Check out the new design

Firo maanaaji Alqur'aana Teddunde nden - Eggo Kannada ngol - Bashiir Maisoori * - Loowdi firooji ɗi


Firo maanaaji Simoore.: Simoore al-tagaabun   Aaya.:

ಅತ್ತಗಾಬುನ್

یُسَبِّحُ لِلّٰهِ مَا فِی السَّمٰوٰتِ وَمَا فِی الْاَرْضِ ۚ— لَهُ الْمُلْكُ وَلَهُ الْحَمْدُ ؗ— وَهُوَ عَلٰی كُلِّ شَیْءٍ قَدِیْرٌ ۟
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸುತ್ತಿವೆ. ಅಧಿಪತ್ಯವು ಅವನದೇ ಆಗಿದೆ. ಮತ್ತು ಅವನಿಗೇ ರ‍್ವಸ್ತುತಿ ಅವನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯ ಉಳ್ಳವನಾಗಿದ್ದಾನೆ.
Tafsiraaɗe Aarabu ɗen:
هُوَ الَّذِیْ خَلَقَكُمْ فَمِنْكُمْ كَافِرٌ وَّمِنْكُمْ مُّؤْمِنٌ ؕ— وَاللّٰهُ بِمَا تَعْمَلُوْنَ بَصِیْرٌ ۟
ಅವನೇ ನಿಮ್ಮನ್ನು ಸೃಷ್ಟಿಸಿರುವನು. ಹಾಗಿದ್ದು ನಿಮ್ಮ ಪೈಕಿ ಕೆಲವರು ಸತ್ಯನಿಷೇಧಿಗಳಾಗಿದ್ದಾರೆ ಇನ್ನು ಕೆಲವರು ಸತ್ಯವಿಶ್ವಾಸಿಗಳಾಗಿದ್ದಾರೆ ಮತ್ತು ಅಲ್ಲಾಹನು ನೀವು ಮಾಡುತ್ತಿರುವುದನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾನೆ.
Tafsiraaɗe Aarabu ɗen:
خَلَقَ السَّمٰوٰتِ وَالْاَرْضَ بِالْحَقِّ وَصَوَّرَكُمْ فَاَحْسَنَ صُوَرَكُمْ ۚ— وَاِلَیْهِ الْمَصِیْرُ ۟
ಅವನೇ ಆಕಾಶಗಳನ್ನು ಮತ್ತು ಭೂಮಿಯನ್ನು ನ್ಯಾಯೋಚಿತ ಹಾಗೂ ಯುಕ್ತಿಯುತವಾಗಿ ಸೃಷ್ಟಿಸಿರುತ್ತಾನೆ ಮತ್ತು ಅವನು ನಿಮಗೆ ರೂಪಕೊಟ್ಟನು. ಹಾಗೂ ನಿಮ್ಮ ರೂಪವನ್ನು ಸುಂದರಗೊಳಿಸಿದನು ನಿಮಗೆ ಅವನೆಡೆಗೇ ಮರಳಲಿಕ್ಕಿದೆ.
Tafsiraaɗe Aarabu ɗen:
یَعْلَمُ مَا فِی السَّمٰوٰتِ وَالْاَرْضِ وَیَعْلَمُ مَا تُسِرُّوْنَ وَمَا تُعْلِنُوْنَ ؕ— وَاللّٰهُ عَلِیْمٌۢ بِذَاتِ الصُّدُوْرِ ۟
ಅವನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅರಿಯುತ್ತಾನೆ ನೀವು ರಹಸ್ಯವಾಗಿರಿಸುವುದನ್ನು ಬಹಿರಂಗಗೊಳಿಸುವುದನ್ನು ಅವನು ಅರಿಯುತ್ತಾನೆ ಮತ್ತು ಅಲ್ಲಾಹನು ಹೃದಯಗಳಲ್ಲಿ ಇರುವುದನ್ನು ಚೆನ್ನಾಗಿ ಬಲ್ಲನು.
Tafsiraaɗe Aarabu ɗen:
اَلَمْ یَاْتِكُمْ نَبَؤُا الَّذِیْنَ كَفَرُوْا مِنْ قَبْلُ ؗ— فَذَاقُوْا وَبَالَ اَمْرِهِمْ وَلَهُمْ عَذَابٌ اَلِیْمٌ ۟
ನಿಮ್ಮ ಬಳಿಗೆ ಇದಕ್ಕೆ ಮೊದಲು ಸತ್ಯನಿಷೇಧಿಸಿ ತಮ್ಮ ಕೃತ್ಯಗಳ ದುಷ್ಪರಿಣಾಮವನ್ನು ಸವಿದವರ ವೃತ್ತಾಂತವು ಬಂದಿಲ್ಲವೇ ? ಅವರಿಗೆ ವೇದನಾಜನಕ ಯಾತನೆ ಇರುವುದು.
Tafsiraaɗe Aarabu ɗen:
ذٰلِكَ بِاَنَّهٗ كَانَتْ تَّاْتِیْهِمْ رُسُلُهُمْ بِالْبَیِّنٰتِ فَقَالُوْۤا اَبَشَرٌ یَّهْدُوْنَنَا ؗ— فَكَفَرُوْا وَتَوَلَّوْا وَّاسْتَغْنَی اللّٰهُ ؕ— وَاللّٰهُ غَنِیٌّ حَمِیْدٌ ۟
ಇದೇಕೆಂದರೆ ಅವರ ಸಂದೇಶವಾಹಕರು ಸ್ಪಷ್ಟ ಪುರಾವೆಗಳನ್ನು ಅವರ ಬಳಿಗೆ ತಂದಾಗ ಅವರು ಹೇಳಿದ್ದರು; ಒಬ್ಬ ಮನುಷ್ಯ ನಮಗೆ ಮರ‍್ಗರ‍್ಶನ ನೀಡುವುದೇ ? ಕೊನೆಗೆ ಅವರು ಸತ್ಯವನ್ನು ನಿಷೇಧಿಸಿದರು ಹಾಗೂ ವಿಮುಖರಾಗಿ ಬಿಟ್ಟರು, ಮತ್ತು ಅಲ್ಲಾಹನು ಸಹ ಅಲಕ್ಷö್ಯತೆಯನ್ನು ತೋರಿದನು ಅಲ್ಲಾಹನು ನಿರಪೇಕ್ಷಕನೂ ಸ್ತುತ್ಯರ‍್ಹನೂ ಆಗಿದ್ದಾನೆ.
Tafsiraaɗe Aarabu ɗen:
زَعَمَ الَّذِیْنَ كَفَرُوْۤا اَنْ لَّنْ یُّبْعَثُوْا ؕ— قُلْ بَلٰی وَرَبِّیْ لَتُبْعَثُنَّ ثُمَّ لَتُنَبَّؤُنَّ بِمَا عَمِلْتُمْ ؕ— وَذٰلِكَ عَلَی اللّٰهِ یَسِیْرٌ ۟
ಮರಣದ ನಂತರ ನಾವು ಪುನಃ ಜೀವಂತಗೊಳಿಸಲಾರೆವು ಎಂದು ಸತ್ಯನಿಷೇಧಿಗಳು ಭಾವಿಸಿಕೊಂಡಿದ್ದಾರೆ. ಪೈಗಂಬರರೇ ಹೇಳಿರಿ; ಏಕಿಲ್ಲ; ನನ್ನ ಪ್ರಭುವಿನಾಣೆ! ಖಂಡಿತವಾಗಿಯೂ ನೀವು ಪುನಃ ಜೀವಂತಗೊಳಿಸಲ್ಪಡುವಿರಿ, ಆಮೇಲೆ ನೀವು ಮಾಡಿರುವುದೆಲ್ಲವನ್ನು ನಿಮಗೆ ತಿಳಿಸಲಾಗುವುದು ಇದು ಅಲ್ಲಾಹನಿಗೆ ಬಹಳ ಸುಲಭವಾಗಿದೆ.
Tafsiraaɗe Aarabu ɗen:
فَاٰمِنُوْا بِاللّٰهِ وَرَسُوْلِهٖ وَالنُّوْرِ الَّذِیْۤ اَنْزَلْنَا ؕ— وَاللّٰهُ بِمَا تَعْمَلُوْنَ خَبِیْرٌ ۟
ಆದ್ದರಿಂದ ನೀವು ಅಲ್ಲಾಹನಲ್ಲೂ ಅವನ ಸಂದೇಶವಾಹಕರಲ್ಲೂ ನಾವು ಅವತರ‍್ಣಗೊಳಿಸಿರುವ ಪ್ರಕಾಶದಲ್ಲೂ ವಿಶ್ವಾಸವಿಡಿರಿ ಅಲ್ಲಾಹನು ನಿಮ್ಮ ಸಕಲ ರ‍್ಮಗಳನ್ನು ಸೂಕ್ಷö್ಮವಾಗಿ ಬಲ್ಲನು.
Tafsiraaɗe Aarabu ɗen:
یَوْمَ یَجْمَعُكُمْ لِیَوْمِ الْجَمْعِ ذٰلِكَ یَوْمُ التَّغَابُنِ ؕ— وَمَنْ یُّؤْمِنْ بِاللّٰهِ وَیَعْمَلْ صَالِحًا یُّكَفِّرْ عَنْهُ سَیِّاٰتِهٖ وَیُدْخِلْهُ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَاۤ اَبَدًا ؕ— ذٰلِكَ الْفَوْزُ الْعَظِیْمُ ۟
ಸಮ್ಮೇಳನದ ದಿನ ಅವನು ನಿಮ್ಮೆಲ್ಲರನ್ನು ಒಟ್ಟುಗೂಡಿಸುವನು. ಅದು ಸೋಲು-ಗೆಲುವಿನ ದಿನವಾಗಿರುವುದು ಯಾರು ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಸತ್ರ‍್ಮಗಳನ್ನು ಕೈಗೊಳ್ಳುತ್ತಾನೋ ಅವನಿಂದ ಅಲ್ಲಾಹನು ಪಾಪಗಳನ್ನು ಅಳಿಸಿಬಿಡುವನು ಮತ್ತು ಅವನನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುವಂತಹ ಸ್ರ‍್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವರು ಅದರಲ್ಲಿ ಶಾಶ್ವತವಾಗಿರುವರು. ಇದುವೇ ಮಹಾ ಯಶಸ್ಸಾಗಿದೆ.
Tafsiraaɗe Aarabu ɗen:
وَالَّذِیْنَ كَفَرُوْا وَكَذَّبُوْا بِاٰیٰتِنَاۤ اُولٰٓىِٕكَ اَصْحٰبُ النَّارِ خٰلِدِیْنَ فِیْهَا ؕ— وَبِئْسَ الْمَصِیْرُ ۟۠
ಯಾರು ಸತ್ಯ ನಿಷೇಧಿಸಿ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದರು ಅವರೇ ನರಕವಾಸಿಗಳು. ಅವರು ನರಕಾಗ್ನಿಯಲ್ಲಿ ಶಾಶ್ವತವಾಗಿರುವರು ಅದು ಮರಳಲಿಕ್ಕಿರುವ ಅತಿ ನಿಕೃಷ್ಟ ತಾಣವಾಗಿದೆ.
Tafsiraaɗe Aarabu ɗen:
مَاۤ اَصَابَ مِنْ مُّصِیْبَةٍ اِلَّا بِاِذْنِ اللّٰهِ ؕ— وَمَنْ یُّؤْمِنْ بِاللّٰهِ یَهْدِ قَلْبَهٗ ؕ— وَاللّٰهُ بِكُلِّ شَیْءٍ عَلِیْمٌ ۟
ಅಲ್ಲಾಹನ ಅಪ್ಪಣೆಯಿಲ್ಲದೆ ಯಾವ ವಿಪತ್ತು ಸಂಭವಿಸುವುದಿಲ್ಲ ಯಾರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೆ ಅವನ ಹೃದಯಕ್ಕೆ ಅಲ್ಲಾಹನು ಸನ್ಮರ‍್ಗವನ್ನು ಕರುಣಿಸುತ್ತಾನೆ ಅಲ್ಲಾಹನ ಸಕಲ ಸಂಗತಿಗಳನ್ನು ಚೆನ್ನಾಗಿ ಬಲ್ಲನು.
Tafsiraaɗe Aarabu ɗen:
وَاَطِیْعُوا اللّٰهَ وَاَطِیْعُوا الرَّسُوْلَ ۚ— فَاِنْ تَوَلَّیْتُمْ فَاِنَّمَا عَلٰی رَسُوْلِنَا الْبَلٰغُ الْمُبِیْنُ ۟
ನೀವು ಅಲ್ಲಾಹನನ್ನು ಅನುಸರಿಸಿರಿ ಹಾಗೂ ಸಂದೇಶವಾಹಕರನ್ನು ಅನುಸರಿಸಿರಿ. ನೀವು ವಿಮುಖರಾಗಿ ಬಿಟ್ಟರೆ ನಮ್ಮ ಸಂದೇಶವಾಹಕರ ಮೇಲೆ ಸುಸ್ಪಷ್ಟವಾದ ಸಂದೇಶತಲುಪಿಸುವ ಹೊಣೆ ಮಾತ್ರವಿದೆ.
Tafsiraaɗe Aarabu ɗen:
اَللّٰهُ لَاۤ اِلٰهَ اِلَّا هُوَ ؕ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟
ಅಲ್ಲಾಹನು ಅವನ ಹೊರತು ಬೇರಾವ ಆರಾಧ್ಯಾನಿಲ್ಲ ಸತ್ಯ ವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆ ಇಡಬೇಕಾಗಿದೆ.
Tafsiraaɗe Aarabu ɗen:
یٰۤاَیُّهَا الَّذِیْنَ اٰمَنُوْۤا اِنَّ مِنْ اَزْوَاجِكُمْ وَاَوْلَادِكُمْ عَدُوًّا لَّكُمْ فَاحْذَرُوْهُمْ ۚ— وَاِنْ تَعْفُوْا وَتَصْفَحُوْا وَتَغْفِرُوْا فَاِنَّ اللّٰهَ غَفُوْرٌ رَّحِیْمٌ ۟
ಓ ಸತ್ಯವಿಶ್ವಾಸಿಗಳೇ, ನಿಮ್ಮ ಪತ್ನಿಯರಲ್ಲಿ ನಿಮ್ಮ ಮಕ್ಕಳಲ್ಲಿ ಕೆಲವರು ನಿಮ್ಮ ಶತ್ರುಗಳಿದ್ದಾರೆ. ಆದ್ದರಿಂದ ನೀವು ಅವರಿಂದ ಜಾಗ್ರತೆ ವಹಿಸಿರಿ ಇನ್ನು ನೀವು ಮನ್ನಿಸುವುದಾದರೆ, ಅವರ ಪ್ರಮಾದಗಳನ್ನು ಅಲಕ್ಷಿಸುವುದಾದರೆ ಹಾಗೂ ಕ್ಷಮಿಸುವುದಾದರೆ ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
Tafsiraaɗe Aarabu ɗen:
اِنَّمَاۤ اَمْوَالُكُمْ وَاَوْلَادُكُمْ فِتْنَةٌ ؕ— وَاللّٰهُ عِنْدَهٗۤ اَجْرٌ عَظِیْمٌ ۟
ನಿಮ್ಮ ಸಂಪತ್ತು ನಿಮ್ಮ ಸಂತಾನ ಒಂದು ಪರೀಕ್ಷೆಯಾಗಿದೆ ಮಹಾ ಪ್ರತಿಫಲವಂತು ಅಲ್ಲಾಹನ ಬಳಿಯಲ್ಲಿದೆ.
Tafsiraaɗe Aarabu ɗen:
فَاتَّقُوا اللّٰهَ مَا اسْتَطَعْتُمْ وَاسْمَعُوْا وَاَطِیْعُوْا وَاَنْفِقُوْا خَیْرًا لِّاَنْفُسِكُمْ ؕ— وَمَنْ یُّوْقَ شُحَّ نَفْسِهٖ فَاُولٰٓىِٕكَ هُمُ الْمُفْلِحُوْنَ ۟
ಆದ್ದರಿಂದ ನೀವು ಅಲ್ಲಾಹನನ್ನು ನಿಮಗೆ ಸಾಧ್ಯವಿರುವಷ್ಟು ಭಯಪಡಿರಿ ಆಲಿಸಿರಿ ಮತ್ತು ಅನುಸರಿಸಿರಿ ಹಾಗೂ ನೀವು ಅಲ್ಲಾಹನ ಮರ‍್ಗದಲ್ಲಿ ದಾನರ‍್ಮ ಮಾಡಿರಿ. ಅದು ನಿಮ್ಮ ಪಾಲಿಗೆ ಅತ್ಯುತ್ತಮವಾಗಿರುತ್ತದೆ. ಯಾರು ತನ್ನಲ್ಲಿನ ಲೋಭ ತನದಿಂದ ಪಾರು ಮಾಡಲಾಗುತ್ತಾನೋ ಅವನೇ ಯಶಸ್ಸು ಪಡೆದವನಾಗಿರುತ್ತಾನೆ.
Tafsiraaɗe Aarabu ɗen:
اِنْ تُقْرِضُوا اللّٰهَ قَرْضًا حَسَنًا یُّضٰعِفْهُ لَكُمْ وَیَغْفِرْ لَكُمْ ؕ— وَاللّٰهُ شَكُوْرٌ حَلِیْمٌ ۟ۙ
ನೀವು ಅಲ್ಲಾಹನಿಗೆ ಅತ್ಯುತ್ತಮ ಸಾಲವನ್ನು ನೀಡುವುದಾದರೆ ಅವನದನ್ನು ನಿಮಗೆ ಅನೇಕಪಟ್ಟು ವೃದ್ಧಿಸಿಕೊಡುವನು ಮತ್ತು ನಿಮ್ಮನ್ನು ಕ್ಷಮಿಸಿಬಿಡುವನು ಅಲ್ಲಾಹನು ಕೃತಜ್ಞನೂ ಸಹನಶೀಲನೂ ಆಗಿರುವನು.
Tafsiraaɗe Aarabu ɗen:
عٰلِمُ الْغَیْبِ وَالشَّهَادَةِ الْعَزِیْزُ الْحَكِیْمُ ۟۠
ಗೋಚರ ಹಾಗೂ ಅಗೋಚರಜ್ಞಾನಿ ಯವನು ಪ್ರತಾಪಶಾಲಿಯೂ ಯುಕ್ತಿಪರ‍್ಣನೂ (ಆಗಿದ್ದಾನೆ).
Tafsiraaɗe Aarabu ɗen:
 
Firo maanaaji Simoore.: Simoore al-tagaabun
Loowdi cimooje ɗe Tonngoode hello ngon
 
Firo maanaaji Alqur'aana Teddunde nden - Eggo Kannada ngol - Bashiir Maisoori - Loowdi firooji ɗi

Eggo (lapito) mum ko Seyko Bashir Misuri. Nde woni ko e ñiiɓirde Ruwwad ngam eggude.

Uddu