Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ತ್ವಾಹಾ   ಶ್ಲೋಕ:

ತ್ವಾಹಾ

طٰهٰ ۟
ತ್ವಾಹಾ
ಅರಬ್ಬಿ ವ್ಯಾಖ್ಯಾನಗಳು:
مَاۤ اَنْزَلْنَا عَلَیْكَ الْقُرْاٰنَ لِتَشْقٰۤی ۟ۙ
ನಾವು ಈ ಕುರ್‌ಆನನ್ನು ನಿಮ್ಮನು ಸಂಕಷ್ಟಕ್ಕೀಡು ಮಾಡಲಿಕ್ಕಾಗಿ ನಿಮ್ಮ ಮೇಲೆ ಅವತೀರ್ಣಗೊಳಿಸಿರುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
اِلَّا تَذْكِرَةً لِّمَنْ یَّخْشٰی ۟ۙ
ಆದರೆ ಇದು (ಅಲ್ಲಾಹನನ್ನು) ಭಯಪಡುವವನಿಗೆ ಉಪದೇಶವಾಗಿದೆ.
ಅರಬ್ಬಿ ವ್ಯಾಖ್ಯಾನಗಳು:
تَنْزِیْلًا مِّمَّنْ خَلَقَ الْاَرْضَ وَالسَّمٰوٰتِ الْعُلٰی ۟ؕ
ಇದು ಭೂಮಿಯನ್ನು ಉನ್ನತವಾದ ಆಕಾಶಗಳನ್ನು ಸೃಷ್ಟಿಸಿದವನ ಕಡೆಯಿಂದ ಅವತೀರ್ಣಗೊಂಡಿದೆ.
ಅರಬ್ಬಿ ವ್ಯಾಖ್ಯಾನಗಳು:
اَلرَّحْمٰنُ عَلَی الْعَرْشِ اسْتَوٰی ۟
ಪರಮ ದಯಾಮಯನು ಸಿಂಹಾಸನದ ಮೇಲೆ ಆರೋಢನಾದನು.
ಅರಬ್ಬಿ ವ್ಯಾಖ್ಯಾನಗಳು:
لَهٗ مَا فِی السَّمٰوٰتِ وَمَا فِی الْاَرْضِ وَمَا بَیْنَهُمَا وَمَا تَحْتَ الثَّرٰی ۟
ಆಕಾಶಗಳಲ್ಲೂ, ಭೂಮಿಯಲ್ಲೂ, ಅವೆರಡರ ನಡುವೆಯೂ ಮತ್ತು (ಮಣ್ಣಿನ) ಅಡಿಯಲ್ಲೂ ಇರುವ ಸಕಲವೂ ಅವನದೇ ಆಗಿದೆ.
ಅರಬ್ಬಿ ವ್ಯಾಖ್ಯಾನಗಳು:
وَاِنْ تَجْهَرْ بِالْقَوْلِ فَاِنَّهٗ یَعْلَمُ السِّرَّ وَاَخْفٰی ۟
ನೀವು ನಿಮ್ಮ ಮಾತನ್ನು ಉಚ್ಛಸ್ವರದಲ್ಲಿ ಹೇಳಿದರೆ, ಅವನಂತು ರಹಸ್ಯವನ್ನು ಮತ್ತು ಅದಕ್ಕಿಂತ ಅಡಗಿರುವುದನ್ನೂ ಚೆನ್ನಾಗಿ ಬಲ್ಲನು
ಅರಬ್ಬಿ ವ್ಯಾಖ್ಯಾನಗಳು:
اَللّٰهُ لَاۤ اِلٰهَ اِلَّا هُوَ ؕ— لَهُ الْاَسْمَآءُ الْحُسْنٰی ۟
ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ ಅವನಿಗೆ ಅತ್ಯುತ್ತಮ ನಾಮಗಳಿವೆ.
ಅರಬ್ಬಿ ವ್ಯಾಖ್ಯಾನಗಳು:
وَهَلْ اَتٰىكَ حَدِیْثُ مُوْسٰی ۟ۘ
(ಮುಹಮ್ಮದ್) ನಿಮಗೆ ಮೂಸಾರವರ ವೃತ್ತಾಂತವು ತಲುಪಿದೆಯೇ?
ಅರಬ್ಬಿ ವ್ಯಾಖ್ಯಾನಗಳು:
اِذْ رَاٰ نَارًا فَقَالَ لِاَهْلِهِ امْكُثُوْۤا اِنِّیْۤ اٰنَسْتُ نَارًا لَّعَلِّیْۤ اٰتِیْكُمْ مِّنْهَا بِقَبَسٍ اَوْ اَجِدُ عَلَی النَّارِ هُدًی ۟
ಅವರು ಬೆಂಕಿಯನ್ನು ಕಂಡಾಗ ತಮ್ಮ ಮನೆಯವರಿಗೆ ಹೇಳಿದರು: ನೀವು ಸ್ವಲ್ಪ ನಿಲ್ಲಿರಿ. ನಾನೊಂದು ಬೆಂಕಿಯನ್ನು ಕಂಡಿದ್ದೇನೆ. ಬಹುಶಃ ನಾನು ಅದರಿಂದ ನಿಮಗಾಗಿ ಕೆಂಡವೊAದನ್ನು ತರಬಹುದು ಅಥವಾ ಅ ಬೆಂಕಿಯ ಹತ್ತಿರ ದಾರಿಯ ಮಾಹಿತಿಯನ್ನು ಪಡೆಯುವ ಸಾಧ್ಯತೆಯಿದೆ.
ಅರಬ್ಬಿ ವ್ಯಾಖ್ಯಾನಗಳು:
فَلَمَّاۤ اَتٰىهَا نُوْدِیَ یٰمُوْسٰی ۟ؕ
ಅವರು ಅಲ್ಲಿಗೆ ತಲುಪಿದಾಗ ಹೀಗೆ ಕರೆಯಲಾಯಿತು: ಓ ಮೂಸಾ,
ಅರಬ್ಬಿ ವ್ಯಾಖ್ಯಾನಗಳು:
اِنِّیْۤ اَنَا رَبُّكَ فَاخْلَعْ نَعْلَیْكَ ۚ— اِنَّكَ بِالْوَادِ الْمُقَدَّسِ طُوًی ۟ؕ
ಖಂಡಿತವಾಗಿಯು ನಾನು ನಿಮ್ಮ ಪ್ರಭುವಾಗಿದ್ದೇನೆ. ನಿಮ್ಮ ಪಾದರಕ್ಷೆಗಳನ್ನು ಕಳಚಿರಿ. ಏಕೆಂದರೆ ನೀವು ಪವಿತ್ರವಾದ ತುವಾ ಕಣಿವೆಯಲ್ಲಿದ್ದೀರಿ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ತ್ವಾಹಾ
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ