Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আন-নাহল   আয়াত:
یَوْمَ تَاْتِیْ كُلُّ نَفْسٍ تُجَادِلُ عَنْ نَّفْسِهَا وَتُوَفّٰی كُلُّ نَفْسٍ مَّا عَمِلَتْ وَهُمْ لَا یُظْلَمُوْنَ ۟
ಪ್ರತಿಯೊಬ್ಬನೂ ತನ್ನ ರಕ್ಷಣೆಗಾಗಿ ವಾದಿಸುತ್ತಾ ಬರುವ ದಿನದಂದು(ಅAದು) ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿರುವುದರ ಪರಿಪೂರ್ಣ ಪ್ರತಿಫಲವನ್ನು ನೀಡಲಾಗುವುದು ಮತ್ತು ಅವರು ಅನ್ಯಾಯಕ್ಕೊಳಗಾಗಲಾರರು.
আৰবী তাফছীৰসমূহ:
وَضَرَبَ اللّٰهُ مَثَلًا قَرْیَةً كَانَتْ اٰمِنَةً مُّطْمَىِٕنَّةً یَّاْتِیْهَا رِزْقُهَا رَغَدًا مِّنْ كُلِّ مَكَانٍ فَكَفَرَتْ بِاَنْعُمِ اللّٰهِ فَاَذَاقَهَا اللّٰهُ لِبَاسَ الْجُوْعِ وَالْخَوْفِ بِمَا كَانُوْا یَصْنَعُوْنَ ۟
ಅಲ್ಲಾಹನು ಸಂಪೂರ್ಣ ನಿರ್ಭೀತಿ ಹಾಗು ಸಂತೃಪ್ತಿಯಿAದ ಜೀವನ ಸಾಗಿಸುತ್ತಿದ್ದ ಒಂದು ನಾಡಿನ ಉಪಮೆಯನ್ನು ನೀಡುತ್ತಾನೆ. ಅದರ ಜೀವನಾಧಾರವು ಎಲ್ಲಾ ಕಡೆಯಿಂದಲೂ ಸಮೃದ್ಧವಾಗಿ ಬರುತ್ತಿತ್ತು. ಅನಂತರ ಅವರು ಅಲ್ಲಾಹನ ಅನುಗ್ರಹಗಳಿಗೆ ಕೃತಘ್ನರಾದರು. ಆಗ ಅಲ್ಲಾಹನು ಅವರಿಗೆ ಹಸಿವು ಮತ್ತು ಭಯದ ರುಚಿಯನ್ನು ಸವಿಸಿದನು. ಇದು ಅವರು ಮಾಡುತ್ತಿದ್ದಂತಹ ಕೃತ್ಯಗಳ ಪ್ರತಿಫಲವಾಗಿತ್ತು.
আৰবী তাফছীৰসমূহ:
وَلَقَدْ جَآءَهُمْ رَسُوْلٌ مِّنْهُمْ فَكَذَّبُوْهُ فَاَخَذَهُمُ الْعَذَابُ وَهُمْ ظٰلِمُوْنَ ۟
ನಿಶ್ಚಯವಾಗಿಯು ಅವರೆಡೆಗೆ ಅವರಿಂದಲೇ ಆದ ಸಂದೇಶವಾಹಕರೊಬ್ಬರು ಬಂದರು ಆದರೆ ಅವರು ಅವರನ್ನು ಸುಳ್ಳಾಗಿಸಿ ಬಿಟ್ಟರು. ಕೊನೆಗೆ ಅವರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲಿ ಯಾತನೆಯು ಅವರನ್ನು ಹಿಡಿದು ಬಿಟ್ಟಿತು.
আৰবী তাফছীৰসমূহ:
فَكُلُوْا مِمَّا رَزَقَكُمُ اللّٰهُ حَلٰلًا طَیِّبًا ۪— وَّاشْكُرُوْا نِعْمَتَ اللّٰهِ اِنْ كُنْتُمْ اِیَّاهُ تَعْبُدُوْنَ ۟
ಆದ್ದರಿಂದ ಅಲ್ಲಾಹನು ನಿಮಗೆ ದಯಪಾಲಿಸಿರುವ ಧರ್ಮಸಮ್ಮತ ಹಾಗು ಶುದ್ಧ ಆಹಾರವನ್ನು ತಿನ್ನಿರಿ ಹಾಗೂ ಅಲ್ಲಾಹನ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಿರಿ. ನೀವು ಅವನನ್ನೇ ಆರಾಧಿಸುವವರಾಗಿದ್ದರೆ.
আৰবী তাফছীৰসমূহ:
اِنَّمَا حَرَّمَ عَلَیْكُمُ الْمَیْتَةَ وَالدَّمَ وَلَحْمَ الْخِنْزِیْرِ وَمَاۤ اُهِلَّ لِغَیْرِ اللّٰهِ بِهٖ ۚ— فَمَنِ اضْطُرَّ غَیْرَ بَاغٍ وَّلَا عَادٍ فَاِنَّ اللّٰهَ غَفُوْرٌ رَّحِیْمٌ ۟
ನಿಶ್ಚಯವಾಗಿಯು ನಿಮ್ಮ ಮೇಲೆ ಶವ, ರಕ್ತ, ಹಂದಿ ಮಾಂಸ, ಮತ್ತು ಯಾವುದರ ಮೇಲೆ ಅಲ್ಲಾಹನ ಹೊರತು ಇತರರ ನಾಮ ಉಚ್ಛರಿಸಲಾಗಿದೆಯೋ ಅವು ನಿಷಿದ್ಧವಾಗಿವೆ. ಆದರೆ ಯಾರಾದರೂ ವಿವಶನಾದರೆ ಮತ್ತು ಅವನು ಹಂಬಲಿಸುವವನೊ, ಮೇರೆ ಮೀರುವವನೊ ಆಗಿಲ್ಲದಿದ್ದರೆ ಖಂಡಿತವಾಗಿಯು ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.
আৰবী তাফছীৰসমূহ:
وَلَا تَقُوْلُوْا لِمَا تَصِفُ اَلْسِنَتُكُمُ الْكَذِبَ هٰذَا حَلٰلٌ وَّهٰذَا حَرَامٌ لِّتَفْتَرُوْا عَلَی اللّٰهِ الْكَذِبَ ؕ— اِنَّ الَّذِیْنَ یَفْتَرُوْنَ عَلَی اللّٰهِ الْكَذِبَ لَا یُفْلِحُوْنَ ۟ؕ
ನಿಮ್ಮ ನಾಲಿಗೆಗಳಿಂದ ಯಾವುದೇ ವಸ್ತುವನ್ನು ಸುಳ್ಳು ಸುಳ್ಳಾಗಿ ಇದು ಧರ್ಮ ಸಮ್ಮತವಾದುದು ಮತ್ತು ಇದು ನಿಷಿದ್ಧವಾದುದು ಎಂದು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಲಿಕ್ಕಾಗಿ ಹೇಳಬೇಡಿರಿ. ತಿಳಿದುಕೊಳ್ಳಿರಿ! ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿಸುವವರು ಯಶಸ್ವಿಯಾಗಲಾರರು.
আৰবী তাফছীৰসমূহ:
مَتَاعٌ قَلِیْلٌ ۪— وَّلَهُمْ عَذَابٌ اَلِیْمٌ ۟
ಅವರ ಸುಖಾನುಭವವು ಅತ್ಯಲ್ಪವಾದುದು ಮಾತ್ರ ನಂತರ ಅವರಿಗೆ ವೇದನಾಜನಕ ಯಾತನೆಯಿರುವುದು.
আৰবী তাফছীৰসমূহ:
وَعَلَی الَّذِیْنَ هَادُوْا حَرَّمْنَا مَا قَصَصْنَا عَلَیْكَ مِنْ قَبْلُ ۚ— وَمَا ظَلَمْنٰهُمْ وَلٰكِنْ كَانُوْۤا اَنْفُسَهُمْ یَظْلِمُوْنَ ۟
ನಾವು ಯಹೂದರ ಮೇಲೆ ನಿಷಿದ್ಧಗೊಳಿಸಿದವುಗಳನ್ನು ನಿಮಗೆ ಮೊದಲೇ ವಿವರಿಸಿಕೊಟ್ಟಿದ್ದೇವೆ. ನಾವು ಅವರ ಮೇಲೆ ಅನ್ಯಾಯ ಮಾಡಿರಲಿಲ್ಲ. ಆದರೆ ಅವರು ಸ್ವತಃ ತಮ್ಮ ಮೇಲೆ ಅನ್ಯಾಯ ಮಾಡುತ್ತಿದ್ದರು.
আৰবী তাফছীৰসমূহ:
 
অৰ্থানুবাদ ছুৰা: আন-নাহল
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ