Check out the new design

Firo maanaaji Alqur'aana Teddunde nden - Eggo Kannada ngol - Bashiir Maisoori * - Loowdi firooji ɗi


Firo maanaaji Simoore.: Simoore Naafigeeɓe   Aaya.:

ಅಲ್ -ಮುನಾಫಿಕೂನ್

اِذَا جَآءَكَ الْمُنٰفِقُوْنَ قَالُوْا نَشْهَدُ اِنَّكَ لَرَسُوْلُ اللّٰهِ ۘ— وَاللّٰهُ یَعْلَمُ اِنَّكَ لَرَسُوْلُهٗ ؕ— وَاللّٰهُ یَشْهَدُ اِنَّ الْمُنٰفِقِیْنَ لَكٰذِبُوْنَ ۟ۚ
ಕಪಟ ವಿಶ್ವಾಸಿಗಳು ನಿಮ್ಮ ಬಳಿ ಬಂದಾಗ ಹೇಳುತ್ತಾರೆ. ನಿಸ್ಸಂದೇಹವಾಗಿಯೂ ನೀವು ಅಲ್ಲಾಹನ ಸಂದೇಶವಾಹಕರೆಂದು ನಾವು ಸಾಕ್ಷö್ಯವಹಿಸುತ್ತೇವೆ. ಖಂಡಿತವಾಗಿಯೂ ನೀವು ಅವನ ಸಂದೇಶ ವಾಹಕರೆಂದು ಅಲ್ಲಾಹನಿಗೆ ತಿಳಿದಿದೆ. ಕಪಟ ವಿಶ್ವಾಸಿಗಳು ನಿಶ್ಚಯವಾಗಿಯೂ ಸುಳ್ಳುಗಾರರಾಗಿದ್ದಾರೆ ಎಂದು ಅಲ್ಲಾಹನು ಸಾಕ್ಷ್ಯವಹಿಸುತ್ತಾನೆ.
Tafsiraaɗe Aarabu ɗen:
اِتَّخَذُوْۤا اَیْمَانَهُمْ جُنَّةً فَصَدُّوْا عَنْ سَبِیْلِ اللّٰهِ ؕ— اِنَّهُمْ سَآءَ مَا كَانُوْا یَعْمَلُوْنَ ۟
ಅವರು ತಮ್ಮ ಶಪಥಗಳನ್ನು ಒಂದು ಗುರಾಣಿಯನ್ನಾಗಿ ಮಾಡಿ ಕೊಂಡಿದ್ದಾರೆ. ಅವರುಅಲ್ಲಾಹನ ಮರ‍್ಗದಿಂದ ಜನರನ್ನು ತಡೆಯುತ್ತಾರೆ. ನಿಸ್ಸಂದೇಹವಾಗಿಯೂ ಅವರು ಮಾಡುತ್ತಿರುವ ರ‍್ಮಗಳು ನಿಕೃಷ್ಟವಾಗಿವೆ.
Tafsiraaɗe Aarabu ɗen:
ذٰلِكَ بِاَنَّهُمْ اٰمَنُوْا ثُمَّ كَفَرُوْا فَطُبِعَ عَلٰی قُلُوْبِهِمْ فَهُمْ لَا یَفْقَهُوْنَ ۟
ಇದು ಅವರು ವಿಶ್ವಾಸವಿರಿಸಿದ ಬಳಿಕ ನಿಷೇಧಿಗಳಾಗಿ ಬಿಟ್ಟ ಕಾರಣದಿಂದಾಗಿದೆ. ಆದ್ದರಿಂದ ಅವರ ಹೃದಯಗಳ ಮೇಲೆ ಮುದ್ರೆಯೊತ್ತಲಾಗಿದೆ ಇನ್ನು ಅವರು ಗ್ರಹಿಸುವುದಿಲ್ಲ.
Tafsiraaɗe Aarabu ɗen:
وَاِذَا رَاَیْتَهُمْ تُعْجِبُكَ اَجْسَامُهُمْ ؕ— وَاِنْ یَّقُوْلُوْا تَسْمَعْ لِقَوْلِهِمْ ؕ— كَاَنَّهُمْ خُشُبٌ مُّسَنَّدَةٌ ؕ— یَحْسَبُوْنَ كُلَّ صَیْحَةٍ عَلَیْهِمْ ؕ— هُمُ الْعَدُوُّ فَاحْذَرْهُمْ ؕ— قَاتَلَهُمُ اللّٰهُ ؗ— اَنّٰی یُؤْفَكُوْنَ ۟
ನೀವು ಅವರನ್ನು ಕಂಡರೆ ಅವರ ಶರೀರಗಳು ನಿಮ್ಮನ್ನು ಆರ‍್ಷಕ ವಾಗಿತೋರುತ್ತವೆ. ಅವರು ಮಾತನಾಡತೊಡಗಿದರೆ ನೀವು ಅವರ ಮಾತನ್ನು ಕೇಳುತ್ತಲೇ ಇರುವಿರಿ. ಅವರು ಗೋಡೆಗೆ ವರಗಿಸಲ್ಪಟ್ಟ ಮರದ ದಿಂಡು ಗಳಂತಿದ್ದಾರೆ. ಅವರು ಪ್ರತಿಯೊಂದು ಉಚ್ಛಸ್ವರವನ್ನು ತಮಗೆ ವಿರುದ್ಧವೆಂದು ಭಾವಿಸುತ್ತಾರೆ. ಇವರೇ ವೈರಿಗಳಾಗಿದ್ದಾರೆ. ಇವರಿಂದ ಜಾಗ್ರತೆ ವಹಿಸಿರಿ. ಅಲ್ಲಾಹನು ಅವರನ್ನು ನಾಶ ಮಾಡಲಿ. ಅವರೆತ್ತ ಅಲೆದಾಡಿಸಲ್ಪಡುತ್ತಾರೆ..
Tafsiraaɗe Aarabu ɗen:
وَاِذَا قِیْلَ لَهُمْ تَعَالَوْا یَسْتَغْفِرْ لَكُمْ رَسُوْلُ اللّٰهِ لَوَّوْا رُءُوْسَهُمْ وَرَاَیْتَهُمْ یَصُدُّوْنَ وَهُمْ مُّسْتَكْبِرُوْنَ ۟
ಅವರೊಂದಿಗೆ (ಕಪಟಿಗಳೊಂದಿಗೆ) ಬನ್ನಿರಿ ಅಲ್ಲಾಹನ ಸಂದೇಶವಾಹಕರು ನಿಮಗೋಸ್ಕರ ಕ್ಷಮೆಯಾಚಿಸುತ್ತಾರೆ ಎಂದು ಹೇಳಲಾದರೆ ಅವರು ತಲೆಗಳನ್ನು ಕೊಡವಿಕೊಳ್ಳುತ್ತಾರೆ ಮತ್ತು ಅಹಂಕಾರ ತೋರುತ್ತಾ ವಿಮುಖರಾಗುತ್ತಿರುವುದಾಗಿ ನೀವು ಅವರನ್ನು ಕಾಣುವಿರಿ.
Tafsiraaɗe Aarabu ɗen:
سَوَآءٌ عَلَیْهِمْ اَسْتَغْفَرْتَ لَهُمْ اَمْ لَمْ تَسْتَغْفِرْ لَهُمْ ؕ— لَنْ یَّغْفِرَ اللّٰهُ لَهُمْ ؕ— اِنَّ اللّٰهَ لَا یَهْدِی الْقَوْمَ الْفٰسِقِیْنَ ۟
ನೀವು ಅವರಿಗೋಸ್ಕರ ಕ್ಷಮೆಯಾಚಿಸಿದರೂ ಅಥವ ಯಾಚಿಸದಿದ್ದರೂ ಅವರ ಪಾಲಿಗೆ ಸಮಾನವಾಗಿವೆ. ಅಲ್ಲಾಹನು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ನಿಸ್ಸಂಶಯವಾಗಿಯೂ ಅಲ್ಲಾಹನು ದುರಾಚಾರಿಗಳಾದ ಜನರಿಗೆ ಸನ್ಮರ‍್ಗವನ್ನು ಕರುಣಿಸುವುದಿಲ್ಲ.
Tafsiraaɗe Aarabu ɗen:
هُمُ الَّذِیْنَ یَقُوْلُوْنَ لَا تُنْفِقُوْا عَلٰی مَنْ عِنْدَ رَسُوْلِ اللّٰهِ حَتّٰی یَنْفَضُّوْا ؕ— وَلِلّٰهِ خَزَآىِٕنُ السَّمٰوٰتِ وَالْاَرْضِ وَلٰكِنَّ الْمُنٰفِقِیْنَ لَا یَفْقَهُوْنَ ۟
ಅವರು (ಕಪಟಿಗಳು) ಅಲ್ಲಾಹನ ಸಂದೇಶವಾಹಕರ ಸಂಗಾತಿಗಳಿಗಾಗಿ, ಅವರು ಚದುರಿ ಹೋಗುವವರೆಗೆ ಅವರ ಮೇಲೆ ರ‍್ಚು ಮಾಡಬೇಡಿರಿ ಎಂದು ಹೇಳುವರು. ಇವರೇ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ಭಂಡಾರಗಳು ಅಲ್ಲಾಹನ ಒಡೆತನದಲ್ಲಿವೆ, ಆದರೆ ಈ ಕಪಟ ವಿಶ್ವಾಸಿಗಳು ಗ್ರಹಿಸುವುದಿಲ್ಲ.
Tafsiraaɗe Aarabu ɗen:
یَقُوْلُوْنَ لَىِٕنْ رَّجَعْنَاۤ اِلَی الْمَدِیْنَةِ لَیُخْرِجَنَّ الْاَعَزُّ مِنْهَا الْاَذَلَّ ؕ— وَلِلّٰهِ الْعِزَّةُ وَلِرَسُوْلِهٖ وَلِلْمُؤْمِنِیْنَ وَلٰكِنَّ الْمُنٰفِقِیْنَ لَا یَعْلَمُوْنَ ۟۠
ಅವರು ಹೇಳುತ್ತಾರೆ; ನಾವು ಮದೀನಕ್ಕೆ ಮರಳಿದರೆ ಗೌರವಾನ್ವಿತನು ನಿಂದ್ಯನನ್ನು ಹೊರಗಟ್ಟಲಿರುವನು. ಗಮನಿಸಿರಿ ಗೌರವವಂತೂ ಅಲ್ಲಾಹನಿಗೇ, ಅವನ ಸಂದೇಶವಾಹಕರಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಮಾತ್ರವಿರುವುದು, ಆದರೆ ಕಪಟ ವಿಶ್ವಾಸಿಗಳು ತಿಳಿಯುವುದಿಲ್ಲ.
Tafsiraaɗe Aarabu ɗen:
یٰۤاَیُّهَا الَّذِیْنَ اٰمَنُوْا لَا تُلْهِكُمْ اَمْوَالُكُمْ وَلَاۤ اَوْلَادُكُمْ عَنْ ذِكْرِ اللّٰهِ ۚ— وَمَنْ یَّفْعَلْ ذٰلِكَ فَاُولٰٓىِٕكَ هُمُ الْخٰسِرُوْنَ ۟
ಓ ಸತ್ಯವಿಶ್ವಾಸಿಗಳೇ ನಿಮ್ಮ ಸಂಪತ್ತು ಮತ್ತು ಸಂತಾನಗಳು ಅಲ್ಲಾಹನ ಸ್ಮರಣೆಯಿಂದ ನಿಮ್ಮನ್ನು ಅಲಕ್ಷö್ಯಗೊಳಿಸದಿರಲಿ. ಯಾರು ಹಾಗೆ ಮಾಡುತ್ತಾರೋ ಅವರೇ ನಷ್ಟ ಹೊಂದಿದವರಾಗಿದ್ದಾರೆ.
Tafsiraaɗe Aarabu ɗen:
وَاَنْفِقُوْا مِنْ مَّا رَزَقْنٰكُمْ مِّنْ قَبْلِ اَنْ یَّاْتِیَ اَحَدَكُمُ الْمَوْتُ فَیَقُوْلَ رَبِّ لَوْلَاۤ اَخَّرْتَنِیْۤ اِلٰۤی اَجَلٍ قَرِیْبٍ ۙ— فَاَصَّدَّقَ وَاَكُنْ مِّنَ الصّٰلِحِیْنَ ۟
ನಿಮ್ಮ ಪೈಕಿ ಯಾರಿಗಾದರೂ ಮರಣ ಸಮಯವು ಬಂದಿದ್ದು ಆಗ ಅವನು 'ಓ ನನ್ನ ಪ್ರಭು ನೀನು ನನಗೆ ಇನ್ನೂ ಒಂದಿಷ್ಟು ಕಾಲಾವಕಾಶವನ್ನು ಏಕೆ ಕೊಡುವುದಿಲ್ಲ ? ಹಾಗಿದ್ದರೆ ನಾನು ದಾನ-ರ‍್ಮ ಮಾಡುತ್ತಿದ್ದೆ ಹಾಗು ಸಜ್ಜನರ ಪೈಕಿ ಸೇರುತ್ತಿದ್ದೆ'; ಎಂದು ಹೇಳುವುದಕ್ಕಿಂತ ಮುಂಚೆ ನಾವು ನಿಮಗೆ ನೀಡಿರುವ ಸಂಪತ್ತಿನಿಂದ ನಮ್ಮ ಮರ‍್ಗದಲ್ಲಿ ರ‍್ಚು ಮಾಡಿರಿ.
Tafsiraaɗe Aarabu ɗen:
وَلَنْ یُّؤَخِّرَ اللّٰهُ نَفْسًا اِذَا جَآءَ اَجَلُهَا ؕ— وَاللّٰهُ خَبِیْرٌ بِمَا تَعْمَلُوْنَ ۟۠
ಯಾವೊಬ್ಬ ವ್ಯಕ್ತಿಗೆ ಮರಣ ಸಮಯವು ಬಂದುಬಿಟ್ಟರೆ ಅನಂತರ ಅವನಿಗೆ ಅಲ್ಲಾಹನು ಎಂದಿಗೂ ಕಾಲಾವಕಾಶ ಕೊಡುವುದಿಲ್ಲ ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.
Tafsiraaɗe Aarabu ɗen:
 
Firo maanaaji Simoore.: Simoore Naafigeeɓe
Loowdi cimooje ɗe Tonngoode hello ngon
 
Firo maanaaji Alqur'aana Teddunde nden - Eggo Kannada ngol - Bashiir Maisoori - Loowdi firooji ɗi

Eggo (lapito) mum ko Seyko Bashir Misuri. Nde woni ko e ñiiɓirde Ruwwad ngam eggude.

Uddu