Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আন-নাহল   আয়াত:
وَاللّٰهُ جَعَلَ لَكُمْ مِّنْ بُیُوْتِكُمْ سَكَنًا وَّجَعَلَ لَكُمْ مِّنْ جُلُوْدِ الْاَنْعَامِ بُیُوْتًا تَسْتَخِفُّوْنَهَا یَوْمَ ظَعْنِكُمْ وَیَوْمَ اِقَامَتِكُمْ ۙ— وَمِنْ اَصْوَافِهَا وَاَوْبَارِهَا وَاَشْعَارِهَاۤ اَثَاثًا وَّمَتَاعًا اِلٰی حِیْنٍ ۟
ಅಲ್ಲಾಹನು ನಿಮಗಾಗಿ ನಿಮ್ಮ ಮನೆಗಳನ್ನು ನೆಮ್ಮದಿಯ ತಾಣವನ್ನಾಗಿ ಮಾಡಿದನು ಮತ್ತು ಅವನು ನಿಮಗಾಗಿ ಜಾನುವಾರುಗಳ ಚರ್ಮದ ಮನೆಗಳನ್ನು ನಿಶ್ಚಯಿಸಿದನು. ನಿಮ್ಮ ಯಾತ್ರಾ ದಿನದಲ್ಲೂ, ತಂಗುವ ದಿನದಲ್ಲೂ ನೀವು ಅವುಗಳನ್ನು ಹಗುರವಾಗಿ ಕಾಣುತ್ತೀರಿ ಮತ್ತು ಅವುಗಳ ಉಣ್ಣೆ, ರೋಮ, ಮತ್ತು ಕೂದಲುಗಳಿಂದ ಅವನು ಅನೇಕ ಸಾಮಗ್ರಿಗಳನ್ನೂ, ಒಂದು ನಿಶ್ಚಿತ ಕಾಲಾವಧಿವರೆಗೆ ನಿಮ್ಮ ಉಪಯೋಗಕ್ಕೆ ಬರುವ ವಸ್ತುಗಳನ್ನಾಗಿ ಮಾಡಿ ಕೊಟ್ಟನು.
আৰবী তাফছীৰসমূহ:
وَاللّٰهُ جَعَلَ لَكُمْ مِّمَّا خَلَقَ ظِلٰلًا وَّجَعَلَ لَكُمْ مِّنَ الْجِبَالِ اَكْنَانًا وَّجَعَلَ لَكُمْ سَرَابِیْلَ تَقِیْكُمُ الْحَرَّ وَسَرَابِیْلَ تَقِیْكُمْ بَاْسَكُمْ ؕ— كَذٰلِكَ یُتِمُّ نِعْمَتَهٗ عَلَیْكُمْ لَعَلَّكُمْ تُسْلِمُوْنَ ۟
ಅಲ್ಲ್ಲಾಹನೇ ನಿಮಗಾಗಿ ತಾನು ಸೃಷ್ಟಿಸಿದವುಗಳಿಂದ ನೆರಳನ್ನು ಮಾಡಿದನು. ಅವನೇ ನಿಮಗಾಗಿ ಪರ್ವತಗಳಲ್ಲಿ ಆಶ್ರಯ ತಾಣವನ್ನು ನಿರ್ಮಿಸಿದನು ಅವನೇ ನಿಮಗಾಗಿ ಉಷ್ಣತಾಪಗಳಿಂದ ನಿಮ್ಮನ್ನು ರಕ್ಷಿಸುವಂತಹ ಉಡುಪುಗಳನ್ನು, ಯುದ್ಧದ ಸಂದರ್ಭಗಳಲ್ಲಿ ನಿಮಗೆ ಪ್ರಯೋಜನ ನೀಡುವಂತಹ ಉಡುಪುಗಳನ್ನು ಮಾಡಿದನು. ಇದೇ ಪ್ರಕಾರ ಅವನು ತನ್ನ ಸಂಪೂರ್ಣ ಅನುಗ್ರಹವನ್ನು ನೀಡುತ್ತಾನೆ. ಬಹುಷಃ ಅಲ್ಲಾಹನಿಗೆ ನೀವು ಆಜ್ಞಾವಿಧೇಯರಾಗಬಹುದು.
আৰবী তাফছীৰসমূহ:
فَاِنْ تَوَلَّوْا فَاِنَّمَا عَلَیْكَ الْبَلٰغُ الْمُبِیْنُ ۟
ಅದಾಗ್ಯೂ ಅವರು ವಿಮುಖರಾದರೆ ನಿಮ್ಮ ಮೇಲೆ ಸುಸ್ಪಷ್ಟವಾಗಿ ಸಂದೇಶ ತಲುಪಿಸುವುದಷ್ಟೇ ಹೊಣೆಯಾಗಿದೆ.
আৰবী তাফছীৰসমূহ:
یَعْرِفُوْنَ نِعْمَتَ اللّٰهِ ثُمَّ یُنْكِرُوْنَهَا وَاَكْثَرُهُمُ الْكٰفِرُوْنَ ۟۠
ಅವರು ಅಲ್ಲಾಹನ ಅನುಗ್ರಹಗಳನ್ನು ಅರಿತೂ, ಅವುಗಳನ್ನು ನಿರಾಕರಿಸುತ್ತಾರೆ ಮತ್ತು ಅವರ ಪೈಕಿ ಹೆಚ್ಚಿನವರು ಕೃತಘ್ನರಾಗಿದ್ದಾರೆ.
আৰবী তাফছীৰসমূহ:
وَیَوْمَ نَبْعَثُ مِنْ كُلِّ اُمَّةٍ شَهِیْدًا ثُمَّ لَا یُؤْذَنُ لِلَّذِیْنَ كَفَرُوْا وَلَا هُمْ یُسْتَعْتَبُوْنَ ۟
ನಾವು ಪ್ರತಿಯೊಂದು ಸಮುದಾಯದಿಂದಲೂ ಒಬ್ಬ ಸಾಕ್ಷಿಯನ್ನು ನಿಲ್ಲಿಸುವ ದಿನ (ಅವರ ಅವಸ್ಥೆ ಏನಾಗಬಹುದು) ಆಗ ಸತ್ಯ ನಿಷೇಧಿಗಳಿಗೆ (ನೆಪಹೂಡಲು) ಅನುಮತಿ ನೀಡಲಾಗುವುದಿಲ್ಲ ಮತ್ತು ಅವರಿಗೆ ಪಶ್ಚಾತ್ತಾಪ ಪಟ್ಟು ಮರಳುವ ಅವಕಾಶವೂ ಇರಲಾರದು.
আৰবী তাফছীৰসমূহ:
وَاِذَا رَاَ الَّذِیْنَ ظَلَمُوا الْعَذَابَ فَلَا یُخَفَّفُ عَنْهُمْ وَلَا هُمْ یُنْظَرُوْنَ ۟
ಅಕ್ರಮಿಗಳು ಯಾತನೆಯನ್ನು ಕಂಡಾಗ! ಅವರಿಂದ ಅದನ್ನು ಹಗುರಗೊಳಿಸಲಾಗದು ಮತ್ತು ಅವರಿಗೆ ಕಾಲಾವಕಾಶವೂ ನೀಡಲಾಗದು.
আৰবী তাফছীৰসমূহ:
وَاِذَا رَاَ الَّذِیْنَ اَشْرَكُوْا شُرَكَآءَهُمْ قَالُوْا رَبَّنَا هٰۤؤُلَآءِ شُرَكَآؤُنَا الَّذِیْنَ كُنَّا نَدْعُوْا مِنْ دُوْنِكَ ۚ— فَاَلْقَوْا اِلَیْهِمُ الْقَوْلَ اِنَّكُمْ لَكٰذِبُوْنَ ۟ۚ
ಬಹುದೇವಾರಾಧಕರು (ಪರಲೋಕದಲ್ಲಿ) ತಮ್ಮ ಸಹಭಾಗಿಗಳನ್ನು (ಆರಾಧ್ಯರನ್ನು) ಕಂಡಾಗ! ಓ ನಮ್ಮ ಪ್ರಭುವೇ, ನಾವು ನಿನ್ನ ಹೊರತು ಕರೆದು ಬೇಡುತ್ತಿದ್ದಂತಹ ನಮ್ಮ ಸಹಭಾಗಿಗಳು ಇವರೇ ಎಂದು ಹೇಳುವರು. ಆಗ ಅವರು ನೀವು ಶುದ್ಧ ಸುಳ್ಳರು ಎಂದು ಉತ್ತರ ಕೊಡುವರು.
আৰবী তাফছীৰসমূহ:
وَاَلْقَوْا اِلَی اللّٰهِ یَوْمَىِٕذِ ١لسَّلَمَ وَضَلَّ عَنْهُمْ مَّا كَانُوْا یَفْتَرُوْنَ ۟
ಅಂದು ಅವರೆಲ್ಲರೂ (ಬಹುದೇವಾರಾಧಕರು) ಅಲ್ಲಾಹನೆಡೆಗೇ ವಿಧೇಯತೆ ತೋರುವರು ಮತ್ತು ಅವರು ರಚಿಸುತ್ತಿದ್ದ ಸುಳ್ಳುಗಳೆಲ್ಲವೂ ಅವರಿಂದ ಕಾಣೆಯಾಗಿ ಬಿಡುವುದು.
আৰবী তাফছীৰসমূহ:
 
অৰ্থানুবাদ ছুৰা: আন-নাহল
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ