Check out the new design

पवित्र कुरआनको अर्थको अनुवाद - कन्नड अनुवाद : बशीर माइसुरी । * - अनुवादहरूको सूची


अर्थको अनुवाद सूरह: न्निसा   आयत:
وَاللّٰهُ یُرِیْدُ اَنْ یَّتُوْبَ عَلَیْكُمْ ۫— وَیُرِیْدُ الَّذِیْنَ یَتَّبِعُوْنَ الشَّهَوٰتِ اَنْ تَمِیْلُوْا مَیْلًا عَظِیْمًا ۟
ಮತ್ತು ಅಲ್ಲಾಹನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲು ಇಚ್ಛಿಸುತ್ತಾನೆ ತಮ್ಮ ಸ್ವೇಚ್ಛೆಯನ್ನು ಅನುಸರಿಸುವವರು ನೀವು ಸತ್ಯವನ್ನು ತ್ಯಜಿಸಿ ಮಿಥ್ಯವನ್ನು ಅನುಸರಿಸಿಲಿಚ್ಛಿಸುವರು.
अरबी व्याख्याहरू:
یُرِیْدُ اللّٰهُ اَنْ یُّخَفِّفَ عَنْكُمْ ۚ— وَخُلِقَ الْاِنْسَانُ ضَعِیْفًا ۟
ಅಲ್ಲಾಹನು ನಿಮ್ಮಿಂದ ಭಾರವನ್ನು ಹಗುರಗೊಳಿಸಲಿಚ್ಛಿಸುತ್ತಾನೆ. ಏಕೆಂದರೆ ಮನುಷ್ಯನು ದುರ್ಬಲನಾಗಿ ಸೃಷ್ಠಿಸಲಾಗಿದ್ದಾನೆ.
अरबी व्याख्याहरू:
یٰۤاَیُّهَا الَّذِیْنَ اٰمَنُوْا لَا تَاْكُلُوْۤا اَمْوَالَكُمْ بَیْنَكُمْ بِالْبَاطِلِ اِلَّاۤ اَنْ تَكُوْنَ تِجَارَةً عَنْ تَرَاضٍ مِّنْكُمْ ۫— وَلَا تَقْتُلُوْۤا اَنْفُسَكُمْ ؕ— اِنَّ اللّٰهَ كَانَ بِكُمْ رَحِیْمًا ۟
ಓ ಸತ್ಯವಿಶ್ವಾಸಿಗಳೇ, ನೀವು ಪರಸ್ಪರ ಸಂತೃಪ್ತಿಯೊAದಿಗೆ ನಡೆಸುವ ವ್ಯವಹಾರದ ಮೂಲಕವಲ್ಲದೇ, ನೀವು ಪರಸ್ಪರರ ಸೊತ್ತನ್ನು ಅಕ್ರಮದಿಂದ ತಿನ್ನಬೇಡಿರಿ. ಮತ್ತು ನೀವು ನಿಮ್ಮನ್ನೇ ಕೊಲ್ಲಬೇಡಿರಿ. ಖಂಡಿತವಾಗಿಯು ಅಲ್ಲಾಹನು ನಿಮ್ಮ ಬಗ್ಗೆ ಕರುಣಾನಿಧಿಯಾಗಿದ್ದಾನೆ.
अरबी व्याख्याहरू:
وَمَنْ یَّفْعَلْ ذٰلِكَ عُدْوَانًا وَّظُلْمًا فَسَوْفَ نُصْلِیْهِ نَارًا ؕ— وَكَانَ ذٰلِكَ عَلَی اللّٰهِ یَسِیْرًا ۟
ಅತಿರೇಕ ಮತ್ತು ಅನ್ಯಾಯವಾಗಿ (ಯಾರು ಇಂತಹ ಪಾಪವನ್ನು)ಮಾಡುತ್ತಾನೋ ಸದ್ಯದಲ್ಲೇ ನಾವು ಅವನನ್ನು ನರಕಾಗ್ನಿಗೆ ಪ್ರವೇಶಿಸುವೆವು ಮತ್ತು ಇದು ಅಲ್ಲಾಹನಿಗೆ ಬಹಳ ಸುಲಭವಾಗಿದೆ.
अरबी व्याख्याहरू:
اِنْ تَجْتَنِبُوْا كَبَآىِٕرَ مَا تُنْهَوْنَ عَنْهُ نُكَفِّرْ عَنْكُمْ سَیِّاٰتِكُمْ وَنُدْخِلْكُمْ مُّدْخَلًا كَرِیْمًا ۟
ನಿಮಗೆ ನಿಷಿದ್ಧಿಸಲಾದ ಮಹಾಪಾಪಗಳಿಂದ ನೀವು ದೂರನಿಲ್ಲುವುದಾದರೆ ನಿಮ್ಮ ಚಿಕ್ಕ ದೋಷಗಳನ್ನು ನಾವು ನಿಮ್ಮಿಂದ ಅಳಿಸಿಬಿಡುವೆವು ಮತ್ತು ನಿಮ್ಮನ್ನು ಗೌರವಾನ್ವಿತ ಹಾಗೂ ಉನ್ನತವಾದ ಸ್ಥಾನಕ್ಕೆ ಪ್ರವೇಶಗೊಳಿಸುವೆವು.
अरबी व्याख्याहरू:
وَلَا تَتَمَنَّوْا مَا فَضَّلَ اللّٰهُ بِهٖ بَعْضَكُمْ عَلٰی بَعْضٍ ؕ— لِلرِّجَالِ نَصِیْبٌ مِّمَّا اكْتَسَبُوْا ؕ— وَلِلنِّسَآءِ نَصِیْبٌ مِّمَّا اكْتَسَبْنَ ؕ— وَسْـَٔلُوا اللّٰهَ مِنْ فَضْلِهٖ ؕ— اِنَّ اللّٰهَ كَانَ بِكُلِّ شَیْءٍ عَلِیْمًا ۟
ಅಲ್ಲಾಹನು ನಿಮ್ಮ ಪೈಕಿ ಕೆಲವರಿಗೆ ಇನ್ನು ಕೆಲವರಿಗಿಂತ ಹೆಚ್ಚು ಅನುಗ್ರಹಗಳನ್ನು ಕೊಟ್ಟಿರುವುದನ್ನು ನೀವು ಹಂಬಲಿಸದಿರಿ. ಪುರುಷರು ಸಂಪಾದಿಸಿರುವುದು ಅವರಿಗಿದೆ. ಮತ್ತು ಸ್ತಿçÃಯರು ಸಂಪಾದಿಸಿರುವುದು ಅವರಿಗಿದೆ. ಅಲ್ಲಾಹನೊಂದಿಗೆ ಅವನ ಔದಾರ್ಯದಿಂದ ಬೇಡಿಕೊಳ್ಳಿರಿ. ಖಂಡಿತವಾಗಿಯು ಅಲ್ಲಾಹನು ಸಕಲ ಸಂಗತಿಗಳ ಕುರಿತು ಅರಿವುಳ್ಳವನಾಗಿದ್ದಾನೆ.
अरबी व्याख्याहरू:
وَلِكُلٍّ جَعَلْنَا مَوَالِیَ مِمَّا تَرَكَ الْوَالِدٰنِ وَالْاَقْرَبُوْنَ ؕ— وَالَّذِیْنَ عَقَدَتْ اَیْمَانُكُمْ فَاٰتُوْهُمْ نَصِیْبَهُمْ ؕ— اِنَّ اللّٰهَ كَانَ عَلٰی كُلِّ شَیْءٍ شَهِیْدًا ۟۠
ಮಾತಾಪಿತರು ಅಥವಾ ನಿಕಟ ಬಂಧುಗಳು ಬಿಟ್ಟುಹೋದ ಸಂಪತ್ತಿನಲ್ಲಿ ಪ್ರತಿಯೊಬ್ಬರನ್ನು ನಾವು ಅದರ ಹಕ್ಕುದಾರರಾಗಿ ನಿಶ್ಚಯಿಸಿದ್ದೇವೆ. ನೀವು ಒಪ್ಪಂದ ಮಾಡಿರುವವರಿಗೂ ಅವರ ಪಾಲನ್ನು ನೀಡಿರಿ. ವಾಸ್ತವದಲ್ಲಿ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಕ್ಷಿಯಾಗಿರುವನು.
अरबी व्याख्याहरू:
 
अर्थको अनुवाद सूरह: न्निसा
सूरहरूको सूची पृष्ठ संख्या
 
पवित्र कुरआनको अर्थको अनुवाद - कन्नड अनुवाद : बशीर माइसुरी । - अनुवादहरूको सूची

यसलाई शेख बशीर माइसुरीले अनुवाद गरेका हुन् । यसलाई रुव्वाद अनुवाद केन्द्रको निरक्षणमा विकसित गरिएको छ ।

बन्द गर्नुहोस्