Check out the new design

《古兰经》译解 - 卡纳达语翻译 - 巴希尔·梅苏里。 * - 译解目录


含义的翻译 章: 塔哈   段:
فَتَعٰلَی اللّٰهُ الْمَلِكُ الْحَقُّ ۚ— وَلَا تَعْجَلْ بِالْقُرْاٰنِ مِنْ قَبْلِ اَنْ یُّقْضٰۤی اِلَیْكَ وَحْیُهٗ ؗ— وَقُلْ رَّبِّ زِدْنِیْ عِلْمًا ۟
ಹಾಗೆಯೇ ಮಹೋನ್ನತನಾದ ಅಲ್ಲಾಹನು ನೈಜ ಅಧಿಪತಿ ಯಾಗಿರುವನು. (ಓ ಪೈಗಂಬರರೇ) ಕುರ್‌ಆನಿನ ದಿವ್ಯವಾಣಿಯು ಪೂರ್ತಿಯಾಗುವುದಕ್ಕೂ ಮುನ್ನ ನೀವು ಅದನ್ನು ಪಠಿಸುವುದರಲ್ಲಿ ಆತುರ ಪಡಬೇಡಿ.ಮತ್ತು ಓ ನನ್ನ ಪ್ರಭುವೇ, ನೀನು ನನ್ನ ಜ್ಞಾನವನ್ನು ಹೆಚ್ಚಿಸಿಕೊಡು ಎಂದು ಪ್ರಾರ್ಥಿಸಿರಿ.
阿拉伯语经注:
وَلَقَدْ عَهِدْنَاۤ اِلٰۤی اٰدَمَ مِنْ قَبْلُ فَنَسِیَ وَلَمْ نَجِدْ لَهٗ عَزْمًا ۟۠
ನಾವು ಇದಕ್ಕೆ ಮೊದಲು ಆದಮ್‌ರವರಿಗೆ ಕರಾರು ಮಾಡಿದ್ದೆವು ಆದರೆ ಅವರು ಮರೆತುಬಿಟ್ಟರು ಮತ್ತು ನಾವು ಅವರಲ್ಲಿ ಯಾವುದೇ ಸ್ಥಿರ ಚಿತ್ತವನ್ನು ಕಾಣಲಿಲ್ಲ.
阿拉伯语经注:
وَاِذْ قُلْنَا لِلْمَلٰٓىِٕكَةِ اسْجُدُوْا لِاٰدَمَ فَسَجَدُوْۤا اِلَّاۤ اِبْلِیْسَ ؕ— اَبٰی ۟
ನಾವು ಮಲಕ್‌ಗಳಿಗೆ ಆದಮರಿಗೆ ಸಾಷ್ಟಾಂಗವೆರಗಿರೆAದು ಹೇಳಿದ ಸಂದರ್ಭ: ಆಗ ಇಬ್‌ಲೀಸನ ಹೊರತು ಅವರೆಲ್ಲರೂ ಸಾಷ್ಟಾಂಗವೆರಗಿದರು. ಅವನು ನಿರಾಕರಿಸಿಬಿಟ್ಟನು.
阿拉伯语经注:
فَقُلْنَا یٰۤاٰدَمُ اِنَّ هٰذَا عَدُوٌّ لَّكَ وَلِزَوْجِكَ فَلَا یُخْرِجَنَّكُمَا مِنَ الْجَنَّةِ فَتَشْقٰی ۟
ಆಗ ನಾವೆಂದೆವು: ಓ ಆದಮ್, ಇವನು ನಿನ್ನ ಮತ್ತು ನಿನ್ನ ಪತ್ನಿಯ ಶತ್ರವಾಗಿದ್ದಾನೆ, ನಿಮ್ಮಬ್ಬರನ್ನು ಸ್ವರ್ಗದಿಂದ ಹೊರಹಾಕಿಸದಿರಲಿ. ಅನ್ಯಥಾ ನೀವು ಆಪತ್ತಿನಲ್ಲಿ ಸಿಲುಕುವಿರಿ.
阿拉伯语经注:
اِنَّ لَكَ اَلَّا تَجُوْعَ فِیْهَا وَلَا تَعْرٰی ۟ۙ
ನೀವು ಇಲ್ಲಿ ಹಸಿಯುವುದಿಲ್ಲ, ಮತ್ತು ನಗ್ನರಾಗುವುದೂ ಇಲ್ಲ.
阿拉伯语经注:
وَاَنَّكَ لَا تَظْمَؤُا فِیْهَا وَلَا تَضْحٰی ۟
ಮತ್ತು ನಿಮಗೆ ಇಲ್ಲಿ ದಾಹವಾಗುವುದೂ ಇಲ್ಲ, ಬಿಸಿಲ ತಾಪವೂ ತಟ್ಟುವುದಿಲ್ಲ.
阿拉伯语经注:
فَوَسْوَسَ اِلَیْهِ الشَّیْطٰنُ قَالَ یٰۤاٰدَمُ هَلْ اَدُلُّكَ عَلٰی شَجَرَةِ الْخُلْدِ وَمُلْكٍ لَّا یَبْلٰی ۟
ಆದರೆ ಶೈತಾನನು ಅವರನ್ನು ಪ್ರೇರೇಪಿಸಿಬಿಟ್ಟನು. ಅವನು ಹೇಳಿದನು: ಓ ಆದಮ್ ನಾನು ನಿಮಗೆ ಒಂದು ಅಮರ ವೃಕ್ಷ ಹಾಗೂ ಅನಶ್ವರ ಸಾಮ್ರಾಜ್ಯದ ಕುರಿತು ತಿಳಿಸ ಕೊಡಲೇ
阿拉伯语经注:
فَاَكَلَا مِنْهَا فَبَدَتْ لَهُمَا سَوْاٰتُهُمَا وَطَفِقَا یَخْصِفٰنِ عَلَیْهِمَا مِنْ وَّرَقِ الْجَنَّةِ ؗ— وَعَصٰۤی اٰدَمُ رَبَّهٗ فَغَوٰی ۪۟ۖ
ಕೊನೆಗೆ ಅವರಿಬ್ಬರೂ ಆ ಮರದಿಂದ ತಿಂದರು. ಆಗ ಅವರ ಗುಪ್ತಾಂಗಗಳು ಪರಸ್ಪರ ಗೋಚರವಾದವು ಮತ್ತು ಅವರು ಸ್ವರ್ಗದ ಎಲೆಯಿಂದ ತಮ್ಮ ಮೈಯನ್ನು ಮುಚ್ಚತೊಡಗಿದರು. ಆದಮ್‌ರವರು ತನ್ನ ಪ್ರಭುವಿನ ಆಜ್ಞೋಲ್ಲಂಘನೆ ಮಾಡಿ ದಾರಿತಪ್ಪಿದರು.
阿拉伯语经注:
ثُمَّ اجْتَبٰهُ رَبُّهٗ فَتَابَ عَلَیْهِ وَهَدٰی ۟
ತರುವಾಯ ಅವರ ಪ್ರಭುವು ಅವರನ್ನು ಆಯ್ದುಕೊಂಡನು. ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು ಹಾಗೂ ಸನ್ಮಾರ್ಗ ತೋರಿದನು.
阿拉伯语经注:
قَالَ اهْبِطَا مِنْهَا جَمِیْعًا بَعْضُكُمْ لِبَعْضٍ عَدُوٌّ ۚ— فَاِمَّا یَاْتِیَنَّكُمْ مِّنِّیْ هُدًی ۙ۬— فَمَنِ اتَّبَعَ هُدَایَ فَلَا یَضِلُّ وَلَا یَشْقٰی ۟
ಅಲ್ಲಾಹನು ಹೇಳಿದನು: ನೀವಿಬ್ಬರು ಇಲ್ಲಿಂದ ಇಳಿದು ಹೋಗಿರಿ. ನೀವು ಪರಸ್ಪರ ಒಬ್ಬರಿಗೊಬ್ಬರು ಶತ್ರುಗಳಾಗಿರುವಿರಿ. ಇನ್ನು ನಿಮ್ಮ ಬಳಿಗೆ ನನ್ನ ಕಡೆಯಿಂದ ಮಾರ್ಗದರ್ಶನವು ಬಂದಾಗ ಯಾರು ನನ್ನ ಮಾರ್ಗದರ್ಶನವನ್ನು ಅನುಸರಿಸುತ್ತಾನೋ ಅವನು ದಾರಿ ತಪ್ಪಲಾರನು ಹಾಗೂ ವಿಪತ್ತಿನಲ್ಲಿ ಸಿಲುಕಲಾರನು.
阿拉伯语经注:
وَمَنْ اَعْرَضَ عَنْ ذِكْرِیْ فَاِنَّ لَهٗ مَعِیْشَةً ضَنْكًا وَّنَحْشُرُهٗ یَوْمَ الْقِیٰمَةِ اَعْمٰی ۟
ಅಲ್ಲಾಹನು ಹೇಳಿದನು: ನೀವಿಬ್ಬರು ಇಲ್ಲಿಂದ ಇಳಿದು ಹೋಗಿರಿ. ನೀವು ಪರಸ್ಪರ ಒಬ್ಬರಿಗೊಬ್ಬರು ಶತ್ರುಗಳಾಗಿರುವಿರಿ. ಇನ್ನು ನಿಮ್ಮ ಬಳಿಗೆ ನನ್ನ ಕಡೆಯಿಂದ ಮಾರ್ಗದರ್ಶನವು ಬಂದಾಗ ಯಾರು ನನ್ನ ಮಾರ್ಗದರ್ಶನವನ್ನು ಅನುಸರಿಸುತ್ತಾನೋ ಅವನು ದಾರಿ ತಪ್ಪಲಾರನು ಹಾಗೂ ವಿಪತ್ತಿನಲ್ಲಿ ಸಿಲುಕಲಾರನು.
阿拉伯语经注:
قَالَ رَبِّ لِمَ حَشَرْتَنِیْۤ اَعْمٰی وَقَدْ كُنْتُ بَصِیْرًا ۟
ಅವನು ಕೇಳುವನು: ಓ ನನ್ನ ಪ್ರಭುವೇ, ನೀನು ನನ್ನನ್ನು ಕುರುಡನನ್ನಾಗಿ ಎಬ್ಬಿಸಿರುವುದೇಕೆ? ವಸ್ತುತಃ ನಾನು ದೃಷ್ಟಿಯುಳ್ಳವನಾಗಿದ್ದೆನು.
阿拉伯语经注:
 
含义的翻译 章: 塔哈
章节目录 页码
 
《古兰经》译解 - 卡纳达语翻译 - 巴希尔·梅苏里。 - 译解目录

由巴希尔·梅苏里谢赫翻译。在立瓦德翻译中心的监督之下已完成开发。

关闭