Check out the new design

《古兰经》译解 - 卡纳达语翻译 - 巴希尔·梅苏里。 * - 译解目录


含义的翻译 章: 安法里   段:
اِذْ تَسْتَغِیْثُوْنَ رَبَّكُمْ فَاسْتَجَابَ لَكُمْ اَنِّیْ مُمِدُّكُمْ بِاَلْفٍ مِّنَ الْمَلٰٓىِٕكَةِ مُرْدِفِیْنَ ۟
ನೀವು ನಿಮ್ಮ ಪ್ರಭುವಿನೊಂದಿಗೆ ಬೇಡಿಕೊಳ್ಳುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ಆಗ ಅವನು ನಿಮ್ಮ ಕರೆಗೆ ಓಗೊಟ್ಟು, ನಾನು ನಿಮಗೆ ನಿರಂತರವಾಗಿ ಒಂದು ಸಾವಿರ ಮಲಕ್‌ಗಳ ಮೂಲಕ ಸಹಾಯ ಮಾಡುವೆನು ಎಂದನು.
阿拉伯语经注:
وَمَا جَعَلَهُ اللّٰهُ اِلَّا بُشْرٰی وَلِتَطْمَىِٕنَّ بِهٖ قُلُوْبُكُمْ ؕ— وَمَا النَّصْرُ اِلَّا مِنْ عِنْدِ اللّٰهِ ؕ— اِنَّ اللّٰهَ عَزِیْزٌ حَكِیْمٌ ۟۠
ಮತ್ತು ಅಲ್ಲಾಹನ ಈ ಸಹಾಯವನ್ನು ನಿಮಗೆ ಶುಭವಾರ್ತೆಯಾಗಲೆಂದು ಮತ್ತು ನಿಮ್ಮ ಮನಸ್ಸುಗಳಿಗೆ ಶಾಂತಿ ಸಿಗಲೆಂದಾಗಿದೆ ಮತ್ತು ಸಹಾಯವು ಕೇವಲ ಅಲ್ಲಾಹನ ಕಡೆಯಿಂದಿರುತ್ತದೆ. ನಿಸ್ಸಂಶಯವಾಗಿಯು ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.
阿拉伯语经注:
اِذْ یُغَشِّیْكُمُ النُّعَاسَ اَمَنَةً مِّنْهُ وَیُنَزِّلُ عَلَیْكُمْ مِّنَ السَّمَآءِ مَآءً لِّیُطَهِّرَكُمْ بِهٖ وَیُذْهِبَ عَنْكُمْ رِجْزَ الشَّیْطٰنِ وَلِیَرْبِطَ عَلٰی قُلُوْبِكُمْ وَیُثَبِّتَ بِهِ الْاَقْدَامَ ۟ؕ
ಅಲ್ಲಾಹನು ತನ್ನ ವತಿಯಿಂದ ನಿಮಗೆ ಮನಃ ಶಾಂತಿಯನ್ನು ನೀಡಲು ನಿಮ್ಮ ಮೇಲೆ ತೂಕಡಿಕೆಯನ್ನು ಇಳಿಸಿದ್ದನು ಮತ್ತು ನಿಮ್ಮನ್ನು ಶುದ್ಧೀಕರಿಸಲು, ಶೈತಾನಿನ ದುಷ್ಪೆçÃರಣೆಯನ್ನು ತಡೆಯಲು, ನಿಮ್ಮ ಹೃದಯಗಳನ್ನು ಸದೃಢಗೊಳಿಸಲು ಮತ್ತು ತನ್ಮೂಲಕ ನಿಮ್ಮ ಪಾದಗಳನ್ನು ಸ್ಥಿರಗೊಳಿಸಲು ಅವನು ನಿಮ್ಮ ಮೇಲೆ ಆಕಾಶದಿಂದ ನೀರು ಸುರಿಸಿದ್ದ ಸಂದರ್ಭವನ್ನು ಸ್ಮರಿಸಿರಿ.
阿拉伯语经注:
اِذْ یُوْحِیْ رَبُّكَ اِلَی الْمَلٰٓىِٕكَةِ اَنِّیْ مَعَكُمْ فَثَبِّتُوا الَّذِیْنَ اٰمَنُوْا ؕ— سَاُلْقِیْ فِیْ قُلُوْبِ الَّذِیْنَ كَفَرُوا الرُّعْبَ فَاضْرِبُوْا فَوْقَ الْاَعْنَاقِ وَاضْرِبُوْا مِنْهُمْ كُلَّ بَنَانٍ ۟ؕ
ನಿಮ್ಮ ಪ್ರಭು ದೇವಚರರಿಗೆ ಹೇಳಿದನು: ನಾನು ನಿಮ್ಮ ಜೊತೆಗಿದ್ದೇನೆ, ಆದ್ದರಿಂದ ನೀವು ಸತ್ಯವಿಶ್ವಾಸಿಗಳಿಗೆ ಧೈರ್ಯ ತುಂಬಿರಿ. ಸದ್ಯವೇ ನಾನು ಸತ್ಯನಿಷೇಧಿಗಳ ಹೃದಯಗಳಲ್ಲಿ ಭಯವನ್ನು ಹಾಕಲಿರುವೆನು. ಇನ್ನು ನೀವು ಅವರ ಕೊರಳುಗಳ ಮೇಲೆ ಹೊಡೆಯಿರಿ ಮತ್ತು ಅವರ ಪ್ರತಿಯೊಂದು ಕೀಲುಗಳ ಮೇಲೆ ಹೊಡೆಯಿರಿ ಎಂದು ಅಲ್ಲಾಹನು ದೇವಚರರಿಗೆ ಆದೇಶ ನೀಡಿದ್ದ ಸಂದರ್ಭವನ್ನು ಸ್ಮರಿಸಿರಿ.
阿拉伯语经注:
ذٰلِكَ بِاَنَّهُمْ شَآقُّوا اللّٰهَ وَرَسُوْلَهٗ ۚ— وَمَنْ یُّشَاقِقِ اللّٰهَ وَرَسُوْلَهٗ فَاِنَّ اللّٰهَ شَدِیْدُ الْعِقَابِ ۟
ಈ ಶಿಕ್ಷೆ ಅವರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸಿದುವುದರ ಫಲವಾಗಿದೆ. ಯಾರು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ವಿರೋಧಿಸುತ್ತಾನೋ ನಿಸ್ಸಂಶಯವಾಗಿಯು ಅವರಿಗೆ ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
阿拉伯语经注:
ذٰلِكُمْ فَذُوْقُوْهُ وَاَنَّ لِلْكٰفِرِیْنَ عَذَابَ النَّارِ ۟
ಇದು ನಿಮ್ಮ ಐಹಿಕ ಶಿಕ್ಷೆ ಇದನ್ನು ಸವಿಯಿರಿ ಮತ್ತು ಸತ್ಯನಿಷೇಧಿಗಳಿಗೆ ನರಕದ ಶಿಕ್ಷೆಯು ನಿಶ್ಚಯವಾಗಿದೆ ಎಂಬುದನ್ನು ಅರಿತುಕೊಳ್ಳಿರಿ.
阿拉伯语经注:
یٰۤاَیُّهَا الَّذِیْنَ اٰمَنُوْۤا اِذَا لَقِیْتُمُ الَّذِیْنَ كَفَرُوْا زَحْفًا فَلَا تُوَلُّوْهُمُ الْاَدْبَارَ ۟ۚ
ಓ ಸತ್ಯವಿಶ್ವಾಸಿಗಳೇ, ನೀವು ಸತ್ಯನಿಷೇಧಿಗಳನ್ನು ಮುಖಾಮುಖಿಯಾದರೆ ಅವರಿಂದ ಬೆನ್ನು ತಿರುಗಿಸಿ ಓಡಬೇಡಿರಿ.
阿拉伯语经注:
وَمَنْ یُّوَلِّهِمْ یَوْمَىِٕذٍ دُبُرَهٗۤ اِلَّا مُتَحَرِّفًا لِّقِتَالٍ اَوْ مُتَحَیِّزًا اِلٰی فِئَةٍ فَقَدْ بَآءَ بِغَضَبٍ مِّنَ اللّٰهِ وَمَاْوٰىهُ جَهَنَّمُ ؕ— وَبِئْسَ الْمَصِیْرُ ۟
ಆದರೆ ಯುದ್ಧ ತಂತ್ರ ಬದಲಾವಣೆ ಮಾಡುವುದಕ್ಕಾಗಿ ಅಥವಾ (ತನ್ನ) ತಂಡವನ್ನು ಸೇರುವುದಕ್ಕಾಗಿ ವಿನಃ ಯಾರು ಆ ಸಂದರ್ಭದಲ್ಲಿ ಬೆನ್ನು ತಿರುಗಿಸಿ ಓಡುತ್ತಾನೋ ಅವನು ಅಲ್ಲಾಹನ ಕ್ರೋಧಕ್ಕೆ ಪಾತ್ರನಾಗುವನು ಮತ್ತು ಅವನ ವಾಸಸ್ಥಳವು ನರಕವಾಗಿರುವುದು. ಅದು ಅತ್ಯಂತ ನಿಕೃಷ್ಟ ತಾಣವಾಗಿದೆ!
阿拉伯语经注:
 
含义的翻译 章: 安法里
章节目录 页码
 
《古兰经》译解 - 卡纳达语翻译 - 巴希尔·梅苏里。 - 译解目录

由巴希尔·梅苏里谢赫翻译。在立瓦德翻译中心的监督之下已完成开发。

关闭