Check out the new design

Fassarar Ma'anonin Alqura'ni - Fassarar Kanadiya - Bashir Maisuri * - Teburin Bayani kan wasu Fassarori


Fassarar Ma'anoni Sura: Al'anfal   Aya:

ಅಲ್ -ಅನ್ ಫಾಲ್

یَسْـَٔلُوْنَكَ عَنِ الْاَنْفَالِ ؕ— قُلِ الْاَنْفَالُ لِلّٰهِ وَالرَّسُوْلِ ۚ— فَاتَّقُوا اللّٰهَ وَاَصْلِحُوْا ذَاتَ بَیْنِكُمْ ۪— وَاَطِیْعُوا اللّٰهَ وَرَسُوْلَهٗۤ اِنْ كُنْتُمْ مُّؤْمِنِیْنَ ۟
ಓ ಪೈಗಂಬರÀರೇ ಅವರು ನಿಮ್ಮೊಂದಿಗೆ ಸಮರಾರ್ಜಿತ ಸೊತ್ತಿನ ಬಗ್ಗೆ ಕೇಳುತ್ತಾರೆ. ನೀವು ಹೇಳಿರಿ: ಸಮರಾರ್ಜಿತ ಸೊತ್ತು ಅಲ್ಲಾಹ್ ಮತ್ತು ಸಂದೇಶವಾಹಕರದ್ದಾಗಿದೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪರಸ್ಪರ ನಿಮ್ಮ ಸಂಬAಧಗಳನ್ನು ಸುಧಾರಣೆ ಮಾಡಿಕೊಳ್ಳಿರಿ ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನೂ ಮತ್ತು ಸಂದೇಶವಾಹಕÀರನ್ನೂ ಅನುಸರಿಸಿರಿ.
Tafsiran larabci:
اِنَّمَا الْمُؤْمِنُوْنَ الَّذِیْنَ اِذَا ذُكِرَ اللّٰهُ وَجِلَتْ قُلُوْبُهُمْ وَاِذَا تُلِیَتْ عَلَیْهِمْ اٰیٰتُهٗ زَادَتْهُمْ اِیْمَانًا وَّعَلٰی رَبِّهِمْ یَتَوَكَّلُوْنَ ۟ۚۙ
ವಾಸ್ತವದಲ್ಲಿ ಸತ್ಯವಿಶ್ವಾಸಿಗಳು ಯಾರೆಂದರೆ ಅಲ್ಲಾಹನ ಪ್ರಸ್ತಾಪ ಅವರ ಮುಂದೆ ಬಂದಾಗ ಅವರ ಹೃದಯಗಳು ಕಂಪಿಸುತ್ತವೆ ಮತ್ತು ಅಲ್ಲಾಹನ ಸೂಕ್ತಿಗಳು ಅವರಿಗೆ ಪಠಿಸಲಾದರೆ ಅವು ಅವರ ವಿಶ್ವಾಸವನ್ನು ಅಧಿಕಗೊಳಿಸುತ್ತವೆ ಮತ್ತು ಅವರೇ ತಮ್ಮ ಪ್ರಭುವಿನ ಮೇಲೆ ಭರವಸೆಯಿಡುವವರು.
Tafsiran larabci:
الَّذِیْنَ یُقِیْمُوْنَ الصَّلٰوةَ وَمِمَّا رَزَقْنٰهُمْ یُنْفِقُوْنَ ۟ؕ
ಅವರು ನಮಾಝನ್ನು ಸಂಸ್ಥಾಪಿಸುವವರು ಮತ್ತು ನಾವು ಅವರಿಗೆ ನೀಡಿರುವವುಗಳಿಂದ ಖರ್ಚು ಮಾಡುವವರು ಆಗಿದ್ದಾರೆ.
Tafsiran larabci:
اُولٰٓىِٕكَ هُمُ الْمُؤْمِنُوْنَ حَقًّا ؕ— لَهُمْ دَرَجٰتٌ عِنْدَ رَبِّهِمْ وَمَغْفِرَةٌ وَّرِزْقٌ كَرِیْمٌ ۟ۚ
ಅವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗೆ ತಮ್ಮ ಪ್ರಭುವಿನ ಬಳಿ ಪದವಿಗಳಿವೆ ಮತ್ತು ಪಾಪವಿಮೋಚನೆಯಿದೆ ಹಾಗೂ ಗೌರವಾರ್ಹವಾದ ಅನ್ನಾಧಾರವಿದೆ.
Tafsiran larabci:
كَمَاۤ اَخْرَجَكَ رَبُّكَ مِنْ بَیْتِكَ بِالْحَقِّ ۪— وَاِنَّ فَرِیْقًا مِّنَ الْمُؤْمِنِیْنَ لَكٰرِهُوْنَ ۟ۙ
ಇದು ಸತ್ಯವಿಶ್ವಾಸಿಗಳ ಒಂದು ಪಂಗಡಕ್ಕೆ ಭಾರವೆನಿಸಿದರೂ ನಿಮ್ಮ ಪ್ರಭುವು ನಿಮ್ಮನ್ನು (ಪೈಗಂಬರರನ್ನು) ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರಡಿಸಿದ.
Tafsiran larabci:
یُجَادِلُوْنَكَ فِی الْحَقِّ بَعْدَ مَا تَبَیَّنَ كَاَنَّمَا یُسَاقُوْنَ اِلَی الْمَوْتِ وَهُمْ یَنْظُرُوْنَ ۟ؕ
ಅವರು ನೋಡುತ್ತಿರುವಂತೆ ಅವರನ್ನು ಮರಣದೆಡೆಗೆ ಕೊಂಡೊಯ್ಯುತ್ತಿರುವರು ಎಂಬAತೆ ಸತ್ಯವು ಸ್ಪಷ್ಟವಾದ ನಂತರವೂ ಅವರು ಇದರ ಕುರಿತು ನಿಮ್ಮೊಂದಿಗೆ ತರ್ಕಿಸುತ್ತಿದ್ದಾರೆ.
Tafsiran larabci:
وَاِذْ یَعِدُكُمُ اللّٰهُ اِحْدَی الطَّآىِٕفَتَیْنِ اَنَّهَا لَكُمْ وَتَوَدُّوْنَ اَنَّ غَیْرَ ذَاتِ الشَّوْكَةِ تَكُوْنُ لَكُمْ وَیُرِیْدُ اللّٰهُ اَنْ یُّحِقَّ الْحَقَّ بِكَلِمٰتِهٖ وَیَقْطَعَ دَابِرَ الْكٰفِرِیْنَ ۟ۙ
ಎರಡು ತಂಡಗಳ ಪೈಕಿ ಒಂದು ನಿಮ್ಮ ಪಾಲಾಗುವುದೆಂದು ಅಲ್ಲಾಹನು ನಿಮ್ಮೊಂದಿಗೆ ಮಾಡಿದ್ದ ವಾಗ್ದಾನವನ್ನು ಸ್ಮರಿಸಿರಿ ಮತ್ತು ನೀವು ನಿರಾಯುಧವಾದ ತಂಡವು ನಿಮ್ಮ ವಶಕ್ಕೆ ಬರಲೆಂದು ಆಶಿಸಿದ್ದಿರಿ ಮತ್ತು ಅಲ್ಲಾಹನು ತನ್ನ ಆಜ್ಞೆಗಳ ಮೂಲಕ ಸತ್ಯವನ್ನು ಸತ್ಯವನ್ನಾಗಿ ಮಾಡಲೆಂದೂ, ಸತ್ಯನಿಷೇಧಿಗಳನ್ನು ಬುಡಸಮೇತ ಕಿತ್ತೆಸೆಯಲೆಂದೂ ಇಚ್ಛಿಸಿದನು.
Tafsiran larabci:
لِیُحِقَّ الْحَقَّ وَیُبْطِلَ الْبَاطِلَ وَلَوْ كَرِهَ الْمُجْرِمُوْنَ ۟ۚ
ಇದು ಅಪರಾಧಿಗಳು ಅದೆಷ್ಟು ಅಸಹ್ಯಪಟ್ಟರು ಸತ್ಯವನ್ನು ಸತ್ಯವನ್ನಾಗಿಸಲು, ಮಿಥ್ಯವನ್ನು ಮಿಥ್ಯವನ್ನಾಗಿಸಲು ಆಗಿತ್ತು.
Tafsiran larabci:
 
Fassarar Ma'anoni Sura: Al'anfal
Teburin Jerin Sunayen Surori Lambar shafi
 
Fassarar Ma'anonin Alqura'ni - Fassarar Kanadiya - Bashir Maisuri - Teburin Bayani kan wasu Fassarori

Fassarar Sheikh Bashir Maisuri. An sabunta ta ƙarƙashin kulawar Cibiyar fassara ta Ruwad.

Rufewa