Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- ھەمزە بەتتۇر * - تەرجىمىلەر مۇندەرىجىسى

PDF XML CSV Excel API
Please review the Terms and Policies

مەنالار تەرجىمىسى سۈرە: ساد   ئايەت:
وَوَهَبْنَا لَهٗۤ اَهْلَهٗ وَمِثْلَهُمْ مَّعَهُمْ رَحْمَةً مِّنَّا وَذِكْرٰی لِاُولِی الْاَلْبَابِ ۟
ನಾವು ಅವರಿಗೆ ಅವರ ಸಂಪೂರ್ಣ ಕುಟುಂಬವನ್ನು ಮತ್ತು ಅದರೊಂದಿಗೆ ಅಷ್ಟೇ ಸಂಖ್ಯೆಯ ಇತರರನ್ನೂ ದಯಪಾಲಿಸಿದೆವು. ನಮ್ಮ ವಿಶೇಷ ದಯೆಯಾಗಿ ಮತ್ತು ಬುದ್ಧಿವಂತರಿಗೆ ಒಂದು ಉಪದೇಶವಾಗಿ.
ئەرەپچە تەپسىرلەر:
وَخُذْ بِیَدِكَ ضِغْثًا فَاضْرِبْ بِّهٖ وَلَا تَحْنَثْ ؕ— اِنَّا وَجَدْنٰهُ صَابِرًا ؕ— نِّعْمَ الْعَبْدُ ؕ— اِنَّهٗۤ اَوَّابٌ ۟
“ನೀವು ಒಂದು ಹಿಡಿ ಹುಲ್ಲನ್ನು ನಿಮ್ಮ ಕೈಯಲ್ಲಿ ಹಿಡಿದು ಅದರಿಂದ ಬಡಿಯಿರಿ. ನಿಮ್ಮ ಪ್ರತಿಜ್ಞೆಯನ್ನು ಉಲ್ಲಂಘಿಸಬೇಡಿ.”[1] ನಿಶ್ಚಯವಾಗಿಯೂ ನಾವು ಅವರನ್ನು ಬಹಳ ಸಹಿಷ್ಣುತೆಯಿರುವ ದಾಸನಾಗಿ ಕಂಡೆವು. ಅತ್ಯುತ್ತಮ ದಾಸ! ಅವರು ಅತ್ಯಧಿಕ ಪಶ್ಚಾತ್ತಾಪಪಡುವವರಾಗಿದ್ದರು.
[1] ಅಯ್ಯೂಬ್ (ಅವರ ಮೇಲೆ ಶಾಂತಿಯಿರಲಿ) ರೋಗಿಯಾಗಿದ್ದಾಗ ಯಾವುದೋ ವಿಷಯದಲ್ಲಿ ಪತ್ನಿಯ ಮೇಲೆ ಸಿಟ್ಟಾಗಿ, ನಿನಗೆ ನೂರು ಏಟುಗಳನ್ನು ಬಾರಿಸುತ್ತೇನೆ ಎಂದು ಶಪಥ ಮಾಡಿದ್ದರು. ರೋಗ ಗುಣವಾದ ನಂತರ ನೂರು ತೆನೆಗಳಿರುವ ಹುಲ್ಲಿನ ಕಟ್ಟನ್ನು ತೆಗೆದುಕೊಂಡು ಒಂದು ಬಾರಿ ಹೊಡೆಯುವ ಮೂಲಕ ಶಪಥವನ್ನು ಈಡೇರಿಸಲು ಇಲ್ಲಿ ಹೇಳಲಾಗಿದೆ.
ئەرەپچە تەپسىرلەر:
وَاذْكُرْ عِبٰدَنَاۤ اِبْرٰهِیْمَ وَاِسْحٰقَ وَیَعْقُوْبَ اُولِی الْاَیْدِیْ وَالْاَبْصَارِ ۟
ಶಕ್ತಿಶಾಲಿ ಮತ್ತು ದೂರದೃಷ್ಟಿಯುಳ್ಳ ನಮ್ಮ ದಾಸರಾದ ಇಬ್ರಾಹೀಮ್, ಇಸ್‍ಹಾಕ್ ಮತ್ತು ಯಾ‌ಕೂಬರನ್ನು ಸ್ಮರಿಸಿರಿ.
ئەرەپچە تەپسىرلەر:
اِنَّاۤ اَخْلَصْنٰهُمْ بِخَالِصَةٍ ذِكْرَی الدَّارِ ۟ۚ
ನಾವು ಅವರನ್ನು ಒಂದು ವಿಶೇಷ ವಿಷಯಕ್ಕೆ ಅಂದರೆ ಪರಲೋಕದ ಸ್ಮರಣೆಯೊಂದಿಗೆ ಉತ್ಕೃಷ್ಟಗೊಳಿಸಿದೆವು.
ئەرەپچە تەپسىرلەر:
وَاِنَّهُمْ عِنْدَنَا لَمِنَ الْمُصْطَفَیْنَ الْاَخْیَارِ ۟ؕ
ನಿಶ್ಚಯವಾಗಿಯೂ ಅವರು ನಮ್ಮ ಬಳಿ ಆರಿಸಲಾದ ಮತ್ತು ಅತಿಶ್ರೇಷ್ಠ ಜನರಾಗಿದ್ದಾರೆ.
ئەرەپچە تەپسىرلەر:
وَاذْكُرْ اِسْمٰعِیْلَ وَالْیَسَعَ وَذَا الْكِفْلِ ؕ— وَكُلٌّ مِّنَ الْاَخْیَارِ ۟ؕ
ಇಸ್ಮಾಈಲ್, ಅಲ್‍ಯಸಅ್, ಮತ್ತು ದುಲ್‍ಕಿಫ್ಲರನ್ನು ಸ್ಮರಿಸಿರಿ. ಅವರೆಲ್ಲರೂ ಅತಿಶ್ರೇಷ್ಠರಾಗಿದ್ದಾರೆ.
ئەرەپچە تەپسىرلەر:
هٰذَا ذِكْرٌ ؕ— وَاِنَّ لِلْمُتَّقِیْنَ لَحُسْنَ مَاٰبٍ ۟ۙ
ಇದೊಂದು ಉಪದೇಶವಾಗಿದೆ. ನಿಶ್ಚಯವಾಗಿಯೂ ದೇವಭಯವುಳ್ಳವರಿಗೆ ಅತ್ಯುತ್ತಮ ವಾಸಸ್ಥಳವಿದೆ.
ئەرەپچە تەپسىرلەر:
جَنّٰتِ عَدْنٍ مُّفَتَّحَةً لَّهُمُ الْاَبْوَابُ ۟ۚ
ಶಾಶ್ವತ ವಾಸದ ಸ್ವರ್ಗೋದ್ಯಾನಗಳು. ಅವರಿಗೆ ಅದರ ದ್ವಾರಗಳನ್ನು ತೆರೆದಿಡಲಾಗಿದೆ.
ئەرەپچە تەپسىرلەر:
مُتَّكِـِٕیْنَ فِیْهَا یَدْعُوْنَ فِیْهَا بِفَاكِهَةٍ كَثِیْرَةٍ وَّشَرَابٍ ۟
ಅಲ್ಲಿ ಅವರು ಒರಗಿ ಕುಳಿತು ಹಲವಾರು ವಿಧಗಳ ಹಣ್ಣುಗಳನ್ನು ಮತ್ತು ಪಾನೀಯಗಳಿಗೆ ಬೇಡಿಕೆಯಿಡುವರು.
ئەرەپچە تەپسىرلەر:
وَعِنْدَهُمْ قٰصِرٰتُ الطَّرْفِ اَتْرَابٌ ۟
ಅವರ ಬಳಿ ದೃಷ್ಟಿಗಳನ್ನು ನಿಯಂತ್ರಿಸುವ ಸಮಪ್ರಾಯದ ತರುಣಿಗಳಿರುವರು.
ئەرەپچە تەپسىرلەر:
هٰذَا مَا تُوْعَدُوْنَ لِیَوْمِ الْحِسَابِ ۟
ಇದು ನಿಮಗೆ ವಿಚಾರಣೆಯ ದಿನಕ್ಕಾಗಿ ಮಾಡಲಾದ ವಾಗ್ದಾನವಾಗಿದೆ.
ئەرەپچە تەپسىرلەر:
اِنَّ هٰذَا لَرِزْقُنَا مَا لَهٗ مِنْ نَّفَادٍ ۟ۚۖ
ನಿಶ್ಚಯವಾಗಿಯೂ ಇದು ನಮ್ಮ ಕಡೆಯ ಉಪಜೀವನವಾಗಿದೆ. ಇದಕ್ಕೆ ಕೊನೆಯೆಂಬುದೇ ಇಲ್ಲ.
ئەرەپچە تەپسىرلەر:
هٰذَا ؕ— وَاِنَّ لِلطّٰغِیْنَ لَشَرَّ مَاٰبٍ ۟ۙ
ಇದು (ದೇವಭಯವುಳ್ಳವರ ಸ್ಥಿತಿಯಾಗಿದೆ). ನಿಶ್ಚಯವಾಗಿಯೂ ಅತಿರೇಕಿಗಳಿಗೆ ಅತಿಕೆಟ್ಟ ವಾಸಸ್ಥಳವಿದೆ.
ئەرەپچە تەپسىرلەر:
جَهَنَّمَ ۚ— یَصْلَوْنَهَا ۚ— فَبِئْسَ الْمِهَادُ ۟
ನರಕಾಗ್ನಿ! ಅವರು ಅದನ್ನು ಪ್ರವೇಶಿಸುವರು. ಅದು ಅತಿ ನಿಕೃಷ್ಟ ವಾಸಸ್ಥಳವಾಗಿದೆ.
ئەرەپچە تەپسىرلەر:
هٰذَا ۙ— فَلْیَذُوْقُوْهُ حَمِیْمٌ وَّغَسَّاقٌ ۟ۙ
ಇದು (ಅವರ ಸ್ಥಿತಿಯಾಗಿದೆ). ಆದ್ದರಿಂದ ಅವರು ಅದರ ರುಚಿಯನ್ನು ನೋಡಲಿ. ಕುದಿಯುವ ನೀರು ಮತ್ತು ಕೀವು!
ئەرەپچە تەپسىرلەر:
وَّاٰخَرُ مِنْ شَكْلِهٖۤ اَزْوَاجٌ ۟ؕ
ಇದರ ಹೊರತಾಗಿ ಇನ್ನೂ ಅನೇಕ ವಿಧದ ಶಿಕ್ಷೆಗಳು!
ئەرەپچە تەپسىرلەر:
هٰذَا فَوْجٌ مُّقْتَحِمٌ مَّعَكُمْ ۚ— لَا مَرْحَبًا بِهِمْ ؕ— اِنَّهُمْ صَالُوا النَّارِ ۟
“ಇದು ನಿಮ್ಮ ಜೊತೆಗೆ (ನರಕವನ್ನು) ಪ್ರವೇಶಿಸುವ ಒಂದು ಗುಂಪಾಗಿದೆ. ಅವರಿಗೆ ಸ್ವಾಗತವಿಲ್ಲ. ನಿಶ್ಚಯವಾಗಿಯೂ ಅವರು ನರಕವನ್ನು ಪ್ರವೇಶಿಸುವರು.”
ئەرەپچە تەپسىرلەر:
قَالُوْا بَلْ اَنْتُمْ ۫— لَا مَرْحَبًا بِكُمْ ؕ— اَنْتُمْ قَدَّمْتُمُوْهُ لَنَا ۚ— فَبِئْسَ الْقَرَارُ ۟
ಅವರು ಹೇಳುವರು: “ಅಲ್ಲ, ನಿಮಗೇ ಸ್ವಾಗತವಿಲ್ಲ. ನೀವೇ ಇದನ್ನು ನಮಗೆ ಮೊದಲು ತಂದಿಟ್ಟವರು. ಆ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ!”
ئەرەپچە تەپسىرلەر:
قَالُوْا رَبَّنَا مَنْ قَدَّمَ لَنَا هٰذَا فَزِدْهُ عَذَابًا ضِعْفًا فِی النَّارِ ۟
ಅವರು ಹೇಳುವರು: “ನಮ್ಮ ಪರಿಪಾಲಕನೇ! ಇದನ್ನು ನಮಗೆ ತಂದಿಟ್ಟವರು ಯಾರೋ ಅವರಿಗೆ ನರಕದಲ್ಲಿ ಇಮ್ಮಡಿ ಶಿಕ್ಷೆಯನ್ನು ನೀಡು.”
ئەرەپچە تەپسىرلەر:
 
مەنالار تەرجىمىسى سۈرە: ساد
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- ھەمزە بەتتۇر - تەرجىمىلەر مۇندەرىجىسى

مۇھەممەد ھەمزە تەرىپىدىن تەرجىمە قىلىنغان. روۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش