Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಶ್ಶುಅರಾಅ್   ಶ್ಲೋಕ:
وَاجْعَلْ لِّیْ لِسَانَ صِدْقٍ فِی الْاٰخِرِیْنَ ۟ۙ
ಮತ್ತು ಮುಂದಿನ ಪೀಳಿಗೆಗಳಲ್ಲೂ ನನ್ನ ಸತ್ಕೀರ್ತಿಯನ್ನು ಉಳಿಸಿಬಿಡು.
ಅರಬ್ಬಿ ವ್ಯಾಖ್ಯಾನಗಳು:
وَاجْعَلْنِیْ مِنْ وَّرَثَةِ جَنَّةِ النَّعِیْمِ ۟ۙ
ನೀನು ನನ್ನನ್ನು ಅನುಗ್ರಹಪೂರ್ಣ ಸ್ವರ್ಗದ ವಾರೀಸುದಾರರಲ್ಲಿ ಸೇರಿಸು.
ಅರಬ್ಬಿ ವ್ಯಾಖ್ಯಾನಗಳು:
وَاغْفِرْ لِاَبِیْۤ اِنَّهٗ كَانَ مِنَ الضَّآلِّیْنَ ۟ۙ
ನೀನು ನನ್ನ ತಂದೆಯನ್ನು ಕ್ಷಮಿಸು. ನಿಜವಾಗಿಯೂ ಅವನು ಮಾರ್ಗ ಭ್ರಷ್ಟರಲ್ಲಾಗಿದ್ದನು.
ಅರಬ್ಬಿ ವ್ಯಾಖ್ಯಾನಗಳು:
وَلَا تُخْزِنِیْ یَوْمَ یُبْعَثُوْنَ ۟ۙ
ಜನರನ್ನು ಪುನರುತ್ಥಾನಗೊಳಿಸುವ ದಿನ ನೀನು ನನ್ನನ್ನು ಅಪಮಾನಿಸದಿರು.
ಅರಬ್ಬಿ ವ್ಯಾಖ್ಯಾನಗಳು:
یَوْمَ لَا یَنْفَعُ مَالٌ وَّلَا بَنُوْنَ ۟ۙ
ಅಂದು ಸಂಪತ್ತಾಗಲೀ, ಸಂತತಿಗಳಾಗಲೀ ಪ್ರಯೋಜನಕ್ಕೆ ಬಾರದು.
ಅರಬ್ಬಿ ವ್ಯಾಖ್ಯಾನಗಳು:
اِلَّا مَنْ اَتَی اللّٰهَ بِقَلْبٍ سَلِیْمٍ ۟ؕ
ಆದರೆ ಅಲ್ಲಾಹನ ಬಳಿಗೆ ಸುರಕ್ಷಿತ ಹೃದಯದೊಂದಿಗೆ ಬರುವವನ ಹೊರತು.
ಅರಬ್ಬಿ ವ್ಯಾಖ್ಯಾನಗಳು:
وَاُزْلِفَتِ الْجَنَّةُ لِلْمُتَّقِیْنَ ۟ۙ
ಭಯಭಕ್ತಿಯುಳ್ಳವರಿಗಾಗಿ ಸ್ವರ್ಗವನ್ನು ಸಮೀಪ ತರಲಾಗುವುದು.
ಅರಬ್ಬಿ ವ್ಯಾಖ್ಯಾನಗಳು:
وَبُرِّزَتِ الْجَحِیْمُ لِلْغٰوِیْنَ ۟ۙ
ಮಾರ್ಗಭ್ರಷ್ಟರಿಗೆ ನರಕವನ್ನು ಪ್ರಕಟಗೊಳಿಸಲಾಗವುದು.
ಅರಬ್ಬಿ ವ್ಯಾಖ್ಯಾನಗಳು:
وَقِیْلَ لَهُمْ اَیْنَ مَا كُنْتُمْ تَعْبُدُوْنَ ۟ۙ
ಮತ್ತು ಅವರೊಂದಿಗೆ ಕೇಳಲಾಗುವುದು: ನೀವು ಆರಾಧಿಸುತ್ತಿದ್ದವುಗಳೆಲ್ಲಾ ಎಲ್ಲಿವೆ?
ಅರಬ್ಬಿ ವ್ಯಾಖ್ಯಾನಗಳು:
مِنْ دُوْنِ اللّٰهِ ؕ— هَلْ یَنْصُرُوْنَكُمْ اَوْ یَنْتَصِرُوْنَ ۟ؕ
ಅಲ್ಲಾಹನ ಹೊರತು ಅವು ನಿಮಗೆ ಸಹಾಯ ಮಾಡಬಲ್ಲರೇ ಅಥವಾ ಸ್ವತಃ ಅವರೇ ತಮ್ಮ ಸಹಾಯವನ್ನು ಮಾಡಿಕೊಳ್ಳಬಲ್ಲರೇ?
ಅರಬ್ಬಿ ವ್ಯಾಖ್ಯಾನಗಳು:
فَكُبْكِبُوْا فِیْهَا هُمْ وَالْغَاوٗنَ ۟ۙ
ಆಗ ಅವರೂ, ಸಕಲ ಮಾರ್ಗಭ್ರಷ್ಟರು ನರಕದಲ್ಲಿ ಅಧೋಮುಖಿಗಳಾಗಿ ಎಸೆಯಲಾಗುವರು.
ಅರಬ್ಬಿ ವ್ಯಾಖ್ಯಾನಗಳು:
وَجُنُوْدُ اِبْلِیْسَ اَجْمَعُوْنَ ۟ؕ
ಮತ್ತು ಇಬ್‌ಲೀಸನ ಸಕಲ ಸೈನ್ಯವೂ ಸಹ.
ಅರಬ್ಬಿ ವ್ಯಾಖ್ಯಾನಗಳು:
قَالُوْا وَهُمْ فِیْهَا یَخْتَصِمُوْنَ ۟ۙ
ಅಲ್ಲಿ ಅವರು ಪರಸ್ಪರ ಜಗಳವಾಡುತ್ತಾ ಹೇಳುವರು.
ಅರಬ್ಬಿ ವ್ಯಾಖ್ಯಾನಗಳು:
تَاللّٰهِ اِنْ كُنَّا لَفِیْ ضَلٰلٍ مُّبِیْنٍ ۟ۙ
97&98
ಅರಬ್ಬಿ ವ್ಯಾಖ್ಯಾನಗಳು:
اِذْ نُسَوِّیْكُمْ بِرَبِّ الْعٰلَمِیْنَ ۟
ಅಲ್ಲಾಹನಾಣೆ ನಿಮ್ಮನ್ನು ಸರ್ವಲೋಕಗಳ ಪ್ರಭುವಿಗೆ ಸಮಾನರನ್ನಾಗಿಸಿದ್ದ ಸಂದರ್ಭದಲ್ಲಿ ನಿಜವಾಗಿಯು ನಾವು ಸ್ಪಷ್ಟ ಪಥಭ್ರಷ್ಟತೆಯಲ್ಲಿ ದ್ದೆವು.
ಅರಬ್ಬಿ ವ್ಯಾಖ್ಯಾನಗಳು:
وَمَاۤ اَضَلَّنَاۤ اِلَّا الْمُجْرِمُوْنَ ۟
ನಮ್ಮನ್ನಂತು ಈ ದುಷ್ಟರ ಹೊರತು ಇನ್ನಾರೂ ದಾರಿಗೆಡಿಸಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
فَمَا لَنَا مِنْ شَافِعِیْنَ ۟ۙ
ಈಗ ನಮ್ಮ ಶಿಫಾರಸ್ಸುದಾರರು ಯಾರೂ ಇಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَلَا صَدِیْقٍ حَمِیْمٍ ۟
ಮತ್ತು ಅನುಕಂಪವಿರುವ ಮಿತ್ರರೂ ಇಲ್ಲ.
ಅರಬ್ಬಿ ವ್ಯಾಖ್ಯಾನಗಳು:
فَلَوْ اَنَّ لَنَا كَرَّةً فَنَكُوْنَ مِنَ الْمُؤْمِنِیْنَ ۟
ಇನ್ನೂ ನಮಗೇನಾದರು ಒಮ್ಮೆ ಮರಳುವ ಅವಕಾಶವಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಾಗುತ್ತಿದ್ದೆವು.
ಅರಬ್ಬಿ ವ್ಯಾಖ್ಯಾನಗಳು:
اِنَّ فِیْ ذٰلِكَ لَاٰیَةً ؕ— وَمَا كَانَ اَكْثَرُهُمْ مُّؤْمِنِیْنَ ۟
ನಿಜವಾಗಿಯೂ ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸ ಸ್ವೀಕರಿಸುವವರಲ್ಲ.
ಅರಬ್ಬಿ ವ್ಯಾಖ್ಯಾನಗಳು:
وَاِنَّ رَبَّكَ لَهُوَ الْعَزِیْزُ الرَّحِیْمُ ۟۠
ನಿಜವಾಗಿಯೂ ನಿಮ್ಮ ಪ್ರಭು ಪ್ರಚಂಡನು, ಕರುಣಾನಿಧಿಯು ಆಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
كَذَّبَتْ قَوْمُ نُوْحِ ١لْمُرْسَلِیْنَ ۟ۚۖ
ನೂಹರ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿತು.
ಅರಬ್ಬಿ ವ್ಯಾಖ್ಯಾನಗಳು:
اِذْ قَالَ لَهُمْ اَخُوْهُمْ نُوْحٌ اَلَا تَتَّقُوْنَ ۟ۚ
ಅವರ ಸಹೋದರ ನೂಹ್‌ರವರು “ನೀವು ಅಲ್ಲಾಹನನ್ನು ಭಯಪಡುವು ದಿಲ್ಲವೇ” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
اِنِّیْ لَكُمْ رَسُوْلٌ اَمِیْنٌ ۟ۙ
ನಿಜವಾಗಿಯು ನಾನು ನಿಮ್ಮೆಡೆಗೆ ನಂಬಿಗಸ್ಥ ಸಂದೇಶವಾಹಕನಾಗಿದ್ದೇನೆ.
ಅರಬ್ಬಿ ವ್ಯಾಖ್ಯಾನಗಳು:
فَاتَّقُوا اللّٰهَ وَاَطِیْعُوْنِ ۟ۚ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
وَمَاۤ اَسْـَٔلُكُمْ عَلَیْهِ مِنْ اَجْرٍ ۚ— اِنْ اَجْرِیَ اِلَّا عَلٰی رَبِّ الْعٰلَمِیْنَ ۟ۚ
ಈ ಕಾರ್ಯಕ್ಕಾಗಿ ನಾನು ನಿಮ್ಮಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವಂತು ಸರ್ವಲೋಕಗಳ ಪ್ರಭುವಿನ ಬಳಿಯಿದೆ.
ಅರಬ್ಬಿ ವ್ಯಾಖ್ಯಾನಗಳು:
فَاتَّقُوا اللّٰهَ وَاَطِیْعُوْنِ ۟ؕ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡರಿರಿ ಮತ್ತು ನನ್ನನ್ನು ಅನುಸರಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
قَالُوْۤا اَنُؤْمِنُ لَكَ وَاتَّبَعَكَ الْاَرْذَلُوْنَ ۟ؕ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡರಿರಿ ಮತ್ತು ನನ್ನನ್ನು ಅನುಸರಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಶ್ಶುಅರಾಅ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ