Check out the new design

ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ហាំហ្សះ បេតួរ * - មាតិកានៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: ហ៊ូទ   វាក្យខណ្ឌ:
اُولٰٓىِٕكَ لَمْ یَكُوْنُوْا مُعْجِزِیْنَ فِی الْاَرْضِ وَمَا كَانَ لَهُمْ مِّنْ دُوْنِ اللّٰهِ مِنْ اَوْلِیَآءَ ۘ— یُضٰعَفُ لَهُمُ الْعَذَابُ ؕ— مَا كَانُوْا یَسْتَطِیْعُوْنَ السَّمْعَ وَمَا كَانُوْا یُبْصِرُوْنَ ۟
ಇವರಿಗೆ ಭೂಮಿಯಲ್ಲಿ (ಅಲ್ಲಾಹನನ್ನು) ಸೋಲಿಸಲು ಸಾಧ್ಯವಿಲ್ಲ. ಅಲ್ಲಾಹನ ಹೊರತು ಅವರಿಗೆ ಬೇರೆ ರಕ್ಷಕರೂ ಇಲ್ಲ. ಅವರಿಗೆ ಇಮ್ಮಡಿ ಶಿಕ್ಷೆ ನೀಡಲಾಗುವುದು. ಇವರಿಗೆ ಕೇಳುವ ಶಕ್ತಿಯಿರಲಿಲ್ಲ ಮತ್ತು ಇವರು ನೋಡುತ್ತಲೂ ಇರಲಿಲ್ಲ.
ការបកស្រាយជាភាសា​អារ៉ាប់:
اُولٰٓىِٕكَ الَّذِیْنَ خَسِرُوْۤا اَنْفُسَهُمْ وَضَلَّ عَنْهُمْ مَّا كَانُوْا یَفْتَرُوْنَ ۟
ಅವರೇ ಸ್ವಯಂ ಅವರನ್ನೇ ನಾಶ-ನಷ್ಟಕ್ಕೆ ಗುರಿಯಾಗಿಸಿದವರು. ಅವರು ಆರೋಪಿಸುತ್ತಿದ್ದ ವಿಷಯಗಳೆಲ್ಲವೂ ಅವರಿಂದ ಮರೆಯಾಗಿ ಬಿಡುವುವು.
ការបកស្រាយជាភាសា​អារ៉ាប់:
لَا جَرَمَ اَنَّهُمْ فِی الْاٰخِرَةِ هُمُ الْاَخْسَرُوْنَ ۟
ನಿಸ್ಸಂದೇಹವಾಗಿಯೂ ಅವರೇ ಪರಲೋಕದಲ್ಲಿ ಅತಿಹೆಚ್ಚು ನಷ್ಟಹೊಂದಿದವರು.
ការបកស្រាយជាភាសា​អារ៉ាប់:
اِنَّ الَّذِیْنَ اٰمَنُوْا وَعَمِلُوا الصّٰلِحٰتِ وَاَخْبَتُوْۤا اِلٰی رَبِّهِمْ ۙ— اُولٰٓىِٕكَ اَصْحٰبُ الْجَنَّةِ ۚ— هُمْ فِیْهَا خٰلِدُوْنَ ۟
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು ಮತ್ತು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ವಿನಮ್ರರಾಗಿರುವವರು ಯಾರೋ—ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
ការបកស្រាយជាភាសា​អារ៉ាប់:
مَثَلُ الْفَرِیْقَیْنِ كَالْاَعْمٰی وَالْاَصَمِّ وَالْبَصِیْرِ وَالسَّمِیْعِ ؕ— هَلْ یَسْتَوِیٰنِ مَثَلًا ؕ— اَفَلَا تَذَكَّرُوْنَ ۟۠
ಈ ಎರಡು ಪಂಗಡಗಳ (ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ) ಉದಾಹರಣೆಯು ಕಣ್ಣು ಕಾಣದವನು ಮತ್ತು ಕಿವಿ ಕೇಳದವನು ಹಾಗೂ ಕಣ್ಣು ಕಾಣುವವನು ಮತ್ತು ಕಿವಿ ಕೇಳುವವನಂತೆ. ಇವರಿಬ್ಬರೂ ಸಮಾನರಾಗುವರೇ? ಆದರೂ ನೀವು ಉಪದೇಶವನ್ನು ಸ್ವೀಕರಿಸುವುದಿಲ್ಲವೇ?
ការបកស្រាយជាភាសា​អារ៉ាប់:
وَلَقَدْ اَرْسَلْنَا نُوْحًا اِلٰی قَوْمِهٖۤ ؗ— اِنِّیْ لَكُمْ نَذِیْرٌ مُّبِیْنٌ ۟ۙ
ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. (ಅವರು ಹೇಳಿದರು:) “ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
ការបកស្រាយជាភាសា​អារ៉ាប់:
اَنْ لَّا تَعْبُدُوْۤا اِلَّا اللّٰهَ ؕ— اِنِّیْۤ اَخَافُ عَلَیْكُمْ عَذَابَ یَوْمٍ اَلِیْمٍ ۟
ನೀವು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸಬಾರದು. ನಿಶ್ಚಯವಾಗಿಯೂ ಯಾತನಾಮಯ ದಿನದ ಶಿಕ್ಷೆಯು ನಿಮ್ಮ ಮೇಲೆರಗಬಹುದೆಂದು ನನಗೆ ಭಯವಾಗುತ್ತಿದೆ.”
ការបកស្រាយជាភាសា​អារ៉ាប់:
فَقَالَ الْمَلَاُ الَّذِیْنَ كَفَرُوْا مِنْ قَوْمِهٖ مَا نَرٰىكَ اِلَّا بَشَرًا مِّثْلَنَا وَمَا نَرٰىكَ اتَّبَعَكَ اِلَّا الَّذِیْنَ هُمْ اَرَاذِلُنَا بَادِیَ الرَّاْیِ ۚ— وَمَا نَرٰی لَكُمْ عَلَیْنَا مِنْ فَضْلٍۢ بَلْ نَظُنُّكُمْ كٰذِبِیْنَ ۟
ಆಗ ಅವರ ಜನರಲ್ಲಿದ್ದ ಸತ್ಯನಿಷೇಧಿಗಳ ಮುಖಂಡರು ಹೇಳಿದರು: “ನೀನು ನಮಗೆ ನಮ್ಮಂತಿರುವ ಒಬ್ಬ ಮನುಷ್ಯನಂತೆ ಕಾಣುತ್ತಿರುವೆ. ನಮ್ಮಲ್ಲಿನ ಅತ್ಯಂತ ಕೆಳವರ್ಗದ ಜನರು ಮಾತ್ರ ನಿನ್ನನ್ನು ಹಿಂಬಾಲಿಸಿದ್ದಾರೆಂದು ನಮಗೆ ಕಾಣುತ್ತಿದೆ—ಅದೂ ಕೂಡ ಯಾವುದೇ ವಿವೇಚನೆಯಿಲ್ಲದೆ. ನಿನಗೆ ನಮ್ಮ ಮೇಲೆ ಯಾವುದೇ ಶ್ರೇಷ್ಠತೆಯಿರುವುದು ನಮಗೆ ಕಾಣಿಸುತ್ತಿಲ್ಲ. ಬದಲಿಗೆ, ನೀನೊಬ್ಬ ಸುಳ್ಳುಗಾರನೆಂದೇ ನಾವು ಭಾವಿಸುತ್ತಿದ್ದೇವೆ.”
ការបកស្រាយជាភាសា​អារ៉ាប់:
قَالَ یٰقَوْمِ اَرَءَیْتُمْ اِنْ كُنْتُ عَلٰی بَیِّنَةٍ مِّنْ رَّبِّیْ وَاٰتٰىنِیْ رَحْمَةً مِّنْ عِنْدِهٖ فَعُمِّیَتْ عَلَیْكُمْ ؕ— اَنُلْزِمُكُمُوْهَا وَاَنْتُمْ لَهَا كٰرِهُوْنَ ۟
ನೂಹ್ ಹೇಳಿದರು: “ಓ ನನ್ನ ಜನರೇ! ನೀವು ಆಲೋಚಿಸಿ ನೋಡಿದ್ದೀರಾ? ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಸ್ಪಷ್ಟ ಆಧಾರದ ಮೇಲೆ ನಿಂತಿದ್ದೇನೆ ಮತ್ತು ಅವನು ತನ್ನ ದಯೆಯನ್ನು (ಪ್ರವಾದಿತ್ವವನ್ನು) ನನಗೆ ದಯಪಾಲಿಸಿದ್ದಾನೆ. ಆದರೂ ಅದನ್ನು ನೋಡಲು ನಿಮಗೆ ಸಾಧ್ಯವಾಗದಿದ್ದರೆ ನಾವು ಅದನ್ನು ಬಲವಂತವಾಗಿ ನಿಮ್ಮ ಮೇಲೆ ಹೇರಬೇಕೇ? ನೀವು ಅದನ್ನು ಇಷ್ಟಪಡದವರಾಗಿದ್ದೂ ಸಹ.
ការបកស្រាយជាភាសា​អារ៉ាប់:
 
ការបកប្រែអត្ថន័យ ជំពូក​: ហ៊ូទ
មាតិកានៃជំពូក លេខ​ទំព័រ
 
ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ហាំហ្សះ បេតួរ - មាតិកានៃការបកប្រែ

បានបកប្រែដោយ​មូហាម៉ាត់ ហាំហ្សះ បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ