Check out the new design

ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី * - មាតិកានៃការបកប្រែ


ការបកប្រែអត្ថន័យ ជំពូក​: អាស្ហស្ហ៊ូអារ៉ក   វាក្យខណ្ឌ:

ಅಶ್ಶುಅರಾಅ್

طٰسٓمّٓ ۟
ತ್ವಾ ಸೀನ್ ಮೀಮ್
ការបកស្រាយជាភាសា​អារ៉ាប់:
تِلْكَ اٰیٰتُ الْكِتٰبِ الْمُبِیْنِ ۟
ಇವು ಸುವ್ಯಕ್ತ ಗ್ರಂಥದ ಸೂಕ್ತಿಗಳಾಗಿವೆ.
ការបកស្រាយជាភាសា​អារ៉ាប់:
لَعَلَّكَ بَاخِعٌ نَّفْسَكَ اَلَّا یَكُوْنُوْا مُؤْمِنِیْنَ ۟
(ಓ ಪೈಗಂಬರರೇ) ಪ್ರಾಯಶಃ ಅವರು ಸತ್ಯವಿಶ್ವಾಸ ಸ್ವೀಕರಿಸಲಿಲ್ಲವೆಂಬ ಕಾರಣಕ್ಕೆ ನೀವು ನಿಮ್ಮ ಜೀವನವನ್ನೇ ನಾಶಗೊಳಿಸಬಹುದು.
ការបកស្រាយជាភាសា​អារ៉ាប់:
اِنْ نَّشَاْ نُنَزِّلْ عَلَیْهِمْ مِّنَ السَّمَآءِ اٰیَةً فَظَلَّتْ اَعْنَاقُهُمْ لَهَا خٰضِعِیْنَ ۟
ನಾವು ಇಚ್ಛಿಸಿದರೆ ಅವರ ಮೇಲೆ ಆಕಾಶದಿಂದ ದೃಷ್ಟಾಂತವನ್ನು ಇಳಿಸುತ್ತಿದ್ದೆವು ಆಗ ಅದರ ಮುಂದೆ ಅವರ ಕೊರಳುಗಳು ಬಾಗಿಬಿಡುತ್ತಿದ್ದವು.
ការបកស្រាយជាភាសា​អារ៉ាប់:
وَمَا یَاْتِیْهِمْ مِّنْ ذِكْرٍ مِّنَ الرَّحْمٰنِ مُحْدَثٍ اِلَّا كَانُوْا عَنْهُ مُعْرِضِیْنَ ۟
ಅವರ ಬಳಿ ಪರಮದಯಾಮಯನ ಕಡೆಯಿಂದ ಯಾವುದೇ ಹೊಸ ಉದ್ಭೋಧೆಯು ಬಂದರೂ ಅವರು ಅದರಿಂದ ವಿಮುಖರಾಗುವವರಾದರು.
ការបកស្រាយជាភាសា​អារ៉ាប់:
فَقَدْ كَذَّبُوْا فَسَیَاْتِیْهِمْ اَنْۢبٰٓؤُا مَا كَانُوْا بِهٖ یَسْتَهْزِءُوْنَ ۟
ಕೊನೆಗೆ ಅವರು (ಸತ್ಯವನ್ನು) ಸುಳ್ಳಾಗಿಸಿಬಿಟ್ಟರು. ಇನ್ನು ಸದ್ಯದಲ್ಲೇ ಅವರು ಯಾವುದರ ಕುರಿತು ಪರಿಹಾಸ್ಯ ಮಾಡುತ್ತಿದ್ದರೋ ಅದರ ವೃತ್ತಾಂತಗಳು ಅವರ ಬಳಿಗೆ ಬರಲಿವೆ.
ការបកស្រាយជាភាសា​អារ៉ាប់:
اَوَلَمْ یَرَوْا اِلَی الْاَرْضِ كَمْ اَنْۢبَتْنَا فِیْهَا مِنْ كُلِّ زَوْجٍ كَرِیْمٍ ۟
ನಾವು ಎಲ್ಲಾ ವಿಧದ ಉತ್ತಮ ಜೋಡಿಗಳನ್ನು ಬೆಳಿಸಿದ್ದೇವೆಂದು, ಅವರು ಭೂಮಿಯೆಡೆಗೆ ನೋಡಲಿಲ್ಲವೇ?
ការបកស្រាយជាភាសា​អារ៉ាប់:
اِنَّ فِیْ ذٰلِكَ لَاٰیَةً ؕ— وَمَا كَانَ اَكْثَرُهُمْ مُّؤْمِنِیْنَ ۟
ನಿಸ್ಸಂಶಯವಾಗಿಯು ಇದರಲ್ಲಿ ಮಹಾ ದೃಷ್ಟಾಂತವಿದೆ ಮತ್ತು ಅವರ ಪೈಕಿ ಅಧಿಕ ಮಂದಿ ಸತ್ಯವಿಶ್ವಾಸಿಗಳಲ್ಲ.
ការបកស្រាយជាភាសា​អារ៉ាប់:
وَاِنَّ رَبَّكَ لَهُوَ الْعَزِیْزُ الرَّحِیْمُ ۟۠
ನಿಸ್ಸಂದೇಹವಾಗಿಯು ನಿಮ್ಮ ಪ್ರಭು ಪ್ರಚಂಡನು, ಕರುಣಾನಿಧಿಯು ಆಗಿದ್ದಾನೆ.
ការបកស្រាយជាភាសា​អារ៉ាប់:
وَاِذْ نَادٰی رَبُّكَ مُوْسٰۤی اَنِ ائْتِ الْقَوْمَ الظّٰلِمِیْنَ ۟ۙ
ಸಂದೇಶವಾಹಕರೇ ನಿಮ್ಮ ಪ್ರಭುವು ಮೂಸಾರವರನ್ನು ಕರೆದು ನೀನು ಅಕ್ರಮಿ ಜನಾಂಗದೆಡೆಗೆ ಹೋಗು ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ.
ការបកស្រាយជាភាសា​អារ៉ាប់:
قَوْمَ فِرْعَوْنَ ؕ— اَلَا یَتَّقُوْنَ ۟
ಫಿರ್‌ಔನನ ಜನಾಂಗದೆಡೆಗೆ. ಅವರು ಭಯಭಕ್ತಿ ತೋರುವುದಿಲ್ಲವೇ?
ការបកស្រាយជាភាសា​អារ៉ាប់:
قَالَ رَبِّ اِنِّیْۤ اَخَافُ اَنْ یُّكَذِّبُوْنِ ۟ؕ
ಮೂಸಾ ಹೇಳಿದರು: ನನ್ನ ಪ್ರಭುವೇ, ನನ್ನನ್ನು ಅವರು ಸುಳ್ಳಾಗಿಸಬಹುದೆಂಬ ಭಯ ನನಗಿದೆ.
ការបកស្រាយជាភាសា​អារ៉ាប់:
وَیَضِیْقُ صَدْرِیْ وَلَا یَنْطَلِقُ لِسَانِیْ فَاَرْسِلْ اِلٰی هٰرُوْنَ ۟
ನನ್ನ ಹೃದಯವು ಸಂಕುಚಿತಗೊಳ್ಳುತ್ತಿದೆ. ಮತ್ತು ನನ್ನ ನಾಲಗೆಯು ಚಲಿಸುತ್ತಿಲ್ಲ. ಆದ್ದರಿಂದ ನೀನು ಹಾರೂನನೆಡೆಗೂ ಸಂದೇಶವನ್ನು ಕಳುಹಿಸು.
ការបកស្រាយជាភាសា​អារ៉ាប់:
وَلَهُمْ عَلَیَّ ذَنْۢبٌ فَاَخَافُ اَنْ یَّقْتُلُوْنِ ۟ۚۖ
ಮತ್ತು ಅವರ ಬಳಿ ನನ್ನ ಮೇಲಿನ ಒಂದು ಅಪರಾಧವೂ ಇದೆ. ಹಾಗಾಗಿ ಅವರು ನನ್ನನ್ನು ಕೊಂದುಬಿಡಬಹುದೆAದು ನಾನು ಭಯಪಡುತ್ತಿರುವೆನು.
ការបកស្រាយជាភាសា​អារ៉ាប់:
قَالَ كَلَّا ۚ— فَاذْهَبَا بِاٰیٰتِنَاۤ اِنَّا مَعَكُمْ مُّسْتَمِعُوْنَ ۟
ಅಲ್ಲಾಹನು ಹೇಳಿದನು: ಖಂಡಿತ ಹಾಗಾಗದು. ನೀವಿಬ್ಬರು ನಮ್ಮ ದೃಷ್ಟಾಂತಗಳೊAದಿಗೆ ಹೋಗಿರಿ ನಾವು ನಿಮ್ಮ ಜೊತೆಯಲ್ಲಿದ್ದು ಚೆನ್ನಾಗಿ ಆಲಿಸುವವರಾಗಿದ್ದೇವೆ.
ការបកស្រាយជាភាសា​អារ៉ាប់:
فَاْتِیَا فِرْعَوْنَ فَقُوْلَاۤ اِنَّا رَسُوْلُ رَبِّ الْعٰلَمِیْنَ ۟ۙ
ನೀವಿಬ್ಬರೂ ಫೀರ್‌ಔನನ ಬಳಿಗೆ ಹೋಗಿ ಹೇಳಿರಿ: ನಿಸ್ಸಂದೇಹವಾಗಿಯು ನಾವು ಸರ್ವಲೋಕಗಳ ಪ್ರಭುವಿನ ಸಂದೇಶವಾಹಕರಾಗಿದ್ದೇವೆ.
ការបកស្រាយជាភាសា​អារ៉ាប់:
اَنْ اَرْسِلْ مَعَنَا بَنِیْۤ اِسْرَآءِیْلَ ۟ؕ
ನೀನು ನಮ್ಮೊಂದಿಗೆ ಇಸ್ರಾಯೀಲ್ ಸಂತತಿಗಳನ್ನು ಕಳುಹಿಸಿಕೊಡು.
ការបកស្រាយជាភាសា​អារ៉ាប់:
قَالَ اَلَمْ نُرَبِّكَ فِیْنَا وَلِیْدًا وَّلَبِثْتَ فِیْنَا مِنْ عُمُرِكَ سِنِیْنَ ۟ۙ
ಫಿರ್‌ಔನ್ ಹೇಳಿದನು: ನೀನು ಶಿಶುವಾಗಿದ್ದಾಗ ನಾವು ನಿನ್ನನ್ನು ನಮ್ಮ ಬಳಿ ಪೋಷಿಸಿರಲಿಲ್ಲವೇ? ಮತ್ತು ನಮ್ಮೊಡನೆ ನೀನು ನಿನ್ನ ಜೀವನದ ಎಷ್ಟೋ ವರ್ಷಗಳನ್ನು ಕಳೆದಿರಲಿಲ್ಲವೆ?
ការបកស្រាយជាភាសា​អារ៉ាប់:
وَفَعَلْتَ فَعْلَتَكَ الَّتِیْ فَعَلْتَ وَاَنْتَ مِنَ الْكٰفِرِیْنَ ۟
ನೀನು ಮಾಡುವುದನ್ನು ಮಾಡಿರುವೆ ಮತ್ತು ನೀನು ಕೃತಘ್ನರಲ್ಲಾಗಿರುವೆ.
ការបកស្រាយជាភាសា​អារ៉ាប់:
 
ការបកប្រែអត្ថន័យ ជំពូក​: អាស្ហស្ហ៊ូអារ៉ក
មាតិកានៃជំពូក លេខ​ទំព័រ
 
ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី - មាតិកានៃការបកប្រែ

ការបកប្រែដោយលោកគ្រូប៉ាសៀរ មីសូរី។ ត្រូវបានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ