Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- ھەمزە بەتتۇر * - تەرجىمىلەر مۇندەرىجىسى

PDF XML CSV Excel API
Please review the Terms and Policies

مەنالار تەرجىمىسى سۈرە: غاپىر   ئايەت:
وَقَالَ فِرْعَوْنُ ذَرُوْنِیْۤ اَقْتُلْ مُوْسٰی وَلْیَدْعُ رَبَّهٗ ۚؕ— اِنِّیْۤ اَخَافُ اَنْ یُّبَدِّلَ دِیْنَكُمْ اَوْ اَنْ یُّظْهِرَ فِی الْاَرْضِ الْفَسَادَ ۟
ಫರೋಹ ಹೇಳಿದನು: “ನನ್ನನ್ನು ಬಿಡಿ! ನಾನು ಮೂಸಾನನ್ನು ಕೊಂದು ಬಿಡುತ್ತೇನೆ. ಅವನು ಅವನ ಪರಿಪಾಲಕನನ್ನು (ಅಲ್ಲಾಹನನ್ನು) ಕರೆಯಲಿ! ಅವನು ನಿಮ್ಮ ಧರ್ಮವನ್ನು ಬದಲಾಯಿಸಬಹುದು ಅಥವಾ ಭೂಮಿಯಲ್ಲಿ ಕಿಡಿಗೇಡಿತನ ಮಾಡಬಹುದು ಎಂದು ನನಗೆ ಭಯವಾಗುತ್ತಿದೆ.”
ئەرەپچە تەپسىرلەر:
وَقَالَ مُوْسٰۤی اِنِّیْ عُذْتُ بِرَبِّیْ وَرَبِّكُمْ مِّنْ كُلِّ مُتَكَبِّرٍ لَّا یُؤْمِنُ بِیَوْمِ الْحِسَابِ ۟۠
ಮೂಸಾ ಹೇಳಿದರು: “ವಿಚಾರಣಾ ದಿನದಲ್ಲಿ ವಿಶ್ವಾಸವಿಡದ ಎಲ್ಲಾ ಅಹಂಕಾರಿಗಳ ವಿರುದ್ಧ ನಾನು ನನ್ನ ಮತ್ತು ನಿಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಅಭಯ ಯಾಚಿಸುತ್ತೇನೆ.”
ئەرەپچە تەپسىرلەر:
وَقَالَ رَجُلٌ مُّؤْمِنٌ ۖۗ— مِّنْ اٰلِ فِرْعَوْنَ یَكْتُمُ اِیْمَانَهٗۤ اَتَقْتُلُوْنَ رَجُلًا اَنْ یَّقُوْلَ رَبِّیَ اللّٰهُ وَقَدْ جَآءَكُمْ بِالْبَیِّنٰتِ مِنْ رَّبِّكُمْ ؕ— وَاِنْ یَّكُ كَاذِبًا فَعَلَیْهِ كَذِبُهٗ ۚ— وَاِنْ یَّكُ صَادِقًا یُّصِبْكُمْ بَعْضُ الَّذِیْ یَعِدُكُمْ ؕ— اِنَّ اللّٰهَ لَا یَهْدِیْ مَنْ هُوَ مُسْرِفٌ كَذَّابٌ ۟
ಫರೋಹ‍ನ ಜನರಲ್ಲಿ ಸೇರಿದ ಮತ್ತು ತನ್ನ ವಿಶ್ವಾಸವನ್ನು ಮುಚ್ಚಿಟ್ಟಿದ್ದ ಸತ್ಯವಿಶ್ವಾಸಿ ವ್ಯಕ್ತಿಯೊಬ್ಬರು ಹೇಳಿದರು: “ನನ್ನ ಪರಿಪಾಲಕ ಅಲ್ಲಾಹು ಎಂದು ಹೇಳುವ ಕಾರಣಕ್ಕಾಗಿ ನೀವು ಒಬ್ಬ ಮನುಷ್ಯನನ್ನು ಕೊಲ್ಲುತ್ತೀರಾ? ಅವರು ನಿಮ್ಮ ಬಳಿಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸ್ಪಷ್ಟ ಸಾಕ್ಷ್ಯಾಧಾರಗಳನ್ನು ತಂದಿದ್ದಾರೆ. ಅವರು ಸುಳ್ಳು ಹೇಳುತ್ತಿದ್ದರೆ ಅದರ ಪಾಪವು ಅವರಿಗೇ ಆಗಿದೆ. ಆದರೆ ಅವರು ಸತ್ಯ ಹೇಳುತ್ತಿದ್ದರೆ ಅವರು ನಿಮಗೆ ಎಚ್ಚರಿಕೆ ನೀಡುವ ಕೆಲವು ಸಂಗತಿಗಳು (ಶಿಕ್ಷೆಗಳು) ನಿಶ್ಚಯವಾಗಿಯೂ ನಿಮ್ಮ ಮೇಲೆ ಎರಗುವುದು. ನಿಶ್ಚಯವಾಗಿಯೂ ಅತಿರೇಕಿ ಮತ್ತು ಸುಳ್ಳನಾಗಿರುವ ಯಾರಿಗೂ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
ئەرەپچە تەپسىرلەر:
یٰقَوْمِ لَكُمُ الْمُلْكُ الْیَوْمَ ظٰهِرِیْنَ فِی الْاَرْضِ ؗ— فَمَنْ یَّنْصُرُنَا مِنْ بَاْسِ اللّٰهِ اِنْ جَآءَنَا ؕ— قَالَ فِرْعَوْنُ مَاۤ اُرِیْكُمْ اِلَّا مَاۤ اَرٰی وَمَاۤ اَهْدِیْكُمْ اِلَّا سَبِیْلَ الرَّشَادِ ۟
ಓ ನನ್ನ ಜನರೇ! ನೀವು ಭೂಮಿಯಲ್ಲಿ ಪ್ರಾಬಲ್ಯ ಪಡೆದಿರುವ ಕಾರಣ ಇಂದು ಇದರ ಸಾರ್ವಭೌಮತ್ವವು ನಿಮ್ಮ ವಶದಲ್ಲಿದೆ. ಆದರೆ ಅಲ್ಲಾಹನ ಶಿಕ್ಷೆ ನಮ್ಮ ಬಳಿಗೆ ಬಂದರೆ ನಮಗೆ ಸಹಾಯ ಮಾಡುವವರು ಯಾರು?” ಫರೋಹ ಹೇಳಿದನು: “ನಾನು ಸ್ವತಃ ನನಗಾಗಿ ಸರಿಯೆಂದು ಕಾಣುವ ಮಾರ್ಗವನ್ನೇ ನಿಮಗೆ ತಿಳಿಸುತ್ತಿದ್ದೇನೆ. ನಾನು ನಿಮಗೆ ಒಳಿತಿನ ಮಾರ್ಗವನ್ನೇ ತೋರಿಸಿಕೊಡುತ್ತಿದ್ದೇನೆ.”
ئەرەپچە تەپسىرلەر:
وَقَالَ الَّذِیْۤ اٰمَنَ یٰقَوْمِ اِنِّیْۤ اَخَافُ عَلَیْكُمْ مِّثْلَ یَوْمِ الْاَحْزَابِ ۟ۙ
ಆ ಸತ್ಯವಿಶ್ವಾಸಿ ವ್ಯಕ್ತಿ ಹೇಳಿದರು: “ಓ ನನ್ನ ಜನರೇ! ಇತರ ಸಮುದಾಯಗಳಿಗೆ ಸಂಭವಿಸಿದ ಆ ದಿನವು (ಕೆಟ್ಟ ಶಿಕ್ಷೆ) ನಿಮಗೂ ಸಂಭವಿಸಬಹುದೆಂದು ನನಗೆ ಭಯವಾಗುತ್ತಿದೆ.
ئەرەپچە تەپسىرلەر:
مِثْلَ دَاْبِ قَوْمِ نُوْحٍ وَّعَادٍ وَّثَمُوْدَ وَالَّذِیْنَ مِنْ بَعْدِهِمْ ؕ— وَمَا اللّٰهُ یُرِیْدُ ظُلْمًا لِّلْعِبَادِ ۟
ಅಂದರೆ ನೂಹರ ಜನರು, ಆದ್ ಗೋತ್ರ, ಸಮೂದ್ ಗೋತ್ರ ಮತ್ತು ಅವರ ನಂತರದವರ ಸ್ಥಿತಿಯಂತೆ. ಅಲ್ಲಾಹು ತನ್ನ ದಾಸರಿಗೆ ಯಾವುದೇ ರೀತಿಯ ಅನ್ಯಾಯ ಮಾಡಲು ಬಯಸುವುದಿಲ್ಲ.
ئەرەپچە تەپسىرلەر:
وَیٰقَوْمِ اِنِّیْۤ اَخَافُ عَلَیْكُمْ یَوْمَ التَّنَادِ ۟ۙ
ಓ ನನ್ನ ಜನರೇ! ನಿಶ್ಚಯವಾಗಿಯೂ ಜನರು ಮೊರೆಯಿಟ್ಟು ರೋದಿಸುವ ಆ ದಿನವನ್ನು ನಾನು ನಿಮ್ಮ ವಿಷಯದಲ್ಲಿ ಭಯಪಡುತ್ತೇನೆ.
ئەرەپچە تەپسىرلەر:
یَوْمَ تُوَلُّوْنَ مُدْبِرِیْنَ ۚ— مَا لَكُمْ مِّنَ اللّٰهِ مِنْ عَاصِمٍ ۚ— وَمَنْ یُّضْلِلِ اللّٰهُ فَمَا لَهٗ مِنْ هَادٍ ۟
ಅಂದರೆ ನೀವು ಬೆನ್ನು ತೋರಿಸಿ ಓಡುವ ದಿನ! ನಿಮ್ಮನ್ನು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸುವವರು ಯಾರೂ ಇರುವುದಿಲ್ಲ. ಅಲ್ಲಾಹು ಯಾರನ್ನಾದರೂ ದಾರಿತಪ್ಪಿಸಿದರೆ ನಂತರ ಅವನಿಗೆ ಸನ್ಮಾರ್ಗ ತೋರಿಸುವವರು ಯಾರೂ ಇಲ್ಲ.
ئەرەپچە تەپسىرلەر:
 
مەنالار تەرجىمىسى سۈرە: غاپىر
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- ھەمزە بەتتۇر - تەرجىمىلەر مۇندەرىجىسى

مۇھەممەد ھەمزە تەرىپىدىن تەرجىمە قىلىنغان. روۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش