Check out the new design

クルアーンの対訳 - カンナダ語対訳 - Bashir Mysore * - 対訳の目次


対訳 章: 雌牛章   節:
وَبَشِّرِ الَّذِیْنَ اٰمَنُوْا وَعَمِلُوا الصّٰلِحٰتِ اَنَّ لَهُمْ جَنّٰتٍ تَجْرِیْ مِنْ تَحْتِهَا الْاَنْهٰرُ ؕ— كُلَّمَا رُزِقُوْا مِنْهَا مِنْ ثَمَرَةٍ رِّزْقًا ۙ— قَالُوْا هٰذَا الَّذِیْ رُزِقْنَا مِنْ قَبْلُ وَاُتُوْا بِهٖ مُتَشَابِهًا ؕ— وَلَهُمْ فِیْهَاۤ اَزْوَاجٌ مُّطَهَّرَةٌ وَّهُمْ فِیْهَا خٰلِدُوْنَ ۟
ಓ ಪೈಗಂಬರರೇ ! ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವರಿಗೆ ತಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ ಎಂದು ಸುವಾರ್ತೆ ನೀಡಿರಿ. ಅವರಿಗೆ ಅವುಗಳಲ್ಲಿಂದ ಫಲಗಳನ್ನು ಆಹಾರವಾಗಿ ನೀಡಲಾದಾಗಲೆಲ್ಲಾ ಅವರು (ಅದರ ಬಾಹ್ಯ ರೂಪವನ್ನು ನೋಡಿ) ಇದು ಮೊದಲು ನಮಗೆ ನೀಡಲಾದಂತಹದ್ದೇ ಆಗಿದೆ ಎನ್ನುವರು. ಮತ್ತು ಅವರಿಗೆ ಪರಸ್ಪರ ಸಾದೃಷ್ಯವಿರುವಂತಹ ಫಲಗಳನ್ನು ನೀಡಲಾಗುವುದು ಮತ್ತು ಅವರಿಗೆ ಅದರಲ್ಲಿ ಪರಿಶುದ್ಧರಾದ ಪತ್ನಿಯರಿರುವರು ಹಾಗೂ ಅವರು ಅದರಲ್ಲಿ (ಆ ಸ್ವರ್ಗದಲ್ಲಿ) ಶಾಶ್ವತವಾಗಿರುವರು.
アラビア語 クルアーン注釈:
اِنَّ اللّٰهَ لَا یَسْتَحْیٖۤ اَنْ یَّضْرِبَ مَثَلًا مَّا بَعُوْضَةً فَمَا فَوْقَهَا ؕ— فَاَمَّا الَّذِیْنَ اٰمَنُوْا فَیَعْلَمُوْنَ اَنَّهُ الْحَقُّ مِنْ رَّبِّهِمْ ۚ— وَاَمَّا الَّذِیْنَ كَفَرُوْا فَیَقُوْلُوْنَ مَاذَاۤ اَرَادَ اللّٰهُ بِهٰذَا مَثَلًا ۘ— یُضِلُّ بِهٖ كَثِیْرًا وَّیَهْدِیْ بِهٖ كَثِیْرًا ؕ— وَمَا یُضِلُّ بِهٖۤ اِلَّا الْفٰسِقِیْنَ ۟ۙ
ನಿಸ್ಸಂದೇಹವಾಗಿಯೂ ಅಲ್ಲಾಹನು ಯಾವುದೇ ಉಪಮೆಯನ್ನು ನೀಡಲು ನಾಚಿಕೆ ಪಡುವುದಿಲ್ಲ. ಅದು ಸೊಳ್ಳೆಯದ್ದಾಗಿರಲಿ, ಅಥವಾ ಅದಕ್ಕಿಂತ ಕ್ಷುಲ್ಲಕ ವಸ್ತುವಿನದ್ದೇ ಆಗಲಿ, ಆದರೆ ಸತ್ಯವಿಶ್ವಾಸಿಗಳು ಅದನ್ನು ತಮ್ಮ ಪ್ರಭುವಿನ ಕಡೆಯ ಸತ್ಯವೆಂದು ತಿಳಿಯುತ್ತಾರೆ. ಮತ್ತು ಸತ್ಯನಿಷೇಧಿಗಳು ಈ ಉಪಮೆಯ ಮೂಲಕ ಅಲ್ಲಾಹನು ಉದ್ದೇಶಿಸಿರುವುದಾದರೂ ಏನು ಎನ್ನುತ್ತಾರೆ. ಇದರ ಮೂಲಕ ಅವನು ಬಹುತೇಕ ಜನರನ್ನು ಪಥಭ್ರಷ್ಟಗೊಳಿಸುತ್ತಾನೆ. ಹಾಗೂ ಇದರ ಮೂಲಕ ಅನೇಕ ಜನರನ್ನು ಸ್ವರ್ಗಕ್ಕೆ ಮುನ್ನಡೆಸುತ್ತಾನೆ. ಮತ್ತು ಇದರ ಮೂಲಕ ಅವನು ಕರ್ಮ ಭ್ರಷ್ಟರನ್ನು ಮಾತ್ರ ಪಥಭ್ರಷ್ಟಗೊಳಿಸುತ್ತಾನೆ.
アラビア語 クルアーン注釈:
الَّذِیْنَ یَنْقُضُوْنَ عَهْدَ اللّٰهِ مِنْ بَعْدِ مِیْثَاقِهٖ ۪— وَیَقْطَعُوْنَ مَاۤ اَمَرَ اللّٰهُ بِهٖۤ اَنْ یُّوْصَلَ وَیُفْسِدُوْنَ فِی الْاَرْضِ ؕ— اُولٰٓىِٕكَ هُمُ الْخٰسِرُوْنَ ۟
ಅವರು ಅಲ್ಲಾಹನ ಕರಾರನ್ನು ಸಧೃಢಗೊಳಿಸಿದ ನಂತರ ಉಲ್ಲಂಘಿಸುವವರು ಅಲ್ಲಾಹನು ಕೂಡಿಸಲು ಆದೇಶಿಸಿರುವ ಸಂಬಂಧವನ್ನು ಮುರಿಯುವವರು ಭೂಮಿಯಲ್ಲಿ ಕ್ಷೋಭೆಯನ್ನು ಹರಡುವವರಾಗಿದ್ದಾರೆ. ಅವರೇ ನಷ್ಟ ಹೊಂದುವÀವರಾಗಿರುತ್ತಾರೆ.
アラビア語 クルアーン注釈:
كَیْفَ تَكْفُرُوْنَ بِاللّٰهِ وَكُنْتُمْ اَمْوَاتًا فَاَحْیَاكُمْ ۚ— ثُمَّ یُمِیْتُكُمْ ثُمَّ یُحْیِیْكُمْ ثُمَّ اِلَیْهِ تُرْجَعُوْنَ ۟
ನೀವು ಅಲ್ಲಾಹನನ್ನು ಹೇಗೆ ನಿರಾಕರಿಸುವಿರಿ?. ನೀವಂತೂ ನಿರ್ಜಿವಿಗಳಾಗಿದ್ದಿರಿ! ಅವನು ನಿಮ್ಮನ್ನು ಜೀವಂತಗೊಳಿಸಿದನು, ತರುವಾಯ ಅವನು ನಿಮ್ಮನ್ನು ಮರಣಗೊಳಿಸುವನು, ಪುನಃ ನಿಮ್ಮನ್ನು ಜೀವಂತಗೊಳಿಸುವನು. ಅನಂತರ ನೀವು ಅವನೆಡೆಗೇ ಮರಳಿಸಲಾಗುವಿರಿ.
アラビア語 クルアーン注釈:
هُوَ الَّذِیْ خَلَقَ لَكُمْ مَّا فِی الْاَرْضِ جَمِیْعًا ۗ— ثُمَّ اسْتَوٰۤی اِلَی السَّمَآءِ فَسَوّٰىهُنَّ سَبْعَ سَمٰوٰتٍ ؕ— وَهُوَ بِكُلِّ شَیْءٍ عَلِیْمٌ ۟۠
ಅವನೇ ನಿಮಗಾಗಿ ಭೂಮಿಯಲ್ಲಿರುವ ಸಕಲವನ್ನು ಸೃಷ್ಟಿಸಿದವನು. ಬಳಿಕ ಅವನು ಆಕಾಶದೆಡೆಗೆ ಗಮನ ಹರಿಸಿದನು ಮತ್ತು ಅವುಗಳನ್ನು ಏಳು ಆಕಾಶಗಳನ್ನಾಗಿ ರೂಪಿಸಿದನು ಮತ್ತು ಅವನು ಸಕಲ ವಸ್ತುಗಳ ಸರ್ವಜ್ಞಾನಿಯಾಗಿರುವನು.
アラビア語 クルアーン注釈:
 
対訳 章: 雌牛章
章名の目次 ページ番号
 
クルアーンの対訳 - カンナダ語対訳 - Bashir Mysore - 対訳の目次

シェイク・バシール・メイスーリ訳 - ルゥワード翻訳事業センター監修

閉じる