Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আল-আনআম   আয়াত:
وَلَوْ اَنَّنَا نَزَّلْنَاۤ اِلَیْهِمُ الْمَلٰٓىِٕكَةَ وَكَلَّمَهُمُ الْمَوْتٰی وَحَشَرْنَا عَلَیْهِمْ كُلَّ شَیْءٍ قُبُلًا مَّا كَانُوْا لِیُؤْمِنُوْۤا اِلَّاۤ اَنْ یَّشَآءَ اللّٰهُ وَلٰكِنَّ اَكْثَرَهُمْ یَجْهَلُوْنَ ۟
ನಾವು ಅವರೆಡೆಗೆ ದೂತರನ್ನು ಕಳುಹಿಸಿದರೂ, ಮೃತಪಟ್ಟವರು ಅವರೊಂದಿಗೆ ಮಾತನಾಡಿದರೂ ಸರ್ವ ವಸ್ತುಗಳನ್ನೂ ನಾವು ಅವರ ಕಣ್ಮುಂದೆ ತಂದು ಒಟ್ಟುಗೂಡಿಸಿದರೂ ಅವರು ವಿಶ್ವಾಸವಿಡಲಾರರು. ಆದರೆ ಅಲ್ಲಾಹನು ಇಚ್ಛಿಸಿದರೆ ಬೇರೆ ವಿಚಾರ. ಆದರೆ ಅವರ ಪೈಕಿ ಹೆಚ್ಚಿನವರು ಅಜ್ಞಾನಿಗಳಾಗಿದ್ದಾರೆ.
আৰবী তাফছীৰসমূহ:
وَكَذٰلِكَ جَعَلْنَا لِكُلِّ نَبِیٍّ عَدُوًّا شَیٰطِیْنَ الْاِنْسِ وَالْجِنِّ یُوْحِیْ بَعْضُهُمْ اِلٰی بَعْضٍ زُخْرُفَ الْقَوْلِ غُرُوْرًا ؕ— وَلَوْ شَآءَ رَبُّكَ مَا فَعَلُوْهُ فَذَرْهُمْ وَمَا یَفْتَرُوْنَ ۟
ಮತ್ತು ಇದೇ ರೀತಿ ನಾವು ಪ್ರತಿಯೊಬ್ಬ ಪೈಗಂಬರರಿಗೆ ಮನುಷ್ಯರ ಮತ್ತು ಯಕ್ಷಗಳ ಪೈಕಿ ಶೈತಾನರನ್ನು ಶತ್ರುಗಳನ್ನಾಗಿ ಮಾಡಿದ್ದೇವೆ. ಅವರನ್ನು ವಂಚಿಸಲೆAದು ಅವರಲ್ಲಿ ಕೆಲವರು ಇನ್ನು ಕೆಲವರಿಗೆ ಆಕರ್ಷಕ ಮಾತುಗಳ ದುರ್ಬೋಧನೆಯನ್ನು ಮಾಡುತ್ತಿದ್ದಾರೆ. ಮತ್ತು ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರು ಅಂತಹ ಕೃತ್ಯವನ್ನು ಮಾಡುತ್ತಿರಲಿಲ್ಲ. ಆದ್ದರಿಂದ ಅವರನ್ನೂ, ಅವರು ಹೆಣೆಯುತ್ತಿರುವುದನ್ನೂ ನೀವು ಬಿಟ್ಟು ಬಿಡಿರಿ.
আৰবী তাফছীৰসমূহ:
وَلِتَصْغٰۤی اِلَیْهِ اَفْـِٕدَةُ الَّذِیْنَ لَا یُؤْمِنُوْنَ بِالْاٰخِرَةِ وَلِیَرْضَوْهُ وَلِیَقْتَرِفُوْا مَا هُمْ مُّقْتَرِفُوْنَ ۟
ಪರಲೋಕದ ಮೇಲೆ ವಿಶ್ವಾಸವಿಡದವರ ಹೃದಯಗಳು ಅದರೆಡೆಗೆ ವಾಲಿಬಿಡಲೆಂದೂ, ಮತ್ತು ಅದರಿಂದ ತೃಪ್ತರಾಗಲೆಂದೂ, ಮತ್ತು ಅವರು ಮಾಡುತ್ತಿದ್ದ ಕಾರ್ಯಗಳನ್ನೆಲ್ಲ ಮಾಡಿಕೊಂಡಿರಲೆAದಾಗಿದೆ.
আৰবী তাফছীৰসমূহ:
اَفَغَیْرَ اللّٰهِ اَبْتَغِیْ حَكَمًا وَّهُوَ الَّذِیْۤ اَنْزَلَ اِلَیْكُمُ الْكِتٰبَ مُفَصَّلًا ؕ— وَالَّذِیْنَ اٰتَیْنٰهُمُ الْكِتٰبَ یَعْلَمُوْنَ اَنَّهٗ مُنَزَّلٌ مِّنْ رَّبِّكَ بِالْحَقِّ فَلَا تَكُوْنَنَّ مِنَ الْمُمْتَرِیْنَ ۟
ಏನು ನಾನು ಅಲ್ಲಾಹನ ಹೊರತು ಇತರರನ್ನು ತೀರ್ಪುಗಾರರನ್ನಾಗಿ ಅರಸಬೇಕೆ? ವಸ್ತುತಃ ಅವನು ಒಂದು ವಿವರ ಪೂರ್ಣ ಗ್ರಂಥವನ್ನು ನಿಮ್ಮೆಡೆಗೆ ಅವತೀರ್ಣಗೊಳಿಸಿದ್ದಾನೆ. ಮತ್ತು ಗ್ರಂಥ ನೀಡಲಾದವರು ಇದು ನಿಮ್ಮ ಪ್ರಭುವಿನ ಕಡೆಯಿಂದ ಸತ್ಯದೊಂದಿಗೆ ಅವತೀರ್ಣಗೊಳಿಸಲಾಗಿದೆ ಎಂದು ಅರಿತು ಕೊಂಡಿದ್ದಾರೆ. ಆದ್ದರಿಂದ ನೀವು ಸಂದೇಹಪಡುವವರಲ್ಲಿ ಸೇರಬೇಡಿರಿ.
আৰবী তাফছীৰসমূহ:
وَتَمَّتْ كَلِمَتُ رَبِّكَ صِدْقًا وَّعَدْلًا ؕ— لَا مُبَدِّلَ لِكَلِمٰتِهٖ ۚ— وَهُوَ السَّمِیْعُ الْعَلِیْمُ ۟
ನಿಮ್ಮ ಪ್ರಭುವಿನ ವಚನ ಸತ್ಯ ಹಾಗೂ ನ್ಯಾಯದ ಮಟ್ಟಿಗೆ ಪರಿಪೂರ್ಣವಾದುದಾಗಿದೆ. ಅವನ ವಚನಗಳನ್ನು ಬದಲಾಯಿಸುವವನಾರೂ ಇಲ್ಲ. ಅವನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನೂ ಆಗಿದ್ದಾನೆ.
আৰবী তাফছীৰসমূহ:
وَاِنْ تُطِعْ اَكْثَرَ مَنْ فِی الْاَرْضِ یُضِلُّوْكَ عَنْ سَبِیْلِ اللّٰهِ ؕ— اِنْ یَّتَّبِعُوْنَ اِلَّا الظَّنَّ وَاِنْ هُمْ اِلَّا یَخْرُصُوْنَ ۟
ಮತ್ತು ಭೂಮಿಯಲ್ಲಿರುವ ಹೆಚ್ಚಿನವರನ್ನು ನೀವು ಅನುಸರಿಸುವುದಾದರೆ ಅವರು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ಭ್ರಷ್ಟಗೊಳಿಸಿಬಿಡುವರು. ಅವರು ಕೇವಲ ಊಹಾಪೋಹಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಅವರು ಅನುಮಾನದ ಮಾತುಗಳನ್ನಾಡುತ್ತಾರೆ.
আৰবী তাফছীৰসমূহ:
اِنَّ رَبَّكَ هُوَ اَعْلَمُ مَنْ یَّضِلُّ عَنْ سَبِیْلِهٖ ۚ— وَهُوَ اَعْلَمُ بِالْمُهْتَدِیْنَ ۟
ಖಂಡಿತವಾಗಿಯು ನಿಮ್ಮ ಪ್ರಭುವು ತನ್ನ ಮಾರ್ಗದಿಂದ ವ್ಯತಿಚಲಿಸುವವನು ಯಾರೆಂದು ಚೆನ್ನಾಗಿ ಅರಿತಿರುವನು ಮತ್ತು ಸನ್ಮಾರ್ಗದಲ್ಲಿ ಚಲಿಸುವವರನ್ನು ಅವನು ಚೆನ್ನಾಗಿ ಅರಿತಿದ್ದಾನೆ.
আৰবী তাফছীৰসমূহ:
فَكُلُوْا مِمَّا ذُكِرَ اسْمُ اللّٰهِ عَلَیْهِ اِنْ كُنْتُمْ بِاٰیٰتِهٖ مُؤْمِنِیْنَ ۟
ನೀವು ಅವನ ನಿಯಮಗಳಲ್ಲಿ ವಿಶ್ವಾಸವಿಡುವವರಾಗಿದ್ದರೆ, ಅಲ್ಲಾಹನ ನಾಮವನ್ನು ಉಚ್ಛರಿಸಿದ ಪ್ರಾಣಿಯನ್ನು ತಿನ್ನಿರಿ.
আৰবী তাফছীৰসমূহ:
 
অৰ্থানুবাদ ছুৰা: আল-আনআম
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ