Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ * - অনুবাদসমূহৰ সূচীপত্ৰ

PDF XML CSV Excel API
Please review the Terms and Policies

অৰ্থানুবাদ ছুৰা: গাফিৰ   আয়াত:
اَلْیَوْمَ تُجْزٰی كُلُّ نَفْسٍ بِمَا كَسَبَتْ ؕ— لَا ظُلْمَ الْیَوْمَ ؕ— اِنَّ اللّٰهَ سَرِیْعُ الْحِسَابِ ۟
ಇಂದು ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ನೀಡಲಾಗುವುದು. ಇಂದು ಯಾರಿಗೂ ಅನ್ಯಾಯವಾಗುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ.
আৰবী তাফছীৰসমূহ:
وَاَنْذِرْهُمْ یَوْمَ الْاٰزِفَةِ اِذِ الْقُلُوْبُ لَدَی الْحَنَاجِرِ كٰظِمِیْنَ ؕ۬— مَا لِلظّٰلِمِیْنَ مِنْ حَمِیْمٍ وَّلَا شَفِیْعٍ یُّطَاعُ ۟ؕ
ಅವರಿಗೆ ಬಹಳ ಹತ್ತಿರವಾಗುವ ಆ ದಿನದ (ಪುನರುತ್ಥಾನ ದಿನದ) ಬಗ್ಗೆ ಎಚ್ಚರಿಕೆ ನೀಡಿರಿ. ಹೃದಯಗಳು ಗಂಟಲಿಗೆ ತಲುಪುವ ಮತ್ತು ಅವರೆಲ್ಲರೂ ನಿಶ್ಶಬ್ದರಾಗುವ ಸಂದರ್ಭ. ಅಕ್ರಮಿಗಳಿಗೆ ಯಾವುದೇ ಆಪ್ತಮಿತ್ರರು ಅಥವಾ ಅಂಗೀಕಾರಯೋಗ್ಯ ಶಿಫಾರಸು ಮಾಡುವವರು ಯಾರೂ ಇರಲಾರರು.
আৰবী তাফছীৰসমূহ:
یَعْلَمُ خَآىِٕنَةَ الْاَعْیُنِ وَمَا تُخْفِی الصُّدُوْرُ ۟
ಅವನು ಕಣ್ಣುಗಳ ವಂಚನೆಯ ನೋಟಗಳನ್ನು ಮತ್ತು ಹೃದಯಗಳು ಬಚ್ಚಿಡುವುದನ್ನು ತಿಳಿಯುತ್ತಾನೆ.
আৰবী তাফছীৰসমূহ:
وَاللّٰهُ یَقْضِیْ بِالْحَقِّ ؕ— وَالَّذِیْنَ یَدْعُوْنَ مِنْ دُوْنِهٖ لَا یَقْضُوْنَ بِشَیْءٍ ؕ— اِنَّ اللّٰهَ هُوَ السَّمِیْعُ الْبَصِیْرُ ۟۠
ಅಲ್ಲಾಹು ಸರಿಯಾದ ರೀತಿಯಲ್ಲಿ ತೀರ್ಪು ನೀಡುತ್ತಾನೆ. ಅವರು ಅವನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತಾರೋ ಅವರು ಯಾವುದೇ ವಿಷಯದಲ್ಲೂ ತೀರ್ಪು ನೀಡುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.
আৰবী তাফছীৰসমূহ:
اَوَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ كَانُوْا مِنْ قَبْلِهِمْ ؕ— كَانُوْا هُمْ اَشَدَّ مِنْهُمْ قُوَّةً وَّاٰثَارًا فِی الْاَرْضِ فَاَخَذَهُمُ اللّٰهُ بِذُنُوْبِهِمْ ؕ— وَمَا كَانَ لَهُمْ مِّنَ اللّٰهِ مِنْ وَّاقٍ ۟
ಅವರು ಭೂಮಿಯಲ್ಲಿ ಸಂಚರಿಸಿ ಅವರಿಗಿಂತ ಮೊದಲಿನವರ ಅಂತ್ಯವು ಹೇಗಿತ್ತೆಂದು ನೋಡುವುದಿಲ್ಲವೇ? ಅವರು ಶಕ್ತಿ-ಸಾಮರ್ಥ್ಯದಲ್ಲಿ ಮತ್ತು ಭೂಮಿಯಲ್ಲಿ ಸ್ಮಾರಕಗಳನ್ನು ಬಿಟ್ಟುಹೋಗುವುದರಲ್ಲಿ ಇವರಿಗಿಂತ ಹೆಚ್ಚು ಶ್ರೇಷ್ಠರಾಗಿದ್ದರು. ಆದರೆ ಅವರು ಮಾಡಿದ ಪಾಪಗಳ ಕಾರಣದಿಂದ ಅಲ್ಲಾಹು ಅವರನ್ನು ಹಿಡಿದು ಶಿಕ್ಷಿಸಿದನು. ಅವರನ್ನು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸುವವರು ಯಾರೂ ಇರಲಿಲ್ಲ.
আৰবী তাফছীৰসমূহ:
ذٰلِكَ بِاَنَّهُمْ كَانَتْ تَّاْتِیْهِمْ رُسُلُهُمْ بِالْبَیِّنٰتِ فَكَفَرُوْا فَاَخَذَهُمُ اللّٰهُ ؕ— اِنَّهٗ قَوِیٌّ شَدِیْدُ الْعِقَابِ ۟
ಅದೇಕೆಂದರೆ ಅವರ ಬಳಿಗೆ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಬರುತ್ತಿದ್ದರು. ಆದರೆ ಅವರು ನಿಷೇಧಿಸಿದರು. ಆದ್ದರಿಂದ ಅಲ್ಲಾಹು ಅವರನ್ನು ಹಿಡಿದು ಶಿಕ್ಷಿಸಿದನು. ನಿಶ್ಚಯವಾಗಿಯೂ ಅವನು ಮಹಾ ಶಕ್ತಿಶಾಲಿ ಮತ್ತು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
আৰবী তাফছীৰসমূহ:
وَلَقَدْ اَرْسَلْنَا مُوْسٰی بِاٰیٰتِنَا وَسُلْطٰنٍ مُّبِیْنٍ ۟ۙ
ನಿಶ್ಚಯವಾಗಿಯೂ ನಾವು ಮೂಸಾರನ್ನು ನಮ್ಮ ವಚನಗಳೊಂದಿಗೆ ಮತ್ತು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಕಳುಹಿಸಿದ್ದೆವು.
আৰবী তাফছীৰসমূহ:
اِلٰی فِرْعَوْنَ وَهَامٰنَ وَقَارُوْنَ فَقَالُوْا سٰحِرٌ كَذَّابٌ ۟
ಫರೋಹ, ಹಾಮಾನ್ ಮತ್ತು ಕಾರೂನನ ಬಳಿಗೆ. ಆದರೆ ಅವರು ಹೇಳಿದರು: “ಮಾಟಗಾರ ಮತ್ತು ಸುಳ್ಳುಗಾರ.”
আৰবী তাফছীৰসমূহ:
فَلَمَّا جَآءَهُمْ بِالْحَقِّ مِنْ عِنْدِنَا قَالُوا اقْتُلُوْۤا اَبْنَآءَ الَّذِیْنَ اٰمَنُوْا مَعَهٗ وَاسْتَحْیُوْا نِسَآءَهُمْ ؕ— وَمَا كَیْدُ الْكٰفِرِیْنَ اِلَّا فِیْ ضَلٰلٍ ۟
ಅವರು (ಮೂಸಾ) ನಮ್ಮ ಕಡೆಯ ಸತ್ಯದೊಂದಿಗೆ ಅವರ ಬಳಿಗೆ ಬಂದಾಗ ಅವರು ಹೇಳಿದರು: “ಅವನ ಜೊತೆಗೆ ವಿಶ್ವಾಸವಿಟ್ಟವರ ಗಂಡುಮಕ್ಕಳನ್ನು ಕೊಲ್ಲಿರಿ ಮತ್ತು ಅವರ ಹೆಣ್ಣುಮಕ್ಕಳನ್ನು ಜೀವಂತ ಬಿಡಿ.” ಸತ್ಯನಿಷೇಧಿಗಳ ತಂತ್ರಗಾರಿಕೆಯು ಪ್ರಮಾದದಲ್ಲೇ ಇದೆ.
আৰবী তাফছীৰসমূহ:
 
অৰ্থানুবাদ ছুৰা: গাফিৰ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ - অনুবাদসমূহৰ সূচীপত্ৰ

মহম্মদ হামজাৰ দ্বাৰা অনুবাদ কৰা হৈছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ