Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: پاتىر   ئايەت:
وَمَا یَسْتَوِی الْبَحْرٰنِ ۖۗ— هٰذَا عَذْبٌ فُرَاتٌ سَآىِٕغٌ شَرَابُهٗ وَهٰذَا مِلْحٌ اُجَاجٌ ؕ— وَمِنْ كُلٍّ تَاْكُلُوْنَ لَحْمًا طَرِیًّا وَّتَسْتَخْرِجُوْنَ حِلْیَةً تَلْبَسُوْنَهَا ۚ— وَتَرَی الْفُلْكَ فِیْهِ مَوَاخِرَ لِتَبْتَغُوْا مِنْ فَضْلِهٖ وَلَعَلَّكُمْ تَشْكُرُوْنَ ۟
ಮತ್ತು ಆ ಎರಡು ಸಮುದ್ರಗಳು ಸಮಾನವಾಗಿಲ್ಲ. ಅದರಲ್ಲಿ ಒಂದು ಸಿಹಿಯೂ, ದಾಹ ನೀಗಿಸುವಂತಹದು ಮತ್ತು ಕುಡಿಯಲು ರುಚಿಕರ ವಾದುದ್ದಾಗಿದೆ ಮತ್ತೊಂದು ಉಪ್ಪುಕಹಿಯಾದುದ್ದಾಗಿದೆ. ನೀವು ಇವುಗಳೆರಡರಿಂದ ತಾಜಾ ಮಾಂಸವನ್ನು ತಿನ್ನುತ್ತೀರಿ ಮತ್ತು ನೀವು ಧರಿಸುವಂತಹ ಆಭರಣಗಳನ್ನು ಹೊರತೆಗೆಯುತ್ತೀರಿ ಮತ್ತು ಅದರಲ್ಲಿ ಹಡಗುಗಳು ನೀರನ್ನು ಸೀಳುತ್ತಾ ಸಾಗುತ್ತಿರುವುದಾಗಿ ನೀವು ಕಾಣುವಿರಿ. ಇವೆಲ್ಲವೂ ನೀವು ಅವನ ಅನುಗ್ರಹವನ್ನು ಅರಸಲೆಂದೂ ಮತ್ತು ಕೃತಜ್ಞತೆ ತೋರಿಸಲೆಂದಾಗಿದೆ.
ئەرەپچە تەپسىرلەر:
یُوْلِجُ الَّیْلَ فِی النَّهَارِ وَیُوْلِجُ النَّهَارَ فِی الَّیْلِ ۙ— وَسَخَّرَ الشَّمْسَ وَالْقَمَرَ ۖؗ— كُلٌّ یَّجْرِیْ لِاَجَلٍ مُّسَمًّی ؕ— ذٰلِكُمُ اللّٰهُ رَبُّكُمْ لَهُ الْمُلْكُ ؕ— وَالَّذِیْنَ تَدْعُوْنَ مِنْ دُوْنِهٖ مَا یَمْلِكُوْنَ مِنْ قِطْمِیْرٍ ۟ؕ
ಅವನು ರಾತ್ರಿಯನ್ನು ಹಗಲಿನೊಳಗೆ ಪ್ರವೇಶಿಸುತ್ತಾನೆ ಮತ್ತು ಹಗಲನ್ನು ರಾತ್ರಿಯೊಳಗೆ ಪ್ರವೇಶಿಸುತ್ತಾನೆ ಮತ್ತು ಅವನು ಸೂರ್ಯನನ್ನು ಚಂದ್ರನನ್ನು ಕಾರ್ಯನಿರತಗೊಳಿಸಿದ್ದಾನೆ. ಪ್ರತಿಯೊಂದೂ ನಿಶ್ಚಿತವಾದ ಅವಧಿಯೆಡೆಗೆ ಸಂಚರಿಸುತ್ತಿದೆ. ಇವನು ಅಲ್ಲಾಹನು ನಿಮ್ಮೆಲ್ಲರ ಪ್ರಭು ಅವನದೇ ಅಧಿಪತ್ಯವಿರುವುದು ಮತ್ತು ನೀವು ಅವನ ಹೊರತು ಕರೆದು ಬೇಡುತ್ತಿರುವವರು ಒಂದು ಖರ್ಜೂರ ಬೀಜದ ಪೊರೆಯ ಒಡೆಯರೂ ಅಲ್ಲ.
ئەرەپچە تەپسىرلەر:
اِنْ تَدْعُوْهُمْ لَا یَسْمَعُوْا دُعَآءَكُمْ ۚ— وَلَوْ سَمِعُوْا مَا اسْتَجَابُوْا لَكُمْ ؕ— وَیَوْمَ الْقِیٰمَةِ یَكْفُرُوْنَ بِشِرْكِكُمْ ؕ— وَلَا یُنَبِّئُكَ مِثْلُ خَبِیْرٍ ۟۠
ನೀವು ಅವರನ್ನು ಕರೆದು ಬೇಡುವುದಾದರೆ ನಿಮ್ಮ ಕರೆಯನ್ನು ಅವರು ಆಲಿಸಲಾರರು. ಒಂದು ವೇಳೆ ಅವರು ಆಲಿಸಿದರೂ ನಿಮಗೆ ಓಗೊಡಲಾರರು ಬದಲಾಗಿ ಅವರು ಪ್ರಳಯ ದಿನದಂದು ನಿಮ್ಮ ಈ ಸಹಭಾಗಿತ್ವವನ್ನು ಸ್ಪಷ್ಟವಾಗಿ ನಿರಾಕರಿಸಿ ಬಿಡುವರು ಮತ್ತು ನಿಮಗೆ ಅಲ್ಲಾಹನಂತೆ ಯಾರು ವಿಷಯಗಳನ್ನು ತಿಳಿಸಿಕೊಡಲಾರರು.
ئەرەپچە تەپسىرلەر:
یٰۤاَیُّهَا النَّاسُ اَنْتُمُ الْفُقَرَآءُ اِلَی اللّٰهِ ۚ— وَاللّٰهُ هُوَ الْغَنِیُّ الْحَمِیْدُ ۟
ಓ ಜನರೇ, ನೀವು ಅಲ್ಲಾಹನ ಅವಲಂಬಿತರಾಗಿದ್ದೀರಿ ಮತ್ತು ಅಲ್ಲಾಹನು ನಿರಪೇಕ್ಷಕನೂ, ಸ್ತುತ್ಯರ್ಹನೂ ಆಗಿದ್ದಾನೆ.
ئەرەپچە تەپسىرلەر:
اِنْ یَّشَاْ یُذْهِبْكُمْ وَیَاْتِ بِخَلْقٍ جَدِیْدٍ ۟ۚ
ಅವನು ಇಚ್ಛಿಸಿದರೆ ನಿಮ್ಮನ್ನು ನಾಶಪಡಿಸಿ ಹೊಸ ಸೃಷ್ಟಿಯೊಂದನ್ನು ತರುವನು.
ئەرەپچە تەپسىرلەر:
وَمَا ذٰلِكَ عَلَی اللّٰهِ بِعَزِیْزٍ ۟
ಮತ್ತು ಅಲ್ಲಾಹನ ಪಾಲಿಗೆ ಅದು ಕಿಂಚಿತ್ತೂ ಕಷ್ಟವಲ್ಲ.
ئەرەپچە تەپسىرلەر:
وَلَا تَزِرُ وَازِرَةٌ وِّزْرَ اُخْرٰی ؕ— وَاِنْ تَدْعُ مُثْقَلَةٌ اِلٰی حِمْلِهَا لَا یُحْمَلْ مِنْهُ شَیْءٌ وَّلَوْ كَانَ ذَا قُرْبٰی ؕ— اِنَّمَا تُنْذِرُ الَّذِیْنَ یَخْشَوْنَ رَبَّهُمْ بِالْغَیْبِ وَاَقَامُوا الصَّلٰوةَ ؕ— وَمَنْ تَزَكّٰی فَاِنَّمَا یَتَزَكّٰی لِنَفْسِهٖ ؕ— وَاِلَی اللّٰهِ الْمَصِیْرُ ۟
ಪಾಪದ ಹೊರೆ ಹೊರುವ ಯಾವೊಬ್ಬ ವ್ಯಕ್ತಿಯು, ಮತ್ತೊಬ್ಬ ವ್ಯಕ್ತಿಯ ಹೊರೆಯನ್ನು ಹೊರಲಾರನು. ಭಾರ ಹೊತ್ತ ವ್ಯಕ್ತಿಯು ತನ್ನ ಭಾರವನ್ನು ಹೊರಲೆಂದು ಇತರರನ್ನು ಕರೆದರೂ ಅವನು ಆಪ್ತ ಸಂಬAಧಿಕನಾಗಿದ್ದರೂ ಅದರಿಂದ ಅಲ್ಪವನ್ನೂ ಹೊರಲಾರನು. ತಮ್ಮ ಪ್ರಭುವನ್ನು ಅಗೋಚರವಾಗಿ ಯಾರು ಭಯಪಡುತ್ತಾರೋ ಹಾಗೂ ನಮಾಝ್ ಸಂಸ್ಥಾಪಿಸುತ್ತಾರೋ ಅವರನ್ನು ಮಾತ್ರ ನೀವು ಎಚ್ಚರಿಸಬಲ್ಲಿರಾ? ಮತ್ತು ಯಾರು ಪರಿಶುದ್ಧತೆ ಪಡಿಯುತ್ತಾರೋ ಅವರು ಸ್ವತಃ ತನ್ನ ಲಾಭಕ್ಕಾಗಿ ಪರಿಶುದ್ಧಿ ಪಡೆಯುತ್ತಾನೆ. ಕೊನೆಗೆ ಅಲ್ಲಾಹನೆಡೆಗೇ ಮರಳುವಿಕೆ ಇರುವುದು.
ئەرەپچە تەپسىرلەر:
 
مەنالار تەرجىمىسى سۈرە: پاتىر
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش