Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್ -ಮಾಇದ   ಶ್ಲೋಕ:
وَقَالَتِ الْیَهُوْدُ وَالنَّصٰرٰی نَحْنُ اَبْنٰٓؤُا اللّٰهِ وَاَحِبَّآؤُهٗ ؕ— قُلْ فَلِمَ یُعَذِّبُكُمْ بِذُنُوْبِكُمْ ؕ— بَلْ اَنْتُمْ بَشَرٌ مِّمَّنْ خَلَقَ ؕ— یَغْفِرُ لِمَنْ یَّشَآءُ وَیُعَذِّبُ مَنْ یَّشَآءُ ؕ— وَلِلّٰهِ مُلْكُ السَّمٰوٰتِ وَالْاَرْضِ وَمَا بَیْنَهُمَا ؗ— وَاِلَیْهِ الْمَصِیْرُ ۟
ಯಹೂದರು ಮತ್ತು ಕ್ರೆöÊಸ್ತರು ಹೇಳುತ್ತಾರೆ: ನಾವು ಅಲ್ಲಾಹನ ಮಕ್ಕಳು ಮತ್ತು ಅವನ ಪ್ರೀತಿ ಪಾತ್ರರು. ಓ ಪೈಗಂಬರರೇ ಹೇಳಿರಿ: ಮತ್ತೇಕೆ ಅಲ್ಲಾಹನು ನಿಮ್ಮನ್ನು ನಿಮ್ಮ ಪಾಪಗಳನಿಮಿತ್ತ ಶಿಕ್ಷಿಸುತ್ತಾನೆ? ವಾಸ್ತವದಲ್ಲಿ ನೀವು ಅವನ ಸೃಷ್ಟಿಗಳಲ್ಲಿ ಸೇರಿದ ಮನುಷ್ಯರು ಮಾತ್ರವಾಗಿದ್ದೀರಿ. ಅವನು ತಾನಿಚ್ಛಿಸಿದವರಿಗೆ ಕ್ಷಮಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಆಕಾಶಗಳ, ಭೂಮಿಯ ಮತ್ತು ಅವೆರಡರ ಮಧ್ಯೆಯಿರುವ ಎಲ್ಲದರ ಅಧಿಪತ್ಯವು ಅಲ್ಲಾಹನದ್ದಾಗಿದೆ ಮತ್ತು ಮರಳುವಿಕೆಯು ಅವನ ಬಳಿಗೇ ಆಗಿರುತ್ತದೆ.
ಅರಬ್ಬಿ ವ್ಯಾಖ್ಯಾನಗಳು:
یٰۤاَهْلَ الْكِتٰبِ قَدْ جَآءَكُمْ رَسُوْلُنَا یُبَیِّنُ لَكُمْ عَلٰی فَتْرَةٍ مِّنَ الرُّسُلِ اَنْ تَقُوْلُوْا مَا جَآءَنَا مِنْ بَشِیْرٍ وَّلَا نَذِیْرٍ ؗ— فَقَدْ جَآءَكُمْ بَشِیْرٌ وَّنَذِیْرٌ ؕ— وَاللّٰهُ عَلٰی كُلِّ شَیْءٍ قَدِیْرٌ ۟۠
ಓ ಗ್ರಂಥದವರೇ, ನಿಶ್ಚಯವಾಗಿಯು ಸಂದೇಶವಾಹಕರ ಆಗಮನವು ಸ್ಥಗಿತಗೊಂಡಿದ್ದ ಒಂದು ಕಾಲದ ಬಳಿಕ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ಅವರು ನಿಮಗಾಗಿ (ನಮ್ಮ ನಿಯಮಗಳನ್ನು) ಸ್ಪಷ್ಟವಾಗಿ ವಿವರಿಸಿಕೊಡುತ್ತಾರೆ. ಇದೇಕೆಂದರೆ ನೀವು ನಮ್ಮ ಬಳಿಗೆ ಒಬ್ಬ ಶುಭವಾರ್ತೆ ನೀಡುವವನಾಗಲೀ, ಮುನ್ನೆಚ್ಚರಿಕೆ ನೀಡುವವನಾಗಲೀ ಬಂದಿರಲಿಲ್ಲ ಎಂದು ಹೇಳಬಾರದೆಂದಾಗಿದೆ. ಇನ್ನು ಖಂಡಿತವಾಗಿಯು ಶುಭವಾರ್ತೆಯನ್ನು ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಪೈಗಂಬರರು ನಿಮ್ಮ ಬಳಿಗೆ ಬಂದಿರುವರು ಮತ್ತು ಅಲ್ಲಾಹನು ಸಕಲ ಸಂಗತಿಗಳ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
وَاِذْ قَالَ مُوْسٰی لِقَوْمِهٖ یٰقَوْمِ اذْكُرُوْا نِعْمَةَ اللّٰهِ عَلَیْكُمْ اِذْ جَعَلَ فِیْكُمْ اَنْۢبِیَآءَ وَجَعَلَكُمْ مُّلُوْكًا ۗ— وَّاٰتٰىكُمْ مَّا لَمْ یُؤْتِ اَحَدًا مِّنَ الْعٰلَمِیْنَ ۟
ಮೂಸಾ ತನ್ನ ಜನತೆಯೊಂದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ಓ ನನ್ನ ಜನರೇ, ನಿಮ್ಮಿಂದಲೇ ಪೈಗಂಬರರÀನ್ನು ನಿಯೋಗಿಸಿ, ನಿಮ್ಮನ್ನು ಅರಸರನ್ನಾಗಿ ಮಾಡಿ ಮತ್ತು ಇಡೀ ಜಗತ್ತಿನ ಜನರ ಪೈಕಿ ಯಾರಿಗೂ ನೀಡದಂತಹದ್ದನ್ನು ನಿಮಗೆ ನೀಡಿ ಅಲ್ಲಾಹನು ನಿಮ್ಮ ಮೇಲೆ ಮಾಡಿರುವ ಉಪಕಾರವನ್ನು ಸ್ಮರಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
یٰقَوْمِ ادْخُلُوا الْاَرْضَ الْمُقَدَّسَةَ الَّتِیْ كَتَبَ اللّٰهُ لَكُمْ وَلَا تَرْتَدُّوْا عَلٰۤی اَدْبَارِكُمْ فَتَنْقَلِبُوْا خٰسِرِیْنَ ۟
ಓ ನನ್ನ ಜನರೇ, ಅಲ್ಲಾಹನು ನಿಮಗಾಗಿ ಬರೆದಿರುವ ಪವಿತ್ರ ಭೂಮಿಯನ್ನು (ಫೆಲಸ್ತೀನ್) ನೀವು ಪ್ರವೇಶಿಸಿರಿ. ಮತ್ತು ಬೆನ್ನು ತಿರುಗಿಸಿ ಹೋಗಬೇಡಿರಿ. ಅನ್ಯಥಾ ನೀವು ನಷ್ಟ ಹೊಂದಿದವರಾಗಿ ಮರಳುವಿರಿ.
ಅರಬ್ಬಿ ವ್ಯಾಖ್ಯಾನಗಳು:
قَالُوْا یٰمُوْسٰۤی اِنَّ فِیْهَا قَوْمًا جَبَّارِیْنَ ۖۗ— وَاِنَّا لَنْ نَّدْخُلَهَا حَتّٰی یَخْرُجُوْا مِنْهَا ۚ— فَاِنْ یَّخْرُجُوْا مِنْهَا فَاِنَّا دٰخِلُوْنَ ۟
ಅವರು ಉತ್ತರಿಸಿದರು: ಓ ಮೂಸಾ, ಅಲ್ಲಿ ಪರಾಕ್ರಮಿಗಳಾದ ಜನಾಂಗವಿದೆ. ಅವರು ಅಲ್ಲಿಂದ ಹೊರಹೋಗುವವರೆಗೆ ನಾವು ಅಲ್ಲಿಗೆ ಹೋಗಲಾರೆವು. ಆದರೆ ಅವರು ಅಲ್ಲಿಂದ ನಿರ್ಗಮಿಸಿದ ಬಳಿಕ ಖಂಡಿತ ನಾವು ಪ್ರವೇಶಿಸುವೆವು.
ಅರಬ್ಬಿ ವ್ಯಾಖ್ಯಾನಗಳು:
قَالَ رَجُلٰنِ مِنَ الَّذِیْنَ یَخَافُوْنَ اَنْعَمَ اللّٰهُ عَلَیْهِمَا ادْخُلُوْا عَلَیْهِمُ الْبَابَ ۚ— فَاِذَا دَخَلْتُمُوْهُ فَاِنَّكُمْ غٰلِبُوْنَ ۚ۬— وَعَلَی اللّٰهِ فَتَوَكَّلُوْۤا اِنْ كُنْتُمْ مُّؤْمِنِیْنَ ۟
ದೇವಭಯವಿರುವವರ ಪೈಕಿ ಅಲ್ಲಾಹನು ಅನುಗ್ರಹಿಸಿದ ಇಬ್ಬರು ಹೇಳಿದರು: ನೀವು ಅವರ ಬಳಿಗೆ ಹೆಬ್ಬಾಗಿಲಿನಿಂದ ದಾಳಿ ಮಾಡುತ್ತಾ ಹೊಕ್ಕಿಬಿಡಿ, ನೀವು ಹೆಬ್ಬಾಗಿಲನ್ನು ತಲುಪುತ್ತಿರುವಂತೆಯೇ ಖಂಡಿತ ಗೆಲುವು ಸಾಧಿಸುವಿರಿ. ಮತ್ತು ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹನ ಮೇಲೆಯೇ ಭರವಸೆಯನ್ನಿಡಿರಿ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್ -ಮಾಇದ
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ