Check out the new design

《古兰经》译解 - 卡纳达语翻译 - 巴希尔·梅苏里。 * - 译解目录


含义的翻译 章: 拜格勒   段:
وَمَثَلُ الَّذِیْنَ یُنْفِقُوْنَ اَمْوَالَهُمُ ابْتِغَآءَ مَرْضَاتِ اللّٰهِ وَتَثْبِیْتًا مِّنْ اَنْفُسِهِمْ كَمَثَلِ جَنَّةٍ بِرَبْوَةٍ اَصَابَهَا وَابِلٌ فَاٰتَتْ اُكُلَهَا ضِعْفَیْنِ ۚ— فَاِنْ لَّمْ یُصِبْهَا وَابِلٌ فَطَلٌّ ؕ— وَاللّٰهُ بِمَا تَعْمَلُوْنَ بَصِیْرٌ ۟
ಅಲ್ಲಾಹನ ಸಂಪ್ರೀತಿಯನ್ನರಸಿ ಹಾಗೂ ಸದೃಢತೆಯೊಂದಿಗೆ ಸಂಪತ್ತನ್ನು ಖರ್ಚು ಮಾಡುವವರ ಉಪಮೆಯು ಎತ್ತರ ಪ್ರದೇಶದಲ್ಲಿರುವ ಒಂದು ತೋಟದಂತಿದೆ. ಅದರ ಮೇಲೆ ಧಾರಾಕಾರವಾದ ಮಳೆಯು ಸುರಿದಾಗ ಅದು ತನ್ನ ಫಲವನ್ನು ಇಮ್ಮಡಿಗೊಳಿಸಿತು. ಇನ್ನು ಅದರ ಮೇಲೆ ಧಾರಾಕಾರವಾದ ಮಳೆ ಸುರಿಯದೆ ತುಂತುರು ಮಳೆ ಸುರಿದರೂ ಅದಕ್ಕೆ ಸಾಕಾಗುವುದು. ಅಲ್ಲಾಹನು ನಿಮ್ಮ ಕರ್ಮವನ್ನು ವೀಕ್ಷಿಸುತ್ತಿದ್ದಾನೆ.
阿拉伯语经注:
اَیَوَدُّ اَحَدُكُمْ اَنْ تَكُوْنَ لَهٗ جَنَّةٌ مِّنْ نَّخِیْلٍ وَّاَعْنَابٍ تَجْرِیْ مِنْ تَحْتِهَا الْاَنْهٰرُ ۙ— لَهٗ فِیْهَا مِنْ كُلِّ الثَّمَرٰتِ ۙ— وَاَصَابَهُ الْكِبَرُ وَلَهٗ ذُرِّیَّةٌ ضُعَفَآءُ ۖۚ— فَاَصَابَهَاۤ اِعْصَارٌ فِیْهِ نَارٌ فَاحْتَرَقَتْ ؕ— كَذٰلِكَ یُبَیِّنُ اللّٰهُ لَكُمُ الْاٰیٰتِ لَعَلَّكُمْ تَتَفَكَّرُوْنَ ۟۠
ನಿಮ್ಮಲ್ಲೊಬ್ಬನಿಗೆ ಖರ್ಜೂರದ ಮರಗಳು ಮತ್ತು ದ್ರಾಕ್ಷಿ ಬಳ್ಳಿಗಳಿರುವ ಒಂದು ತೋಟವಿದ್ದು, ಅದರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿವೆ, ಅದರಲ್ಲಿ ಅವನಿಗೆ ಎಲ್ಲಾ ವಿಧದ ಫಲಗಳಿವೆ, ಅವನಿಗೆ ವೃದ್ಧಾಪ್ಯವು ಬಾಧಿಸಿದೆ, ಅವನ ಚಿಕ್ಕ ಚಿಕ್ಕ ಮಕ್ಕಳೂ ಇದ್ದಾರೆ. ಆಗ ಅಗ್ನಿ ಮಾರುತವೊಂದು ಅದಕ್ಕೆ ತಗುಲಿ ಅದು ಸುಟ್ಟು ಹೋಗುವುದನ್ನು ನಿಮ್ಮಲ್ಲಿ ಯಾರಾದರೂ ಆಶಿಸುವರೇ? ನೀವು ಚಿಂತಿಸಿ ಗ್ರಹಿಸುವುದಕ್ಕಾಗಿ ಅಲ್ಲಾಹನು ನಿಮಗೆ ಈ ರೀತಿ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತಾನೆ(ಇದೇ ಪ್ರಕಾರ ಯಾವೊಬ್ಬನು ತನ್ನ ಪುಣ್ಯಗಳು ವ್ಯರ್ಥವಾಗುವುದನ್ನು ಬಯಸುತ್ತಾನೆಯೇ).
阿拉伯语经注:
یٰۤاَیُّهَا الَّذِیْنَ اٰمَنُوْۤا اَنْفِقُوْا مِنْ طَیِّبٰتِ مَا كَسَبْتُمْ وَمِمَّاۤ اَخْرَجْنَا لَكُمْ مِّنَ الْاَرْضِ ۪— وَلَا تَیَمَّمُوا الْخَبِیْثَ مِنْهُ تُنْفِقُوْنَ وَلَسْتُمْ بِاٰخِذِیْهِ اِلَّاۤ اَنْ تُغْمِضُوْا فِیْهِ ؕ— وَاعْلَمُوْۤا اَنَّ اللّٰهَ غَنِیٌّ حَمِیْدٌ ۟
ಓ ಸತ್ಯವಿಶ್ವಾಸಿಗಳೇ, ನೀವು ಸಂಪಾದಿಸಿದ ಉತ್ತಮ ವಸ್ತುಗಳನ್ನು ಮತ್ತು ಭೂಮಿಯಿಂದ ನಾವು ನಿಮಗೆ ಉತ್ಪಾದಿಸಿ ಕೊಟ್ಟಿರುವ ವಸ್ತುಗಳಿಂದ ಖರ್ಚು ಮಾಡಿರಿ. ಅವುಗಳಿಂದ ಕೆಟ್ಟ ವಸ್ತುಗಳನ್ನು ಖರ್ಚು ಮಾಡಲು ನೀವು ಉದ್ದೇಶಿಸಬಾರದು (ಅವುಗಳನ್ನು ನಿಮಗೆ ನೀಡಲಾದರೆ) ಅವುಗಳನ್ನು ಸ್ವತಃ (ಮೋಸ ಅಥÀವಾ ಅಲಕ್ಷö್ಯದಿಂದ) ಕಣ್ಣು ಮುಚ್ಚಿಕೊಂಡÀಲ್ಲದೇ ಸ್ವೀಕರಿಸಲಾರಿರಿ. ಅಲ್ಲಾಹನು ನಿರಪೇಕ್ಷನೂ, ಸ್ತುತ್ಯರ್ಹನೂ ಆಗಿದ್ದಾನೆಂದು ನೀವು ತಿಳಿದುಕೊಳ್ಳಿರಿ.
阿拉伯语经注:
اَلشَّیْطٰنُ یَعِدُكُمُ الْفَقْرَ وَیَاْمُرُكُمْ بِالْفَحْشَآءِ ۚ— وَاللّٰهُ یَعِدُكُمْ مَّغْفِرَةً مِّنْهُ وَفَضْلًا ؕ— وَاللّٰهُ وَاسِعٌ عَلِیْمٌ ۟
ಶೈತಾನನು ನಿಮಗೆ ದಾರಿದ್ರö್ಯದ ಭೀತಿ ಹುಟ್ಟಿಸಿ ಅಶ್ಲೀಲತೆಯ (ಜಿಪುಣತೆಯ) ಆದೇಶ ನೀಡುತ್ತಾನೆ. ಮತ್ತು ಅಲ್ಲಾಹನು ನಿಮಗೆ ತನ್ನ ವತಿಯಿಂದ ಪಾಪವಿಮೋಚನೆ ಹಾಗೂ ಅನುಗ್ರಹದ (ಸಂಮೃದ್ಧಿಯ) ವಾಗ್ದಾನ ಮಾಡುತ್ತಾನೆ. ಅಲ್ಲಾಹನು ವಿಶಾಲನೂ, ಜ್ಞಾನವುಳ್ಳವನೂ ಆಗಿದ್ದಾನೆ.
阿拉伯语经注:
یُّؤْتِی الْحِكْمَةَ مَنْ یَّشَآءُ ۚ— وَمَنْ یُّؤْتَ الْحِكْمَةَ فَقَدْ اُوْتِیَ خَیْرًا كَثِیْرًا ؕ— وَمَا یَذَّكَّرُ اِلَّاۤ اُولُوا الْاَلْبَابِ ۟
ತಾನಿಚ್ಛಿಸುವವರಿಗೆ ಅವನು ಸುಜ್ಞಾನವನ್ನು ನೀಡುತ್ತಾನೆ. ಯಾರಿಗೆ ಸುಜ್ಞಾನವನ್ನು ನೀಡಲಾಗುತ್ತದೋ ಅವನಿಗೆ ಬಹಳಷ್ಟು ಒಳಿತುಗಳನ್ನು ನೀಡಲಾಯಿತು. ಬುದ್ಧಿವಂತರು ಮಾತ್ರ ಉಪದೇಶ ಸ್ವೀಕರಿಸುತ್ತಾರೆ.
阿拉伯语经注:
 
含义的翻译 章: 拜格勒
章节目录 页码
 
《古兰经》译解 - 卡纳达语翻译 - 巴希尔·梅苏里。 - 译解目录

由巴希尔·梅苏里谢赫翻译。在立瓦德翻译中心的监督之下已完成开发。

关闭