Check out the new design

Fassarar Ma'anonin Alqura'ni - Fassarar Kanadiya - Bashir Maisuri * - Teburin Bayani kan wasu Fassarori


Fassarar Ma'anoni Sura: Al'ma'ida   Aya:
یٰۤاَیُّهَا الَّذِیْنَ اٰمَنُوْا لَا تَتَّخِذُوا الْیَهُوْدَ وَالنَّصٰرٰۤی اَوْلِیَآءَ ؔۘ— بَعْضُهُمْ اَوْلِیَآءُ بَعْضٍ ؕ— وَمَنْ یَّتَوَلَّهُمْ مِّنْكُمْ فَاِنَّهٗ مِنْهُمْ ؕ— اِنَّ اللّٰهَ لَا یَهْدِی الْقَوْمَ الظّٰلِمِیْنَ ۟
ಓ ಸತ್ಯವಿಶ್ವಾಸಿಗಳೇ, ಯಹೂದರನ್ನು ಮತ್ತು ಕ್ರೆöÊಸ್ತರನ್ನು ನೀವು ಆಪ್ತ ಮಿತ್ರನನ್ನಾಗಿ ಮಾಡಿಕೊಳ್ಳಬೇಡಿರಿ. ಅವರಂತು ಪರಸ್ಪರ ಮಿತ್ರರಾಗಿದ್ದಾರೆ. ನಿಮ್ಮ ಪೈಕಿ ಯಾರು ಅವರನ್ನು ಮಿತ್ರರನ್ನಾಗಿ ಮಾಡಿಕೊಳ್ಳುತ್ತಾನೋ ಖಂಡಿತವಾಗಿಯು ಅವನು ಅವರೊಂದಿಗೇ ಸೇರಿದವನಾಗಿದ್ದಾನೆ. ಖಂಡಿತವಾಗಿಯು ಅಕ್ರಮಿಗಳಿಗೆ ಅಲ್ಲಾಹನು ಸನ್ಮಾರ್ಗವನ್ನು ತೋರಿಸಿಕೊಡುವುದಿಲ್ಲ.
Tafsiran larabci:
فَتَرَی الَّذِیْنَ فِیْ قُلُوْبِهِمْ مَّرَضٌ یُّسَارِعُوْنَ فِیْهِمْ یَقُوْلُوْنَ نَخْشٰۤی اَنْ تُصِیْبَنَا دَآىِٕرَةٌ ؕ— فَعَسَی اللّٰهُ اَنْ یَّاْتِیَ بِالْفَتْحِ اَوْ اَمْرٍ مِّنْ عِنْدِهٖ فَیُصْبِحُوْا عَلٰی مَاۤ اَسَرُّوْا فِیْۤ اَنْفُسِهِمْ نٰدِمِیْنَ ۟ؕ
(ಓ ಪೈಗಂಬರರೇ) ಹೃದಯಗಳಲ್ಲಿ (ಕಾಪಟ್ಯದ) ರೋಗವಿದ್ದವರು ಆತುರದಿಂದ ಅವರ (ಯಹೂದಿಗಳ) ನಡುವೆ ನುಸುಳುವುದನ್ನು ನೀವು ಕಾಣಬಹುದು ಮತ್ತು (ಕಪಟಿಗಳು) ಹೇಳುತ್ತಾರೆ. ನಮ್ಮ ಮೇಲೆ ಯಾವುದಾದರೂ ಆಪತ್ತು ಎರಗಬಹುದೆಂದು ನಾವು ಭಯಪಡುತ್ತೇವೆ. ಅಲ್ಲಾಹನು ನಿಮಗೆ (ಪೈಗಂಬರರಿಗೆ) ವಿಜಯವನ್ನು ಕರುಣಿಸಬಹುದು. ಅಥವಾ ತನ್ನ ವತಿಯಿಂದ ಬೇರೇನಾದರೂ ಸಂಗತಿಯನ್ನುAಟು ಮಾಡಲೂಬಹುದು. ಅನಂತರ ಅವರು ತಮ್ಮ ಮನಸ್ಸುಗಳಲ್ಲಿ ಅಡಿಗಿಸಿಟ್ಟಿರುವ ವಿಚಾರಗಳಿಂದಾಗಿ ವಿಷಾಧಿಸುವವರಾಗಿ ಮಾರ್ಪಡುವರು.
Tafsiran larabci:
وَیَقُوْلُ الَّذِیْنَ اٰمَنُوْۤا اَهٰۤؤُلَآءِ الَّذِیْنَ اَقْسَمُوْا بِاللّٰهِ جَهْدَ اَیْمَانِهِمْ ۙ— اِنَّهُمْ لَمَعَكُمْ ؕ— حَبِطَتْ اَعْمَالُهُمْ فَاَصْبَحُوْا خٰسِرِیْنَ ۟
(ಅಂದು) ಸತ್ಯ ವಿಶ್ವಾಸಿಗಳು (ಪರಸ್ಪರ) ಹೇಳುವರು: 'ನಾವು ನಿಮ್ಮೊಂದಿಗೇ ಇದ್ದೇವೆ' ಎಂದು ಅಲ್ಲಾಹನ ಮೇಲೆ ಪ್ರಬಲ ಆಣೆಯಿಟ್ಟು ಹೇಳಿದವರು ಇವರೇ ಏನು? ಅವರ ಕರ್ಮಗಳು ನಿಷ್ಫಲಗೊಂಡವು. ಹಾಗೆಯೇ ಅವರು ಪರಾಜಿತರಾಗಿಬಿಟ್ಟರು.
Tafsiran larabci:
یٰۤاَیُّهَا الَّذِیْنَ اٰمَنُوْا مَنْ یَّرْتَدَّ مِنْكُمْ عَنْ دِیْنِهٖ فَسَوْفَ یَاْتِی اللّٰهُ بِقَوْمٍ یُّحِبُّهُمْ وَیُحِبُّوْنَهٗۤ ۙ— اَذِلَّةٍ عَلَی الْمُؤْمِنِیْنَ اَعِزَّةٍ عَلَی الْكٰفِرِیْنَ ؗ— یُجَاهِدُوْنَ فِیْ سَبِیْلِ اللّٰهِ وَلَا یَخَافُوْنَ لَوْمَةَ لَآىِٕمٍ ؕ— ذٰلِكَ فَضْلُ اللّٰهِ یُؤْتِیْهِ مَنْ یَّشَآءُ ؕ— وَاللّٰهُ وَاسِعٌ عَلِیْمٌ ۟
ಓ ಸತ್ಯವಿಶ್ವಾಸಿಗಳೇ, ನಿಮ್ಮಲ್ಲಿ ಯಾರು ತನ್ನ ಧರ್ಮದಿಂದ ವಿಮುಖನಾಗುತ್ತಾನೋ ಆಗ ಸದ್ಯವೇ ಅಲ್ಲಾಹನ ಪ್ರೀತಿಗೆ ಪಾತ್ರರಾದ ಮತ್ತು ಅಲ್ಲಾಹನು ಪ್ರೀತಿಸುವ ಇನ್ನೊಂದು ಸಮುದಾಯವನ್ನು ಅವನು ಉಂಟು ಮಾಡುವನು ಆ ಸತ್ಯವಿಶ್ವಾಸಿಗಳು ವಿಶ್ವಾಸಿಗಳೊಂದಿಗೆ ಮೃದುಹೃದಯಿಗಳಾಗಿ ರುವರು. ಮತ್ತು ಸತ್ಯನಿಷೇಧಿಗಳೊಂದಿಗೆ ಕಠೋರರೂ ಆಗಿರುತ್ತಾರೆ. ಅವರು ಅಲ್ಲಾಹನ ಮಾರ್ಗದಲ್ಲಿ ಹೋರಾಡುವರು ಮತ್ತು ಅಕ್ಷೇಪಿಸುವವನ ಯಾವ ಅಕ್ಷೇಪವನ್ನು ಗಣನೆಗೆ ತೆಗೆದುಕೊಳ್ಳಲಾರರು. ಇದು ಅಲ್ಲಾಹನ ಅನುಗ್ರಹವಾಗಿದೆ. ಅವನು ತಾನಿಚ್ಛಿಸುವವರಿಗೆ ಅದನ್ನು ನೀಡುವನು. ಅಲ್ಲಾಹನು ಆಗಾಧ ಸಾಮರ್ಥ್ಯವುಳ್ಳವನೂ, ಸರ್ವಜ್ಞನೂ ಆಗಿದ್ದಾನೆ.
Tafsiran larabci:
اِنَّمَا وَلِیُّكُمُ اللّٰهُ وَرَسُوْلُهٗ وَالَّذِیْنَ اٰمَنُوا الَّذِیْنَ یُقِیْمُوْنَ الصَّلٰوةَ وَیُؤْتُوْنَ الزَّكٰوةَ وَهُمْ رٰكِعُوْنَ ۟
ವಿಶ್ವಾಸಿಗಳೇ ನಿಮ್ಮ ಮಿತ್ರ ಸ್ವತಃ ಅಲ್ಲಾಹನಾಗಿದ್ದಾನೆ ಮತ್ತು ಅವನ ಸಂದೇಶವಾಹಕರಾಗಿದ್ದರೆ ನಮಾಝನ್ನು ಸಂಸ್ಥಾಪಿಸುವ ಝಕಾತ್ ನೀಡುವ ಮತ್ತು ಅಲ್ಲಾಹನಿಗೆ ವಿನಯದಿಂದ ಬಾಗುವ ಸತ್ಯವಿಶ್ವಾಸಿಗಳಾಗಿದ್ದಾರೆ.
Tafsiran larabci:
وَمَنْ یَّتَوَلَّ اللّٰهَ وَرَسُوْلَهٗ وَالَّذِیْنَ اٰمَنُوْا فَاِنَّ حِزْبَ اللّٰهِ هُمُ الْغٰلِبُوْنَ ۟۠
ಮತ್ತು ಯಾರು ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು, ವಿಶ್ವಾಸಿಗಳನ್ನು ಆಪ್ತ ಮಿತ್ರರನ್ನಾಗಿ ಮಾಡಿಕೊಂಡರೆ ಖಂಡಿತವಾಗಿಯು ಅಲ್ಲಾಹನ ಪಕ್ಷದವರೇ ಜಯಸಾಧಿಸುವವರಾಗಿದ್ದಾರೆ.
Tafsiran larabci:
یٰۤاَیُّهَا الَّذِیْنَ اٰمَنُوْا لَا تَتَّخِذُوا الَّذِیْنَ اتَّخَذُوْا دِیْنَكُمْ هُزُوًا وَّلَعِبًا مِّنَ الَّذِیْنَ اُوْتُوا الْكِتٰبَ مِنْ قَبْلِكُمْ وَالْكُفَّارَ اَوْلِیَآءَ ۚ— وَاتَّقُوا اللّٰهَ اِنْ كُنْتُمْ مُّؤْمِنِیْنَ ۟
ಓ ಸತ್ಯವಿಶ್ವಾಸಿಗಳೇ ನಿಮಗಿಂತ ಮೊದಲು ಗ್ರಂಥ ನೀಡಲ್ಪಟ್ಟವರ ಪೈಕಿ ನಿಮ್ಮ ಧರ್ಮವನ್ನು ತಮಾಷೆ ಹಾಗೂ ವಿನೋದದ ವಸ್ತುವನ್ನಾಗಿ ಮಾಡಿದ ಜನರನ್ನು ಮತ್ತು ಸತ್ಯನಿಷೇಧಿಗಳಾದವರನ್ನು ನೀವು ಆಪ್ತಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ.
Tafsiran larabci:
 
Fassarar Ma'anoni Sura: Al'ma'ida
Teburin Jerin Sunayen Surori Lambar shafi
 
Fassarar Ma'anonin Alqura'ni - Fassarar Kanadiya - Bashir Maisuri - Teburin Bayani kan wasu Fassarori

Fassarar Sheikh Bashir Maisuri. An sabunta ta ƙarƙashin kulawar Cibiyar fassara ta Ruwad.

Rufewa