Check out the new design

ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ហាំហ្សះ បេតួរ * - មាតិកានៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: ហ៊ូទ   វាក្យខណ្ឌ:
قَالَتْ یٰوَیْلَتٰۤی ءَاَلِدُ وَاَنَا عَجُوْزٌ وَّهٰذَا بَعْلِیْ شَیْخًا ؕ— اِنَّ هٰذَا لَشَیْءٌ عَجِیْبٌ ۟
ಅವರು (ಹೆಂಡತಿ) ಹೇಳಿದರು: “ಓ ನನ್ನ ದುರದೃಷ್ಟವೇ! ನಾನು ಮಗುವಿಗೆ ಜನ್ಮ ನೀಡುವುದು ಸಾಧ್ಯವೇ? ನಾನೊಬ್ಬ ವೃದ್ಧೆ. ಈ ನನ್ನ ಗಂಡ ಕೂಡ ಒಬ್ಬ ಮುದುಕ! ನಿಶ್ಚಯವಾಗಿಯೂ ಇದೊಂದು ವಿಚಿತ್ರ ಸಂಗತಿಯಾಗಿದೆ!”
ការបកស្រាយជាភាសា​អារ៉ាប់:
قَالُوْۤا اَتَعْجَبِیْنَ مِنْ اَمْرِ اللّٰهِ رَحْمَتُ اللّٰهِ وَبَرَكٰتُهٗ عَلَیْكُمْ اَهْلَ الْبَیْتِ ؕ— اِنَّهٗ حَمِیْدٌ مَّجِیْدٌ ۟
ಅವರು (ದೂತರು) ಹೇಳಿದರು: “ಅಲ್ಲಾಹನ ಆಜ್ಞೆಯ ಬಗ್ಗೆ ನಿಮಗೆ ಅಚ್ಚರಿಯೇ? ಓ ಮನೆಯವರೇ! ನಿಮ್ಮ ಮೇಲೆ ಅಲ್ಲಾಹನ ದಯೆ ಮತ್ತು ಸಮೃದ್ಧಿಯಿರಲಿ. ನಿಶ್ಚಯವಾಗಿಯೂ ಅವನು ಸ್ತುತ್ಯರ್ಹನು ಮತ್ತು ಮಹಾಮಹಿಮನಾಗಿದ್ದಾನೆ.”
ការបកស្រាយជាភាសា​អារ៉ាប់:
فَلَمَّا ذَهَبَ عَنْ اِبْرٰهِیْمَ الرَّوْعُ وَجَآءَتْهُ الْبُشْرٰی یُجَادِلُنَا فِیْ قَوْمِ لُوْطٍ ۟ؕ
ಇಬ್ರಾಹೀಮರಿಂದ ಭಯವು ನಿವಾರಣೆಯಾದಾಗ ಮತ್ತು ಅವರಿಗೆ ಸುವಾರ್ತೆಯು ತಲುಪಿದಾಗ, ಅವರು ನಮ್ಮೊಡನೆ (ದೂತರೊಡನೆ) ಲೂತರ ಜನರ ಬಗ್ಗೆ ತರ್ಕಿಸಲು ಪ್ರಾರಂಭಿಸಿದರು.
ការបកស្រាយជាភាសា​អារ៉ាប់:
اِنَّ اِبْرٰهِیْمَ لَحَلِیْمٌ اَوَّاهٌ مُّنِیْبٌ ۟
ನಿಶ್ಚಯವಾಗಿಯೂ ಇಬ್ರಾಹೀಮರು ಸೈರಣೆಯುಳ್ಳುವರು, ಅನುಕಂಪವುಳ್ಳವರು ಮತ್ತು (ಅಲ್ಲಾಹನ ಕಡೆಗೆ) ಪಶ್ಚಾತ್ತಾಪದಿಂದ ತಿರುಗುವವರಾಗಿದ್ದಾರೆ.
ការបកស្រាយជាភាសា​អារ៉ាប់:
یٰۤاِبْرٰهِیْمُ اَعْرِضْ عَنْ هٰذَا ۚ— اِنَّهٗ قَدْ جَآءَ اَمْرُ رَبِّكَ ۚ— وَاِنَّهُمْ اٰتِیْهِمْ عَذَابٌ غَیْرُ مَرْدُوْدٍ ۟
(ದೂತರು ಹೇಳಿದರು): “ಓ ಇಬ್ರಾಹೀಮರೇ! ಈ ತರ್ಕವನ್ನು ಬಿಟ್ಟುಬಿಡಿ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆಯು ಬಂದಿದೆ. ನಿಶ್ಚಯವಾಗಿಯೂ ಅವರಿಗೆ ರದ್ದು ಮಾಡಲಾಗದ ಶಿಕ್ಷೆಯು ಬರಲಿದೆ.”
ការបកស្រាយជាភាសា​អារ៉ាប់:
وَلَمَّا جَآءَتْ رُسُلُنَا لُوْطًا سِیْٓءَ بِهِمْ وَضَاقَ بِهِمْ ذَرْعًا وَّقَالَ هٰذَا یَوْمٌ عَصِیْبٌ ۟
ನಮ್ಮ ದೂತರು ಲೂತರ ಬಳಿಗೆ ಬಂದಾಗ, ಅವರಿಗೆ ಅವರ (ದೂತರ) ಬಗ್ಗೆ ಕಳವಳವಾಯಿತು. ಅವರ ಹೃದಯದಲ್ಲಿ ಇಕ್ಕಟ್ಟು ಅನುಭವವಾಯಿತು. ಅವರು ಹೇಳಿದರು: “ಇದೊಂದು ಕಠಿಣ ಪರೀಕ್ಷೆಯ ದಿನವಾಗಿದೆ.”[1]
[1] ಲೂತರ (ಅವರ ಮೇಲೆ ಶಾಂತಿಯಿರಲಿ) ಜನರು ಸಲಿಂಗಕಾಮಿಗಳಾಗಿದ್ದರು. ದೇವದೂತರುಗಳು ಸ್ಫುರದ್ರೂಪಿ ಯುವಕರ ರೂಪದಲ್ಲಿ ಅಲ್ಲಿಗೆ ಬಂದಿದ್ದರು. ಇವರನ್ನು ಕಂಡಾಗ ಲೂತರಿಗೆ (ಅವರ ಮೇಲೆ ಶಾಂತಿಯಿರಲಿ) ಕಳವಳವಾಯಿತು. ಎಲ್ಲಿ ತನ್ನ ಜನರು ಇವರನ್ನು ದುರುಪಯೋಗಪಡಿಸುತ್ತಾರೋ ಎಂದು ಅವರಿಗೆ ಗಾಬರಿಯಾಯಿತು. ಅವರ ಹೃದಯ ಬಡಿತ ಹೆಚ್ಚಾಯಿತು.
ការបកស្រាយជាភាសា​អារ៉ាប់:
وَجَآءَهٗ قَوْمُهٗ یُهْرَعُوْنَ اِلَیْهِ ؕ— وَمِنْ قَبْلُ كَانُوْا یَعْمَلُوْنَ السَّیِّاٰتِ ؕ— قَالَ یٰقَوْمِ هٰۤؤُلَآءِ بَنَاتِیْ هُنَّ اَطْهَرُ لَكُمْ فَاتَّقُوا اللّٰهَ وَلَا تُخْزُوْنِ فِیْ ضَیْفِیْ ؕ— اَلَیْسَ مِنْكُمْ رَجُلٌ رَّشِیْدٌ ۟
ಅವರು ಜನರು ಅವರ ಬಳಿಗೆ ಓಡೋಡಿ ಬಂದರು. ಅವರು ಬಹಳ ಹಿಂದಿನಿಂದಲೇ ಕೆಟ್ಟ ಕೃತ್ಯಗಳನ್ನು ಮಾಡುತ್ತಾ ಬಂದಿದ್ದರು. ಲೂತ್ ಹೇಳಿದರು: “ಓ ನನ್ನ ಜನರೇ! ಇಗೋ ಇವರು ನನ್ನ ಹೆಣ್ಣುಮಕ್ಕಳು. ಇವರು ನಿಮಗೆ ಹೆಚ್ಚು ಪರಿಶುದ್ಧರು. ಅಲ್ಲಾಹನನ್ನು ಭಯಪಡಿರಿ. ನನ್ನ ಅತಿಥಿಗಳ ವಿಷಯದಲ್ಲಿ ನನ್ನನ್ನು ಅವಮಾನ ಮಾಡಬೇಡಿ. ನಿಮ್ಮಲ್ಲಿ ಕನಿಷ್ಠ ಒಬ್ಬ ನೀತಿವಂತ ವ್ಯಕ್ತಿಯೂ ಇಲ್ಲವೇ?”
ការបកស្រាយជាភាសា​អារ៉ាប់:
قَالُوْا لَقَدْ عَلِمْتَ مَا لَنَا فِیْ بَنَاتِكَ مِنْ حَقٍّ ۚ— وَاِنَّكَ لَتَعْلَمُ مَا نُرِیْدُ ۟
ಅವರು ಹೇಳಿದರು: “ನಮಗೆ ನಿನ್ನ ಹೆಣ್ಣುಮಕ್ಕಳ ವಿಷಯದಲ್ಲಿ ಯಾವುದೇ ಹಕ್ಕಿಲ್ಲ (ಬಯಕೆಯಿಲ್ಲ) ಎಂದು ನಿನಗೆ ಚೆನ್ನಾಗಿ ಗೊತ್ತಿದೆ. ನಮ್ಮ ಇರಾದೆಯೇನೆಂದೂ ನಿನಗೆ ಗೊತ್ತಿದೆ.”
ការបកស្រាយជាភាសា​អារ៉ាប់:
قَالَ لَوْ اَنَّ لِیْ بِكُمْ قُوَّةً اَوْ اٰوِیْۤ اِلٰی رُكْنٍ شَدِیْدٍ ۟
ಲೂತ್ ಹೇಳಿದರು: “ಅಯ್ಯೋ! ನಿಮ್ಮನ್ನು ಎದುರಿಸುವ ಶಕ್ತಿ ನನಗಿರುತ್ತಿದ್ದರೆ! ಅಥವಾ ಒಬ್ಬ ಬಲಿಷ್ಠ ಸಹಾಯಕನ ಆಶ್ರಯ ಪಡೆಯಲು ನನಗೆ ಸಾಧ್ಯವಾಗುತ್ತಿದ್ದರೆ!”
ការបកស្រាយជាភាសា​អារ៉ាប់:
قَالُوْا یٰلُوْطُ اِنَّا رُسُلُ رَبِّكَ لَنْ یَّصِلُوْۤا اِلَیْكَ فَاَسْرِ بِاَهْلِكَ بِقِطْعٍ مِّنَ الَّیْلِ وَلَا یَلْتَفِتْ مِنْكُمْ اَحَدٌ اِلَّا امْرَاَتَكَ ؕ— اِنَّهٗ مُصِیْبُهَا مَاۤ اَصَابَهُمْ ؕ— اِنَّ مَوْعِدَهُمُ الصُّبْحُ ؕ— اَلَیْسَ الصُّبْحُ بِقَرِیْبٍ ۟
ಅವರು (ದೂತರು) ಹೇಳಿದರು: “ಓ ಲೂತ್! ನಿಶ್ಚಯವಾಗಿಯೂ ನಾವು ನಿಮ್ಮ ಪರಿಪಾಲಕನ (ಅಲ್ಲಾಹನ) ದೂತರಾಗಿದ್ದೇವೆ. ನಿಮ್ಮ ಬಳಿಗೆ ತಲುಪಲು ಅವರಿಗೆ ಸಾಧ್ಯವಿಲ್ಲ. ಆದ್ದರಿಂದ ರಾತ್ರಿಯ ಒಂದು ಭಾಗದಲ್ಲಿ ನೀವು ನಿಮ್ಮ ಕುಟುಂಬ ಸಮೇತ ಇಲ್ಲಿಂದ ಹೊರಟುಹೋಗಿ. ನಿಮ್ಮಲ್ಲಿ ಯಾರೂ ಹಿಂದಿರುಗಿ ನೋಡದಿರಲಿ. ಆದರೆ ನಿಮ್ಮ ಪತ್ನಿಯನ್ನು ಕರೆದೊಯ್ಯಬೇಡಿ. ನಿಶ್ಚಯವಾಗಿಯೂ ಅವರಿಗೇನು ಸಂಭವಿಸುತ್ತದೋ ಅದು ಅವಳಿಗೂ ಸಂಭವಿಸುತ್ತದೆ. ನಿಶ್ಚಯವಾಗಿಯೂ ಅವರಿಗೆ ನೀಡಲಾದ ನಿಗದಿತ ಸಮಯವು ಪ್ರಭಾತವಾಗಿದೆ. ಪ್ರಭಾತವು ಹತ್ತಿರದಲ್ಲೇ ಇದೆಯಲ್ಲವೇ?”
ការបកស្រាយជាភាសា​អារ៉ាប់:
 
ការបកប្រែអត្ថន័យ ជំពូក​: ហ៊ូទ
មាតិកានៃជំពូក លេខ​ទំព័រ
 
ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ហាំហ្សះ បេតួរ - មាតិកានៃការបកប្រែ

បានបកប្រែដោយ​មូហាម៉ាត់ ហាំហ្សះ បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ