Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: ئەئراپ   ئايەت:
وَاِذْ نَتَقْنَا الْجَبَلَ فَوْقَهُمْ كَاَنَّهٗ ظُلَّةٌ وَّظَنُّوْۤا اَنَّهٗ وَاقِعٌ بِهِمْ ۚ— خُذُوْا مَاۤ اٰتَیْنٰكُمْ بِقُوَّةٍ وَّاذْكُرُوْا مَا فِیْهِ لَعَلَّكُمْ تَتَّقُوْنَ ۟۠
ನಾವು ಪರ್ವತವನ್ನು ನೆರಳಿನಂತೆ ಅವರ ಮೇಲೆ ಎತ್ತಿ ಹಿಡಿದ ಸಂದರ್ಭ, ಅದು ತಮ್ಮ ಮೇಲೆ ಬಿದ್ದು ಬಿಡುತ್ತದೆಂದು ಅವರಿಗೆ ಮನದಟ್ಟಾದ ಸಂದರ್ಭವನ್ನು ಸ್ಮರಿಸಿರಿ. ಮತ್ತು ಹೇಳಿದೆವು; ನಾವು ನಿಮಗೆ ನೀಡಿರುವ ಗ್ರಂಥವನ್ನು ಸಧೃಢವಾಗಿ ಹಿಡಿದುಕೊಳ್ಳಿರಿ ಮತ್ತು ಅದರಲ್ಲಿರುವುದನ್ನು ಸ್ಮರಿಸಿರಿ ನೀವು ಭಯಭಕ್ತಿ ಪಾಲಿಸಬಹುದು.
ئەرەپچە تەپسىرلەر:
وَاِذْ اَخَذَ رَبُّكَ مِنْ بَنِیْۤ اٰدَمَ مِنْ ظُهُوْرِهِمْ ذُرِّیَّتَهُمْ وَاَشْهَدَهُمْ عَلٰۤی اَنْفُسِهِمْ ۚ— اَلَسْتُ بِرَبِّكُمْ ؕ— قَالُوْا بَلٰی ۛۚ— شَهِدْنَا ۛۚ— اَنْ تَقُوْلُوْا یَوْمَ الْقِیٰمَةِ اِنَّا كُنَّا عَنْ هٰذَا غٰفِلِیْنَ ۟ۙ
ನಿಮ್ಮ ಪ್ರಭುವು ಆದಮರ ಮಕ್ಕಳ ಬೆನ್ನುಗಳಿಂದ ಅವರ ಸಂತಾನಗಳನ್ನು ಹೊರತೆಗೆದು ಅವರನ್ನು ಸ್ವತಃ ಅವರ ಮೇಲೆ ಸಾಕ್ಷಿಯನ್ನಾಗಿರಿಸಿ, ನಾನು ನಿಮ್ಮ ಪ್ರಭುವಲ್ಲವೇ? ಎಂದು ಅವರೊಡನೆ ಕೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ಎಲ್ಲರೂ ಉತ್ತರಿಸಿದರು; ಏಕಿಲ್ಲ, ನಾವೆಲ್ಲರೂ ಸಾಕ್ಷö್ಯವಹಿಸುತ್ತೇವೆ. ಇದೇಕೆಂದರೆ ನೀವು ಪುನರುತ್ಥಾನದ ದಿನ ನಾವು ಈ ಕುರಿತು ಅಲಕ್ಷö್ಯರಾಗಿದ್ದೆವು ಎಂದು ಹೇಳಬಾರದೆಂದಾಗಿದೆ.
ئەرەپچە تەپسىرلەر:
اَوْ تَقُوْلُوْۤا اِنَّمَاۤ اَشْرَكَ اٰبَآؤُنَا مِنْ قَبْلُ وَكُنَّا ذُرِّیَّةً مِّنْ بَعْدِهِمْ ۚ— اَفَتُهْلِكُنَا بِمَا فَعَلَ الْمُبْطِلُوْنَ ۟
ಅಥವಾ ಈ ಮೊದಲು ನಮ್ಮ ಪೂರ್ವಿಕರು ಬಹುದೇವಾರಾಧನೆಯನ್ನು ಮಾಡಿದ್ದರು ಮತ್ತು ನಾವು ಅವರ ನಂತರ ಅವರ ಸಂತತಿಗಳಲ್ಲಿ ಬಂದವರಾಗಿದ್ದೇವೆ. ಹೀಗಿರುವಾಗ ಆ ಪಥಭ್ರಷ್ಟ ಕೃತ್ಯದ ನಿಮಿತ್ತ ನೀನು ನಮ್ಮನ್ನು ನಾಶ ಮಾಡಿ ಬಿಡುವೆಯಾ? ಎಂದು ಹೇಳಬಾರದೆಂದಾಗಿದೆ.
ئەرەپچە تەپسىرلەر:
وَكَذٰلِكَ نُفَصِّلُ الْاٰیٰتِ وَلَعَلَّهُمْ یَرْجِعُوْنَ ۟
ನಾವು ಇದೇ ಪ್ರಕಾರ ದೃಷ್ಟಾಂತಗಳನ್ನು ವಿವರಸಿಕೊಡುತ್ತೇವೆ. ಪ್ರಾಯಶಃ ಅವರು ಮರಳಬಹುದು.
ئەرەپچە تەپسىرلەر:
وَاتْلُ عَلَیْهِمْ نَبَاَ الَّذِیْۤ اٰتَیْنٰهُ اٰیٰتِنَا فَانْسَلَخَ مِنْهَا فَاَتْبَعَهُ الشَّیْطٰنُ فَكَانَ مِنَ الْغٰوِیْنَ ۟
ನೀವು ಅವರಿಗೆ ಆ ವ್ಯಕ್ತಿಯ ವೃತ್ತಾಂತವನ್ನು ಓದಿ ಹೇಳಿರಿ; ಅವನಿಗೆ ನಾವು ನಮ್ಮ ದೃಷ್ಟಾಂತಗಳ ಜ್ಞಾನವನ್ನು ನೀಡಿದ್ದೆವು ಅನಂತರ ಅವನು ಅವುಗಳಿಂದ ಹೊರಬಂದುಬಿಟ್ಟನು. ಬಳಿಕ ಶೈತಾನನು ಅವನ ಹಿಂದೆ ಬಿದ್ದನು. ಹೀಗೆ ಅವನು ಪಥಭ್ರಷ್ಟರಲ್ಲಿ ಸೇರಿದನು.
ئەرەپچە تەپسىرلەر:
وَلَوْ شِئْنَا لَرَفَعْنٰهُ بِهَا وَلٰكِنَّهٗۤ اَخْلَدَ اِلَی الْاَرْضِ وَاتَّبَعَ هَوٰىهُ ۚ— فَمَثَلُهٗ كَمَثَلِ الْكَلْبِ ۚ— اِنْ تَحْمِلْ عَلَیْهِ یَلْهَثْ اَوْ تَتْرُكْهُ یَلْهَثْ ؕ— ذٰلِكَ مَثَلُ الْقَوْمِ الَّذِیْنَ كَذَّبُوْا بِاٰیٰتِنَا ۚ— فَاقْصُصِ الْقَصَصَ لَعَلَّهُمْ یَتَفَكَّرُوْنَ ۟
ಮತ್ತು ನಾವು ಇಚ್ಛಿಸುತ್ತಿದ್ದರೆ ಆ ಜ್ಞಾನದ ನಿಮಿತ್ತ ಅವನನ್ನು ಉನ್ನತಕ್ಕೇರಿಸುತ್ತಿದ್ದೆವು. ಆದರೆ ಅವನು ಐಹಿಕತೆಯೆಡೆಗೆ ವಾಲಿ ತನ್ನ ಸ್ವೇಚ್ಛೆಯನ್ನು ಅನುಸರಿಸಿದನು. ಹೀಗೆ ಅವನ ಸ್ಥಿತಿಯು ನಾಯಿಯಂತಾಗಿ ಬಿಟ್ಟಿತು. ನೀನು ಅದನ್ನು ಅಟ್ಟಿದರೂ ಅದು ನಾಲಿಗೆ ಚಾಚಿಕೊಂಡಿರುತ್ತದೆ. ಮತ್ತು ನೀನದನ್ನು ಬಿಟ್ಟರೂ ಅದು ನಾಲಿಗೆ ಚಾಚಿಕೊಂಡಿರುತ್ತದೆ. ನಮ್ಮ ದೃಷ್ಟಾಂತಗಳನ್ನು ನಿರಾಕರಿಸುವವರ ಉಪಮೆ ಇದೇ ಆಗಿರುತ್ತದೆ. ಆದ್ದರಿಂದ ನೀವು ಯಹೂದರಿಗೆ ಇದನ್ನು ವಿವರಿಸಿ ಕೊಡಿರಿ. ಪ್ರಾಯಶಃ ಅವರು ಚಿಂತಿಸಬಹುದು.
ئەرەپچە تەپسىرلەر:
سَآءَ مَثَلَا ١لْقَوْمُ الَّذِیْنَ كَذَّبُوْا بِاٰیٰتِنَا وَاَنْفُسَهُمْ كَانُوْا یَظْلِمُوْنَ ۟
ನಮ್ಮ ದೃಷ್ಟಾಂತಗಳನ್ನು ನಿರಾಕರಿಸಿದವರ ಉಪಮೆಯು ಅತಿ ನಿಕೃಷ್ಟವಾಗಿದೆ ಮತ್ತು ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುತ್ತಿದ್ದರು.
ئەرەپچە تەپسىرلەر:
مَنْ یَّهْدِ اللّٰهُ فَهُوَ الْمُهْتَدِیْ ۚ— وَمَنْ یُّضْلِلْ فَاُولٰٓىِٕكَ هُمُ الْخٰسِرُوْنَ ۟
ಅಲ್ಲಾಹನು ಯಾರಿಗೆ ಸನ್ಮಾರ್ಗವನ್ನು ಕರುಣಿಸುವನೋ ಅವನೇ ಸನ್ಮಾರ್ಗವನ್ನು ಪಡೆಯುವವನಾಗಿದ್ದಾನೆ. ಮತ್ತು ಅವನು ಯಾರನ್ನು ಪಥಭ್ರಷ್ಟಗೊಳಿಸುವನೋ ಅವರೇ ನಷ್ಟ ಹೊಂದುವವರಾಗಿದ್ದಾರೆ.
ئەرەپچە تەپسىرلەر:
 
مەنالار تەرجىمىسى سۈرە: ئەئراپ
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش