Check out the new design

د قرآن کریم د معناګانو ژباړه - کنادي ژباړه - حمزه بتور * - د ژباړو فهرست (لړلیک)

PDF XML CSV Excel API
Please review the Terms and Policies

د معناګانو ژباړه سورت: اسراء   آیت:
وَاِمَّا تُعْرِضَنَّ عَنْهُمُ ابْتِغَآءَ رَحْمَةٍ مِّنْ رَّبِّكَ تَرْجُوْهَا فَقُلْ لَّهُمْ قَوْلًا مَّیْسُوْرًا ۟
ನೀವು ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ನಿರೀಕ್ಷಿಸುವ ದಯೆಯನ್ನು ಕಾಯುತ್ತಿರುವ ಕಾರಣ, ಅವರಿಂದ ಮುಖ ತಿರುಗಿಸಬೇಕಾಗಿ ಬಂದರೆ, ಅವರೊಡನೆ ಬಹಳ ಮೃದುವಾಗಿ ಮಾತನಾಡುತ್ತಾ ಅದನ್ನು ಮನವರಿಕೆ ಮಾಡಿಕೊಡಿ.[1]
[1] ಅಂದರೆ ನೀವು ಆರ್ಥಿಕವಾಗಿ ದುರ್ಬಲರಾಗಿರುವ ಸಂದರ್ಭದಲ್ಲಿ—ಇಂತಹ ಸಂದರ್ಭಗಳಲ್ಲಿ ಎಲ್ಲರೂ ಅಲ್ಲಾಹನ ದಯೆಯನ್ನು ನಿರೀಕ್ಷಿಸುತ್ತಾರೆ—ಆಗ ನಿಮ್ಮ ಬಳಿಗೆ ಸಹಾಯ ಕೇಳಿ ಬರುವ ಸಂಬಂಧಿಕರು, ಬಡವರು ಮುಂತಾದವರಿಂದ ಮುಖ ತಿರುಗಿಸಬೇಕಾಗಿ ಬಂದರೆ, ಅಂದರೆ ಅವರಿಗೆ ನಿಮ್ಮ ಅಸಹಾಯಕತೆಯನ್ನು ತಿಳಿಸಬೇಕಾಗಿ ಬಂದರೆ, ಗಟ್ಟಿ ಸ್ವರದಲ್ಲಿ ಗದರಿಸುವ ರೀತಿಯಲ್ಲಿ ವರ್ತಿಸಬೇಡಿ. ಬದಲಿಗೆ, ಮೃದುವಾಗಿ ಮತ್ತು ಸೌಮ್ಯವಾಗಿ ಅವರಿಗೆ ನಿಮ್ಮ ಪರಿಸ್ಥಿತಿಯನ್ನು ತಿಳಿಸಿಕೊಡಿ.
عربي تفسیرونه:
وَلَا تَجْعَلْ یَدَكَ مَغْلُوْلَةً اِلٰی عُنُقِكَ وَلَا تَبْسُطْهَا كُلَّ الْبَسْطِ فَتَقْعُدَ مَلُوْمًا مَّحْسُوْرًا ۟
ನೀವು ನಿಮ್ಮ ಕೈಯನ್ನು ಕೊರಳಿಗೆ ಕಟ್ಟಿದಂತೆ ಇಡಬೇಡಿ. ಅಥವಾ ಅದನ್ನು ಸಂಪೂರ್ಣವಾಗಿ ಬಿಚ್ಚಿಕೊಂಡಂತೆಯೂ ಇಡಬೇಡಿ.[1] ಹಾಗೇನಾದರೂ ಆದರೆ ನೀವು ಅವಮಾನಿತರು ಮತ್ತು ಅಸಹಾಯಕರಾಗಿ ಕೂರಬೇಕಾದೀತು.
[1] ಅಂದರೆ ನೀವು ಏನೂ ಖರ್ಚು ಮಾಡದೆ ಜಿಪುಣತನ ತೋರಬೇಡಿ. ಅದೇ ರೀತಿ ಅಮಿತವಾಗಿಯೂ ಖರ್ಚು ಮಾಡಬೇಡಿ.
عربي تفسیرونه:
اِنَّ رَبَّكَ یَبْسُطُ الرِّزْقَ لِمَنْ یَّشَآءُ وَیَقْدِرُ ؕ— اِنَّهٗ كَانَ بِعِبَادِهٖ خَبِیْرًا بَصِیْرًا ۟۠
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು (ಅವನು ಇಚ್ಛಿಸುವವರಿಗೆ) ಇಕ್ಕಟ್ಟುಗೊಳಿಸುತ್ತಾನೆ. ಅವನು ತನ್ನ ದಾಸರ ಬಗ್ಗೆ ಸೂಕ್ಷ್ಮವಾಗಿ ತಿಳಿದವನು ಮತ್ತು ವೀಕ್ಷಿಸುವವನಾಗಿದ್ದಾನೆ.
عربي تفسیرونه:
وَلَا تَقْتُلُوْۤا اَوْلَادَكُمْ خَشْیَةَ اِمْلَاقٍ ؕ— نَحْنُ نَرْزُقُهُمْ وَاِیَّاكُمْ ؕ— اِنَّ قَتْلَهُمْ كَانَ خِطْاً كَبِیْرًا ۟
ಬಡತನವನ್ನು ಹೆದರಿ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ. ನಾವೇ ಅವರಿಗೂ, ನಿಮಗೂ ಆಹಾರ ಒದಗಿಸುವವರು. ಅವರನ್ನು ಕೊಲ್ಲುವುದು ಖಂಡಿತವಾಗಿಯೂ ಮಹಾ ಅಪರಾಧವಾಗಿದೆ.
عربي تفسیرونه:
وَلَا تَقْرَبُوا الزِّنٰۤی اِنَّهٗ كَانَ فَاحِشَةً ؕ— وَسَآءَ سَبِیْلًا ۟
ನೀವು ವ್ಯಭಿಚಾರದ ಹತ್ತಿರಕ್ಕೂ ಸುಳಿಯಬೇಡಿ. ನಿಶ್ಚಯವಾಗಿಯೂ ಅದು ಅಶ್ಲೀಲ ಕೃತ್ಯ ಮತ್ತು ಕೆಟ್ಟಮಾರ್ಗವಾಗಿದೆ.
عربي تفسیرونه:
وَلَا تَقْتُلُوا النَّفْسَ الَّتِیْ حَرَّمَ اللّٰهُ اِلَّا بِالْحَقِّ ؕ— وَمَنْ قُتِلَ مَظْلُوْمًا فَقَدْ جَعَلْنَا لِوَلِیِّهٖ سُلْطٰنًا فَلَا یُسْرِفْ فِّی الْقَتْلِ ؕ— اِنَّهٗ كَانَ مَنْصُوْرًا ۟
ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲಬೇಡಿ. ಯಾರಾದರೂ ಅನ್ಯಾಯವಾಗಿ ಕೊಲೆಯಾದರೆ ಅವನ ವಾರಸುದಾರರಿಗೆ ನಾವು (ಪ್ರತೀಕಾರ ಪಡೆಯುವ) ಅಧಿಕಾರವನ್ನು ನೀಡಿದ್ದೇವೆ. ಆದರೆ ಕೊಲೆ ಮಾಡುವಾಗ ಅವನು ಎಲ್ಲೆ ಮೀರಬಾರದು.[1] ನಿಶ್ಚಯವಾಗಿಯೂ ಅವನಿಗೆ ಸಹಾಯ ಮಾಡಲಾಗುವುದು.
[1] ಕೊಲೆಯಾದವರ ಕಡೆಯವರು ಪ್ರತೀಕಾರ ಪಡೆಯುವಾಗ ಎಲ್ಲೆ ಮೀರಬಾರದು. ಅಂದರೆ ಒಬ್ಬನ ಬದಲಿಗೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಕೊಲ್ಲುವುದು, ಕೊಂದ ನಂತರ ಅಂಗಾಂಗಗಳನ್ನು ಬೇರ್ಪಡಿಸುವುದು, ಕ್ರೂರವಾಗಿ ಮತ್ತು ಬರ್ಬರವಾಗಿ ಕೊಲ್ಲುವುದು ಇತ್ಯಾದಿ ಮಾಡಬಾರದು.
عربي تفسیرونه:
وَلَا تَقْرَبُوْا مَالَ الْیَتِیْمِ اِلَّا بِالَّتِیْ هِیَ اَحْسَنُ حَتّٰی یَبْلُغَ اَشُدَّهٗ ۪— وَاَوْفُوْا بِالْعَهْدِ ۚ— اِنَّ الْعَهْدَ كَانَ مَسْـُٔوْلًا ۟
ಅನಾಥರು ಪ್ರೌಢರಾಗುವ ತನಕ ಅವರ ಆಸ್ತಿಯನ್ನು ಒಳಿತು ಮಾಡುವ ಉದ್ದೇಶದಿಂದಲ್ಲದೆ ಮುಟ್ಟಬೇಡಿ. ಕರಾರುಗಳನ್ನು ನೆರವೇರಿಸಿರಿ. ನಿಶ್ಚಯವಾಗಿಯೂ ಕರಾರಿನ ಬಗ್ಗೆ ನಿಮ್ಮೊಡನೆ ಪ್ರಶ್ನಿಸಲಾಗುವುದು.
عربي تفسیرونه:
وَاَوْفُوا الْكَیْلَ اِذَا كِلْتُمْ وَزِنُوْا بِالْقِسْطَاسِ الْمُسْتَقِیْمِ ؕ— ذٰلِكَ خَیْرٌ وَّاَحْسَنُ تَاْوِیْلًا ۟
ನೀವು ಅಳೆದುಕೊಡುವಾಗ ಪೂರ್ಣವಾಗಿ ಅಳೆದು ಕೊಡಿ ಮತ್ತು ಸರಿಯಾದ ತಕ್ಕಡಿಯಿಂದ ತೂಕ ಮಾಡಿ. ಅದು ಅತ್ಯುತ್ತಮ ಮಾರ್ಗವಾಗಿದ್ದು ಅತ್ಯುತ್ತಮ ಪರಿಣಾಮವನ್ನು ಹೊಂದಿದೆ.
عربي تفسیرونه:
وَلَا تَقْفُ مَا لَیْسَ لَكَ بِهٖ عِلْمٌ ؕ— اِنَّ السَّمْعَ وَالْبَصَرَ وَالْفُؤَادَ كُلُّ اُولٰٓىِٕكَ كَانَ عَنْهُ مَسْـُٔوْلًا ۟
ನಿಮಗೆ ಅರಿವಿಲ್ಲದ ಯಾವುದನ್ನೂ ಹಿಂಬಾಲಿಸಬೇಡಿ. ನಿಶ್ಚಯವಾಗಿಯೂ ಕಿವಿ, ಕಣ್ಣು ಮತ್ತು ಹೃದಯಗಳೆಲ್ಲವೂ ವಿಚಾರಣೆಗೆ ಒಳಪಡುತ್ತವೆ.
عربي تفسیرونه:
وَلَا تَمْشِ فِی الْاَرْضِ مَرَحًا ۚ— اِنَّكَ لَنْ تَخْرِقَ الْاَرْضَ وَلَنْ تَبْلُغَ الْجِبَالَ طُوْلًا ۟
ಭೂಮಿಯಲ್ಲಿ ದರ್ಪದಿಂದ ನಡೆಯಬೇಡಿ. ಭೂಮಿಯನ್ನು ಸೀಳಲು ಅಥವಾ ಎತ್ತರದಲ್ಲಿ ಪರ್ವತವನ್ನು ತಲುಪಲು ನಿಮಗೆ ಖಂಡಿತ ಸಾಧ್ಯವಿಲ್ಲ.
عربي تفسیرونه:
كُلُّ ذٰلِكَ كَانَ سَیِّئُهٗ عِنْدَ رَبِّكَ مَكْرُوْهًا ۟
ಇವೆಲ್ಲಾ ಕರ್ಮಗಳ ಕೆಡುಕುಗಳು ನಿಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಿಯಲ್ಲಿ ಅನಿಷ್ಟಕರವಾಗಿವೆ.
عربي تفسیرونه:
 
د معناګانو ژباړه سورت: اسراء
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - حمزه بتور - د ژباړو فهرست (لړلیک)

محمد حمزه بتور ژباړلی دی. د رواد الترجمة مرکز تر څارنې لاندې انکشاف ورکړل شوی.

بندول