ್ತಿರುವಿರಾ.
അറബി തഫ്സീറുകൾ:
وَهُوَ اللّٰهُ فِی السَّمٰوٰتِ وَفِی الْاَرْضِ ؕ— یَعْلَمُ سِرَّكُمْ وَجَهْرَكُمْ وَیَعْلَمُ مَا تَكْسِبُوْنَ ۟
ಆಕಾಶಗಳಲ್ಲೂ, ಭೂಮಿಯಲ್ಲೂ ಇರುವ ನೈಜ ಆರಾಧ್ಯನು ಅಲ್ಲಾಹನಾಗಿದ್ದಾನೆ. ನಿಮ್ಮ ರಹಸ್ಯ ಸ್ಥಿತಿಗತಿಗಳನ್ನೂ, ಬಹಿರಂಗ ಸ್ಥಿತಿಗಳನ್ನೂ ಅವನು ಅರಿಯುತ್ತಾನೆ ಮತ್ತು ನೀವು ಮಾಡುತ್ತಿರುವ ಕರ್ಮಗಳನ್ನು ಅವನು ಅರಿಯುತ್ತಾನೆ.
അറബി തഫ്സീറുകൾ:
وَمَا تَاْتِیْهِمْ مِّنْ اٰیَةٍ مِّنْ اٰیٰتِ رَبِّهِمْ اِلَّا كَانُوْا عَنْهَا مُعْرِضِیْنَ ۟
ಮತ್ತು ಅವರ ಪ್ರಭುವಿನ ದೃಷ್ಟಾಂತಗಳಿAದ ಯಾವುದೇ ದೃಷ್ಟಾಂತ ಅವರ ಬಳಿಗೆ ಬಂದರೂ ಅವರದನ್ನು ಕಡೆಗಣಿಸದೇ ಇರಲಿಲ್ಲ.
അറബി തഫ്സീറുകൾ:
فَقَدْ كَذَّبُوْا بِالْحَقِّ لَمَّا جَآءَهُمْ ؕ— فَسَوْفَ یَاْتِیْهِمْ اَنْۢبٰٓؤُا مَا كَانُوْا بِهٖ یَسْتَهْزِءُوْنَ ۟
ಸತ್ಯ (ಕುರ್‌ಆನ್) ಅವರ ಬಳಿಗೆ ಬಂದಾಗ ಅದನ್ನು ತಿರಸ್ಕರಿಸಿಬಿಟ್ಟರು. ಅದ್ದರಿಂದ ಸದ್ಯದಲ್ಲೇ ಅವರು ಯಾವುದನ್ನು ಅಪಹಾಸ್ಯ ಮಾಡುತ್ತಿದ್ದರೋ ಅದರ ಸುದ್ದಿಗಳು ಅವರಿಗೆ ತಲುಪಲಿವೆ.
അറബി തഫ്സീറുകൾ:
اَلَمْ یَرَوْا كَمْ اَهْلَكْنَا مِنْ قَبْلِهِمْ مِّنْ قَرْنٍ مَّكَّنّٰهُمْ فِی الْاَرْضِ مَا لَمْ نُمَكِّنْ لَّكُمْ وَاَرْسَلْنَا السَّمَآءَ عَلَیْهِمْ مِّدْرَارًا ۪— وَّجَعَلْنَا الْاَنْهٰرَ تَجْرِیْ مِنْ تَحْتِهِمْ فَاَهْلَكْنٰهُمْ بِذُنُوْبِهِمْ وَاَنْشَاْنَا مِنْ بَعْدِهِمْ قَرْنًا اٰخَرِیْنَ ۟
ಅವರಿಗಿಂತ ಮೊದಲು ನಾವು ಅದೆಷ್ಟೋ ತಲೆಮಾರುಗಳನ್ನು ನಾಶಗೊಳಿಸಿದ್ದೇವೆಂಬುದನ್ನು ಅವರು ನೋಡಲಿಲ್ಲವೇ? ನಾವು ಅವರಿಗೆ ನಿಮಗೆ ನೀಡಿರದಂತಹ ಶಕ್ತಿ ಸಾಮರ್ಥ್ಯವನ್ನು ನೀಡಿದ್ದೆವು. ನಾವು ಅವರ ಮೇಲೆ ಧಾರಾಕಾರವಾಗಿ ಮಳೆಯನ್ನು ಸುರಿಸಿದೆವು ಮತ್ತು ಅವರ ತಳಭಾಗದಿಂದ ಕಾಲುವೆಗಳನ್ನು ಹರಿಸಿದೆವು. ನಂತರ ನಾವು ಅವರನ್ನು ಅವರ ಪಾಪಗಳ ನಿಮಿತ್ತ ನಾಶಗೊಳಿಸಿ ಬಿಟ್ಟೆವು ಮತ್ತು ಅವರ ನಂತರ ಬೇರೆ ತಲೆಮಾರುಗಳನ್ನು ಸೃಷ್ಟಿಸಿದೆವು.
അറബി തഫ്സീറുകൾ:
وَلَوْ نَزَّلْنَا عَلَیْكَ كِتٰبًا فِیْ قِرْطَاسٍ فَلَمَسُوْهُ بِاَیْدِیْهِمْ لَقَالَ الَّذِیْنَ كَفَرُوْۤا اِنْ هٰذَاۤ اِلَّا سِحْرٌ مُّبِیْنٌ ۟
(ಓ ಪೈಗಂಗರರೇ) ನಾವು ನಿಮ್ಮ ಮೇಲೆ ಕಾಗದದಲ್ಲಿ ಬರೆದಿರುವ ಯಾವುದದರೂ ಒಂದು ಗ್ರಂಥವನ್ನು ಅವತೀರ್ಣಗೊಳಿಸಿ ನಂತರ ಅವರು ಅದನ್ನು ಸ್ವತಃ ತಮ್ಮ ಕೈಗಳಿಂದ ಸ್ಪರ್ಶಿಸಿ ನೋಡಿದರೂ ‘ಇದು ಸ್ಪಷ್ಟವಾದ ಜಾದುವಲ್ಲದೆ ಇನ್ನೇನೂ ಅಲ್ಲ' ಎಂದೇ ಸತ್ಯನಿಷೇಧಿಗಳು ಹೇಳುವರು.
അറബി തഫ്സീറുകൾ:
وَقَالُوْا لَوْلَاۤ اُنْزِلَ عَلَیْهِ مَلَكٌ ؕ— وَلَوْ اَنْزَلْنَا مَلَكًا لَّقُضِیَ الْاَمْرُ ثُمَّ لَا یُنْظَرُوْنَ ۟
ಅವರೊಂದಿಗೆ (ಪೈಗಂಬರರೊAದಿಗೆ) ಓರ್ವ ದೇವಚರನನ್ನು ಏಕೆ ಇಳಿಸಲಾಗಿಲ್ಲ ಎಂದು ಅವರು ಹೇಳುತ್ತಾರೆ ಮತ್ತು ನಾವು ದೇವಚರರನ್ನು ಇಳಿಸುತ್ತಿದ್ದರೆ ಅವರ ಕಥೆಯೇ ಮುಗಿಸಲಾಗುತ್ತಿತ್ತು. ನಂತರ ಅವರಿಗೆ ಸ್ವಲ್ಪವೂ ಕಾಲಾವಧಿಯನ್ನು ನೀಡಲಾಗುತ್ತಿರಲಿಲ್ಲ.
അറബി തഫ്സീറുകൾ:
 
പരിഭാഷ അദ്ധ്യായം: അൻആം
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അവസാനിപ്പിക്കുക