Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: ጣሃ   አንቀጽ:
قَالُوْا یٰمُوْسٰۤی اِمَّاۤ اَنْ تُلْقِیَ وَاِمَّاۤ اَنْ نَّكُوْنَ اَوَّلَ مَنْ اَلْقٰی ۟
ಜಾದುಗಾರರು ಹೇಳಿದರು: ಓ ಮೂಸಾ, ಒಂದೋ ನೀವು ಮೊದಲು ಮೊಡಿ ಹಾಕಿರಿ? ಇಲ್ಲವೆ ನಾವು ಮೊದಲು ಹಾಕುವೆವು?
የአረብኛ ቁርኣን ማብራሪያ:
قَالَ بَلْ اَلْقُوْا ۚ— فَاِذَا حِبَالُهُمْ وَعِصِیُّهُمْ یُخَیَّلُ اِلَیْهِ مِنْ سِحْرِهِمْ اَنَّهَا تَسْعٰی ۟
ಅವರು ಉತ್ತರಿಸಿದರು: ಇಲ್ಲ, ನೀವೇ ಮೊದಲು ಹಾಕಿಬಿಡಿರಿ. ಕೂಡಲೇ ಮೂಸಾರವರಿಗೆ ಅವರ ಹಗ್ಗಗಳು ಹಾಗೂ ಲಾಠಿಗಳು ಅವರ ಜಾದೂವಿನ ಬಲದಿಂದ ಓಡಾಡುತ್ತಿರುವಂತೆ ಭಾಸವಾಯಿತು.
የአረብኛ ቁርኣን ማብራሪያ:
فَاَوْجَسَ فِیْ نَفْسِهٖ خِیْفَةً مُّوْسٰی ۟
ಆಗ ಮೂಸಾ ತಮ್ಮ ಮನದೊಳಗೆ ಹೆದರಿದರು.
የአረብኛ ቁርኣን ማብራሪያ:
قُلْنَا لَا تَخَفْ اِنَّكَ اَنْتَ الْاَعْلٰی ۟
ಆಗ ನಾವು (ಅಲ್ಲಾಹ್) ಹೇಳಿದೆವು: ನೀವು ಭಯಪಡಬೇಡಿ. ನಿಶ್ಚಯವಾಗಿಯೂ ನೀವೇ ಮೇಲುಗೈ ಸಾಧಿಸುವಿರಿ.
የአረብኛ ቁርኣን ማብራሪያ:
وَاَلْقِ مَا فِیْ یَمِیْنِكَ تَلْقَفْ مَا صَنَعُوْا ؕ— اِنَّمَا صَنَعُوْا كَیْدُ سٰحِرٍ ؕ— وَلَا یُفْلِحُ السَّاحِرُ حَیْثُ اَتٰی ۟
ನೀವು ನಿಮ್ಮ ಬಲಗೈಯಲ್ಲಿರುವುದನ್ನು ಕೆಳಗೆ ಹಾಕಿಬಿಡಿ. ಅದು ಅವರು ಮಾಡಿರುವುದೆಲ್ಲವನ್ನು ನುಂಗಿಬಿಡುವುದು. ಅವರು ಉಂಟುಮಾಡಿರುವುದೇನಿದ್ದರೂ ಕೇವಲ ಜಾದೂಗಾರರ ಕೈಚಳಕ ಮಾತ್ರ ಮತ್ತು ಜಾದೂಗಾರನು ಎಲ್ಲಿಂದ ಬಂದಿದ್ದರೂ ಯಶಸ್ವಿಯಾಗಲಾರ.
የአረብኛ ቁርኣን ማብራሪያ:
فَاُلْقِیَ السَّحَرَةُ سُجَّدًا قَالُوْۤا اٰمَنَّا بِرَبِّ هٰرُوْنَ وَمُوْسٰی ۟
ಕೊನೆಗಂತೂ ಸಕಲ ಜಾದೂಗಾರರು ನೆಲಕ್ಕೆ ಬಿದ್ದು ಸಾಷ್ಟಾಂಗವೆರಗಿದರು ಮತ್ತು ಸಾರಿಬಿಟ್ಟರು: ನಾವು ಹಾರೂನ್ ಮತ್ತು ಮೂಸಾರವರ ಪ್ರಭುವಿನಲ್ಲಿ ವಿಶ್ವಾಸವಿರಿಸಿದೆವು.
የአረብኛ ቁርኣን ማብራሪያ:
قَالَ اٰمَنْتُمْ لَهٗ قَبْلَ اَنْ اٰذَنَ لَكُمْ ؕ— اِنَّهٗ لَكَبِیْرُكُمُ الَّذِیْ عَلَّمَكُمُ السِّحْرَ ۚ— فَلَاُقَطِّعَنَّ اَیْدِیَكُمْ وَاَرْجُلَكُمْ مِّنْ خِلَافٍ وَّلَاُوصَلِّبَنَّكُمْ فِیْ جُذُوْعِ النَّخْلِ ؗ— وَلَتَعْلَمُنَّ اَیُّنَاۤ اَشَدُّ عَذَابًا وَّاَبْقٰی ۟
ಫಿರ್‌ಔನ್ ಹೇಳಿದನು: ನಾನು ನಿಮಗೆ ಅನುಮತಿ ನೀಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿರಿಸಿದ್ದೀರಾ? ನಿಜವಾಗಿಯೂ ಅವನೇ ನಿಮ್ಮೆಲ್ಲರಿಗೆ ಜಾದೂವನ್ನು ಕಲಿಸಿದ ನಿಮ್ಮ ಹಿರಿಯವನಾಗಿರಬೇಕು. (ಕೇಳಿರಿ) ನಾನು ನಿಮ್ಮ ಕೈ, ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ ಖರ್ಜೂರ ಮರದ ಕಾಂಡಗಳ ಮೇಲೆ ಶಿಲುಬೆಗೇರಿಸಿ ಬಿಡುವೆನು.ಆಗ ನಿಮಗೆ ನಮ್ಮ ಪೈಕಿ ಯಾರ ಶಿಕ್ಷೆ ಕಠಿಣವೆಂದೂ, ಹಾಗೂ ಶಾಶ್ವತವೆಂದೂ ಚೆನ್ನಾಗಿ ತಿಳಿಯುವುದು.
የአረብኛ ቁርኣን ማብራሪያ:
قَالُوْا لَنْ نُّؤْثِرَكَ عَلٰی مَا جَآءَنَا مِنَ الْبَیِّنٰتِ وَالَّذِیْ فَطَرَنَا فَاقْضِ مَاۤ اَنْتَ قَاضٍ ؕ— اِنَّمَا تَقْضِیْ هٰذِهِ الْحَیٰوةَ الدُّنْیَا ۟ؕ
ಜಾದೂಗಾರರು ಹೀಗೆ ಉತ್ತರಿಸಿದರು: ನಮ್ಮ ಮುಂದೆ ಬಂದಿರುವAತಹ ಆಧಾರ ಪ್ರಮಾಣಗಳಿಗಿಂತ ಹಾಗೂ ನಮ್ಮನ್ನು ಸೃಷ್ಟಿಸಿರುವ ಅಲ್ಲಾಹನಿಗಿಂತ ನಿನಗೆ ನಾವು ಪ್ರಾಮುಖ್ಯತೆಯನ್ನು ಖಂಡಿತ ನೀಡಲಾರೆವು. ಇನ್ನು ನೀನೇನು ವಿಧಿಸಲಿರುವೆಯೋ ಅದನ್ನು ವಿಧಿಸು.ನೀನು ಈ ಐಹಿಕ ಜೀವನದಲ್ಲಿ ಮಾತ್ರವೇ ತೀರ್ಮಾನ ಮಾಡಬಲ್ಲೆ.
የአረብኛ ቁርኣን ማብራሪያ:
اِنَّاۤ اٰمَنَّا بِرَبِّنَا لِیَغْفِرَ لَنَا خَطٰیٰنَا وَمَاۤ اَكْرَهْتَنَا عَلَیْهِ مِنَ السِّحْرِ ؕ— وَاللّٰهُ خَیْرٌ وَّاَبْقٰی ۟
ನಮ್ಮ ಪಾಪಗಳನ್ನು ಮತ್ತು ನೀನು ನಮ್ಮಿಂದ ಬಲವಂತವಾಗಿ ಮಾಡಿಸಿದ ಜಾದೂವಿನ(ಪಾಪವನ್ನು) ಕ್ಷಮಿಸಿಬಿಡಲೆಂದು, ನಾವು ನಮ್ಮ ಪ್ರಭುವಿನ ಮೇಲೆ ವಿಶ್ವಾಸವಿರಿಸಿದ್ದೇವೆ. ಮತ್ತು ಅಲ್ಲಾಹನು ಅತ್ಯುತ್ತಮನು, ಅತ್ಯಂತ ಶಾಶ್ವತನು ಆಗಿರುತ್ತಾನೆ.
የአረብኛ ቁርኣን ማብራሪያ:
اِنَّهٗ مَنْ یَّاْتِ رَبَّهٗ مُجْرِمًا فَاِنَّ لَهٗ جَهَنَّمَ ؕ— لَا یَمُوْتُ فِیْهَا وَلَا یَحْیٰی ۟
ವಾಸ್ತವದಲ್ಲಿ ಯಾರು ತನ್ನ ಪ್ರಭುವಿನ ಬಳಿ ಅಪರಾಧಿಯಾಗಿ ಬರುತ್ತಾನೋ ಅವನಿಗೆ ನರಕವಿರುವುದು. ಅಲ್ಲಿ ಅವನು ಸಾಯವುದೂ ಇಲ್ಲ, ಬದುಕುವುದೂ ಇಲ್ಲ.
የአረብኛ ቁርኣን ማብራሪያ:
وَمَنْ یَّاْتِهٖ مُؤْمِنًا قَدْ عَمِلَ الصّٰلِحٰتِ فَاُولٰٓىِٕكَ لَهُمُ الدَّرَجٰتُ الْعُلٰی ۟ۙ
ಇನ್ನು ಯಾರು ಸತ್ಕರ್ಮಗಳನ್ನು ಮಾಡಿ ಸತ್ಯವಿಶ್ವಾಸಿಯಾಗಿರುವ ಸ್ಥಿತಿಯಲ್ಲಿ ಅವನ ಬಳಿಗೆ ಹಾಜರಾಗುತ್ತಾನೋ ಅವನಿಗೆ ಉನ್ನತ ಸ್ಥಾನಗಳಿರುವುವು.
የአረብኛ ቁርኣን ማብራሪያ:
جَنّٰتُ عَدْنٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— وَذٰلِكَ جَزٰٓؤُا مَنْ تَزَكّٰی ۟۠
ಅವರಿಗೆ ಶಾಶ್ವತವಾದ ಸ್ವರ್ಗೋದ್ಯಾನಗಳಿವೆ. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರು ಅದರಲ್ಲಿ ಶಾಶ್ವತವಾಗಿರುವರು. ಪರಿಶುದ್ಧನಾಗಿರುವ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಫಲವು ಇದೇ ಆಗಿರುತ್ತದೆ.
የአረብኛ ቁርኣን ማብራሪያ:
 
የይዘት ትርጉም ምዕራፍ: ጣሃ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት