Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- ھەمزە بەتتۇر * - تەرجىمىلەر مۇندەرىجىسى

PDF XML CSV Excel API
Please review the Terms and Policies

مەنالار تەرجىمىسى سۈرە: ئىسرا   ئايەت:
وَاِنْ كَادُوْا لَیَسْتَفِزُّوْنَكَ مِنَ الْاَرْضِ لِیُخْرِجُوْكَ مِنْهَا وَاِذًا لَّا یَلْبَثُوْنَ خِلٰفَكَ اِلَّا قَلِیْلًا ۟
ಅವರು ನಿಮ್ಮನ್ನು ಈ ಊರಿನಿಂದ ಇನ್ನೇನು ತೊಲಗಿಸುವುದರಲ್ಲಿದ್ದರು. ನಿಮ್ಮನ್ನು ಇಲ್ಲಿಂದ ಓಡಿಸುವುದೇ ಅವರ ಉದ್ದೇಶವಾಗಿದೆ. ಹಾಗೇನಾದರೂ ಆದರೆ, ನಿಮ್ಮ ನಂತರ ಅವರು ಅಲ್ಪ ಸಮಯದವರೆಗೆ ಮಾತ್ರ ಅಲ್ಲಿ ವಾಸಿಸುತ್ತಿದ್ದರು.
ئەرەپچە تەپسىرلەر:
سُنَّةَ مَنْ قَدْ اَرْسَلْنَا قَبْلَكَ مِنْ رُّسُلِنَا وَلَا تَجِدُ لِسُنَّتِنَا تَحْوِیْلًا ۟۠
ಇದು ನಿಮಗಿಂತ ಮೊದಲು ನಾವು ಕಳುಹಿಸಲಾದ ನಮ್ಮ ಸಂದೇಶವಾಹಕರ ವಿಷಯದಲ್ಲಿ ಕೈಗೊಂಡ ಕ್ರಮವಾಗಿದೆ. ನಮ್ಮ ಕ್ರಮದಲ್ಲಿ ನೀವು ಯಾವುದೇ ಬದಲಾವಣೆಯನ್ನು ಕಾಣಲಾರಿರಿ.
ئەرەپچە تەپسىرلەر:
اَقِمِ الصَّلٰوةَ لِدُلُوْكِ الشَّمْسِ اِلٰی غَسَقِ الَّیْلِ وَقُرْاٰنَ الْفَجْرِ ؕ— اِنَّ قُرْاٰنَ الْفَجْرِ كَانَ مَشْهُوْدًا ۟
ಸೂರ್ಯನು (ಮಧ್ಯರೇಖೆಯಿಂದ) ಸರಿಯುವ ಸಮಯದಿಂದ ತೊಡಗಿ ಕತ್ತಲಾಗುವ ತನಕ ನಮಾಝ್ ಸಂಸ್ಥಾಪಿಸಿರಿ. ಪ್ರಭಾತದ ಕುರ್‌ಆನ್ ಪಠಣ ಮಾಡಿರಿ. ಪ್ರಭಾತದ ಕುರ್‌ಆನ್ ಪಠಣವು ಸಾಕ್ಷಿಯಾಗಿರುತ್ತದೆ.[1]
[1] ಮಧ್ಯಾಹ್ನದ ನಂತರ ರಾತ್ರಿಯವರೆಗೆ ನಾಲ್ಕು ನಮಾಝ್‍ಗಳಿವೆ. ಝುಹರ್, ಅಸರ್, ಮಗ್ರಿಬ್ ಮತ್ತು ಇಶಾ. ಪ್ರಭಾತದ ಕುರ್‌ಆನ್ ಎಂದರೆ ಫಜ್ರ್ ನಮಾಝ್. ಫಜ್ರ್ ನಮಾಝ್‌ನ ಸಮಯದಲ್ಲಿ ದೇವದೂತರುಗಳು ಹಾಜರಾಗುತ್ತಾರೆ. ಮಾತ್ರವಲ್ಲ, ಆ ಸಮಯದಲ್ಲಿ ರಾತ್ರಿಯ ದೇವದೂತರುಗಳು ಮತ್ತು ಹಗಲಿನ ದೇವದೂತರುಗಳು ಸಮ್ಮಿಲನಗೊಳ್ಳುತ್ತಾರೆ.
ئەرەپچە تەپسىرلەر:
وَمِنَ الَّیْلِ فَتَهَجَّدْ بِهٖ نَافِلَةً لَّكَ ۖۗ— عَسٰۤی اَنْ یَّبْعَثَكَ رَبُّكَ مَقَامًا مَّحْمُوْدًا ۟
ರಾತ್ರಿಯ ಕೆಲವು ಸಮಯದಲ್ಲಿ ತಹಜ್ಜುದ್ ನಮಾಝ್ ಮಾಡುತ್ತಾ ಕುರ್‌ಆನ್ ಪಠಿಸಿರಿ. ಇದು ನಿಮಗೆ ಮಾತ್ರವಿರುವ ಹೆಚ್ಚಳವಾಗಿದೆ. ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮನ್ನು ಸ್ತುತ್ಯರ್ಹ ಸ್ಥಾನಕ್ಕೆ ಕಳುಹಿಸಲೂಬಹುದು.[1]
[1] ತಹಜ್ಜುದ್ ನಮಾಝ್ ಎಂದರೆ ರಾತ್ರಿಯಲ್ಲಿ ಎದ್ದು ನಿರ್ವಹಿಸುವ ನಮಾಝ್. ಈ ನಮಾಝ್ ಕಡ್ಡಾಯವಲ್ಲ. ಆದರೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದು ಕಡ್ಡಾಯವಾಗಿದೆ. ಸ್ತುತ್ಯರ್ಹ ಸ್ಥಾನ (ಮಕಾಮೆ ಮಹ್ಮೂದ್) ಎಂದರೆ ಪುನರುತ್ಥಾನ ದಿನದಂದು ಅಲ್ಲಾಹು ಪ್ರವಾದಿ ಮುಹಮ್ಮದರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶೇಷವಾಗಿ ನೀಡುವ ಸ್ಥಾನ. ಜನರೆಲ್ಲರನ್ನೂ ವಿಚಾರಣೆಗೆ ಕರೆಯಲು ಅವರು ಈ ಸ್ಥಾನದಲ್ಲಿ ನಿಂತು ಅತಿದೊಡ್ಡ ಶಿಫಾರಸು (ಶಫಾಅತ್ ಉಝ್ಮಾ) ಮಾಡುತ್ತಾರೆ.
ئەرەپچە تەپسىرلەر:
وَقُلْ رَّبِّ اَدْخِلْنِیْ مُدْخَلَ صِدْقٍ وَّاَخْرِجْنِیْ مُخْرَجَ صِدْقٍ وَّاجْعَلْ لِّیْ مِنْ لَّدُنْكَ سُلْطٰنًا نَّصِیْرًا ۟
ಹೇಳಿರಿ: “ನನ್ನ ಪರಿಪಾಲಕನೇ! ನನ್ನನ್ನು ಎಲ್ಲಿಗೆ ಪ್ರವೇಶ ಮಾಡಿಸಿದರೂ ಉತ್ತಮವಾಗಿ ಪ್ರವೇಶ ಮಾಡಿಸು ಮತ್ತು ಎಲ್ಲಿಂದ ನಿರ್ಗಮಿಸುವಂತೆ ಮಾಡಿದರೂ ಉತ್ತಮವಾಗಿ ನಿರ್ಗಮಿಸುವಂತೆ ಮಾಡು. ನನಗೆ ನಿನ್ನ ಕಡೆಯಿಂದ ಅಧಿಕಾರ ಮತ್ತು ಸಹಾಯವನ್ನು ನೀಡು.”
ئەرەپچە تەپسىرلەر:
وَقُلْ جَآءَ الْحَقُّ وَزَهَقَ الْبَاطِلُ ؕ— اِنَّ الْبَاطِلَ كَانَ زَهُوْقًا ۟
ಹೇಳಿರಿ: “ಸತ್ಯವು ಬಂದಿದೆ ಮತ್ತು ಅಸತ್ಯವು ನಾಶವಾಗಿದೆ. ಅಸತ್ಯವು ನಾಶವಾಗಿಯೇ ತೀರುತ್ತದೆ.”
ئەرەپچە تەپسىرلەر:
وَنُنَزِّلُ مِنَ الْقُرْاٰنِ مَا هُوَ شِفَآءٌ وَّرَحْمَةٌ لِّلْمُؤْمِنِیْنَ ۙ— وَلَا یَزِیْدُ الظّٰلِمِیْنَ اِلَّا خَسَارًا ۟
ನಾವು ಅವತೀರ್ಣಗೊಳಿಸುವ ಈ ಕುರ್‌ಆನ್ ಸತ್ಯವಿಶ್ವಾಸಿಗಳಿಗೆ ಉಪಶಮನ ಮತ್ತು ದಯೆಯಾಗಿದೆ. ಇದು ಅಕ್ರಮಿಗಳಿಗೆ ನಷ್ಟವಲ್ಲದೆ ಬೇರೇನನ್ನೂ ಹೆಚ್ಚಿಸುವುದಿಲ್ಲ.
ئەرەپچە تەپسىرلەر:
وَاِذَاۤ اَنْعَمْنَا عَلَی الْاِنْسَانِ اَعْرَضَ وَنَاٰ بِجَانِبِهٖ ۚ— وَاِذَا مَسَّهُ الشَّرُّ كَانَ یَـُٔوْسًا ۟
ನಾವು ಮಾನವನಿಗೆ ಅನುಗ್ರಹವನ್ನು ದಯಪಾಲಿಸಿದರೆ, ಅವನು ವಿಮುಖನಾಗುತ್ತಾನೆ ಮತ್ತು ದೂರ ಸರಿಯುತ್ತಾನೆ. ಆದರೆ ಅವನಿಗೆ ತೊಂದರೆ ಉಂಟಾದರೆ ಅವನು ಹತಾಶನಾಗಿ ಬಿಡುತ್ತಾನೆ.
ئەرەپچە تەپسىرلەر:
قُلْ كُلٌّ یَّعْمَلُ عَلٰی شَاكِلَتِهٖ ؕ— فَرَبُّكُمْ اَعْلَمُ بِمَنْ هُوَ اَهْدٰی سَبِیْلًا ۟۠
ಹೇಳಿರಿ: “ಎಲ್ಲರೂ ತಮ್ಮ ತಮ್ಮ ವಿಧಾನದಂತೆ ಕರ್ಮವೆಸಗುತ್ತಾರೆ. ಸರಿಯಾದ ಮಾರ್ಗದಲ್ಲಿರುವವರು ಯಾರೆಂದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ.”
ئەرەپچە تەپسىرلەر:
وَیَسْـَٔلُوْنَكَ عَنِ الرُّوْحِ ؕ— قُلِ الرُّوْحُ مِنْ اَمْرِ رَبِّیْ وَمَاۤ اُوْتِیْتُمْ مِّنَ الْعِلْمِ اِلَّا قَلِیْلًا ۟
ಅವರು ನಿಮ್ಮೊಡನೆ ಆತ್ಮದ ಬಗ್ಗೆ ಪ್ರಶ್ನಿಸುತ್ತಾರೆ. ಹೇಳಿರಿ: “ಆತ್ಮವು ನನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಯಲ್ಲಿ ಸೇರಿದೆ. ನಿಮಗೆ ಬಹಳ ಕಡಿಮೆ ಜ್ಞಾನವನ್ನು ಮಾತ್ರ ನೀಡಲಾಗಿದೆ.”
ئەرەپچە تەپسىرلەر:
وَلَىِٕنْ شِئْنَا لَنَذْهَبَنَّ بِالَّذِیْۤ اَوْحَیْنَاۤ اِلَیْكَ ثُمَّ لَا تَجِدُ لَكَ بِهٖ عَلَیْنَا وَكِیْلًا ۟ۙ
ನಾವು ಇಚ್ಛಿಸಿದರೆ ನಿಮಗೆ ನೀಡಿದ ದೇವವಾಣಿಯನ್ನು ನಾವು ಖಂಡಿತ ಹಿಂದೆಗೆಯುವೆವು. ನಂತರ ಅದಕ್ಕೆ ಸಂಬಂಧಿಸಿ ನಮ್ಮ ವಿರುದ್ಧ ನೀವು ಯಾವುದೇ ಬೆಂಬಲಿಗರನ್ನು ಕಾಣಲಾರಿರಿ.
ئەرەپچە تەپسىرلەر:
 
مەنالار تەرجىمىسى سۈرە: ئىسرا
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- ھەمزە بەتتۇر - تەرجىمىلەر مۇندەرىجىسى

مۇھەممەد ھەمزە تەرىپىدىن تەرجىمە قىلىنغان. روۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش