Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আল-আহযাব   আয়াত:
وَمَا كَانَ لِمُؤْمِنٍ وَّلَا مُؤْمِنَةٍ اِذَا قَضَی اللّٰهُ وَرَسُوْلُهٗۤ اَمْرًا اَنْ یَّكُوْنَ لَهُمُ الْخِیَرَةُ مِنْ اَمْرِهِمْ ؕ— وَمَنْ یَّعْصِ اللّٰهَ وَرَسُوْلَهٗ فَقَدْ ضَلَّ ضَلٰلًا مُّبِیْنًا ۟
ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಒಂದು ವಿಷಯವನ್ನು ತೀರ್ಮಾನಿಸಿದ ಬಳಿಕ ಸತ್ಯವಿಶ್ವಾಸಿ ಪುರುಷನಿಗಾಗಲೀ ಮತ್ತು ಸತ್ಯವಿಶ್ವಾಸಿನಿ ಸ್ತಿçÃಗಾಗಲೀ ತಮ್ಮ ಆ ವಿಷಯದಲ್ಲಿ ಸ್ವತಃ ತೀರ್ಮಾನ ಕೈಗೊಳ್ಳುವ ಹಕ್ಕು ಉಳಿಯಲಾರದು. ಯಾರು ಅಲ್ಲಾಹನ ಹಾಗೂ ಅವನ ಸಂದೇಶವಾಹಕರ ಆಜ್ಞೋಲಂಘನೆ ಮಾಡುತ್ತಾನೋ ಅವನು ಸುಸ್ಪಷ್ಟ ಮಾರ್ಗಭ್ರಷ್ಟತೆಯಲ್ಲಿ ಇರುವನು.
আৰবী তাফছীৰসমূহ:
وَاِذْ تَقُوْلُ لِلَّذِیْۤ اَنْعَمَ اللّٰهُ عَلَیْهِ وَاَنْعَمْتَ عَلَیْهِ اَمْسِكْ عَلَیْكَ زَوْجَكَ وَاتَّقِ اللّٰهَ وَتُخْفِیْ فِیْ نَفْسِكَ مَا اللّٰهُ مُبْدِیْهِ وَتَخْشَی النَّاسَ ۚ— وَاللّٰهُ اَحَقُّ اَنْ تَخْشٰىهُ ؕ— فَلَمَّا قَضٰی زَیْدٌ مِّنْهَا وَطَرًا زَوَّجْنٰكَهَا لِكَیْ لَا یَكُوْنَ عَلَی الْمُؤْمِنِیْنَ حَرَجٌ فِیْۤ اَزْوَاجِ اَدْعِیَآىِٕهِمْ اِذَا قَضَوْا مِنْهُنَّ وَطَرًا ؕ— وَكَانَ اَمْرُ اللّٰهِ مَفْعُوْلًا ۟
ಓ ಪೈಗಂಬರರೇ, ಅಲ್ಲಾಹನು ಯಾರಿಗೆ ಅನುಗ್ರಹ ನೀಡಿರುವನೋ ಹಾಗೂ ನೀವು ಅವನ ಮೇಲೆ ಅನುಗ್ರಹ ಮಾಡಿರುವ ಒಬ್ಬ ವ್ಯಕ್ತಿಯೊಂದಿಗೆ (ಝೈದ್) ನೀನು ನಿನ್ನ ಪತ್ನಿಯನ್ನು ಜೊತೆಯಲ್ಲಿ ತಡೆದಿರಿಸು ಮತ್ತು ಅಲ್ಲಾಹನನ್ನು ಭಯಪಡು ಎಂದು ಹೇಳುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ, ಆಗ ಅಲ್ಲಾಹನು ಬಹಿರಂಗಗೊಳಿಸಲಿಚ್ಛಿಸಿದ್ದನ್ನು ನೀವು ಮನಸ್ಸಿನಲ್ಲಿ ಬಚ್ಚಿಟ್ಟಿದ್ದೀರಿ ಮತ್ತು ಜನರನ್ನು ಭಯಪಡುತ್ತಿದೀರಿ. ವಸ್ತುತಃ ಭಯಪಡುವುದಕ್ಕೆ ಹೆಚ್ಚು ಅರ್ಹನು ಅಲ್ಲಾಹನಾಗಿರುವನು. ಹಾಗೆಯೇ ಝೈದ್ ಆಕೆಯೊಂದಿಗೆ ತನ್ನ ಅಪೇಕ್ಷೆಯನ್ನು (ವಿಚ್ಛೇದನ) ಪೂರೈಸಿದಾಗ ನಾವು ಆಕೆಯನ್ನು ನಿಮಗೆ ವಿವಾಹ ಮಾಡಿಸಿಕೊಟ್ಟೆವು. ಇದು ತಮ್ಮ ದತ್ತು ಪುತ್ರರು ತಮ್ಮ ಪತ್ನಿಯರಿಂದ ತಮ್ಮ ಅಪೇಕ್ಷೆಯನ್ನು (ವಿಚ್ಛೇದನೆಯನ್ನು) ಪೂರ್ತಿಕರಿಸಿದ ಬಳಿಕ ಸತ್ಯವಿಶ್ವಾಸಿಗಳಿಗೆ ಅವರನ್ನು ವಿವಾಹವಾಗುವ ವಿಚಾರದಲ್ಲಿ ಯಾವುದೇ ಅಡಚಣೆ ಇರಬಾರದೆಂದಾಗಿರುತ್ತದೆ. ಅಲ್ಲಾಹನ ಆದೇಶ ಜಾರಿಗೆ ಬಂದೇ ತೀರುವುದು.
আৰবী তাফছীৰসমূহ:
مَا كَانَ عَلَی النَّبِیِّ مِنْ حَرَجٍ فِیْمَا فَرَضَ اللّٰهُ لَهٗ ؕ— سُنَّةَ اللّٰهِ فِی الَّذِیْنَ خَلَوْا مِنْ قَبْلُ ؕ— وَكَانَ اَمْرُ اللّٰهِ قَدَرًا مَّقْدُوْرَا ۟ؗۙ
ತನಗೆ ಅಲ್ಲಾಹನು ನಿಶ್ಚಯಗೊಳಿಸಿರುವುದನ್ನು ಮಾಡುವುದರಲ್ಲಿ ಪೈಗಂಬರ್‌ರವರಿಗೆ ಯಾವುದೇ ದೋಷವಿರುವುದಿಲ್ಲ. ಇಂತಹ ಕ್ರಮವು ಮೊದಲು ಗತಿಸಿದ ಪೈಗಂಬರರ ಮೇಲೂ ಜಾರಿಯಲ್ಲಿತ್ತು ಮತ್ತು ಅಲ್ಲಾಹನ ಆಜ್ಞೆಯು ನಿರ್ಧರಿಸಲಾದ ಖಚಿತ ತೀರ್ಪಾಗಿರುತ್ತದೆ.
আৰবী তাফছীৰসমূহ:
١لَّذِیْنَ یُبَلِّغُوْنَ رِسٰلٰتِ اللّٰهِ وَیَخْشَوْنَهٗ وَلَا یَخْشَوْنَ اَحَدًا اِلَّا اللّٰهَ ؕ— وَكَفٰی بِاللّٰهِ حَسِیْبًا ۟
ಪೈಗಂಬರರೆAದರೆ ಅಲ್ಲಾಹನ ಸಂದೇಶಗಳನ್ನು ತಲುಪಿಸುವವರು ಮತ್ತು ಅವನನ್ನು ಭಯ ಪಡುವವರು ಹಾಗೂ ಅವನ ಹೊರತು ಇನ್ನಾರನ್ನೂ ಭಯಪಡದವರಾಗಿದ್ದರು. ಮತ್ತು ಲೆಕ್ಕ ವಿಚಾರಣೆಗಾಗಿ ಅಲ್ಲಾಹನೇ ಸಾಕು.
আৰবী তাফছীৰসমূহ:
مَا كَانَ مُحَمَّدٌ اَبَاۤ اَحَدٍ مِّنْ رِّجَالِكُمْ وَلٰكِنْ رَّسُوْلَ اللّٰهِ وَخَاتَمَ النَّبِیّٖنَ ؕ— وَكَانَ اللّٰهُ بِكُلِّ شَیْءٍ عَلِیْمًا ۟۠
ಮುಹಮ್ಮದ್ ನಿಮ್ಮ ಪುರುಷರ ಪೈಕಿ ಯಾರ ತಂದೆಯೂ ಅಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರೂ ಪೈಗಂಬರರ ಅಂತಿಮ ಘಟ್ಟವಾಗಿದ್ದಾರೆ.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوا اذْكُرُوا اللّٰهَ ذِكْرًا كَثِیْرًا ۟ۙ
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಅತ್ಯಧಿಕ ಸ್ಮರಿಸಿರಿ.
আৰবী তাফছীৰসমূহ:
وَّسَبِّحُوْهُ بُكْرَةً وَّاَصِیْلًا ۟
ಮತ್ತು ಸಂಜೆ ಮುಂಜಾನೆಯಲ್ಲಿ ಅವನ ಪಾವಿತ್ರö್ಯವನ್ನು ಸ್ತುತಿಸಿರಿ.
আৰবী তাফছীৰসমূহ:
هُوَ الَّذِیْ یُصَلِّیْ عَلَیْكُمْ وَمَلٰٓىِٕكَتُهٗ لِیُخْرِجَكُمْ مِّنَ الظُّلُمٰتِ اِلَی النُّوْرِ ؕ— وَكَانَ بِالْمُؤْمِنِیْنَ رَحِیْمًا ۟
ಅವನು ನಿಮ್ಮ ಮೇಲೆ ಕಾರುಣ್ಯವನ್ನು ಕಳುಹಿಸುವನು ಮತ್ತು ಅವನ ದೂತರು ನಿಮಗಾಗಿ ಕಾರುಣ್ಯದ ಪ್ರಾರ್ಥನೆಯನ್ನು ಮಾಡುತ್ತಾರೆ. ಇದು ಅವನು ನಿಮ್ಮನ್ನು ಅಂಧಕಾರಗಳಿAದ ಪ್ರಕಾಶದೆಡೆಗೆ ಹೊರತರಲೆಂದಾಗಿದೆ ಮತ್ತು ಅವನು ಸತ್ಯವಿಶ್ವಾಸಿಗಳ ಮೇಲೆ ಅತ್ಯಂತ ಕರುಣಾಮಯಿಯಾಗಿದ್ದಾನೆ.
আৰবী তাফছীৰসমূহ:
 
অৰ্থানুবাদ ছুৰা: আল-আহযাব
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ