Check out the new design

पवित्र कुरआनको अर्थको अनुवाद - कन्नड अनुवाद : बशीर माइसुरी । * - अनुवादहरूको सूची


अर्थको अनुवाद सूरह: न्निसा   आयत:
وَاِنْ اَرَدْتُّمُ اسْتِبْدَالَ زَوْجٍ مَّكَانَ زَوْجٍ ۙ— وَّاٰتَیْتُمْ اِحْدٰىهُنَّ قِنْطَارًا فَلَا تَاْخُذُوْا مِنْهُ شَیْـًٔا ؕ— اَتَاْخُذُوْنَهٗ بُهْتَانًا وَّاِثْمًا مُّبِیْنًا ۟
ಮತ್ತು ನೀವು ಓರ್ವ ಪತ್ನಿಯ ಸ್ಥಾನದಲ್ಲಿ ಇನ್ನೋರ್ವ ಪತ್ನಿಯನ್ನು ವರಿಸಲು ಬಯಸುವುದಾದರೆ ಅವರಲ್ಲಿ ಒಬ್ಬಳಿಗೆ ನೀವು ಧನದ ಭಂಡಾರವನ್ನು ನೀಡಿದ್ದರೂ ಅದರಿಂದ ಸ್ವಲ್ಪವನ್ನೂ ಪಡೆಯಬೇಡಿರಿ. ಸುಳ್ಳಾರೋಪ ಹೊರಿಸಿ ಸ್ಪಷ್ಟವಾದ ಪಾಪದೊಂದಿಗೆ ನೀವದನ್ನು ಪಡೆದುಕೊಳ್ಳುವಿರಾ?
अरबी व्याख्याहरू:
وَكَیْفَ تَاْخُذُوْنَهٗ وَقَدْ اَفْضٰی بَعْضُكُمْ اِلٰی بَعْضٍ وَّاَخَذْنَ مِنْكُمْ مِّیْثَاقًا غَلِیْظًا ۟
ನೀವು ಪರಸ್ಪರ ರಸಾನಂದವನ್ನು ಸವಿದಿರುವಾಗ ಮತ್ತು ಅವರು ನಿಮ್ಮಿಂದ ಬಲಿಷ್ಠ ಕರಾರನ್ನು ಪಡೆದಿರುವಾಗ ನೀವು ಹೇಗೆ ಅದನ್ನು ಹಿಂದಕ್ಕೆ ಪಡೆಯುವಿರಿ,
अरबी व्याख्याहरू:
وَلَا تَنْكِحُوْا مَا نَكَحَ اٰبَآؤُكُمْ مِّنَ النِّسَآءِ اِلَّا مَا قَدْ سَلَفَ ؕ— اِنَّهٗ كَانَ فَاحِشَةً وَّمَقْتًا ؕ— وَسَآءَ سَبِیْلًا ۟۠
ನಿಮ್ಮ ತಂದೆಯರು ವಿವಾಹ ಮಾಡಿದ್ದ ಸ್ತಿçÃಯರನ್ನು ನೀವು ವಿವಾಹವಾಗ ಬೇಡಿರಿ; ಆದರೆ ಹಿಂದೆ ಕಳೆದದ್ದು ಕಳೆದು ಹೋಯಿತು. ವಾಸ್ತವದಲ್ಲಿ ಇದು ಅಶ್ಲೀಲವೂ, ಕೋಪಹೇತುವೂ, ಮತ್ತು ದುಷ್ಟ ಸಂಪ್ರದಾಯವು ಆಗಿದೆ.
अरबी व्याख्याहरू:
حُرِّمَتْ عَلَیْكُمْ اُمَّهٰتُكُمْ وَبَنٰتُكُمْ وَاَخَوٰتُكُمْ وَعَمّٰتُكُمْ وَخٰلٰتُكُمْ وَبَنٰتُ الْاَخِ وَبَنٰتُ الْاُخْتِ وَاُمَّهٰتُكُمُ الّٰتِیْۤ اَرْضَعْنَكُمْ وَاَخَوٰتُكُمْ مِّنَ الرَّضَاعَةِ وَاُمَّهٰتُ نِسَآىِٕكُمْ وَرَبَآىِٕبُكُمُ الّٰتِیْ فِیْ حُجُوْرِكُمْ مِّنْ نِّسَآىِٕكُمُ الّٰتِیْ دَخَلْتُمْ بِهِنَّ ؗ— فَاِنْ لَّمْ تَكُوْنُوْا دَخَلْتُمْ بِهِنَّ فَلَا جُنَاحَ عَلَیْكُمْ ؗ— وَحَلَآىِٕلُ اَبْنَآىِٕكُمُ الَّذِیْنَ مِنْ اَصْلَابِكُمْ ۙ— وَاَنْ تَجْمَعُوْا بَیْنَ الْاُخْتَیْنِ اِلَّا مَا قَدْ سَلَفَ ؕ— اِنَّ اللّٰهَ كَانَ غَفُوْرًا رَّحِیْمًا ۟ۙ
ನಿಮ್ಮ ಮೇಲೆ ನಿಷಿದ್ಧ ಮಾಡಲಾದವರು ನಿಮ್ಮ ತಾಯಂದಿರು, ನಿಮ್ಮ ಪುತ್ರಿಯರು, ನಿಮ್ಮ ಸಹೋದರಿಯರು, ನಿಮ್ಮ ಸೋದರತ್ತೆಯರು ನಿಮ್ಮ ಮಾತೃ ಸಹೋದರಿಯರು, (ಚಿಕ್ಕಮ್ಮ, ದೊಡ್ಡಮ್ಮ) ನಿಮ್ಮ ಸಹೋದರ ಪುತ್ರಿಯರು, ನಿಮ್ಮ ಸಹೋದರಿ ಪುತ್ರಿಯರು, ನಿಮಗೆ ಮೊಲೆಹಾಲುಣಿಸಿದ ನಿಮ್ಮ ಸಾಕುತಾಯಂದಿರು, ಮೊಲೆ ಹಾಲಿನಲ್ಲಿ ಪಾಲುಗೊಂಡಿರುವ ನಿಮ್ಮ ಸಹೋದರಿಯರು, ನಿಮ್ಮ ಪತ್ನಿಯರ ತಾಯಂದಿರು, ನೀವು ಸಂಭೋಗ ಮಾಡಿರುವ ಪತ್ನಿಯರಿಂದಿರುವ ನಿಮ್ಮ ಮಲಪುತ್ರಿಯರು ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಇನ್ನು ನೀವು ಅವರೊಂದಿಗೆ ಲೈಂಗಿಕ ಸಂಪರ್ಕ ಮಾಡಿರದಿದ್ದರೆ ನಿಮ್ಮ ಮೇಲೆ ಯಾವುದೇ ದೋಷವಿಲ್ಲ. ನಿಮ್ಮ ಸ್ವಂತ ಪುತ್ರರ ಪತ್ನಿಯರು ಮತ್ತು ಇಬ್ಬರು ಸಹೋದರಿಯರನ್ನು ಏಕಕಾಲಕ್ಕೆ ವಿವಾಹವಾಗುವುದನ್ನು ನಿಷಿದ್ಧಗೊಳಿಸಲಾಗಿದೆ. ಆದರೆ ಹಿಂದೆ ಕಳೆದದ್ದು ಕಳೆದುಹೋಯಿತು. ನಿಶ್ಚಯವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರಣಾನಿಧಿಯೂ ಆಗಿದ್ದಾನೆ.
अरबी व्याख्याहरू:
 
अर्थको अनुवाद सूरह: न्निसा
सूरहरूको सूची पृष्ठ संख्या
 
पवित्र कुरआनको अर्थको अनुवाद - कन्नड अनुवाद : बशीर माइसुरी । - अनुवादहरूको सूची

यसलाई शेख बशीर माइसुरीले अनुवाद गरेका हुन् । यसलाई रुव्वाद अनुवाद केन्द्रको निरक्षणमा विकसित गरिएको छ ।

बन्द गर्नुहोस्