Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- ھەمزە بەتتۇر * - تەرجىمىلەر مۇندەرىجىسى

PDF XML CSV Excel API
Please review the Terms and Policies

مەنالار تەرجىمىسى سۈرە: تاھا   ئايەت:
فَاَخْرَجَ لَهُمْ عِجْلًا جَسَدًا لَّهٗ خُوَارٌ فَقَالُوْا هٰذَاۤ اِلٰهُكُمْ وَاِلٰهُ مُوْسٰی ۚۙ۬— فَنَسِیَ ۟ؕ
ನಂತರ ಅವನು ಧ್ವನಿ ಹೊರಡಿಸುವ ಒಂದು ಕರುವಿನ ರೂಪವನ್ನು ಅದರಿಂದ ಹೊರತಂದನು. ಅವರು ಹೇಳಿದರು: “ಇದೇ ನಿಮ್ಮ ಮತ್ತು ಮೂಸಾರ ದೇವರು. ಮೂಸಾರಿಗೆ ಅದು ಮರೆತುಹೋಗಿದೆ.”[1]
[1] ಇಸ್ರಾಯೇಲ್ ಮಕ್ಕಳು ಈಜಿಪ್ಟಿನಿಂದ ಬರುವಾಗ ಈಜಿಪ್ಟಿನ ಜನರಿಂದ ಅವರು ಸಾಲವಾಗಿ ಪಡೆದ ಆಭರಣಗಳನ್ನು ಕೂಡ ತಂದಿದ್ದರು. ಆದರೆ ಆ ಆಭರಣಗಳನ್ನು ಉಪಯೋಗಿಸುವುದು ನಿಷಿದ್ಧವಾಗಿದ್ದರಿಂದ ಅವರು ಅದನ್ನು ಬೆಂಕಿಗೆಸೆದರು. ಸಾಮಿರಿ ಕೂಡ ತನ್ನಲ್ಲಿರುವ ಆಭರಣಗಳನ್ನು ಎಸೆದನು. ನಂತರ ಅವನು ಅದರಿಂದ ಒಂದು ಕರುವಿನ ಮೂರ್ತಿಯನ್ನು ಮಾಡಿದನು. ಆ ಮೂರ್ತಿ ಹೇಗಿತ್ತೆಂದರೆ ಗಾಳಿ ಅದರೊಳಗೆ ಹೊಕ್ಕಾಗ ಅದರಿಂದ ಒಂದು ರೀತಿಯ ಧ್ವನಿ ಬರುತ್ತಿತ್ತು. ಸಾಮಿರಿ ಆ ಮೂರ್ತಿಯನ್ನು ಜನರಿಗೆ ತೋರಿಸಿ, “ಮೂಸಾ ಅಲ್ಲಾಹನನ್ನು ಭೇಟಿಯಾಗಲು ತೂರ್ ಪರ್ವತಕ್ಕೆ ಹೋಗಿದ್ದಾರೆ. ಆದರೆ ಅವರಿಗೆ ಮರೆತುಹೋಗಿದೆ. ವಾಸ್ತವವಾಗಿ ಅವರು ದೇವರು ಇಲ್ಲೇ ಇದ್ದಾನೆ” ಎನ್ನುತ್ತಾ ಅವರನ್ನು ದಾರಿತಪ್ಪಿಸಿದನು.
ئەرەپچە تەپسىرلەر:
اَفَلَا یَرَوْنَ اَلَّا یَرْجِعُ اِلَیْهِمْ قَوْلًا ۙ۬— وَّلَا یَمْلِكُ لَهُمْ ضَرًّا وَّلَا نَفْعًا ۟۠
ಆದರೆ ಅವರ ಮಾತಿಗೆ ಉತ್ತರ ನೀಡಲು ಮತ್ತು ಅವರಿಗೆ ಯಾವುದೇ ತೊಂದರೆ ಅಥವಾ ಉಪಕಾರ ಮಾಡಲು ಅದಕ್ಕೆ (ಆ ಕರುವಿನ ಮೂರ್ತಿಗೆ) ಸಾಧ್ಯವಿಲ್ಲವೆಂದು ಅವರು ಕಾಣುವುದಿಲ್ಲವೇ?
ئەرەپچە تەپسىرلەر:
وَلَقَدْ قَالَ لَهُمْ هٰرُوْنُ مِنْ قَبْلُ یٰقَوْمِ اِنَّمَا فُتِنْتُمْ بِهٖ ۚ— وَاِنَّ رَبَّكُمُ الرَّحْمٰنُ فَاتَّبِعُوْنِیْ وَاَطِیْعُوْۤا اَمْرِیْ ۟
ಇದಕ್ಕಿಂತ ಮೊದಲು ಹಾರೂನ್ ಅವರೊಡನೆ ಹೇಳಿದ್ದರು: “ಓ ನನ್ನ ಜನರೇ! ಈ ಕರುವಿನ ಮೂಲಕ ನಿಮ್ಮನ್ನು ಪರೀಕ್ಷಿಸಲಾಗುತ್ತಿದೆ. ನಿಶ್ಚಯವಾಗಿಯೂ ಪರಮ ದಯಾಮಯನೇ (ಅಲ್ಲಾಹನೇ) ನಿಮ್ಮ ಪರಿಪಾಲಕ. ನೀವು ನನ್ನನ್ನು ಅನುಸರಿಸಿರಿ. ನನ್ನ ಮಾತನ್ನು ಕೇಳಿರಿ.”
ئەرەپچە تەپسىرلەر:
قَالُوْا لَنْ نَّبْرَحَ عَلَیْهِ عٰكِفِیْنَ حَتّٰی یَرْجِعَ اِلَیْنَا مُوْسٰی ۟
ಅವರು ಉತ್ತರಿಸಿದರು: “ಮೂಸಾ ನಮ್ಮ ಬಳಿಗೆ ಮರಳುವ ತನಕ ನಾವು ಇದರ ಮುಂದೆ ಧ್ಯಾನ ಮಾಡುತ್ತಲೇ ಇರುತ್ತೇವೆ.”
ئەرەپچە تەپسىرلەر:
قَالَ یٰهٰرُوْنُ مَا مَنَعَكَ اِذْ رَاَیْتَهُمْ ضَلُّوْۤا ۟ۙ
ಮೂಸಾ ಕೇಳಿದರು: “ಓ ಹಾರೂನ್! ಇವರು ದಾರಿತಪ್ಪುವುದನ್ನು ಕಂಡಾಗ ನಿಮ್ಮನ್ನು ತಡೆದದ್ದು ಏನು?
ئەرەپچە تەپسىرلەر:
اَلَّا تَتَّبِعَنِ ؕ— اَفَعَصَیْتَ اَمْرِیْ ۟
ನನ್ನನ್ನು ಅನುಸರಿಸದಂತೆ. ನೀನು ನನ್ನ ಆದೇಶವನ್ನು ಉಲ್ಲಂಘಿಸಿದೆಯಾ?”[1]
[1] ಅಂದರೆ ಅವರು ದಾರಿತಪ್ಪಿದ್ದನ್ನು ಕಂಡಾಗ ನೀನು ಅವರಿಗೆ ಬುದ್ಧಿವಾದ ಹೇಳಿದೆ. ಆದರೆ ಅವರು ಅದನ್ನು ಸ್ವೀಕರಿಸದೆ ಇದ್ದಾಗ ನೀನು ನೇರವಾಗಿ ನನ್ನ ಬಳಿಗೆ ತೂರ್ ಪರ್ವತಕ್ಕೆ ಬಂದು ನನಗೆ ವಿಷಯ ತಿಳಿಸಬೇಕಾಗಿತ್ತು. ನೀನು ಕೂಡ ನನ್ನ ಆದೇಶವನ್ನು ಉಲ್ಲಂಘಿಸಿರುವೆ. (ಅಂದರೆ ನೀನು ಸರಿಯಾದ ರೀತಿಯಲ್ಲಿ ನನ್ನ ಪ್ರತಿನಿಧಿಯಾಗಿರಲಿಲ್ಲ).
ئەرەپچە تەپسىرلەر:
قَالَ یَبْنَؤُمَّ لَا تَاْخُذْ بِلِحْیَتِیْ وَلَا بِرَاْسِیْ ۚ— اِنِّیْ خَشِیْتُ اَنْ تَقُوْلَ فَرَّقْتَ بَیْنَ بَنِیْۤ اِسْرَآءِیْلَ وَلَمْ تَرْقُبْ قَوْلِیْ ۟
ಹಾರೂನ್ ಹೇಳಿದರು: “ನನ್ನ ತಾಯಿಯ ಮಗನೇ! ನನ್ನ ಗಡ್ಡವನ್ನು ಅಥವಾ ನನ್ನ ತಲೆಯನ್ನು ಹಿಡಿಯಬೇಡ. ನೀನು ಇಸ್ರಾಯೇಲ್ ಮಕ್ಕಳ ನಡುವೆ ಭಿನ್ನಮತ ಎಬ್ಬಿಸಿರುವೆ. ನನ್ನ ಆಜ್ಞೆಯನ್ನು ಕೂಡ ನೀನು ಕಾಯಲಿಲ್ಲ ಎಂದು ನೀನು ಹೇಳಬಹುದೆಂದು ನನಗೆ ಭಯವಾಯಿತು.”[1]
[1] ವಾಸ್ತವವಾಗಿ ಹಾರೂನ್ (ಅವರ ಮೇಲೆ ಶಾಂತಿಯಿರಲಿ) ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದರು. ಅವರು ವಿಗ್ರಹಾರಾಧನೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು. ಆದರೆ ಎಷ್ಟೇ ತಿಳಿಹೇಳಿದರೂ ಜನರು ಅವರ ಮಾತನ್ನು ಕೇಳುತ್ತಿರಲಿಲ್ಲ. ನಂತರ ಪರಿಸ್ಥಿತಿ ಎಷ್ಟು ಗಂಭೀರವಾಯಿತೆಂದರೆ ಇಸ್ರಾಯೇಲ್ ಮಕ್ಕಳಲ್ಲಿ ಎರಡು ಗುಂಪುಗಳಾದವು. ಒಂದು ಗುಂಪು ಸಮರ್ಥಿಸಿದರೆ ಇನ್ನೊಂದು ಗುಂಪು ವಿರೋಧಿಸಿತು. ಈ ಎರಡು ಗುಂಪುಗಳು ಪರಸ್ಪರ ಹೊಡೆದಾಡುವ ಸ್ಥಿತಿಗೆ ತಲುಪಿತು.
ئەرەپچە تەپسىرلەر:
قَالَ فَمَا خَطْبُكَ یٰسَامِرِیُّ ۟
ಮೂಸಾ ಕೇಳಿದರು: “ಓ ಸಾಮಿರಿ! ನಿನ್ನ ಸಮಾಚಾರವೇನು?”
ئەرەپچە تەپسىرلەر:
قَالَ بَصُرْتُ بِمَا لَمْ یَبْصُرُوْا بِهٖ فَقَبَضْتُ قَبْضَةً مِّنْ اَثَرِ الرَّسُوْلِ فَنَبَذْتُهَا وَكَذٰلِكَ سَوَّلَتْ لِیْ نَفْسِیْ ۟
ಅವನು ಹೇಳಿದನು: “ಜನರಿಗೆ ಕಾಣಲು ಸಾಧ್ಯವಾಗದ ಒಂದನ್ನು ನಾನು ನೋಡಿದೆ. ನಾನು ಆ ದೇವದೂತನ ಹೆಜ್ಜೆ ಗುರುತಿನಿಂದ ಒಂದು ಹಿಡಿ ಮಣ್ಣು ತೆಗೆದು ಅದಕ್ಕೆ ಹಾಕಿದೆ. ಹೀಗೆ ಮಾಡಲು ನನ್ನ ಮನಸ್ಸು ನನ್ನನ್ನು ಪ್ರೇರೇಪಿಸಿತು.”[1]
[1] ಇಲ್ಲಿ ದೇವದೂತರು ಎಂದರೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ). ಜಿಬ್ರೀಲರ ಕುದುರೆ ಹಾದುಹೋಗುವುದು ಕಂಡಾಗ ಸಾಮಿರಿ ಅದರ ಕಾಲುಗಳ ಅಡಿಯಿಂದ ಮಣ್ಣನ್ನು ತೆಗೆದು ಜೋಪಾನವಾಗಿಟ್ಟಿದ್ದನು. ಆ ಮಣ್ಣನ್ನು ಅವನು ಆಭರಣಗಳಿಂದ ನಿರ್ಮಿಸಿದ ಕರುವಿನ ಮೂರ್ತಿಗೆ ಹಾಕಿದಾಗ ಅದರಿಂದ ಒಂದು ಶಬ್ದ ಹೊರಬರಲು ಶುರುವಾಯಿತು.
ئەرەپچە تەپسىرلەر:
قَالَ فَاذْهَبْ فَاِنَّ لَكَ فِی الْحَیٰوةِ اَنْ تَقُوْلَ لَا مِسَاسَ ۪— وَاِنَّ لَكَ مَوْعِدًا لَّنْ تُخْلَفَهٗ ۚ— وَانْظُرْ اِلٰۤی اِلٰهِكَ الَّذِیْ ظَلْتَ عَلَیْهِ عَاكِفًا ؕ— لَنُحَرِّقَنَّهٗ ثُمَّ لَنَنْسِفَنَّهٗ فِی الْیَمِّ نَسْفًا ۟
ಮೂಸಾ ಹೇಳಿದರು: “ಹೊರಟು ಹೋಗು! ನೀನು ನಿರಂತರ “ನನ್ನನ್ನು ಮುಟ್ಟಬೇಡಿ” ಎಂದು ಹೇಳುತ್ತಿರುವುದೇ ಇಹಲೋಕದಲ್ಲಿ ನಿನಗಿರುವ ಶಿಕ್ಷೆ.[1] ನಿನಗೆ ಒಂದು ನಿಶ್ಚಿತ ಅವಧಿಯಿದೆ. ಅದನ್ನು ಉಲ್ಲಂಘಿಸಲು ನಿನಗೆ ಸಾಧ್ಯವಿಲ್ಲ. ನೀನು ಧ್ಯಾನ ಮಾಡುತ್ತಿದ್ದ ನಿನ್ನ ದೇವರನ್ನು (ಕರುವನ್ನು) ನೋಡು. ನಾವು ಅದನ್ನು ಖಂಡಿತ ಸುಟ್ಟು ಬಿಡುವೆವು. ನಂತರ ಅದನ್ನು ನುಚ್ಚುನೂರು ಮಾಡಿ ಕಡಲಿಗೆ ಎಸೆಯುವೆವು.
[1] ಇದರ ನಂತರ ಅವನು ಜೀವನವಿಡೀ ಜನರನ್ನು ಕಂಡೊಡನೆ ನನ್ನನ್ನು ಮುಟ್ಟಬೇಡಿ, ನನ್ನಿಂದ ದೂರವಿರಿ ಎಂದು ಹೇಳುತ್ತಲೇ ಇದ್ದ. ಏಕೆಂದರೆ ಅವನನ್ನು ಯಾರಾದರೂ ಮುಟ್ಟಿದರೆ, ಅವನಿಗೂ ಮುಟ್ಟಿದವನಿಗೂ ಜ್ವರ ಬರುತ್ತಿತ್ತು. ನಂತರ ಅವನು ಜನವಾಸದಿಂದ ೂದೂರವಾಗಿ ಅಡವಿಗೆ ಹೋಗಿ ಮೃಗಗಳೊಡನೆ ವಾಸಿಸತೊಡಗಿದನು.
ئەرەپچە تەپسىرلەر:
اِنَّمَاۤ اِلٰهُكُمُ اللّٰهُ الَّذِیْ لَاۤ اِلٰهَ اِلَّا هُوَ ؕ— وَسِعَ كُلَّ شَیْءٍ عِلْمًا ۟
ಯಾರ ಹೊರತು ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲವೋ ಆ ಅಲ್ಲಾಹನೇ ನಿಮ್ಮ ದೇವನು. ಅವನ ಜ್ಞಾನವು ಎಲ್ಲಾ ವಸ್ತುಗಳನ್ನೂ ಆವರಿಸಿಕೊಂಡಿದೆ.
ئەرەپچە تەپسىرلەر:
 
مەنالار تەرجىمىسى سۈرە: تاھا
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- ھەمزە بەتتۇر - تەرجىمىلەر مۇندەرىجىسى

مۇھەممەد ھەمزە تەرىپىدىن تەرجىمە قىلىنغان. روۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش