Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: ئەنئام   ئايەت:
ذٰلِكَ اَنْ لَّمْ یَكُنْ رَّبُّكَ مُهْلِكَ الْقُرٰی بِظُلْمٍ وَّاَهْلُهَا غٰفِلُوْنَ ۟
ಇದು (ಸಂದೇಶವಾಹಕರನ್ನು ನಿಯೋಗಿಸುವುದು) ನಿಮ್ಮ ಪ್ರಭುವು ಯಾವುದೇ ನಾಡನ್ನು ಅದರ ನಿವಾಸಿಗಳು ಅಜ್ಞರಾಗಿರುವ ಸ್ಥಿತಿಯಲ್ಲಿ ಅವರ ಸತ್ಯನಿಷೇಧದ ನಿಮಿತ್ತ ನಾಶ ಮಾಡುವವನಲ್ಲ ಎಂಬುದರಿAದಾಗಿದೆ.
ئەرەپچە تەپسىرلەر:
وَلِكُلٍّ دَرَجٰتٌ مِّمَّا عَمِلُوْا ؕ— وَمَا رَبُّكَ بِغَافِلٍ عَمَّا یَعْمَلُوْنَ ۟
ಪ್ರತಿಯೊಬ್ಬರಿಗೂ ತಮ್ಮ ಕರ್ಮಗಳ ಪ್ರತಿಫಲವಾಗಿ ಪದವಿಗಳಿವೆ ಮತ್ತು ನಿಮ್ಮ ಪ್ರಭು ಅವರ ಕರ್ಮಗಳ ಕುರಿತು ಅಲಕ್ಷö್ಯನಲ್ಲ.
ئەرەپچە تەپسىرلەر:
وَرَبُّكَ الْغَنِیُّ ذُو الرَّحْمَةِ ؕ— اِنْ یَّشَاْ یُذْهِبْكُمْ وَیَسْتَخْلِفْ مِنْ بَعْدِكُمْ مَّا یَشَآءُ كَمَاۤ اَنْشَاَكُمْ مِّنْ ذُرِّیَّةِ قَوْمٍ اٰخَرِیْنَ ۟ؕ
ನಿಮ್ಮ ಪ್ರಭು ನಿರಪೇಕ್ಷನು, ಕರುಣೆಯುಳ್ಳವನು ಆಗಿದ್ದಾನೆ. ಅವನಿಚ್ಛಿಸಿದರೆ ನಿಮ್ಮನ್ನು ತೊಲಗಿಸಿ ಬೇರೆ ಜನತೆಯ ಸಂತಾನಗಳಿAದ ನಿಮ್ಮನ್ನು ಉಂಟುಮಾಡಿದAತೆ ನಿಮ್ಮ ನಂತರ ತಾನಿಚ್ಛಿಸುವವರನ್ನು ನಿಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡುವನು.
ئەرەپچە تەپسىرلەر:
اِنَّ مَا تُوْعَدُوْنَ لَاٰتٍ ۙ— وَّمَاۤ اَنْتُمْ بِمُعْجِزِیْنَ ۟
ನಿಮಗೆ ಎಚ್ಚರಿಗೆ ನೀಡಲಾಗುತ್ತಿರುವುದು ನಿಸ್ಸಂದೇಹವಾಗಿಯು (ಪ್ರಳಯವು) ಬರಲಿದೆ ಮತ್ತು ಅಲ್ಲಾಹನನ್ನು ಮಣಿಸಲು ನಿಮಗೆ ಸಾಧ್ಯವಿಲ್ಲ.
ئەرەپچە تەپسىرلەر:
قُلْ یٰقَوْمِ اعْمَلُوْا عَلٰی مَكَانَتِكُمْ اِنِّیْ عَامِلٌ ۚ— فَسَوْفَ تَعْلَمُوْنَ ۙ— مَنْ تَكُوْنُ لَهٗ عَاقِبَةُ الدَّارِ ؕ— اِنَّهٗ لَا یُفْلِحُ الظّٰلِمُوْنَ ۟
ಹೇಳಿರಿ: ನನ್ನ ಜನತೆಯೇ, ನೀವು ನಿಮ್ಮ ಕ್ರಮಕ್ಕನುಗುಣವಾಗಿ ಕರ್ಮವೆಸಗಿರಿ. ನಾನೂ ಕರ್ಮವೆಸಗುತ್ತಿರುವೆನು. ನೀವು ಸಧ್ಯದಲ್ಲೇ ತಿಳಿಯುವಿರಿ. ಪರಲೋಕ ನಿಲಯವು (ಸ್ವರ್ಗ) ಯಾರ ಪಾಲಿಗಿದೆ. ಖಂಡಿತವಾಗಿಯು ಅಕ್ರಮಿಗಳು ಯಶಸ್ಸು ಪಡೆಯಲಾರರು.
ئەرەپچە تەپسىرلەر:
وَجَعَلُوْا لِلّٰهِ مِمَّا ذَرَاَ مِنَ الْحَرْثِ وَالْاَنْعَامِ نَصِیْبًا فَقَالُوْا هٰذَا لِلّٰهِ بِزَعْمِهِمْ وَهٰذَا لِشُرَكَآىِٕنَا ۚ— فَمَا كَانَ لِشُرَكَآىِٕهِمْ فَلَا یَصِلُ اِلَی اللّٰهِ ۚ— وَمَا كَانَ لِلّٰهِ فَهُوَ یَصِلُ اِلٰی شُرَكَآىِٕهِمْ ؕ— سَآءَ مَا یَحْكُمُوْنَ ۟
ಅಲ್ಲಾಹನು ಸೃಷ್ಟಿಸಿದ ಕೃಷಿಯಿಂದ ಮತ್ತು ಜಾನುವಾರುಗಳಿಂದ ಅವನಿಗಾಗಿ ಒಂದು ಪಾಲನ್ನು ನಿಶ್ಚಯಿಸಿದ್ದಾರೆ ಮತ್ತು ತಮ್ಮ ಭ್ರಮೆಯಿಂದ ಇದು ಅಲ್ಲಾಹನದ್ದು ಮತ್ತು ಇನ್ನೊಂದು ಪಾಲನ್ನು ಇದು ತಮ್ಮ ಆರಾಧ್ಯರದ್ದು ಎಂದು ಹೇಳುತ್ತಾರೆ. ನಂತರ ಅವರ ಸಹಭಾಗಿಗಳಿರುವಂತಹದ್ದು ಅಲ್ಲಾಹನಿಗೆ ತಲುಪುವುದಿಲ್ಲ. ಹಾಗೂ ಅಲ್ಲಾಹನಿಗಿರುವುದು ಅವರ ಆರಾಧ್ಯರಿಗೆ ತಲುಪುತ್ತದೆ ಎಂದು ವಾದಿಸುತ್ತಾರೆ. ಅವರು ಮಾಡುತ್ತಿರುವ ತೀರ್ಪು ಅದೆಷ್ಟು ಕೆಟ್ಟದ್ದಾಗಿದೆ!
ئەرەپچە تەپسىرلەر:
وَكَذٰلِكَ زَیَّنَ لِكَثِیْرٍ مِّنَ الْمُشْرِكِیْنَ قَتْلَ اَوْلَادِهِمْ شُرَكَآؤُهُمْ لِیُرْدُوْهُمْ وَلِیَلْبِسُوْا عَلَیْهِمْ دِیْنَهُمْ ؕ— وَلَوْ شَآءَ اللّٰهُ مَا فَعَلُوْهُ فَذَرْهُمْ وَمَا یَفْتَرُوْنَ ۟
ಮತ್ತು ಅದೇ ರೀತಿ ಅನೇಕ ಬಹುದೇವವಿಶ್ವಾಸಿಗಳ ಮನಸ್ಸಿನಲ್ಲಿ ಅವರ ದೇವತೆಗಳು ಅವರ ಮಕ್ಕಳನ್ನು ಕೊಲ್ಲುವುದನ್ನು (ಅವರ ದೃಷ್ಟಿಯಲ್ಲಿ) ಸುಂದರವಾಗಿಸಿದ್ದಾರೆ. ಇದು ಅವರ ಸಂತಾನವನ್ನು ನಾಶಗೊಳಿಸಲೆಂದು, ಅವರ ಧರ್ಮವನ್ನು ಅವರಿಗೆ ಗೊಂದಲಕ್ಕೀಡು ಮಾಡಲೆಂದಾಗಿದೆ ಮತ್ತು ಅವರು ಹೇಳುತ್ತಾರೆ: ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರು ಅಂತಹ ಕೃತ್ಯವನ್ನು ಮಾಡುತ್ತಿರಲಿಲ್ಲ. ಆದ್ದರಿಂದ ನೀವು ಅವರನ್ನೂ, ಅವರು ಹೆಣೆಯುತ್ತಿರುವ ವಿಚಾರಗಳನ್ನೂ ಬಿಟ್ಟು ಬಿಡಿರಿ.
ئەرەپچە تەپسىرلەر:
 
مەنالار تەرجىمىسى سۈرە: ئەنئام
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش