Check out the new design

د قرآن کریم د معناګانو ژباړه - کنادي ژباړه - حمزه بتور * - د ژباړو فهرست (لړلیک)

PDF XML CSV Excel API
Please review the Terms and Policies

د معناګانو ژباړه سورت: اسراء   آیت:
مَنْ كَانَ یُرِیْدُ الْعَاجِلَةَ عَجَّلْنَا لَهٗ فِیْهَا مَا نَشَآءُ لِمَنْ نُّرِیْدُ ثُمَّ جَعَلْنَا لَهٗ جَهَنَّمَ ۚ— یَصْلٰىهَا مَذْمُوْمًا مَّدْحُوْرًا ۟
ಯಾರು ಈ ತ್ವರೆಯ ಲೋಕವನ್ನು (ಇಹಲೋಕವನ್ನು) ಮಾತ್ರ ಗುರಿಯಾಗಿಟ್ಟು ಕರ್ಮವೆಸಗುತ್ತಾರೋ, ಅವರಲ್ಲಿ ನಾವು ಬಯಸುವವರಿಗೆ ನಾವು ಇಚ್ಛಿಸುವಷ್ಟನ್ನು ಇಲ್ಲಿಯೇ ತ್ವರಿತವಾಗಿ ನೀಡುವೆವು. ನಂತರ (ಪರಲೋಕದಲ್ಲಿ) ನಾವು ಅವನಿಗೆ ನರಕಾಗ್ನಿಯನ್ನು ನೀಡುವೆವು. ಅವನು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಅವಮಾನದೊಂದಿಗೆ ಅದನ್ನು ಪ್ರವೇಶ ಮಾಡುವನು.
عربي تفسیرونه:
وَمَنْ اَرَادَ الْاٰخِرَةَ وَسَعٰی لَهَا سَعْیَهَا وَهُوَ مُؤْمِنٌ فَاُولٰٓىِٕكَ كَانَ سَعْیُهُمْ مَّشْكُوْرًا ۟
ಯಾರು ಪರಲೋಕವನ್ನು ಗುರಿಯಾಗಿಟ್ಟು, ಸತ್ಯವಿಶ್ವಾಸಿಯಾಗಿರುವ ಸ್ಥಿತಿಯಲ್ಲಿ ಅದಕ್ಕಾಗಿ ಕರ್ಮವೆಸಗುತ್ತಾರೋ ಅಂತಹವರ ಕರ್ಮಗಳು ಶ್ಲಾಘನಾರ್ಹವಾಗಿವೆ.
عربي تفسیرونه:
كُلًّا نُّمِدُّ هٰۤؤُلَآءِ وَهٰۤؤُلَآءِ مِنْ عَطَآءِ رَبِّكَ ؕ— وَمَا كَانَ عَطَآءُ رَبِّكَ مَحْظُوْرًا ۟
ನಾವು ಅವರಿಗೂ ಇವರಿಗೂ—ಪ್ರತಿಯೊಬ್ಬರಿಗೂ ನಿಮ್ಮ ಪರಿಪಾಲಕನ (ಅಲ್ಲಾಹನ) ಕೊಡುಗೆಯಿಂದ ನೀಡುತ್ತೇವೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಕೊಡುಗೆಯು ತಡೆಯಲ್ಪಡುವುದಿಲ್ಲ.[1]
[1] ಇಹಲೋಕದಲ್ಲಿ ಅಲ್ಲಾಹನ ಕೊಡುಗೆಯು ಸತ್ಯವಿಶ್ವಾಸಿಗಳಿಗೂ ಸತ್ಯನಿಷೇಧಿಗಳಿಗೂ ಸಿಗುತ್ತದೆ.
عربي تفسیرونه:
اُنْظُرْ كَیْفَ فَضَّلْنَا بَعْضَهُمْ عَلٰی بَعْضٍ ؕ— وَلَلْاٰخِرَةُ اَكْبَرُ دَرَجٰتٍ وَّاَكْبَرُ تَفْضِیْلًا ۟
ನಾವು ಅವರಲ್ಲಿ ಕೆಲವರನ್ನು ಇತರ ಕೆಲವರಿಗಿಂತ ಹೇಗೆ ಶ್ರೇಷ್ಠಗೊಳಿಸಿದ್ದೇವೆಂದು ನೋಡಿರಿ. ಪರಲೋಕವು ಸ್ಥಾನಮಾನಗಳಲ್ಲಿ ಅತಿದೊಡ್ಡದಾಗಿದೆ ಮತ್ತು ಶ್ರೇಷ್ಠತೆಯಲ್ಲೂ ಅತಿದೊಡ್ಡದಾಗಿದೆ.
عربي تفسیرونه:
لَا تَجْعَلْ مَعَ اللّٰهِ اِلٰهًا اٰخَرَ فَتَقْعُدَ مَذْمُوْمًا مَّخْذُوْلًا ۟۠
ಅಲ್ಲಾಹನೊಡನೆ ಬೇರೆ ದೇವರನ್ನು ಮಾಡಿಬೇಡಿ. ಹಾಗೇನಾದರೂ ಆದರೆ ನೀವು ಅವಮಾನ ಮತ್ತು ತಿರಸ್ಕಾರಕ್ಕೊಳಗಾಗಿ ಬಿಡುವಿರಿ.
عربي تفسیرونه:
وَقَضٰی رَبُّكَ اَلَّا تَعْبُدُوْۤا اِلَّاۤ اِیَّاهُ وَبِالْوَالِدَیْنِ اِحْسَانًا ؕ— اِمَّا یَبْلُغَنَّ عِنْدَكَ الْكِبَرَ اَحَدُهُمَاۤ اَوْ كِلٰهُمَا فَلَا تَقُلْ لَّهُمَاۤ اُفٍّ وَّلَا تَنْهَرْهُمَا وَقُلْ لَّهُمَا قَوْلًا كَرِیْمًا ۟
ನೀವು ಅಲ್ಲಾಹನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು ಮತ್ತು ಮಾತಾಪಿತರಿಗೆ ಒಳಿತು ಮಾಡಬೇಕು ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ಆದೇಶಿಸಿದ್ದಾನೆ. ಅವರಲ್ಲೊಬ್ಬರು ಅಥವಾ ಇಬ್ಬರೂ ನಿಮ್ಮ ಉಪಸ್ಥಿತಿಯಲ್ಲಿ ವೃದ್ಧಾಪ್ಯವನ್ನು ತಲುಪಿದ್ದರೆ ಅವರೊಡನೆ “ಛೇ” ಎಂದು ಹೇಳಬೇಡಿ. ಅವರನ್ನು ಗದರಿಸಬೇಡಿ. ಅವರೊಡನೆ ಗೌರವದಿಂದ ಮಾತನಾಡಿರಿ.
عربي تفسیرونه:
وَاخْفِضْ لَهُمَا جَنَاحَ الذُّلِّ مِنَ الرَّحْمَةِ وَقُلْ رَّبِّ ارْحَمْهُمَا كَمَا رَبَّیٰنِیْ صَغِیْرًا ۟ؕ
ಅವರಿಬ್ಬರ ಮುಂದೆ ದಯೆಯಿಂದ ಕೂಡಿದ ವಿನಯದ ರೆಕ್ಕೆಯನ್ನು ತಗ್ಗಿಸಿ ನಿಲ್ಲಿರಿ. “ನನ್ನ ಪರಿಪಾಲಕನೇ! ಬಾಲ್ಯದಲ್ಲಿ ಇವರು ನನ್ನನ್ನು ಸಾಕಿ ಸಲಹಿದಂತೆ ಇವರಿಗೆ ದಯೆ ತೋರು” ಎಂದು ಪ್ರಾರ್ಥಿಸಿರಿ.
عربي تفسیرونه:
رَبُّكُمْ اَعْلَمُ بِمَا فِیْ نُفُوْسِكُمْ ؕ— اِنْ تَكُوْنُوْا صٰلِحِیْنَ فَاِنَّهٗ كَانَ لِلْاَوَّابِیْنَ غَفُوْرًا ۟
ನಿಮ್ಮ ಮನಸ್ಸುಗಳಲ್ಲಿ ಏನಿದೆಯೆಂದು ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ನೀವು ನೀತಿವಂತರಾಗಿದ್ದರೆ—ಪಶ್ಚಾತ್ತಾಪಪಟ್ಟು ಮರಳುವವರಿಗೆ ಅವನು ಅತ್ಯಧಿಕ ಕ್ಷಮಿಸುವವನಾಗಿದ್ದಾನೆ.
عربي تفسیرونه:
وَاٰتِ ذَا الْقُرْبٰی حَقَّهٗ وَالْمِسْكِیْنَ وَابْنَ السَّبِیْلِ وَلَا تُبَذِّرْ تَبْذِیْرًا ۟
ಆಪ್ತಸಂಬಂಧಿಕರ, ಬಡವರ ಮತ್ತು ಪ್ರಯಾಣಿಕರ ಹಕ್ಕನ್ನು ಸಂದಾಯ ಮಾಡಿರಿ. ಅನಗತ್ಯವಾಗಿ ಖರ್ಚು ಮಾಡಬೇಡಿ.
عربي تفسیرونه:
اِنَّ الْمُبَذِّرِیْنَ كَانُوْۤا اِخْوَانَ الشَّیٰطِیْنِ ؕ— وَكَانَ الشَّیْطٰنُ لِرَبِّهٖ كَفُوْرًا ۟
ಅನಗತ್ಯವಾಗಿ ಖರ್ಚು ಮಾಡುವವರು ಶೈತಾನನ ಸಹೋದರರಾಗಿದ್ದಾರೆ. ಶೈತಾನನು ತನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಕೃತಘ್ನನಾಗಿದ್ದಾನೆ.
عربي تفسیرونه:
 
د معناګانو ژباړه سورت: اسراء
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - حمزه بتور - د ژباړو فهرست (لړلیک)

محمد حمزه بتور ژباړلی دی. د رواد الترجمة مرکز تر څارنې لاندې انکشاف ورکړل شوی.

بندول