Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ * - অনুবাদসমূহৰ সূচীপত্ৰ

PDF XML CSV Excel API
Please review the Terms and Policies

অৰ্থানুবাদ ছুৰা: আচ-ছাজদাহ   আয়াত:
وَلَوْ تَرٰۤی اِذِ الْمُجْرِمُوْنَ نَاكِسُوْا رُءُوْسِهِمْ عِنْدَ رَبِّهِمْ ؕ— رَبَّنَاۤ اَبْصَرْنَا وَسَمِعْنَا فَارْجِعْنَا نَعْمَلْ صَالِحًا اِنَّا مُوْقِنُوْنَ ۟
ಅಪರಾಧಿಗಳು ಅವರ ಪರಿಪಾಲಕನ (ಅಲ್ಲಾಹನ) ಮುಂದೆ ತಲೆತಗ್ಗಿಸಿ ನಿಂತು, “ನಮ್ಮ ಪರಿಪಾಲಕನೇ! ನಾವು ಕಣ್ಣಾರೆ ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದ್ದರಿಂದ ನಮ್ಮನ್ನು ಭೂಮಿಗೆ ಮರಳಿ ಕಳುಹಿಸು. ನಾವು ಸತ್ಕರ್ಮಗಳನ್ನು ಮಾಡುತ್ತೇವೆ. ಖಂಡಿತವಾಗಿಯೂ ಈಗ ನಮಗೆ ದೃಢನಂಬಿಕೆ ಬಂದಿದೆ” ಎಂದು ಹೇಳುವ ದೃಶ್ಯವನ್ನು ನೀವು ನೋಡಿರುತ್ತಿದ್ದರೆ!
আৰবী তাফছীৰসমূহ:
وَلَوْ شِئْنَا لَاٰتَیْنَا كُلَّ نَفْسٍ هُدٰىهَا وَلٰكِنْ حَقَّ الْقَوْلُ مِنِّیْ لَاَمْلَـَٔنَّ جَهَنَّمَ مِنَ الْجِنَّةِ وَالنَّاسِ اَجْمَعِیْنَ ۟
ನಾವು ಇಚ್ಛಿಸುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ಸನ್ಮಾರ್ಗವನ್ನು ತೋರಿಸುತ್ತಿದ್ದೆವು. ಆದರೆ, ನಾನು ಜಿನ್ನ್ ಮತ್ತು ಮಾನವರಿಂದ ನರಕವನ್ನು ತುಂಬಿಸಿಯೇ ಬಿಡುತ್ತೇನೆ ಎಂಬ ನನ್ನ ವಚನವು ಖಾತ್ರಿಯಾಗಿದೆ.
আৰবী তাফছীৰসমূহ:
فَذُوْقُوْا بِمَا نَسِیْتُمْ لِقَآءَ یَوْمِكُمْ هٰذَا ۚ— اِنَّا نَسِیْنٰكُمْ وَذُوْقُوْا عَذَابَ الْخُلْدِ بِمَا كُنْتُمْ تَعْمَلُوْنَ ۟
ಆದ್ದರಿಂದ ನಿಮ್ಮ ಈ ದಿನದ ಭೇಟಿಯನ್ನು ನೀವು ಮರೆತಿರುವ ಕಾರಣದಿಂದ ಶಿಕ್ಷೆಯ ರುಚಿಯನ್ನು ನೋಡಿರಿ. ಇಂದು ನಾವು ನಿಮ್ಮನ್ನು ಮರೆತಿದ್ದೇವೆ. ನೀವು ಮಾಡುತ್ತಿದ್ದ ದುಷ್ಕರ್ಮಗಳ ಕಾರಣದಿಂದ ಶಾಶ್ವತ ಶಿಕ್ಷೆಯ ರುಚಿಯನ್ನು ನೋಡಿರಿ.
আৰবী তাফছীৰসমূহ:
اِنَّمَا یُؤْمِنُ بِاٰیٰتِنَا الَّذِیْنَ اِذَا ذُكِّرُوْا بِهَا خَرُّوْا سُجَّدًا وَّسَبَّحُوْا بِحَمْدِ رَبِّهِمْ وَهُمْ لَا یَسْتَكْبِرُوْنَ ۟
ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವವರು ಯಾರೆಂದರೆ, ಅವುಗಳ ಮೂಲಕ ಉಪದೇಶ ಮಾಡಲಾದರೆ ಸಾಷ್ಟಾಂಗ ಮಾಡುತ್ತಾ ಬೀಳುವವರು ಮತ್ತು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಕೊಂಡಾಡುವವರು. ಅವರು ಅಹಂಕಾರ ಪಡುವುದಿಲ್ಲ.
আৰবী তাফছীৰসমূহ:
تَتَجَافٰی جُنُوْبُهُمْ عَنِ الْمَضَاجِعِ یَدْعُوْنَ رَبَّهُمْ خَوْفًا وَّطَمَعًا ؗ— وَّمِمَّا رَزَقْنٰهُمْ یُنْفِقُوْنَ ۟
ಅವರ ಪಾರ್ಶ್ವಗಳು ಅವರ ಹಾಸಿಗೆಗಳನ್ನು ಬಿಟ್ಟು ಬೇರ್ಪಡುತ್ತವೆ. ಅವರು ಭಯ ಮತ್ತು ನಿರೀಕ್ಷೆಯಿಂದ ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸುತ್ತಾರೆ. ನಾವು ಅವರಿಗೆ ಒದಗಿಸಿದ ಸಂಪತ್ತಿನಿಂದ ಅವರು ಖರ್ಚು ಮಾಡುತ್ತಾರೆ.
আৰবী তাফছীৰসমূহ:
فَلَا تَعْلَمُ نَفْسٌ مَّاۤ اُخْفِیَ لَهُمْ مِّنْ قُرَّةِ اَعْیُنٍ ۚ— جَزَآءً بِمَا كَانُوْا یَعْمَلُوْنَ ۟
ಕಣ್ಣು ತಂಪಾಗಿಸುವ ಯಾವೆಲ್ಲಾ ವಸ್ತುಗಳನ್ನು ಅವರಿಗೋಸ್ಕರ ಗೋಪ್ಯವಾಗಿಡಲಾಗಿದೆ ಎಂದು ಯಾವುದೇ ವ್ಕಕ್ತಿಯೂ ತಿಳಿದಿಲ್ಲ. ಇದು ಅವರು ಮಾಡಿದ ಸತ್ಕರ್ಮಗಳ ಪ್ರತಿಫಲವಾಗಿದೆ.
আৰবী তাফছীৰসমূহ:
اَفَمَنْ كَانَ مُؤْمِنًا كَمَنْ كَانَ فَاسِقًا ؔؕ— لَا یَسْتَوٗنَ ۟
ಹಾಗಾದರೆ ಸತ್ಯವಿಶ್ವಾಸಿ ದುಷ್ಕರ್ಮಿಗೆ ಸಮಾನನಾಗುವನೇ? ಇಲ್ಲ, ಅವರು ಸಮಾನರಾಗುವುದಿಲ್ಲ.
আৰবী তাফছীৰসমূহ:
اَمَّا الَّذِیْنَ اٰمَنُوْا وَعَمِلُوا الصّٰلِحٰتِ فَلَهُمْ جَنّٰتُ الْمَاْوٰی ؗ— نُزُلًا بِمَا كَانُوْا یَعْمَلُوْنَ ۟
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಶಾಶ್ವತ ಸ್ವರ್ಗೋದ್ಯಾನಗಳಿವೆ. ಅವರು ಮಾಡಿದ ಸತ್ಕರ್ಮಗಳ ಫಲವಾಗಿ ಅವರಿಗೆ ಅಲ್ಲಿ ಆತಿಥ್ಯವಿದೆ.
আৰবী তাফছীৰসমূহ:
وَاَمَّا الَّذِیْنَ فَسَقُوْا فَمَاْوٰىهُمُ النَّارُ ؕ— كُلَّمَاۤ اَرَادُوْۤا اَنْ یَّخْرُجُوْا مِنْهَاۤ اُعِیْدُوْا فِیْهَا وَقِیْلَ لَهُمْ ذُوْقُوْا عَذَابَ النَّارِ الَّذِیْ كُنْتُمْ بِهٖ تُكَذِّبُوْنَ ۟
ದುಷ್ಕರ್ಮವೆಸಗಿದವರು ಯಾರೋ ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ಅವರು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗಲೆಲ್ಲಾ ಅವರನ್ನು ಮತ್ತೆ ಅದಕ್ಕೇ ತಳ್ಳಲಾಗುವುದು. (ಅವರೊಡನೆ ಹೇಳಲಾಗುವುದು:) “ನೀವು ನಿಷೇಧಿಸುತ್ತಿದ್ದ ಆ ನರಕ ಶಿಕ್ಷೆಯ ರುಚಿಯನ್ನು ನೋಡಿರಿ.”
আৰবী তাফছীৰসমূহ:
 
অৰ্থানুবাদ ছুৰা: আচ-ছাজদাহ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ - অনুবাদসমূহৰ সূচীপত্ৰ

মহম্মদ হামজাৰ দ্বাৰা অনুবাদ কৰা হৈছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ