Check out the new design

Translation of the Meanings of the Noble Qur'an - Kannada language - Sh. Bashir Misuri * - Translations’ Index


Translation of the meanings Surah: An-Nahl   Ayah:
لِیَكْفُرُوْا بِمَاۤ اٰتَیْنٰهُمْ ؕ— فَتَمَتَّعُوْا ۫— فَسَوْفَ تَعْلَمُوْنَ ۟
ಇದು ನಾವು ಅವರಿಗೆ ದಯಪಾಲಿಸಿದ ಅನುಗ್ರಹಕ್ಕೆ ಅವರು ಕೃತಘ್ನತೆ ತೋರಲೆಂದಾಗಿದೆ. ಆದುದರಿಂದ ನೀವು ಅಲ್ಪ ಸುಖಭೋಗಗಳನ್ನು ಅನುಭವಿಸಿರಿ. ಸಧ್ಯದಲ್ಲೇ ನೀವು ತಿಳಿಯುವಿರಿ.
Arabic explanations of the Qur’an:
وَیَجْعَلُوْنَ لِمَا لَا یَعْلَمُوْنَ نَصِیْبًا مِّمَّا رَزَقْنٰهُمْ ؕ— تَاللّٰهِ لَتُسْـَٔلُنَّ عَمَّا كُنْتُمْ تَفْتَرُوْنَ ۟
ಮತ್ತು ನಾವು ಅವರಿಗೆ ನೀಡಿರುವ ಜೀವನಾಧಾರದಿಂದ ಅವರ ವಾಸ್ತವಿಕತೆಯನ್ನು ಅರಿಯದಿರುವವರ ಪಾಲನ್ನು ನಿಶ್ಚಯಿಸಿಕೊಳ್ಳುತ್ತಾರೆ. ಅಲ್ಲಾಹನಾಣೆ ನಿಮ್ಮ ಸುಳ್ಳಾರೋಪದ ಕುರಿತು ಖಂಡಿತವಾಗಿಯು ನಿಮ್ಮೊಂದಿಗೆ ವಿಚಾರಿಸಲಾಗುವುದು.
Arabic explanations of the Qur’an:
وَیَجْعَلُوْنَ لِلّٰهِ الْبَنٰتِ سُبْحٰنَهٗ ۙ— وَلَهُمْ مَّا یَشْتَهُوْنَ ۟
ಅವರು ಅಲ್ಲಾಹನಿಗೆ ಹೆಣ್ಣು ಮಕ್ಕಳನ್ನು ನಿಶ್ಚಯಿಸುತ್ತಾರೆ ಅವನಾದರೋ ಪರಮ ಪಾವನನು ಮತ್ತು ಅವರಿಗಾದರೋ ತಮ್ಮ ಇಷ್ಟದಂತೆ (ಗಂಡನ್ನು) ನಿಶ್ಚಯಿಸಿಕೊಳ್ಳುತ್ತಾರೆ.
Arabic explanations of the Qur’an:
وَاِذَا بُشِّرَ اَحَدُهُمْ بِالْاُ ظَلَّ وَجْهُهٗ مُسْوَدًّا وَّهُوَ كَظِیْمٌ ۟ۚ
ಅವರ ಪೈಕಿ ಯಾರಿಗಾದರು ಹೆಣ್ಣು ಮಗು ಹುಟ್ಟಿದ ಸುವಾರ್ತೆಯನ್ನು ಕೊಡಲಾದರೆ ಅವನ ಮುಖ ಕಳೆಗುಂದಿ ಬಿಡುತ್ತದೆ ಮತ್ತು ಅವನು ಒಳಗೊಳಗೇ ಕೊರಗುತ್ತಾನೆ.
Arabic explanations of the Qur’an:
یَتَوَارٰی مِنَ الْقَوْمِ مِنْ سُوْٓءِ مَا بُشِّرَ بِهٖ ؕ— اَیُمْسِكُهٗ عَلٰی هُوْنٍ اَمْ یَدُسُّهٗ فِی التُّرَابِ ؕ— اَلَا سَآءَ مَا یَحْكُمُوْنَ ۟
ಈ ಕೆಟ್ಟ ಸುದ್ದಿಯ ನಿಮಿತ್ತ ಅವನು ಜನರಿಂದ ತಲೆಮರೆಸಿಕೊಂಡು ತಿರುಗುತ್ತಾನೆ. ಈ ಅಪಮಾನದೊಂದಿಗೆ ತಾನು ಅದನ್ನು ಇರಿಸಿಕೊಳ್ಳಲೇ ಅಥವಾ ಮಣ್ಣಿನಲ್ಲಿ ಹೂತುಬಿಡಲೇ ಎಂದು ಯೋಚಿಸುತ್ತಾನೆ. ತಿಳಿಯಿರಿ! ಅವರು ಅದೆಂತಹ ಕೆಟ್ಟ ತೀರ್ಮಾನವನ್ನು ಕೈಗೊಳ್ಳುತ್ತಿದ್ದಾರೆ.
Arabic explanations of the Qur’an:
لِلَّذِیْنَ لَا یُؤْمِنُوْنَ بِالْاٰخِرَةِ مَثَلُ السَّوْءِ ۚ— وَلِلّٰهِ الْمَثَلُ الْاَعْلٰی ؕ— وَهُوَ الْعَزِیْزُ الْحَكِیْمُ ۟۠
ಪರಲೋಕದಲ್ಲಿ ವಿಶ್ವಾಸವಿಡದವರಿಗೇ ಕೆಟ್ಟ ಉಪಮೆ ಇರುವುದು ಅಲ್ಲಾಹನಿಗಂತು ಮಹೋನ್ನತವಾದ ಉಪಮೆಯಿದೆ ಮತ್ತು ಅವನು ಮಹಾ ಪ್ರಚಂಡನು, ಯುಕ್ತಿಪೂರ್ಣನು ಆಗಿರುವನು.
Arabic explanations of the Qur’an:
وَلَوْ یُؤَاخِذُ اللّٰهُ النَّاسَ بِظُلْمِهِمْ مَّا تَرَكَ عَلَیْهَا مِنْ دَآبَّةٍ وَّلٰكِنْ یُّؤَخِّرُهُمْ اِلٰۤی اَجَلٍ مُّسَمًّی ۚ— فَاِذَا جَآءَ اَجَلُهُمْ لَا یَسْتَاْخِرُوْنَ سَاعَةً وَّلَا یَسْتَقْدِمُوْنَ ۟
ಅಲ್ಲಾಹನು ಜನರನ್ನು ಅವರ ಅಕ್ರಮದ ನಿಮಿತ್ತ ಹಿಡಿಯುತ್ತಿದ್ದರೆ ಭೂಮುಖದ ಮೇಲೆ ಯಾವೊಂದು ಜೀವಿಯನ್ನೂ ಬಿಡುತ್ತಿರಲಿಲ್ಲ. ಆದರೆ ಅವನಂತು ಅವರಿಗೆ ಒಂದು ನಿಶ್ಚಿತ ಅವಧಿಯವರೆಗೆ ಕಾಲಾವಕಾಶ ನೀಡುತ್ತಾನೆ. ಕೊನೆಗೆ ಅವರ ಆ ನಿಶ್ಚಿತ ಅವಧಿಯು ಬಂದಾಗ ಅವರು ಒಂದು ಗಳಿಗೆಯಷ್ಟು ಹಿಂದೆಯೂ ಸರಿಯಲಾರರು ಮತ್ತು ಮುಂದೆಯೂ ಸರಿಯಲಾರರು.
Arabic explanations of the Qur’an:
وَیَجْعَلُوْنَ لِلّٰهِ مَا یَكْرَهُوْنَ وَتَصِفُ اَلْسِنَتُهُمُ الْكَذِبَ اَنَّ لَهُمُ الْحُسْنٰی ؕ— لَا جَرَمَ اَنَّ لَهُمُ النَّارَ وَاَنَّهُمْ مُّفْرَطُوْنَ ۟
ಅವರು ತಮಗೆ ಇಷ್ಟವಿಲ್ಲದ್ದನ್ನು ಅಲ್ಲಾಹನಿಗೆ ನಿಶ್ಚಯಿಸುತ್ತಾರೆ ಮತ್ತು ಅವರ ನಾಲಿಗೆಗಳು ತಮಗೇ ಪರಲೋಕದಲ್ಲಿ ಅತ್ಯುತ್ತಮವಾದುದಿದೆ ಎಂದು ಸುಳ್ಳು ವಾದಿಸುತ್ತಾರೆ. ಹಾಗಲ್ಲ! ವಾಸ್ತವದಲ್ಲಿ ಅವರಿಗೆ ನರಕಾಗ್ನಿಯಿದೆ ಮತ್ತು ಅವರು ನರಕವಾಸಿಗಳ ಮುಂದಾಳುಗಳಾಗಿರುತ್ತಾರೆ.
Arabic explanations of the Qur’an:
تَاللّٰهِ لَقَدْ اَرْسَلْنَاۤ اِلٰۤی اُمَمٍ مِّنْ قَبْلِكَ فَزَیَّنَ لَهُمُ الشَّیْطٰنُ اَعْمَالَهُمْ فَهُوَ وَلِیُّهُمُ الْیَوْمَ وَلَهُمْ عَذَابٌ اَلِیْمٌ ۟
(ಓ ಪೈಗಂಬರರೇ) ಅಲ್ಲಾಹನಾಣೆ. ನಾವು ನಿಮಗಿಂತ ಮುಂಚಿನ ಅನೇಕ ಸಮುದಾಯಗಳೆಡೆಗೂ ನಮ್ಮ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಆದರೆ ಶೈತಾನನು ಅವರ ದುಷ್ಕರ್ಮಗಳನ್ನು ಅವರಿಗೆ ಮನಮೋಹಕವಾಗಿ ಮಾಡಿ ತೋರಿಸಿದನು. ಅವನೇ ಇಂದು ಅವರ ಆಪ್ತಮಿತ್ರನಾಗಿದ್ದಾನೆ. ಮತ್ತು ಅವರಿಗೆ ವೇದನಾಜನಕ ಶಿಕ್ಷೆಯಿರುವುದು.
Arabic explanations of the Qur’an:
وَمَاۤ اَنْزَلْنَا عَلَیْكَ الْكِتٰبَ اِلَّا لِتُبَیِّنَ لَهُمُ الَّذِی اخْتَلَفُوْا فِیْهِ ۙ— وَهُدًی وَّرَحْمَةً لِّقَوْمٍ یُّؤْمِنُوْنَ ۟
ಅವರು ಹೊಂದಿರುವ ಭಿನ್ನಾಭಿಪ್ರಾಯಗಳ ವಸ್ತು ಸ್ಥಿತಿಯನ್ನು ನೀವು ಅವರಿಗೆ ವಿವರಿಸಿ ಕೊಡಲಿಕ್ಕಾಗಿಯೇ ನಾವು ಈ ಗ್ರಂಥವನ್ನು ನಿಮ್ಮ ಮೇಲೆ ಅವತೀರ್ಣಗೊಳಿಸಿರುತ್ತೇವೆ. ಮತ್ತು ಇದು ಸತ್ಯವಿಶ್ವಾಸವಿರಿಸಿದ ಜನರಿಗೆ ಸನ್ಮಾರ್ಗವೂ, ಕಾರುಣ್ಯವೂ ಆಗಿದೆ.
Arabic explanations of the Qur’an:
 
Translation of the meanings Surah: An-Nahl
Surahs’ Index Page Number
 
Translation of the Meanings of the Noble Qur'an - Kannada language - Sh. Bashir Misuri - Translations’ Index

Translated by Sh. Bashir Misuri and developed under the supervision of Rowwad Translation Center

close