Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: مۇجادەلە   ئايەت:

ಅಲ್ -ಮುಜಾದಿಲ

قَدْ سَمِعَ اللّٰهُ قَوْلَ الَّتِیْ تُجَادِلُكَ فِیْ زَوْجِهَا وَتَشْتَكِیْۤ اِلَی اللّٰهِ ۖۗ— وَاللّٰهُ یَسْمَعُ تَحَاوُرَكُمَا ؕ— اِنَّ اللّٰهَ سَمِیْعٌ بَصِیْرٌ ۟
(ಓ ಪೈಗಂಬರರೇ) ನಿಶ್ಚಯವಾಗಿಯೂ ನಿಮ್ಮೊಂದಿಗೆ ತನ್ನ ಪತಿಯ ವಿಚಾರದಲ್ಲಿತರ್ಕಿಸುತ್ತಿದ್ದಂತಹಾ ಹಾಗೂ ಅಲ್ಲಾಹನ ಮುಂದೆ ದೂರು ಹೇಳುತ್ತಿದ್ದಂತಹ ಸ್ತ್ರೀಯ ಮಾತನ್ನು ಅಲ್ಲಾಹನು ಆಲಿಸಿದನು ಮತ್ತು ಅಲ್ಲಾಹನು ನಿಮ್ಮಿಬ್ಬರ ಸಂಭಾಷಣೆಯನ್ನು ಆಲಿಸುತ್ತಿದ್ದನು. ನಿಸ್ಸಂಶಯವಾಗಿಯೂ ಅಲ್ಲಾಹನು ಆಲಿಸುವವನೂ ಎಲ್ಲವನ್ನು ನೋಡುವವನೂ ಆಗಿದ್ದಾನೆ.
ئەرەپچە تەپسىرلەر:
اَلَّذِیْنَ یُظٰهِرُوْنَ مِنْكُمْ مِّنْ نِّسَآىِٕهِمْ مَّا هُنَّ اُمَّهٰتِهِمْ ؕ— اِنْ اُمَّهٰتُهُمْ اِلَّا الّٰٓـِٔیْ وَلَدْنَهُمْ ؕ— وَاِنَّهُمْ لَیَقُوْلُوْنَ مُنْكَرًا مِّنَ الْقَوْلِ وَزُوْرًا ؕ— وَاِنَّ اللّٰهَ لَعَفُوٌّ غَفُوْرٌ ۟
ನಿಮ್ಮ ಪೈಕಿ ಯಾರು ತಮ್ಮ ಪತ್ನಿಯೊಂದಿಗೆ ಝಿಹಾರ್ ಮಾಡಿ (ತಾಯಿ ಎಂದು ಹೇಳಿ) ಬಿಡುತ್ತಾರೋ ವಸ್ತುತಃ ಅವರು ಅವರ ತಾಯಂದಿರರಾಗ ಲಾರರು ,ಅವರನ್ನು ಹೆತ್ತವರೇ ಅವರ ತಾಯಂದಿರು, ನಿಜವಾಗಿಯೂ ಅವರು ವಿವೇಕಕ್ಕೆ ನಿಲುಕದಂತಹ ಸುಳ್ಳು ಹೇಳುತ್ತಿದ್ದಾರೆ. ನಿಸ್ಸಂಶಯವಾಗಿಯೂ ಅಲ್ಲಾಹನು ಮನ್ನಿಸುವವನು ಕ್ಷಮಾಶೀಲನೂ ಆಗಿದ್ದಾನೆ.
ئەرەپچە تەپسىرلەر:
وَالَّذِیْنَ یُظٰهِرُوْنَ مِنْ نِّسَآىِٕهِمْ ثُمَّ یَعُوْدُوْنَ لِمَا قَالُوْا فَتَحْرِیْرُ رَقَبَةٍ مِّنْ قَبْلِ اَنْ یَّتَمَآسَّا ؕ— ذٰلِكُمْ تُوْعَظُوْنَ بِهٖ ؕ— وَاللّٰهُ بِمَا تَعْمَلُوْنَ خَبِیْرٌ ۟
ತಮ್ಮ ಸ್ತ್ರೀಯರೊಂದಿಗೆ ಝಿಹಾರ್ ಮಾಡುವವರು ತರುವಾಯ ತಾವು ಹೇಳಿದ ಮಾತಿನಿಂದ ಪಶ್ಚಾತ್ತಾಪ ಪಟ್ಟು ಮರಳಿದರೆ ಅವರು ಪರಸ್ಪರರನ್ನು ಸ್ಪರ್ಶಿಸುವ ಮೊದಲು ಒಬ್ಬ ಗುಲಾಮನನ್ನು ವಿಮೋಚಿಸತಕ್ಕದ್ದು. ಇದರ ಮೂಲಕ ನಿಮಗೆ ಉಪದೇಶ ನೀಡಲಾಗುತ್ತಿದೆ, ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಸೂಕ್ಷ್ಮಜ್ಞಾನಿಯಾಗಿರುವನು.
ئەرەپچە تەپسىرلەر:
فَمَنْ لَّمْ یَجِدْ فَصِیَامُ شَهْرَیْنِ مُتَتَابِعَیْنِ مِنْ قَبْلِ اَنْ یَّتَمَآسَّا ۚ— فَمَنْ لَّمْ یَسْتَطِعْ فَاِطْعَامُ سِتِّیْنَ مِسْكِیْنًا ؕ— ذٰلِكَ لِتُؤْمِنُوْا بِاللّٰهِ وَرَسُوْلِهٖ ؕ— وَتِلْكَ حُدُوْدُ اللّٰهِ ؕ— وَلِلْكٰفِرِیْنَ عَذَابٌ اَلِیْمٌ ۟
ಇನ್ನು ಯಾರಿಗಾದರೂ ಗುಲಾಮನು ಸಿಗದಿದ್ದರೆ ಅವರು ಪರಸ್ಪರ ಸ್ಪರ್ಶಿಸುವ ಮೊದಲು ಅವನು ನಿರಂತರವಾಗಿ ಎರಡು ತಿಂಗಳ ಕಾಲ ಉಪವಾಸ ಆಚರಿಸಬೇಕಾಗಿದೆ, ಇದು ಸಾಧ್ಯವಾಗದಿದ್ದರೆ ಅವನು ಅರವತ್ತು ನಿರ್ಗತಿಕರಿಗೆ ಉಣಬಡಿಸಬೇಕಾಗಿದೆ. ಇದು ನೀವು ಅಲ್ಲಾಹನ ಹಾಗೂ ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿಡಲೆಂದಾಗಿದೆ. ಇವು ಅಲ್ಲಾಹನ ಮೇರೆಗಳಾಗಿವೆ. ಮತ್ತು ಸತ್ಯ ನಿಷೇಧಿಗಳಿಗೆ ವೇದನಾಜನಕ ಯಾತನೆ ಇದೆ.
ئەرەپچە تەپسىرلەر:
اِنَّ الَّذِیْنَ یُحَآدُّوْنَ اللّٰهَ وَرَسُوْلَهٗ كُبِتُوْا كَمَا كُبِتَ الَّذِیْنَ مِنْ قَبْلِهِمْ وَقَدْ اَنْزَلْنَاۤ اٰیٰتٍۢ بَیِّنٰتٍ ؕ— وَلِلْكٰفِرِیْنَ عَذَابٌ مُّهِیْنٌ ۟ۚ
ನಿಸ್ಸಂದೇಹವಾಗಿಯೂ ಅಲ್ಲಾಹನನ್ನು ಅವನ ಸಂದೇಶವಾಹಕರನ್ನು ವಿರೋಧಿಸುವವರು ತಮಗಿಂತ ಮುಂಚಿನವರು ನಿಂದಿಸಲ್ಪಟ್ಟAತೆ ಅವರೂ ನಿಂದಿಸಲ್ಪಡುವರು, ನಿಸ್ಸಂಶಯವಾಗಿಯೂ ನಾವು ಸುಸ್ಪಷ್ಟ ಪುರಾವೆಗಳನ್ನು ಅವತೀರ್ಣಗೊಳಿಸಿದ್ದೇವೆ ಮತ್ತು ಸತ್ಯ ನಿಷೇಧಿಗಳಿಗೆ ನಿಂದ್ಯತೆಯ ಯಾತನೆ ಇದೆ.
ئەرەپچە تەپسىرلەر:
یَوْمَ یَبْعَثُهُمُ اللّٰهُ جَمِیْعًا فَیُنَبِّئُهُمْ بِمَا عَمِلُوْا ؕ— اَحْصٰىهُ اللّٰهُ وَنَسُوْهُ ؕ— وَاللّٰهُ عَلٰی كُلِّ شَیْءٍ شَهِیْدٌ ۟۠
ಅಲ್ಲಾಹನು ಅವರೆಲ್ಲರನ್ನು ಎಬ್ಬಿಸಿ ಅವರಿಗೆ ಅವರು ಮಾಡಿದಂತಹ ಕರ್ಮಗಳನ್ನು ತಿಳಿಸಿಕೊಡುವ ದಿನ. ಅಲ್ಲಾಹನು ಅದನ್ನು ಎಣಿಸಿ ದಾಖಲಿಸಿದ್ದಾನೆ. ಆದರೆ ಅವರು ಅದನ್ನು ಮರೆತುಬಿಟ್ಟಿದ್ದರು ಅಲ್ಲಾಹನು ಎಲ್ಲಾ ಸಂಗತಿಗಳ ಮೇಲೆ ಸಾಕ್ಷಿಯಾಗಿದ್ದಾನೆ.
ئەرەپچە تەپسىرلەر:
 
مەنالار تەرجىمىسى سۈرە: مۇجادەلە
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش