Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ * - অনুবাদসমূহৰ সূচীপত্ৰ

PDF XML CSV Excel API
Please review the Terms and Policies

অৰ্থানুবাদ ছুৰা: আল-মায়িদাহ   আয়াত:
وَقَفَّیْنَا عَلٰۤی اٰثَارِهِمْ بِعِیْسَی ابْنِ مَرْیَمَ مُصَدِّقًا لِّمَا بَیْنَ یَدَیْهِ مِنَ التَّوْرٰىةِ ۪— وَاٰتَیْنٰهُ الْاِنْجِیْلَ فِیْهِ هُدًی وَّنُوْرٌ ۙ— وَّمُصَدِّقًا لِّمَا بَیْنَ یَدَیْهِ مِنَ التَّوْرٰىةِ وَهُدًی وَّمَوْعِظَةً لِّلْمُتَّقِیْنَ ۟ؕ
ನಂತರ ಅವರ ಹಿಂದೆಯೇ ನಾವು ಮರ್ಯಮರ ಮಗ ಈಸಾರನ್ನು—ತನ್ನ ಮುಂದಿರುವ ತೌರಾತನ್ನು ದೃಢೀಕರಿಸುವುದಕ್ಕಾಗಿ ಕಳುಹಿಸಿದೆವು. ನಾವು ಅವರಿಗೆ ಇಂಜೀಲನ್ನು ನೀಡಿದೆವು. ಅದರಲ್ಲಿ ಸನ್ಮಾರ್ಗ ಮತ್ತು ಬೆಳಕಿತ್ತು. ಅದು ತನ್ನ ಮುಂದಿರುವ ತೌರಾತನ್ನು ದೃಢೀಕರಿಸುವ ಗ್ರಂಥವಾಗಿದೆ ಮತ್ತು ದೇವಭಯವುಳ್ಳವರಿಗೆ ಮಾರ್ಗದರ್ಶನ ಮತ್ತು ಹಿತೋಪದೇಶವಾಗಿದೆ.
আৰবী তাফছীৰসমূহ:
وَلْیَحْكُمْ اَهْلُ الْاِنْجِیْلِ بِمَاۤ اَنْزَلَ اللّٰهُ فِیْهِ ؕ— وَمَنْ لَّمْ یَحْكُمْ بِمَاۤ اَنْزَلَ اللّٰهُ فَاُولٰٓىِٕكَ هُمُ الْفٰسِقُوْنَ ۟
ಇಂಜೀಲ್‍ನ ಅನುಯಾಯಿಗಳು ಅಲ್ಲಾಹು ಅದರಲ್ಲಿ ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ತೀರ್ಪು ನೀಡಲಿ.[1] ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ದುಷ್ಕರ್ಮಿಗಳು.
[1] ಈಸಾರ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿತ್ವದ ಅವಧಿಯು ಊರ್ಜಿತದಲ್ಲಿದ್ದ ಕಾಲದಲ್ಲಿ ಅವರ ಅನುಯಾಯಿಗಳು ಇಂಜೀಲ್‌ನಲ್ಲಿರುವ ನಿಯಮಗಳ ಪ್ರಕಾರ ತೀರ್ಪು ನೀಡಬೇಕಾಗಿತ್ತು. ಆದರೆ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಪ್ರವಾದಿಯಾದಾಗ ಈಸಾರ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿತ್ವ ಮುಗಿಯುತ್ತದೆ ಮತ್ತು ಇಂಜೀಲ್‌ನ ನಿಯಮಗಳು ರದ್ದಾಗುತ್ತವೆ. ನಂತರ ಅವರ ಅನುಯಾಯಿಗಳು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೆ ಅವತೀರ್ಣವಾದ ಕುರ್‌ಆನ್ ಪ್ರಕಾರ ತೀರ್ಪು ನೀಡಬೇಕಾಗಿದೆ.
আৰবী তাফছীৰসমূহ:
وَاَنْزَلْنَاۤ اِلَیْكَ الْكِتٰبَ بِالْحَقِّ مُصَدِّقًا لِّمَا بَیْنَ یَدَیْهِ مِنَ الْكِتٰبِ وَمُهَیْمِنًا عَلَیْهِ فَاحْكُمْ بَیْنَهُمْ بِمَاۤ اَنْزَلَ اللّٰهُ وَلَا تَتَّبِعْ اَهْوَآءَهُمْ عَمَّا جَآءَكَ مِنَ الْحَقِّ ؕ— لِكُلٍّ جَعَلْنَا مِنْكُمْ شِرْعَةً وَّمِنْهَاجًا ؕ— وَلَوْ شَآءَ اللّٰهُ لَجَعَلَكُمْ اُمَّةً وَّاحِدَةً وَّلٰكِنْ لِّیَبْلُوَكُمْ فِیْ مَاۤ اٰتٰىكُمْ فَاسْتَبِقُوا الْخَیْرٰتِ ؕ— اِلَی اللّٰهِ مَرْجِعُكُمْ جَمِیْعًا فَیُنَبِّئُكُمْ بِمَا كُنْتُمْ فِیْهِ تَخْتَلِفُوْنَ ۟ۙ
(ಪ್ರವಾದಿಯವರೇ) ನಿಮಗೂ ನಾವು ಗ್ರಂಥವನ್ನು ಸತ್ಯಸಹಿತ ಅವತೀರ್ಣಗೊಳಿಸಿದ್ದೇವೆ. ಅದು ತನ್ನ ಮುಂದಿರುವ ಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ. ಆದ್ದರಿಂದ ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ನೀವು ಅವರ ನಡುವೆ ತೀರ್ಪು ನೀಡಿರಿ. ನಿಮಗೆ ಅವತೀರ್ಣವಾದ ಸತ್ಯವನ್ನು ತೊರೆದು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ನಿಮ್ಮಲ್ಲಿ ಪ್ರತಿಯೊಂದು ಸಮುದಾಯಕ್ಕೂ ನಾವು ಒಂದು ಧರ್ಮಶಾಸ್ತ್ರ ಮತ್ತು ಕರ್ಮಮಾರ್ಗವನ್ನು ನಿಶ್ಚಯಿಸಿದ್ದೇವೆ. ಅಲ್ಲಾಹು ಇಚ್ಛಿಸಿದ್ದರೆ ನಿಮ್ಮೆಲ್ಲರನ್ನೂ ಒಂದೇ ಸಮುದಾಯವಾಗಿ ಮಾಡುತ್ತಿದ್ದನು. ಆದರೆ ಅವನು ನಿಮಗೆ ಏನು ನೀಡಿದ್ದಾನೋ ಅದರಲ್ಲಿ ನಿಮ್ಮನ್ನು ಪರೀಕ್ಷಿಸಲು (ಇಚ್ಛಿಸುತ್ತಾನೆ). ಆದ್ದರಿಂದ ನೀವು ಸತ್ಕರ್ಮಗಳಲ್ಲಿ ತ್ವರೆಯಿಂದ ಮುನ್ನುಗ್ಗಿರಿ. ನೀವೆಲ್ಲರೂ ಅಲ್ಲಾಹನ ಬಳಿಗೇ ಮರಳಬೇಕಾಗಿದೆ. ಆಗ ನೀವು ಭಿನ್ನಮತ ತಳೆದ ವಿಷಯಗಳ ಬಗ್ಗೆ ಅವನು ನಿಮಗೆ ತಿಳಿಸಿಕೊಡುವನು.
আৰবী তাফছীৰসমূহ:
وَاَنِ احْكُمْ بَیْنَهُمْ بِمَاۤ اَنْزَلَ اللّٰهُ وَلَا تَتَّبِعْ اَهْوَآءَهُمْ وَاحْذَرْهُمْ اَنْ یَّفْتِنُوْكَ عَنْ بَعْضِ مَاۤ اَنْزَلَ اللّٰهُ اِلَیْكَ ؕ— فَاِنْ تَوَلَّوْا فَاعْلَمْ اَنَّمَا یُرِیْدُ اللّٰهُ اَنْ یُّصِیْبَهُمْ بِبَعْضِ ذُنُوْبِهِمْ ؕ— وَاِنَّ كَثِیْرًا مِّنَ النَّاسِ لَفٰسِقُوْنَ ۟
ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಅವರ ನಡುವೆ ತೀರ್ಪು ನೀಡಿರಿ. ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ಅಲ್ಲಾಹು ನಿಮಗೆ ಅವತೀರ್ಣಗೊಳಿಸಿದ ಯಾವುದಾದರೂ ಆದೇಶದಿಂದ ಅವರು ನಿಮ್ಮನ್ನು ತಪ್ಪಿಸಿಬಿಡುವ ಬಗ್ಗೆ ಜಾಗರೂಕರಾಗಿರಿ. ಅವರೇನಾದರೂ ವಿಮುಖರಾದರೆ, ತಿಳಿಯಿರಿ! ಅವರ ಕೆಲವು ಪಾಪಗಳ ಕಾರಣದಿಂದ ಅಲ್ಲಾಹು ಅವರನ್ನು ಶಿಕ್ಷಿಸಲು ಬಯಸುತ್ತಿದ್ದಾನೆ. ನಿಶ್ಚಯವಾಗಿಯೂ ಮನುಷ್ಯರಲ್ಲಿ ಹೆಚ್ಚಿನವರೂ ದುಷ್ಕರ್ಮಿಗಳಾಗಿದ್ದಾರೆ.
আৰবী তাফছীৰসমূহ:
اَفَحُكْمَ الْجَاهِلِیَّةِ یَبْغُوْنَ ؕ— وَمَنْ اَحْسَنُ مِنَ اللّٰهِ حُكْمًا لِّقَوْمٍ یُّوْقِنُوْنَ ۟۠
ಅವರು ಅಜ್ಞಾನಕಾಲದ ತೀರ್ಪನ್ನು ಬಯಸುತ್ತಿದ್ದಾರೆಯೇ? ದೃಢವಿಶ್ವಾಸವಿಡುವ ಜನರಿಗೆ ಅಲ್ಲಾಹನಿಗಿಂತಲೂ ಉತ್ತಮವಾಗಿ ತೀರ್ಪು ನೀಡುವವನು ಯಾರು?
আৰবী তাফছীৰসমূহ:
 
অৰ্থানুবাদ ছুৰা: আল-মায়িদাহ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ - অনুবাদসমূহৰ সূচীপত্ৰ

মহম্মদ হামজাৰ দ্বাৰা অনুবাদ কৰা হৈছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ