Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ബഖറഃ   ആയത്ത്:
وَلَنْ تَرْضٰی عَنْكَ الْیَهُوْدُ وَلَا النَّصٰرٰی حَتّٰی تَتَّبِعَ مِلَّتَهُمْ ؕ— قُلْ اِنَّ هُدَی اللّٰهِ هُوَ الْهُدٰی ؕ— وَلَىِٕنِ اتَّبَعْتَ اَهْوَآءَهُمْ بَعْدَ الَّذِیْ جَآءَكَ مِنَ الْعِلْمِ ۙ— مَا لَكَ مِنَ اللّٰهِ مِنْ وَّلِیٍّ وَّلَا نَصِیْرٍ ۟ؔ
ಯಹೂದರು ಮತ್ತು ಕ್ರೆöÊಸ್ತರು ನೀವು ಅವರ ಸಂಪ್ರದಾಯವನ್ನು ಅನುಸರಿಸುವವರೆಗೆೆ ಎಂದಿಗೂ ನಿಮ್ಮಿಂದ ಸಂತುಷ್ಟರಾಗಲಾರರು. ಹೇಳಿರಿ ವಾಸ್ತವದಲ್ಲಿ ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನವಾಗಿದೆ. ಮತ್ತು ನಿಮ್ಮ ಬಳಿಗೆ ಜ್ಞಾನ ಬಂದ ಬಳಿಕವೂ ಅವರ ಸ್ವಇಚ್ಛೆಯನ್ನು ಅನುಸರಿಸಿದರೆ ನಿಮಗೆ ಅಲ್ಲಾಹನ ಬಳಿ ಯಾವೊಬ್ಬ ರಕ್ಷಕ ಮಿತ್ರನಾಗಲೀ, ಯಾವೊಬ್ಬ ಸಹಾಯಕನಾಗಲೀ ಇರಲಾರನು.
അറബി തഫ്സീറുകൾ:
اَلَّذِیْنَ اٰتَیْنٰهُمُ الْكِتٰبَ یَتْلُوْنَهٗ حَقَّ تِلَاوَتِهٖ ؕ— اُولٰٓىِٕكَ یُؤْمِنُوْنَ بِهٖ ؕ— وَمَنْ یَّكْفُرْ بِهٖ فَاُولٰٓىِٕكَ هُمُ الْخٰسِرُوْنَ ۟۠
ನಾವು ಯಾರಿಗೆ ಗ್ರಂಥವನ್ನು ದಯಪಾಲಿಸಿದ್ದೆವೆಯೋ ಅವರು ಅದರ ಪಾರಾಯಣ ಕ್ರಮದಂತೆ ಪಠಿಸುತ್ತಿರುವರು ಅವರು ಈ ಗ್ರಂಥದಲ್ಲೂ ವಿಶ್ವಾಸವಿರಿಸುತ್ತಾರೆ ಮತ್ತು ಯಾರು ಇದರಲ್ಲಿ ಅವಿಶ್ವಾಸ ಹೊಂದುತ್ತಾರೋ ಅವರೇ ನಷ್ಟ ಹೊಂದಿದವರಾಗಿರುತ್ತಾರೆ.
അറബി തഫ്സീറുകൾ:
یٰبَنِیْۤ اِسْرَآءِیْلَ اذْكُرُوْا نِعْمَتِیَ الَّتِیْۤ اَنْعَمْتُ عَلَیْكُمْ وَاَنِّیْ فَضَّلْتُكُمْ عَلَی الْعٰلَمِیْنَ ۟
ಓ ಇಸ್ರಾಯೀಲ್ ಸಂತತಿಗಳೇ ನಾನು ನಿಮ್ಮ ಮೇಲೆ ಅನುಗ್ರಹಿಸಿದ ನನ್ನ ಅನುಗ್ರಹವನ್ನು ಸ್ಮರಿಸಿರಿ, ನಾನು ನಿಮ್ಮನ್ನು ಸರ್ವಲೋಕದವರ ಮೇಲೆ ಶ್ರೇಷ್ಟತೆ ನೀಡಿದ್ದೆನು.
അറബി തഫ്സീറുകൾ:
وَاتَّقُوْا یَوْمًا لَّا تَجْزِیْ نَفْسٌ عَنْ نَّفْسٍ شَیْـًٔا وَّلَا یُقْبَلُ مِنْهَا عَدْلٌ وَّلَا تَنْفَعُهَا شَفَاعَةٌ وَّلَا هُمْ یُنْصَرُوْنَ ۟
ಯಾವೊಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಯಾವ ಪ್ರಯೋಜನಕ್ಕೂ ಬಾರದ ಯಾವೊಬ್ಬ ವ್ಯಕ್ತಿಯಿಂದ ಯಾವ ಪರಿಹಾರ ಧನವನ್ನು ಸ್ವೀಕರಿಸಲಾಗದ ಯಾರ ಶಿಫಾರಸ್ಸು ಪ್ರಯೋಜನವಾಗದ ಯಾರಿಗೂ ಸಹಾಯ ನೀಡಲಾಗದಂತಹ ಆ ಒಂದು ದಿನವನ್ನು ನೀವು ಭಯಪಡಿರಿ.
അറബി തഫ്സീറുകൾ:
وَاِذِ ابْتَلٰۤی اِبْرٰهٖمَ رَبُّهٗ بِكَلِمٰتٍ فَاَتَمَّهُنَّ ؕ— قَالَ اِنِّیْ جَاعِلُكَ لِلنَّاسِ اِمَامًا ؕ— قَالَ وَمِنْ ذُرِّیَّتِیْ ؕ— قَالَ لَا یَنَالُ عَهْدِی الظّٰلِمِیْنَ ۟
ಇಬ್ರಾಹೀಮರನ್ನು ಅವರ ಪ್ರಭುವು ಅನೇಕ ಆಜ್ಞೆಗಳ ಮೂಲಕ ಪರೀಕ್ಷೆಗೊಳಪಡಿಸಿದ ಸಂದರ್ಭವನ್ನು ಸ್ಮರಿಸಿರಿ, ಅವರು ಅವೆಲ್ಲವನ್ನೂ ನೆರವೇರಿಸಿದರು. ಅಲ್ಲಾಹನು ಹೇಳಿದನು; ನಿಶ್ಚಯವಾಗಿಯು ನಾವು ನಿಮ್ಮನ್ನು ಸಕಲ ಜನರಿಗೆ ನಾಯಕನನ್ನಾಗಿ ನಿಶ್ಚಯಿಸುವವನಿದ್ದೇನೆ. ಅವರು ಹೇಳಿದರು; ನನ್ನ ಸಂತತಿಗಳಿಗೂ ಇದೇ ವಾಗ್ದಾನವೇ? ಸರಿ ಆದರೆ ನನ್ನ ಒಪ್ಪಂದವು ಅಕ್ರಮಿ ಸಂತತಿಗಳಿಗೆ ಅನ್ವಯಿಸುವುದಿಲ್ಲ ಎಂದನು.
അറബി തഫ്സീറുകൾ:
وَاِذْ جَعَلْنَا الْبَیْتَ مَثَابَةً لِّلنَّاسِ وَاَمْنًا ؕ— وَاتَّخِذُوْا مِنْ مَّقَامِ اِبْرٰهٖمَ مُصَلًّی ؕ— وَعَهِدْنَاۤ اِلٰۤی اِبْرٰهٖمَ وَاِسْمٰعِیْلَ اَنْ طَهِّرَا بَیْتِیَ لِلطَّآىِٕفِیْنَ وَالْعٰكِفِیْنَ وَالرُّكَّعِ السُّجُوْدِ ۟
ನಾವು ಕಾಬಾಭವನವನ್ನು ಜನರಿಗೆ ಪುಣ್ಯ ಹಾಗೂ ಶಾಂತಿಯ ಸಮ್ಮಿಲನ ಕೇಂದ್ರವನ್ನಾಗಿ ನಿಶ್ಚಿಯಿಸಿದೆವು. ನೀವು ಇಬ್ರಾಹೀಮರ ಆರಾಧನ ಸ್ಥಳವನ್ನು ನಮಾಝ್‌ನ ಸ್ಥಳವನ್ನಾಗಿ ಮಾಡಿಕೊಳ್ಳಿರಿ ಮತ್ತು ನನ್ನ ಭವನವನ್ನು ಪ್ರದಕ್ಷಣೆಗೈಯ್ಯುವವರಿಗಾಗಿಯು, ಧ್ಯಾನಸ್ಥರಾಗಿ ಕುಳಿತುಕೊಳ್ಳುವವರಿಗಾಗಿಯು ಬಾಗುವವರಿಗಾಗಿಯು ಮತ್ತು ಸಾಷ್ಟಾಂಗ ಮಾಡುವವರಿಗಾಗಿಯು ಸ್ವಚ್ಛವಾಗಿಡಿರಿ ಎಂದು ನಾವು ಇಬ್ರಾಹೀಮ್ ಮತ್ತು ಇಸ್ಮಾಯೀಲರಿಗೆ ಆದೇಶ ನೀಡಿದೆವು.
അറബി തഫ്സീറുകൾ:
وَاِذْ قَالَ اِبْرٰهٖمُ رَبِّ اجْعَلْ هٰذَا بَلَدًا اٰمِنًا وَّارْزُقْ اَهْلَهٗ مِنَ الثَّمَرٰتِ مَنْ اٰمَنَ مِنْهُمْ بِاللّٰهِ وَالْیَوْمِ الْاَخِرِ ؕ— قَالَ وَمَنْ كَفَرَ فَاُمَتِّعُهٗ قَلِیْلًا ثُمَّ اَضْطَرُّهٗۤ اِلٰی عَذَابِ النَّارِ ؕ— وَبِئْسَ الْمَصِیْرُ ۟
(ಆಗ ಇಬ್ರಾಹೀಮ್(ಅ) ಹೇಳಿದರು) ನನ್ನ ಪ್ರಭುವೇ, ಈ ಪ್ರದೇಶವನ್ನು ಶಾಂತಿಯ ನಾಡನ್ನಾಗಿ ಮಾಡು ಮತ್ತು ಇದರ ವಾಸಿಗಳ ಪೈಕಿ ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿರಿಸುವವರಿಗೆ ಫಲ ವೃಕ್ಷಾದಿಗಳಿಂದ ಆಹಾರವನ್ನು ನೀಡು ಎಂದು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ. ಅಲ್ಲಾಹನು ಹೇಳಿದನು. ನಾನು ಸತ್ಯನಿಷೇಧಿಗಳಿಗೂ ತಾತ್ಕಾಲಿಕ ಸುಖಭೋಗವನ್ನು ನೀಡುವೆನು ಅನಂತರ (ಸತ್ಯನಿಷೇಧದ ನಿಮಿತ್ತ) ಅವರನ್ನು ನರಕ ಯಾತನೆಯೆಡೆಗೆ ಬರಲು ಅನಿವಾರ್ಯಗೊಳಿಸುವೆನು. ಅವರು ತಲುಪುವ ಸ್ಥಳವು ಅತೀ ನಿಕೃಷ್ಟವಾಗಿದೆ.
അറബി തഫ്സീറുകൾ:
 
പരിഭാഷ അദ്ധ്യായം: ബഖറഃ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അവസാനിപ്പിക്കുക