Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್ -ಮಾಇದ   ಶ್ಲೋಕ:
سَمّٰعُوْنَ لِلْكَذِبِ اَكّٰلُوْنَ لِلسُّحْتِ ؕ— فَاِنْ جَآءُوْكَ فَاحْكُمْ بَیْنَهُمْ اَوْ اَعْرِضْ عَنْهُمْ ۚ— وَاِنْ تُعْرِضْ عَنْهُمْ فَلَنْ یَّضُرُّوْكَ شَیْـًٔا ؕ— وَاِنْ حَكَمْتَ فَاحْكُمْ بَیْنَهُمْ بِالْقِسْطِ ؕ— اِنَّ اللّٰهَ یُحِبُّ الْمُقْسِطِیْنَ ۟
ಅವರು ಸುಳ್ಳನ್ನು ಆಸಕ್ತಿಯಿಂದ ಆಲಿಸುವವರೂ ನಿಷಿದ್ಧವಾದ ಸಂಪಾದನೆಯನ್ನು ಧಾರಾಳವಾಗಿ ತಿನ್ನುವವರೂ ಆಗಿದ್ದಾರೆ. ಅವರು ನಿಮ್ಮ ಬಳಿಗೆ ಬರುವುದಾದರೆ ಅವರ ನಡುವೆ ನೀವು ತೀರ್ಪು ನೀಡಿರಿ. ಅಥವಾ ಅವರನ್ನು ಕಡೆಗಣಿಸಿರಿ. ನೀನು ಅವರನ್ನು ಕಡೆಗಣಿಸುವುದಾದರೆ ಅವರು ನಿಮಗೆ ಯಾವ ತೊಂದರೆಯನ್ನು ಉಂಟುಮಾಡಲಾರರು. ಆದರೆ ನೀವು ತೀರ್ಪು ನೀಡುವುದಾದರೆ ಅವರ ನಡುವೆ ನ್ಯಾಯಸಮ್ಮತವಾದ ತೀರ್ಪನ್ನು ನೀಡಿರಿ. ಖಂಡಿತವಾಗಿಯು ನ್ಯಾಯ ಪಾಲಿಸುವವರನ್ನು ಅಲ್ಲಾಹನು ಮೆಚ್ಚುತ್ತಾನೆ.
ಅರಬ್ಬಿ ವ್ಯಾಖ್ಯಾನಗಳು:
وَكَیْفَ یُحَكِّمُوْنَكَ وَعِنْدَهُمُ التَّوْرٰىةُ فِیْهَا حُكْمُ اللّٰهِ ثُمَّ یَتَوَلَّوْنَ مِنْ بَعْدِ ذٰلِكَ ؕ— وَمَاۤ اُولٰٓىِٕكَ بِالْمُؤْمِنِیْنَ ۟۠
ಅವರ ಬಳಿ ಅಲ್ಲಾಹನ ವಿಧಿ ನಿಯಮಗಳಿರುವ ತೌರಾತ್ ಇದ್ದು ಆ ಬಳಿಕ ಅವರು ವಿಮುಖರಾಗುತ್ತಿರುವಾಗ ಅವರು ನಿಮ್ಮನ್ನು ತೀರ್ಪುಗಾರನನ್ನಾಗಿ ಮಾಡುವುದಾದರೂ ಹೇಗೆ? ವಾಸ್ತವದಲ್ಲಿ ಅವರು ಸತ್ಯವಿಶ್ವಾಸಿಗಳಲ್ಲ.
ಅರಬ್ಬಿ ವ್ಯಾಖ್ಯಾನಗಳು:
اِنَّاۤ اَنْزَلْنَا التَّوْرٰىةَ فِیْهَا هُدًی وَّنُوْرٌ ۚ— یَحْكُمُ بِهَا النَّبِیُّوْنَ الَّذِیْنَ اَسْلَمُوْا لِلَّذِیْنَ هَادُوْا وَالرَّبّٰنِیُّوْنَ وَالْاَحْبَارُ بِمَا اسْتُحْفِظُوْا مِنْ كِتٰبِ اللّٰهِ وَكَانُوْا عَلَیْهِ شُهَدَآءَ ۚ— فَلَا تَخْشَوُا النَّاسَ وَاخْشَوْنِ وَلَا تَشْتَرُوْا بِاٰیٰتِیْ ثَمَنًا قَلِیْلًا ؕ— وَمَنْ لَّمْ یَحْكُمْ بِمَاۤ اَنْزَلَ اللّٰهُ فَاُولٰٓىِٕكَ هُمُ الْكٰفِرُوْنَ ۟
ನಾವು ತೌರಾತನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. ಯಹೂದರ ನಡುವೆ ಅಲ್ಲಾಹನಿಗೆ ಶರಣಾಗತರಾದ ಪೈಗಂಬರರೂ, ಪುಣ್ಯಪುರುಷರೂ, ಧರ್ಮವಿದ್ವಾಂಸರೂ ತೌರಾತ್‌ಗನುಗುಣವಾಗಿ ತೀರ್ಪು ನೀಡುತ್ತಿದ್ದರು. ಏಕೆಂದರೆ ಅವರಿಗೆ ಅಲ್ಲಾಹನ ಆ ಗ್ರಂಥದ ಸಂರಕ್ಷಣೆಯನ್ನು ವಹಿಸಲಾಗಿತ್ತು. ಅವರು ಅದಕ್ಕೆ ಸಾಕ್ಷಿಗಳಾಗಿದ್ದರು. (ಯಹೂದಿ ಪುರೋಹಿತರೇ) ನೀವು ಜನರನ್ನು ಭಯಪಡಬೇಡರಿ. ನನ್ನನ್ನು ಮಾತ್ರ ಭಯಪಡಿರಿ. ನನ್ನ ಸೂಕ್ತಿಗಳನ್ನು ನೀವು ತುಚ್ಛ ಬೆಲೆಗೆ ಮಾರಬೇಡಿರಿ. ಯಾರು ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಅನುಸಾರವಾಗಿ ತೀರ್ಪು ನೀಡುವುದಿಲ್ಲವೋ ಅವರೇ ನಿಷೇಧಿಗಳಾಗಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
وَكَتَبْنَا عَلَیْهِمْ فِیْهَاۤ اَنَّ النَّفْسَ بِالنَّفْسِ ۙ— وَالْعَیْنَ بِالْعَیْنِ وَالْاَنْفَ بِالْاَنْفِ وَالْاُذُنَ بِالْاُذُنِ وَالسِّنَّ بِالسِّنِّ ۙ— وَالْجُرُوْحَ قِصَاصٌ ؕ— فَمَنْ تَصَدَّقَ بِهٖ فَهُوَ كَفَّارَةٌ لَّهٗ ؕ— وَمَنْ لَّمْ یَحْكُمْ بِمَاۤ اَنْزَلَ اللّٰهُ فَاُولٰٓىِٕكَ هُمُ الظّٰلِمُوْنَ ۟
ನಾವು ಯಹೂದರಿಗೆ ತೌರಾತ್‌ನಲ್ಲಿ ಹೀಗೆ ವಿಧಿಸಿದ್ದೆವು ಅಂದರೆ ಪ್ರಾಣದ ಬದಲಿಗೆ ಪ್ರಾಣ. ಕಣ್ಣಿನ ಬದಲಿಗೆ ಕಣ್ಣು, ಮೂಗಿನ ಬದಲಿಗೆ ಮೂಗು, ಕಿವಿಯ ಬದಲಿಗೆ ಕಿವಿ, ಹಲ್ಲಿನ ಬದಲಿಗೆ ಹಲ್ಲು ಮತ್ತು ಗಾಯಗಳಿಗೂ ತತ್ಸಮಾನ ಪ್ರತೀಕಾರವಿದೆ. ನಂತರ ಯಾರಾದರೂ ಆ ಮುಯ್ಯಿ (ಪರಿಹಾರ ಧನ) ಕ್ಷಮಿಸುವುದಾದರೆ ಅದು ಅವನ (ಪಾಪಗಳ) ಪ್ರಾಯಶ್ಚಿತವಾಗಿದೆ. ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಅನುಸಾರವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಅಕ್ರಮಿಗಳಾಗಿದ್ದಾರೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್ -ಮಾಇದ
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ