Check out the new design

Translation of the Meanings of the Noble Qur'an - Kannada translation - Hamza Butur * - Translations’ Index

PDF XML CSV Excel API
Please review the Terms and Policies

Translation of the meanings Surah: An-Naml   Ayah:
فَلَمَّا جَآءَ سُلَیْمٰنَ قَالَ اَتُمِدُّوْنَنِ بِمَالٍ ؗ— فَمَاۤ اٰتٰىنِ اللّٰهُ خَیْرٌ مِّمَّاۤ اٰتٰىكُمْ ۚ— بَلْ اَنْتُمْ بِهَدِیَّتِكُمْ تَفْرَحُوْنَ ۟
ಆ ದೂತರು ಸುಲೈಮಾನರ ಬಳಿಗೆ ಬಂದಾಗ ಅವರು ಹೇಳಿದರು: “ನೀವು ನಿಮ್ಮ ಸಂಪತ್ತಿನ ಮೂಲಕ ನನಗೆ ಸಹಾಯ ಮಾಡಲು ಬಯಸುತ್ತೀರಾ? ಆದರೆ ನಿಮಗೆ ನೀಡಿರುವುದಕ್ಕಿಂತಲೂ ಶ್ರೇಷ್ಠವಾದುದನ್ನು ಅಲ್ಲಾಹು ನನಗೆ ನೀಡಿದ್ದಾನೆ. ಆದರೆ ನೀವಂತೂ ನಿಮ್ಮ ಉಡುಗೊರೆಯ ಬಗ್ಗೆ ಹೆಮ್ಮೆ ಪಡುತ್ತೀರಿ.
Arabic explanations of the Qur’an:
اِرْجِعْ اِلَیْهِمْ فَلَنَاْتِیَنَّهُمْ بِجُنُوْدٍ لَّا قِبَلَ لَهُمْ بِهَا وَلَنُخْرِجَنَّهُمْ مِّنْهَاۤ اَذِلَّةً وَّهُمْ صٰغِرُوْنَ ۟
ನೀವು ಅವರ (ನಿಮ್ಮ ಆಡಳಿತಗಾರರ) ಬಳಿಗೆ ವಾಪಸು ಹೋಗಿರಿ. ನಿಶ್ಚಯವಾಗಿಯೂ ಅವರಿಗೆ ಎದುರಿಸಲು ಸಾಧ್ಯವಾಗದ ಬೃಹತ್ ಸೈನ್ಯಗಳೊಂದಿಗೆ ನಾವು ಅವರ ಬಳಿಗೆ ಬರುವೆವು. ನಂತರ ಅವರನ್ನು ಅತ್ಯಂತ ಹೀನ ಸ್ಥಿತಿಯಲ್ಲಿ ಅವಮಾನದೊಂದಿಗೆ ಅಲ್ಲಿಂದ ಓಡಿಸುವೆವು.”
Arabic explanations of the Qur’an:
قَالَ یٰۤاَیُّهَا الْمَلَؤُا اَیُّكُمْ یَاْتِیْنِیْ بِعَرْشِهَا قَبْلَ اَنْ یَّاْتُوْنِیْ مُسْلِمِیْنَ ۟
ಸುಲೈಮಾನ್ ಹೇಳಿದರು: “ಓ ಸರದಾರರೇ! ಅವರು ನನ್ನ ಬಳಿಗೆ ಮುಸಲ್ಮಾನರಾಗಿ ಬರುವುದಕ್ಕೆ ಮೊದಲೇ ಅವಳ ಸಿಂಹಾಸನವನ್ನು ಯಾರು ನನಗೆ ತಂದು ಕೊಡುತ್ತೀರಿ?”
Arabic explanations of the Qur’an:
قَالَ عِفْرِیْتٌ مِّنَ الْجِنِّ اَنَا اٰتِیْكَ بِهٖ قَبْلَ اَنْ تَقُوْمَ مِنْ مَّقَامِكَ ۚ— وَاِنِّیْ عَلَیْهِ لَقَوِیٌّ اَمِیْنٌ ۟
ಒಬ್ಬ ಬಲಿಷ್ಠ ರೂಪದ ಜಿನ್ನ್ ಹೇಳಿದನು: “ನೀವು ನಿಮ್ಮ ಸ್ಥಾನದಿಂದ ಎದ್ದೇಳುವುದಕ್ಕೆ ಮೊದಲೇ ನಾನು ಅದನ್ನು ತರುವೆನು. ನಿಜಕ್ಕೂ ನನಗೆ ಅದನ್ನು ಮಾಡುವ ಶಕ್ತಿಯಿದೆ ಮತ್ತು ನಾನು ವಿಶ್ವಾಸಯೋಗ್ಯನಾಗಿದ್ದೇನೆ.”
Arabic explanations of the Qur’an:
قَالَ الَّذِیْ عِنْدَهٗ عِلْمٌ مِّنَ الْكِتٰبِ اَنَا اٰتِیْكَ بِهٖ قَبْلَ اَنْ یَّرْتَدَّ اِلَیْكَ طَرْفُكَ ؕ— فَلَمَّا رَاٰهُ مُسْتَقِرًّا عِنْدَهٗ قَالَ هٰذَا مِنْ فَضْلِ رَبِّیْ ۫— لِیَبْلُوَنِیْۤ ءَاَشْكُرُ اَمْ اَكْفُرُ ؕ— وَمَنْ شَكَرَ فَاِنَّمَا یَشْكُرُ لِنَفْسِهٖ ۚ— وَمَنْ كَفَرَ فَاِنَّ رَبِّیْ غَنِیٌّ كَرِیْمٌ ۟
ಗ್ರಂಥದ ಜ್ಞಾನವಿರುವ ಒಬ್ಬ ವ್ಯಕ್ತಿ ಎದ್ದು ನಿಂತು ಹೇಳಿದರು: “ನೀವು ಕಣ್ಣೆವೆಯಿಕ್ಕುವುದಕ್ಕೆ ಮೊದಲೇ ನಾನು ಅದನ್ನು ತರುವೆನು.” ಆ ಸಿಂಹಾಸನವು ತನ್ನ ಮುಂದೆ ನಿಂತಿರುವುದ್ನು ಕಂಡಾಗ ಸುಲೈಮಾನ್ ಹೇಳಿದರು: “ಇದು ನನ್ನ ಪರಿಪಾಲಕನ (ಅಲ್ಲಾಹನ) ಔದಾರ್ಯದಲ್ಲಿ ಸೇರಿದ್ದಾಗಿದೆ. ನಾನು ಕೃತಜ್ಞನಾಗುತ್ತೇನೋ ಅಥವಾ ಕೃತಘ್ನನಾಗುತ್ತೇನೋ ಎಂದು ಪರೀಕ್ಷಿಸುವುದಕ್ಕಾಗಿ. ಯಾರು ಕೃತಜ್ಞನಾಗುತ್ತಾನೋ—ಅವನು ಕೃತಜ್ಞನಾಗುವುದು ಸ್ವತಃ ಅವನ ಒಳಿತಿಗೇ ಆಗಿದೆ. ಯಾರಾದರೂ ಕೃತಘ್ನನಾಗುವುದಾದರೆ—ನಿಶ್ಚಯವಾಗಿಯೂ ನನ್ನ ಪರಿಪಾಲಕನು ನಿರಪೇಕ್ಷನು ಮತ್ತು ಪರಮ ಉದಾರಿಯಾಗಿದ್ದಾನೆ.”
Arabic explanations of the Qur’an:
قَالَ نَكِّرُوْا لَهَا عَرْشَهَا نَنْظُرْ اَتَهْتَدِیْۤ اَمْ تَكُوْنُ مِنَ الَّذِیْنَ لَا یَهْتَدُوْنَ ۟
ಸುಲೈಮಾನ್ ಹೇಳಿದರು: “ಅವಳ ಸಿಂಹಾಸನವನ್ನು (ಅವಳಿಗೆ ಗುರುತಿಸಲಾಗದಂತೆ) ವಿರೂಪಗೊಳಿಸಿರಿ. ಅವಳು ಸತ್ಯವನ್ನು ಕಂಡುಕೊಳ್ಳುತ್ತಾಳೋ ಅಥವಾ ಸತ್ಯವನ್ನು ಕಂಡುಕೊಳ್ಳಲು ಸಾಧ್ಯವಾಗದವರಲ್ಲಿ ಸೇರುತ್ತಾಳೋ ಎಂದು ನೋಡೋಣ.”
Arabic explanations of the Qur’an:
فَلَمَّا جَآءَتْ قِیْلَ اَهٰكَذَا عَرْشُكِ ؕ— قَالَتْ كَاَنَّهٗ هُوَ ۚ— وَاُوْتِیْنَا الْعِلْمَ مِنْ قَبْلِهَا وَكُنَّا مُسْلِمِیْنَ ۟
ನಂತರ ಅವಳು ಬಂದಾಗ ಕೇಳಲಾಯಿತು: “ನಿಮ್ಮ ಸಿಂಹಾಸನ ಇದೇ ರೀತಿಯಿದೆಯೇ?” ಅವಳು ಹೇಳಿದಳು: “ಇದು ಅದೇ ಆಗಿರುವಂತೆ ತೋರುತ್ತಿದೆ.” ನಮಗೆ ಇದಕ್ಕಿಂತ ಮೊದಲೇ ಜ್ಞಾನ ನೀಡಲಾಗಿದೆ ಮತ್ತು ನಾವು ಮುಸಲ್ಮಾನರಾಗಿದ್ದೇವೆ.
Arabic explanations of the Qur’an:
وَصَدَّهَا مَا كَانَتْ تَّعْبُدُ مِنْ دُوْنِ اللّٰهِ ؕ— اِنَّهَا كَانَتْ مِنْ قَوْمٍ كٰفِرِیْنَ ۟
ಅವಳು ಅಲ್ಲಾಹನನ್ನು ಬಿಟ್ಟು ಯಾರನ್ನು ಆರಾಧಿಸುತ್ತಿದ್ದಳೋ ಆ ದೇವರುಗಳು (ಅಲ್ಲಾಹನ ಆರಾಧನೆ ಮಾಡದಂತೆ) ಅವಳನ್ನು ತಡೆದಿದ್ದರು. ನಿಶ್ಚಯವಾಗಿಯೂ ಅವಳು ಸತ್ಯನಿಷೇಧಿಗಳಾದ ಜನರಲ್ಲಿ ಸೇರಿದ್ದಳು.
Arabic explanations of the Qur’an:
قِیْلَ لَهَا ادْخُلِی الصَّرْحَ ۚ— فَلَمَّا رَاَتْهُ حَسِبَتْهُ لُجَّةً وَّكَشَفَتْ عَنْ سَاقَیْهَا ؕ— قَالَ اِنَّهٗ صَرْحٌ مُّمَرَّدٌ مِّنْ قَوَارِیْرَ ؕ۬— قَالَتْ رَبِّ اِنِّیْ ظَلَمْتُ نَفْسِیْ وَاَسْلَمْتُ مَعَ سُلَیْمٰنَ لِلّٰهِ رَبِّ الْعٰلَمِیْنَ ۟۠
ಅವಳೊಡನೆ ಹೇಳಲಾಯಿತು: “ಅರಮನೆಯನ್ನು ಪ್ರವೇಶಿಸಿರಿ.” ಅವಳು ಅದನ್ನು ನೋಡಿದಾಗ ಅದೊಂದು ಕೊಳವಾಗಿರಬೇಕೆಂದು ಭಾವಿಸಿ ತನ್ನ ಕಣಕಾಲುಗಳಿಂದ ಬಟ್ಟೆಯನ್ನು ಎತ್ತಿದಳು. ಸುಲೈಮಾನ್ ಹೇಳಿದರು: “ಇದು ಸ್ಫಟಿಕವನ್ನು ಹಾಸಿ ಹೊಳೆಯುವಂತೆ ಮಾಡಿದ ಅರಮನೆಯಾಗಿದೆ.” ಅವಳು ಹೇಳಿದಳು: “ಓ ನನ್ನ ಪರಿಪಾಲಕನೇ! ನಾನು ಸ್ವತಃ ನನ್ನ ಮೇಲೆಯೇ ಅನ್ಯಾಯವೆಸಗಿದ್ದೇನೆ. ನಾನು ಸುಲೈಮಾನರೊಂದಿಗೆ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಶರಣಾಗಿದ್ದೇನೆ.”
Arabic explanations of the Qur’an:
 
Translation of the meanings Surah: An-Naml
Surahs’ Index Page Number
 
Translation of the Meanings of the Noble Qur'an - Kannada translation - Hamza Butur - Translations’ Index

Translated by Muhammad Hamza Batur and developed under the supervision of Rowwad Translation Center

close