Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ബഖറഃ   ആയത്ത്:
فَلَمَّا فَصَلَ طَالُوْتُ بِالْجُنُوْدِ ۙ— قَالَ اِنَّ اللّٰهَ مُبْتَلِیْكُمْ بِنَهَرٍ ۚ— فَمَنْ شَرِبَ مِنْهُ فَلَیْسَ مِنِّیْ ۚ— وَمَنْ لَّمْ یَطْعَمْهُ فَاِنَّهٗ مِنِّیْۤ اِلَّا مَنِ اغْتَرَفَ غُرْفَةً بِیَدِهٖ ۚ— فَشَرِبُوْا مِنْهُ اِلَّا قَلِیْلًا مِّنْهُمْ ؕ— فَلَمَّا جَاوَزَهٗ هُوَ وَالَّذِیْنَ اٰمَنُوْا مَعَهٗ ۙ— قَالُوْا لَا طَاقَةَ لَنَا الْیَوْمَ بِجَالُوْتَ وَجُنُوْدِهٖ ؕ— قَالَ الَّذِیْنَ یَظُنُّوْنَ اَنَّهُمْ مُّلٰقُوا اللّٰهِ ۙ— كَمْ مِّنْ فِئَةٍ قَلِیْلَةٍ غَلَبَتْ فِئَةً كَثِیْرَةً بِاِذْنِ اللّٰهِ ؕ— وَاللّٰهُ مَعَ الصّٰبِرِیْنَ ۟
ಹಾಗೆಯೇ ತಾಲೂತ್ ಸೈನ್ಯದೊಂದಿಗೆ ಹೊರಟಾಗ ಹೇಳಿದರು; ಖಂಡಿತವಾಗಿಯೂ ಅಲ್ಲಾಹನು ಒಂದು ನದಿಯ ಮೂಲಕ ನಿಮ್ಮನ್ನು ಪರೀಕ್ಷಿಸುವವನಿದ್ದಾನೆ. ಯಾರು ಅದರಿಂದ ನೀರು ಕುಡಿಯುತ್ತಾನೋ ಅವನು ನನ್ನವನಲ್ಲ ಮತ್ತು ಯಾರು ಅದರ ರುಚಿಯನ್ನು ನೋಡುವುದಿಲ್ಲವೋ ನಿಜವಾಗಿಯು ಅವನು ನನ್ನವನು. ಆದರೆ ಯಾರು ತನ್ನ ಕೈಯಿಂದ ಒಂದು ಬೊಗಸೆಯಷ್ಟು ನೀರು ತೆಗೆಯುತ್ತಾನೋ ಅವನ ಹೊರತು. ಆದರೆ ಅವರ ಪೈಕಿ ಅತ್ಯಲ್ಪ ಮಂದಿಯನ್ನು ಬಿಟ್ಟು ಇತರರೆಲ್ಲರೂ ಅದರಿಂದ ಕುಡಿದರು. ಹಾಗೆಯೇ ಅವರು ಮತ್ತು ಅವರ ಜೊತೆ ವಿಶ್ವಾಸವಿರಿಸಿದವರೂ ಆ ನದಿಯನ್ನು ದಾಟಿದಾಗ ಅವರು ಹೇಳಿದರುÀ; ಇಂದು ನಮಗೆ ಜಾಲೂತ್ ಮತ್ತು ಅವನ ಸೈನ್ಯದೊಂದಿಗೆ ಹೋರಾಡುವ ಯಾವ ಶಕ್ತಿಯೂ ಇಲ್ಲ. ಆದರೆ ಅಲ್ಲಾಹನನ್ನು ಖಂಡಿತವಾಗಿಯು ಭೇಟಿಯಾಗಲಿರುವೆವೆಂದು ದೃಢವಾಗಿ ನಂಬಿದವರು ಹೇಳಿದರು; ಅದೆಷ್ಟೋ ಚಿಕ್ಕ ಚಿಕ್ಕ ಸೈನ್ಯಗಳು ದೊಡ್ಡ ದೊಡ್ಡ ಸೈನ್ಯಗಳನ್ನು ಅಲ್ಲಾಹನ ಅನುಮತಿಯೊಂದಿಗೆ ಸೋಲಿಸಿವೆ ಮತ್ತು ಅಲ್ಲಾಹನು ಸಹನೆ ವಹಿಸುವವರೊಂದಿಗಿದ್ದಾನೆ.
അറബി തഫ്സീറുകൾ:
وَلَمَّا بَرَزُوْا لِجَالُوْتَ وَجُنُوْدِهٖ قَالُوْا رَبَّنَاۤ اَفْرِغْ عَلَیْنَا صَبْرًا وَّثَبِّتْ اَقْدَامَنَا وَانْصُرْنَا عَلَی الْقَوْمِ الْكٰفِرِیْنَ ۟ؕ
ಅವರು ಜಾಲೂತ್ ಮತ್ತು ಅವನ ಸೈನ್ಯವನ್ನು ಎದುರಿಸಲು ಹೊರಟಾಗ ಹೇಳಿದರು; ನಮ್ಮ ಪ್ರಭುವೇ ನಮಗೆ ಸ್ಥೆöÊರ್ಯವನ್ನು ಕರುಣಿಸು ಮತ್ತು ನಮ್ಮ ಪಾದಗಳನ್ನು ಸ್ಥಿರಗೊಳಿಸು ಹಾಗು ಅವಿಶ್ವಾಸಿಗಳ ವಿರುದ್ಧ ನಮಗೆ ಸಹಾಯ ಮಾಡು.
അറബി തഫ്സീറുകൾ:
فَهَزَمُوْهُمْ بِاِذْنِ اللّٰهِ ۙ۫— وَقَتَلَ دَاوٗدُ جَالُوْتَ وَاٰتٰىهُ اللّٰهُ الْمُلْكَ وَالْحِكْمَةَ وَعَلَّمَهٗ مِمَّا یَشَآءُ ؕ— وَلَوْلَا دَفْعُ اللّٰهِ النَّاسَ بَعْضَهُمْ بِبَعْضٍ لَّفَسَدَتِ الْاَرْضُ وَلٰكِنَّ اللّٰهَ ذُوْ فَضْلٍ عَلَی الْعٰلَمِیْنَ ۟
ಹಾಗೆಯೇ ಅವರು ಅಲ್ಲಾಹನ ಅಪ್ಪಣೆಯಿಂದ ಅವರನ್ನು (ಜಾಲೂತ್ ಸೈನ್ಯವನ್ನು ಬೆನ್ನಟ್ಟಿ) ಸೋಲಿಸಿದರು ಹಾಗೂ ದಾವೂದರು ಜಾಲೂತನನ್ನು ಕೊಂದು ಹಾಕಿದರು. ಮತ್ತು ಅಲ್ಲಾಹನು ಅವರಿಗೆ ಅಧಿಪತ್ಯವನ್ನೂ, ಸುಜ್ಞಾನವನ್ನೂ ದಯಪಾಲಿಸಿದನು ಮತ್ತು ತಾನಿಚ್ಛಿಸಿದ್ದನ್ನು ಕಲಿಸಿದನು. ಮತ್ತು ಅಲ್ಲಾಹನು ಜನರ ಪೈಕಿ ಕೆಲವರನ್ನು ಇನ್ನು ಕೆಲವರ ಮೂಲಕ ತಡೆಯದಿರುತ್ತಿದ್ದರೆ ಖಂಡಿತವಾಗಿಯು ಭೂಮಿಯು ಕ್ಷೆÆÃಭೆಗೊಳಗಾಗುತ್ತಿತ್ತು. ಆದರೆ ಅಲ್ಲಾಹನು ಸರ್ವಲೋಕದವರ ಮೇಲೆ ಮಹಾ ಅನುಗ್ರಹ ದಾತನಾಗಿದ್ದಾನೆ.
അറബി തഫ്സീറുകൾ:
تِلْكَ اٰیٰتُ اللّٰهِ نَتْلُوْهَا عَلَیْكَ بِالْحَقِّ ؕ— وَاِنَّكَ لَمِنَ الْمُرْسَلِیْنَ ۟
ಇವು ಅಲ್ಲಾಹನ ಪಾಠವಾಗಿದೆ. ಸತ್ಯದೊಂದಿಗೆ ಇವುಗಳನ್ನು ನಾವು ನಿಮ್ಮ ಮುಂದೆ ಓದಿ ಹೇಳುತ್ತೇವೆ ನಿಸ್ಸಂದೇಹವಾಗಿಯು ನೀವು ಸಂದೇಶವಾಹಕರಲ್ಲಿ ಒಬ್ಬರಾಗಿರುವಿರಿ.
അറബി തഫ്സീറുകൾ:
 
പരിഭാഷ അദ്ധ്യായം: ബഖറഃ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അവസാനിപ്പിക്കുക