Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: ጣሃ   አንቀጽ:
كَذٰلِكَ نَقُصُّ عَلَیْكَ مِنْ اَنْۢبَآءِ مَا قَدْ سَبَقَ ۚ— وَقَدْ اٰتَیْنٰكَ مِنْ لَّدُنَّا ذِكْرًا ۟ۖۚ
(ಓ ಪೈಗಂಬರರೇ) ಇದೇ ಪ್ರಕಾರ ನಾವು ನಿಮಗೆ ಕೆಲವು ಗತ ವೃತ್ತಾಂತಗಳನ್ನು ತಿಳಿಸಿಕೊಡುತ್ತೇವೆ ಮತ್ತು ನಿಶ್ಚಯವಾಗಿಯೂ ನಾವು ನಿಮಗೆ ನಮ್ಮ ವತಿಯ ಉದ್ಬೋಧೆ (ಕುರ್‌ಆನ್)ಯನ್ನು ದಯಪಾಲಿಸಿರುತ್ತೇವೆ.
የአረብኛ ቁርኣን ማብራሪያ:
مَنْ اَعْرَضَ عَنْهُ فَاِنَّهٗ یَحْمِلُ یَوْمَ الْقِیٰمَةِ وِزْرًا ۟ۙ
ಯಾರು ಅದರಿಂದ ವಿಮುಖನಾಗುತ್ತಾನೋ ಅವನು ನಿಶ್ಚಯವಾಗಿಯೂ ಪುನರುತ್ಥಾನದ ದಿನದಂದು ಪಾಪದ ಭಾರವನ್ನು ಹೊರುವನು.
የአረብኛ ቁርኣን ማብራሪያ:
خٰلِدِیْنَ فِیْهِ ؕ— وَسَآءَ لَهُمْ یَوْمَ الْقِیٰمَةِ حِمْلًا ۟ۙ
ಅವರು ಅದರಲ್ಲಿ ಶಾಶ್ವತವಾಗಿರುವರು ಮತ್ತು ಅವರಿಗೆ ಪುನರುತ್ಥಾನದ ದಿನದಂದು ನಿಕೃಷ್ಟ ಭಾರವಿರುವುದು.
የአረብኛ ቁርኣን ማብራሪያ:
یَّوْمَ یُنْفَخُ فِی الصُّوْرِ وَنَحْشُرُ الْمُجْرِمِیْنَ یَوْمَىِٕذٍ زُرْقًا ۟
ಕಹಳೆ ಮೊಳಗುವ ದಿನ ನಾವು ಅಪರಾಧಿಗಳನ್ನು (ಭಯಭೀತಿಯ ನಿಮಿತ್ತ) ನೀಲಿ ನೇತ್ರಗಳೊಂದಿಗೆ ಒಟ್ಟುಗೂಡಿಸುವೆವು.
የአረብኛ ቁርኣን ማብራሪያ:
یَّتَخَافَتُوْنَ بَیْنَهُمْ اِنْ لَّبِثْتُمْ اِلَّا عَشْرًا ۟
ಅವರು ಪರಸ್ಪರ ಪಿಸುಮಾತಿನಲ್ಲಿ: ನೀವು (ಭೂಲೋಕದಲ್ಲಿ) ಕೇವಲ ಹತ್ತು ದಿನಗಳಷ್ಟೇ ತಂಗಿರುವಿರಿ, ಎಂದು ಹೇಳುವರು.
የአረብኛ ቁርኣን ማብራሪያ:
نَحْنُ اَعْلَمُ بِمَا یَقُوْلُوْنَ اِذْ یَقُوْلُ اَمْثَلُهُمْ طَرِیْقَةً اِنْ لَّبِثْتُمْ اِلَّا یَوْمًا ۟۠
ಅವರು ಹೇಳುತ್ತಿರುವುದರ ವಾಸ್ತವಿಕತೆಯನ್ನು ನಾವು ಚೆನ್ನಾಗಿ ಬಲ್ಲೆವು. ಅವರ ಪೈಕಿ ಅತ್ಯುತ್ತಮ ಸಲಹೆಗಾರ: “ನೀವು ಕೇವಲ ಒಂದು ದಿನ ಮಾತ್ರ ತಂಗಿದ್ದೀರಿ”, ಎನ್ನುವರು.
የአረብኛ ቁርኣን ማብራሪያ:
وَیَسْـَٔلُوْنَكَ عَنِ الْجِبَالِ فَقُلْ یَنْسِفُهَا رَبِّیْ نَسْفًا ۟ۙ
. ಅವರು ನಿಮ್ಮಿಂದ ಭವ್ಯ ಪರ್ವತಗಳ ಬಗ್ಗೆ ವಿಚಾರಿಸುತ್ತಾರೆ. ಹೇಳಿರಿ: ನನ್ನ ಪ್ರಭುವು ಅವುಗಳನ್ನು ಧೂಳನ್ನಾಗಿ ಮಾಡಿ ಹಾರಿಸಿ ಬಿಡುವನು.
የአረብኛ ቁርኣን ማብራሪያ:
فَیَذَرُهَا قَاعًا صَفْصَفًا ۟ۙ
ಆಮೇಲೆ ಭೂಮಿಯನ್ನು ಸಮತಟ್ಟಾದ ಮೈದಾನವನ್ನಾಗಿ ಮಾಡಿ ಬಿಡುವನು.
የአረብኛ ቁርኣን ማብራሪያ:
لَّا تَرٰی فِیْهَا عِوَجًا وَّلَاۤ اَمْتًا ۟ؕ
ನೀವು ಅದರಲ್ಲಿ ಯಾವುದೇ ಏರು ಇಳಿತವನ್ನು ಕಾಣಲಾರಿರಿ.
የአረብኛ ቁርኣን ማብራሪያ:
یَوْمَىِٕذٍ یَّتَّبِعُوْنَ الدَّاعِیَ لَا عِوَجَ لَهٗ ۚ— وَخَشَعَتِ الْاَصْوَاتُ لِلرَّحْمٰنِ فَلَا تَسْمَعُ اِلَّا هَمْسًا ۟
ಆ ದಿನ ಜನರು ಕರೆ ನೀಡುವಾತನನ್ನು ಯಾವುದೇ ವಕ್ರತೆಯಿಲ್ಲದೆ ಹಿಂಬಾಲಿಸುವರು ಮತ್ತು ಶಬ್ದಗಳು ಪರಮ ದಯಾಮಯನಾದ ಅಲ್ಲಾಹನ ಮುಂದೆ ಅಡಗಿ ಬಿಡುವುವು.ನೀವು ಕೇವಲ ಮೆಲು ಸಪ್ಪಳದ ಹೊರತು ಇನ್ನೇನನ್ನೂ ಕೇಳಲಾರಿರಿ.
የአረብኛ ቁርኣን ማብራሪያ:
یَوْمَىِٕذٍ لَّا تَنْفَعُ الشَّفَاعَةُ اِلَّا مَنْ اَذِنَ لَهُ الرَّحْمٰنُ وَرَضِیَ لَهٗ قَوْلًا ۟
ಆ ದಿನ ಪರಮ ದಯಾಮಯನಾದ ಅಲ್ಲಾಹನು ಯಾರಿಗೆ ಅನುಮತಿ ನೀಡುವನೋ, ಮತ್ತು ಯಾರ ಮಾತು ಅವನಿಗೆ ತೃಪ್ತಿಕರವಾಗಿರುವುದೋ ಅವರ ಹೊರತು ಶಿಫಾರಸ್ಸು ಪ್ರಯೋಜನಕ್ಕೆ ಬಾರದು.
የአረብኛ ቁርኣን ማብራሪያ:
یَعْلَمُ مَا بَیْنَ اَیْدِیْهِمْ وَمَا خَلْفَهُمْ وَلَا یُحِیْطُوْنَ بِهٖ عِلْمًا ۟
ಜನರ ಮುಂದಿರುವ ಮತ್ತು ಹಿಂದಿರುವ ಎಲ್ಲವನ್ನೂ ಅವನು ಅರಿಯುತ್ತಾನೆ. ಆದರೆ ಇತರರಿಗೆ ಅದರ ಸಂಪೂರ್ಣ ಜ್ಞಾನವಿಲ್ಲ.
የአረብኛ ቁርኣን ማብራሪያ:
وَعَنَتِ الْوُجُوْهُ لِلْحَیِّ الْقَیُّوْمِ ؕ— وَقَدْ خَابَ مَنْ حَمَلَ ظُلْمًا ۟
ಮುಖಗಳೆಲ್ಲವೂ ಚಿರಂತನನ್ನೂ, ಸರ್ವ ನಿಂತ್ರಕನೂ ಆದ ಅಲ್ಲಾಹನ ಮುಂದೆ ಶರಣಾಗಿರುವುವು.ಯಾರು ಅಕ್ರಮವನ್ನು ಹೊತ್ತು ಕೊಂಡಿರುತ್ತಾನೋ ಅವನು ನಿಜವಾಗಿಯೂ ಪತನ ಹೊಂದಿದನು.
የአረብኛ ቁርኣን ማብራሪያ:
وَمَنْ یَّعْمَلْ مِنَ الصّٰلِحٰتِ وَهُوَ مُؤْمِنٌ فَلَا یَخٰفُ ظُلْمًا وَّلَا هَضْمًا ۟
ಮತ್ತು ಯಾರು ಸತ್ಯವಿಶ್ವಾಸಿಯಾಗಿ ಸತ್ಕರ್ಮಗಳನ್ನು ಮಾಡುತ್ತಾನೋ ಅವನಿಗೆ ಯಾವುದೇ ಅನ್ಯಾಯ, ಮತ್ತು ಹಕ್ಕುಚ್ಯುತಿಯ ಭಯವಿಲ್ಲ.
የአረብኛ ቁርኣን ማብራሪያ:
وَكَذٰلِكَ اَنْزَلْنٰهُ قُرْاٰنًا عَرَبِیًّا وَّصَرَّفْنَا فِیْهِ مِنَ الْوَعِیْدِ لَعَلَّهُمْ یَتَّقُوْنَ اَوْ یُحْدِثُ لَهُمْ ذِكْرًا ۟
ಇದೇ ರೀತಿ ನಾವು ಇದನ್ನು (ಅಂತಿಮ ದಿವ್ಯವಾಣಿಯನ್ನು) ನಿಮ್ಮ ಮೇಲೆ ಅರಬಿ ಭಾಷೆಯಲ್ಲಿ ಕುರ್‌ಆನನ್ನಾಗಿ ಅವತೀರ್ಣಗೊಳಿಸಿರುತ್ತೇವೆ. ಹಾಗೂ ಇದರಲ್ಲಿ ವಿಭಿನ್ನ ಶೈಲಿಯ ಮುನ್ನೆಚ್ಚರಿಕೆಯನ್ನು ವಿವರಿಸಿ ಕೊಟ್ಟಿರುತ್ತೇವೆ. ಇದೇಕೆಂದರೆ ಜನರು ಭಯಭಕ್ತಿಯುಳ್ಳವರಾಗಲೆಂದು, ಅಥವಾ ಅವರ ಮನದಲ್ಲಿ ಉಪದೇಶ ಮಾಡಲೆಂದಾಗಿದೆ.
የአረብኛ ቁርኣን ማብራሪያ:
 
የይዘት ትርጉም ምዕራፍ: ጣሃ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት