Check out the new design

Firo maanaaji Alqur'aana Teddunde nden - Eggo Kannada ngol - Bashiir Maisoori * - Loowdi firooji ɗi


Firo maanaaji Simoore.: Simoore Muhammed   Aaya.:

ಮುಹಮ್ಮದ್

اَلَّذِیْنَ كَفَرُوْا وَصَدُّوْا عَنْ سَبِیْلِ اللّٰهِ اَضَلَّ اَعْمَالَهُمْ ۟
ಸತ್ಯನಿಷೇಧಿಸಿ, ಅಲ್ಲಾಹನ ಮಾರ್ಗದಿಂದ ತಡೆದಿರುವರಾರೋ ಅವರ ಕರ್ಮಗಳನ್ನು ಅಲ್ಲಾಹನು ವ್ಯರ್ಥಗೊಳಿಸಿದನು.
Tafsiraaɗe Aarabu ɗen:
وَالَّذِیْنَ اٰمَنُوْا وَعَمِلُوا الصّٰلِحٰتِ وَاٰمَنُوْا بِمَا نُزِّلَ عَلٰی مُحَمَّدٍ وَّهُوَ الْحَقُّ مِنْ رَّبِّهِمْ ۙ— كَفَّرَ عَنْهُمْ سَیِّاٰتِهِمْ وَاَصْلَحَ بَالَهُمْ ۟
ಯಾರು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡು, ಮುಹಮ್ಮದ್‌ರವರ ಮೇಲೆ ಅವತೀರ್ಣಗೊಳಿಸಲಾದುದರಲ್ಲಿ ವಿಶ್ವಾಸವಿರಿಸಿದರೋ ವಸ್ತುತಃ ಅದು ಅವರ ಪ್ರಭುವಿನಿಂದ ಇರುವ ಸತ್ಯಧರ್ಮವಾಗಿದೆ. ಅಲ್ಲಾಹನು ಅವರ ಪಾಪಗಳನ್ನು ಅವರಿಂದ ದೂರಮಾಡಿದನು ಮತ್ತು ಅವರ ಸ್ಥಿತಿಯನ್ನು ಉತ್ತಮಗೊಳಿಸಿದನು.
Tafsiraaɗe Aarabu ɗen:
ذٰلِكَ بِاَنَّ الَّذِیْنَ كَفَرُوا اتَّبَعُوا الْبَاطِلَ وَاَنَّ الَّذِیْنَ اٰمَنُوا اتَّبَعُوا الْحَقَّ مِنْ رَّبِّهِمْ ؕ— كَذٰلِكَ یَضْرِبُ اللّٰهُ لِلنَّاسِ اَمْثَالَهُمْ ۟
ಇದೇಕೆಂದರೆ ಸತ್ಯನಿಷೇಧಿಸಿದವರು ಮಿಥ್ಯವನ್ನು ಅನುಸರಿಸಿದರು ಹಾಗು ಸತ್ಯವಿಶ್ವಾಸಿಗಳು ತಮ್ಮ ಪ್ರಭುವಿನ ಕಡೆಯಿಂದಿರುವ ಸತ್ಯವನ್ನು ಅನುಸರಿಸಿದರು, ಇದೇ ರೀತಿ ಅಲ್ಲಾಹನು ಜನರಿಗೆ ಅವರ ಉಪಮೆಗಳನ್ನು ನೀಡುತ್ತಾನೆ.
Tafsiraaɗe Aarabu ɗen:
فَاِذَا لَقِیْتُمُ الَّذِیْنَ كَفَرُوْا فَضَرْبَ الرِّقَابِ ؕ— حَتّٰۤی اِذَاۤ اَثْخَنْتُمُوْهُمْ فَشُدُّوا الْوَثَاقَ ۙ— فَاِمَّا مَنًّا بَعْدُ وَاِمَّا فِدَآءً حَتّٰی تَضَعَ الْحَرْبُ اَوْزَارَهَا— ذٰلِكَ ۛؕ— وَلَوْ یَشَآءُ اللّٰهُ لَانْتَصَرَ مِنْهُمْ ۙ— وَلٰكِنْ لِّیَبْلُوَاۡ بَعْضَكُمْ بِبَعْضٍ ؕ— وَالَّذِیْنَ قُتِلُوْا فِیْ سَبِیْلِ اللّٰهِ فَلَنْ یُّضِلَّ اَعْمَالَهُمْ ۟
ಆದುದರಿಂದ ನೀವು ರಣರಂಗದಲ್ಲಿ ಸತ್ಯನಿಷೇಧಿಗಳನ್ನು ಎದುರಾದರೆ (ಕದನ ಸಂದರ್ಭದಲ್ಲಿ) ಅವರ ಕತ್ತುಗಳನ್ನು ಕಡಿಯಿರಿ. ನೀವು ಅವರನ್ನು ಚೆನ್ನಾಗಿ ಸದೆಬಡಿದಾಗ ಕೈದಿಗಳನ್ನು ಬಿಗಿಯಾಗಿ ಕಟ್ಟಿರಿ. ಅನಂತರ ಒಂದೋ ಸೌಜನ್ಯದಿಂದ ಅವರನ್ನು ಬಿಡುಗಡೆಗೊಳಿಸಿರಿ. ಇಲ್ಲವೇ ವಿಮೋಚನಾ ಧನ ಪಡೆಯಿರಿ. ಯುದ್ಧವು ಆಯುಧವನ್ನು ಕೆಳಗಿಳಿಸುವವರೆಗೆ, ಇದುವೇ ಆದೇಶವಾಗಿದೆ. ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಸ್ವತಃ ಅವನೇ ಅವರಿಂದ ಪ್ರತಿಕಾರ ಪಡೆಯುತ್ತಿದ್ದನು. ಆದರೆ ಇದು ನಿಮ್ಮಲ್ಲಿನ ಕೆಲವರನ್ನು ಇನ್ನು ಕೆಲವರ ಮೂಲಕ ಪರೀಕ್ಷಿಸಲೆಂದಾಗಿದೆ. ಅಲ್ಲಾಹನು ತನ್ನ ಮಾರ್ಗದಲ್ಲಿ ಕೊಲ್ಲಲ್ಪಟ್ಟವರ ಕರ್ಮಗಳನ್ನು ಖಂಡಿತ ವ್ಯರ್ಥಗೊಳಿಸಲಾರನು.
Tafsiraaɗe Aarabu ɗen:
سَیَهْدِیْهِمْ وَیُصْلِحُ بَالَهُمْ ۟ۚ
ಅವನು ಸಧ್ಯದಲ್ಲೇ ಅವರಿಗೆ ಮಾರ್ಗದರ್ಶನ ಮಾಡುವನು. ಹಾಗು ಅವರ ಸ್ಥಿತಿಯನ್ನು ಸುಧಾರಿಸುವನು.
Tafsiraaɗe Aarabu ɗen:
وَیُدْخِلُهُمُ الْجَنَّةَ عَرَّفَهَا لَهُمْ ۟
ಮತ್ತು ಅವರಿಗೆ ಪರಿಚಯಿಸಲಾದ ಸ್ವರ್ಗದಲ್ಲಿ ಅವರನ್ನು ಪ್ರವೇಶಗೊಳಿಸುವನು.
Tafsiraaɗe Aarabu ɗen:
یٰۤاَیُّهَا الَّذِیْنَ اٰمَنُوْۤا اِنْ تَنْصُرُوا اللّٰهَ یَنْصُرْكُمْ وَیُثَبِّتْ اَقْدَامَكُمْ ۟
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ ಅವನೂ ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಸ್ಥಿರಗೊಳಿಸುವನು.
Tafsiraaɗe Aarabu ɗen:
وَالَّذِیْنَ كَفَرُوْا فَتَعْسًا لَّهُمْ وَاَضَلَّ اَعْمَالَهُمْ ۟
ಇನ್ನು ಸತ್ಯನಿಷೇಧಿಸಿದವರಿಗೆ ನಾಶವಿರಲಿ, ಅಲ್ಲಾಹನು ಅವರ ಕರ್ಮಗಳನ್ನು ವ್ಯರ್ಥಗೊಳಿಸುವನು.
Tafsiraaɗe Aarabu ɗen:
ذٰلِكَ بِاَنَّهُمْ كَرِهُوْا مَاۤ اَنْزَلَ اللّٰهُ فَاَحْبَطَ اَعْمَالَهُمْ ۟
ಇದೇಕೆಂದರೆ ಅಲ್ಲಾಹನು ಅವತೀರ್ಣಗೊಳಿಸಿರುವ ಕುರ್‌ಆನನ್ನು ಇಷ್ಟಪಡದಿರುವುದರ ಕಾರಣದಿಂದಾಗಿದೆ. ಹೀಗೆ ಅಲ್ಲಾಹನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು.
Tafsiraaɗe Aarabu ɗen:
اَفَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ مِنْ قَبْلِهِمْ ؕ— دَمَّرَ اللّٰهُ عَلَیْهِمْ ؗ— وَلِلْكٰفِرِیْنَ اَمْثَالُهَا ۟
ಅವರು ತಮಗಿಂತ ಮುಂಚಿನವರ ಪರಿಣಾಮವು ಏನಾಯಿತೆಂಬುದನ್ನು ನೋಡಲು ಭೂಮಿಯಲ್ಲಿ ಸಂಚರಿಸಲಿಲ್ಲವೇ? ಅಲ್ಲಾಹನು ಅವರನ್ನು ಸರ್ವನಾಶ ಮಾಡಿದನು ಮತ್ತು ಸತ್ಯನಿಷೇಧಿಗಳಿಗೆ ಇದೇ ರೀತಿಯ ಶಿಕ್ಷೆಗಳಿರುವುವು
Tafsiraaɗe Aarabu ɗen:
ذٰلِكَ بِاَنَّ اللّٰهَ مَوْلَی الَّذِیْنَ اٰمَنُوْا وَاَنَّ الْكٰفِرِیْنَ لَا مَوْلٰی لَهُمْ ۟۠
ಇದೇಕೆಂದರೆ ಖಂಡಿತವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿಗಳ ರಕ್ಷಕಮಿತ್ರನಾಗಿ ರುವನು ಮತ್ತು ನಿಶ್ಚಯವಾಗಿಯು ಸತ್ಯನಿಷೇಧಿಗಳಿಗೆ ಯಾವೊಬ್ಬ ರಕ್ಷಕಮಿತ್ರನಿಲ್ಲ.
Tafsiraaɗe Aarabu ɗen:
 
Firo maanaaji Simoore.: Simoore Muhammed
Loowdi cimooje ɗe Tonngoode hello ngon
 
Firo maanaaji Alqur'aana Teddunde nden - Eggo Kannada ngol - Bashiir Maisoori - Loowdi firooji ɗi

Eggo (lapito) mum ko Seyko Bashir Misuri. Nde woni ko e ñiiɓirde Ruwwad ngam eggude.

Uddu