Check out the new design

Fassarar Ma'anonin Alqura'ni - Fassarar Kanadiya - Bashir Maisuri * - Teburin Bayani kan wasu Fassarori


Fassarar Ma'anoni Sura: Al'nour   Aya:
وَاَنْكِحُوا الْاَیَامٰی مِنْكُمْ وَالصّٰلِحِیْنَ مِنْ عِبَادِكُمْ وَاِمَآىِٕكُمْ ؕ— اِنْ یَّكُوْنُوْا فُقَرَآءَ یُغْنِهِمُ اللّٰهُ مِنْ فَضْلِهٖ ؕ— وَاللّٰهُ وَاسِعٌ عَلِیْمٌ ۟
ನಿಮ್ಮಲ್ಲಿ ಅವಿವಾಹಿತರಾಗಿರುವ ಸ್ತಿçÃ-ಪುರುಷರಿಗೂ ಮತ್ತು ನಿಮ್ಮ ಪೈಕಿ ಸಜ್ಜನರಾಗಿರುವ ದಾಸ ದಾಸಿಯರಿಗೂ ವಿವಾಹ ಮಾಡಿಕೊಡಿರಿ. ಇನ್ನು ಅವರು ನಿರ್ಗತಿಕರಾಗಿದ್ದರೆ ಅಲ್ಲಾಹನು ಅವರನ್ನು ತನ್ನ ಅನುಗ್ರಹದಿಂದ ಸಂಪನ್ನಗೊಳಿಸುವನು ಮತ್ತು ಅಲ್ಲಾಹನು ಅತಿ ವಿಶಾಲನು, ಸರ್ವಜ್ಞಾನಿಯು ಆಗಿರುವನು.
Tafsiran larabci:
وَلْیَسْتَعْفِفِ الَّذِیْنَ لَا یَجِدُوْنَ نِكَاحًا حَتّٰی یُغْنِیَهُمُ اللّٰهُ مِنْ فَضْلِهٖ ؕ— وَالَّذِیْنَ یَبْتَغُوْنَ الْكِتٰبَ مِمَّا مَلَكَتْ اَیْمَانُكُمْ فَكَاتِبُوْهُمْ اِنْ عَلِمْتُمْ فِیْهِمْ خَیْرًا ۖۗ— وَّاٰتُوْهُمْ مِّنْ مَّالِ اللّٰهِ الَّذِیْۤ اٰتٰىكُمْ ؕ— وَلَا تُكْرِهُوْا فَتَیٰتِكُمْ عَلَی الْبِغَآءِ اِنْ اَرَدْنَ تَحَصُّنًا لِّتَبْتَغُوْا عَرَضَ الْحَیٰوةِ الدُّنْیَا ؕ— وَمَنْ یُّكْرِهْهُّنَّ فَاِنَّ اللّٰهَ مِنْ بَعْدِ اِكْرَاهِهِنَّ غَفُوْرٌ رَّحِیْمٌ ۟
ಮತ್ತು ವಿವಾಹ ಅನುಕೂಲತೆ ಪಡೆಯದವರು ಅಲ್ಲಾಹನು ತನ್ನ ಅನುಗ್ರಹದಿಂದ ಅವರನ್ನು ಸಂಪನ್ನಗೊಳಿಸುವ ತನಕ ತಮ್ಮ ಚಾರಿತ್ರö್ಯವನ್ನು ಕಾಪಾಡಿಕೊಳ್ಳಲಿ ಮತ್ತು ನಿಮ್ಮ ಗುಲಾಮರ ಪೈಕಿ ಯಾರಾದರೂ ವಿಮೋಚನೆಯ ಬರವಣಿಗೆಯನ್ನು ಬಯಸಿದರೆ ಅವರಲ್ಲಿ ನೀವು ಒಳಿತೇನಾದರೂ ಕಂಡಲ್ಲಿ ಅವರಿಗಾಗಿ ಬರವಣಿಗೆಯನ್ನು ನಿಶ್ಚಯಿಸಿ ಕೊಡಿರಿ. ಮತ್ತು ಅಲ್ಲಾಹನು ನಿಮಗೆ ದಯಪಾಲಿಸಿದಂತಹ ಸಂಪತ್ತಿನಿAದ ನೀವು ಅವರಿಗೂ ಕೊಡಿರಿ ಮತ್ತು ನಿಮ್ಮ ಗುಲಾಮ ಸ್ತಿçÃಯರು ಸುಶೀಲತೆಯನ್ನು ಬಯಸಿದರೆ ನೀವು ಐಹಿಕ ಜೀವನದ ಲಾಭಕ್ಕಾಗಿ ನೀಚ ಕೃತ್ಯವೆಸಗಲು ಅವರನ್ನು ಬಲವಂತ ಮಾಡದಿರಿ ಮತ್ತು ಯಾರಾದರೂ ಅವರನ್ನು ಬಲವಂತ ಮಾಡಿದರೆ, ಬಲವಂತದ ಬಳಿಕ ಅವರ ಪಾಲಿಗೆ ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿರುವನು.
Tafsiran larabci:
وَلَقَدْ اَنْزَلْنَاۤ اِلَیْكُمْ اٰیٰتٍ مُّبَیِّنٰتٍ وَّمَثَلًا مِّنَ الَّذِیْنَ خَلَوْا مِنْ قَبْلِكُمْ وَمَوْعِظَةً لِّلْمُتَّقِیْنَ ۟۠
ನಿಶ್ಚಯವಾಗಿಯೂ ನಾವು ನಿಮ್ಮೆಡೆಗೆ ಸುಸ್ಪಷ್ಟ ಸೂಕ್ತಿಗಳನ್ನು, ನಿಮಗಿಂತ ಮೊದಲು ಗತಿಸಿದವರ ವೃತ್ತಾಂತಗಳನ್ನು, ಭಯಭಕ್ತಿವುಳ್ಳವರಿಗೆ ಉಪದೇಶವನ್ನು ಅವತೀರ್ಣಗೊಳಿಸಿರುತ್ತೇವೆ.
Tafsiran larabci:
اَللّٰهُ نُوْرُ السَّمٰوٰتِ وَالْاَرْضِ ؕ— مَثَلُ نُوْرِهٖ كَمِشْكٰوةٍ فِیْهَا مِصْبَاحٌ ؕ— اَلْمِصْبَاحُ فِیْ زُجَاجَةٍ ؕ— اَلزُّجَاجَةُ كَاَنَّهَا كَوْكَبٌ دُرِّیٌّ یُّوْقَدُ مِنْ شَجَرَةٍ مُّبٰرَكَةٍ زَیْتُوْنَةٍ لَّا شَرْقِیَّةٍ وَّلَا غَرْبِیَّةٍ ۙ— یَّكَادُ زَیْتُهَا یُضِیْٓءُ وَلَوْ لَمْ تَمْسَسْهُ نَارٌ ؕ— نُوْرٌ عَلٰی نُوْرٍ ؕ— یَهْدِی اللّٰهُ لِنُوْرِهٖ مَنْ یَّشَآءُ ؕ— وَیَضْرِبُ اللّٰهُ الْاَمْثَالَ لِلنَّاسِ ؕ— وَاللّٰهُ بِكُلِّ شَیْءٍ عَلِیْمٌ ۟ۙ
ಅಲ್ಲಾಹನು ಭೂಮಿ ಆಕಾಶಗಳ ಪ್ರಕಾಶವಾಗಿರುವನು. ಅವನ ಪ್ರಕಾಶದ ಉಪಮೆಯು ಒಂದು ಗೋಡೆಗೂಡಿನಂತೆ: ಅದರಲ್ಲಿ ದೀಪವಿದೆ ಮತ್ತು ದೀಪವು ಗಾಜಿನ ಬುರುಡೆಯೊಳಗಿದ್ದು ಮತ್ತು ಗಾಜು ಒಂದು ಮಿನುಗುತ್ತಿರುವ ಪ್ರಕಾಶಮಯ ನಕ್ಷತ್ರದಂತಿದೆ. ಆ ದೀಪವು ಪೂರ್ವಾತ್ಯವೂ, ಪಶ್ಚಿಮಾತ್ಯವೂ ಅಲ್ಲದ ಒಂದು ಅನುಗ್ರಹಪೂರ್ಣ ಝೈತೂನ್ ಮರದ ಎಣ್ಣೆಯಿಂದ ಉರಿಸಲಾಗುವಂತಹದು. ಅದರ ಎಣ್ಣೆಯು ಬೆಂಕಿ ಸ್ಪರ್ಶಿಸದಿದ್ದರೂ ತಾನೇ ಪ್ರಜ್ವಲಿಸುತ್ತದೆ. ಪ್ರಕಾಶದ ಮೇಲೆ ಪ್ರಕಾಶವಿದೆ. ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಪ್ರಕಾಶದೆಡೆಗೆ ಮುನ್ನಡೆಸುತ್ತಾನೆ ಮತ್ತು ಅವನು ಜನರಿಗೆ ಉಪಮೆಗಳನ್ನು ವಿವರಿಸುತ್ತಾನೆ ಹಾಗೂ ಅಲ್ಲಾಹನು ಸಕಲ ವಸ್ತುಗಳನ್ನು ಚೆನ್ನಾಗಿ ಬಲ್ಲನು.
Tafsiran larabci:
فِیْ بُیُوْتٍ اَذِنَ اللّٰهُ اَنْ تُرْفَعَ وَیُذْكَرَ فِیْهَا اسْمُهٗ ۙ— یُسَبِّحُ لَهٗ فِیْهَا بِالْغُدُوِّ وَالْاٰصَالِ ۟ۙ
ಆ ಭವನಗಳಲ್ಲಿ (ಮಸೀದಿಗಳಲ್ಲಿ) ಅವುಗಳನ್ನು ಉನ್ನತ ಗೊಳಿಸಲು, ಅವುಗಲ್ಲಿ ತನ್ನ ನಾಮಸ್ಮರಣೆ ಮಾಡಲು ಅಲ್ಲಾಹನು ಆದೇಶಿಸಿರುವನು. ಅವುಗಳಲ್ಲಿ ಇಂತಹ ಜನರು ಅಲ್ಲಾಹನ ಪಾವಿತ್ರö್ಯವನ್ನು ಸಂಜೆ ಮುಂಜಾನೆಯಲ್ಲೂ, ಸ್ತುತಿಸುತ್ತಾರೆ.
Tafsiran larabci:
 
Fassarar Ma'anoni Sura: Al'nour
Teburin Jerin Sunayen Surori Lambar shafi
 
Fassarar Ma'anonin Alqura'ni - Fassarar Kanadiya - Bashir Maisuri - Teburin Bayani kan wasu Fassarori

Fassarar Sheikh Bashir Maisuri. An sabunta ta ƙarƙashin kulawar Cibiyar fassara ta Ruwad.

Rufewa