Check out the new design

அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி * - மொழிபெயர்ப்பு அட்டவணை


மொழிபெயர்ப்பு அத்தியாயம்: அஸ்ஸஜதா   வசனம்:
وَلَنُذِیْقَنَّهُمْ مِّنَ الْعَذَابِ الْاَدْنٰی دُوْنَ الْعَذَابِ الْاَكْبَرِ لَعَلَّهُمْ یَرْجِعُوْنَ ۟
ಖಂಡಿತವಾಗಿಯು ನಾವು ಅವರಿಗೆ ಮಹಾ ಶಿಕ್ಷೆಯ ಮೊದಲು ಇಹಲೋಕದಲ್ಲೇ ಸಣ್ಣ ಶಿಕ್ಷೆಯ ರುಚಿಯನ್ನು ಸವಿಸುವೆವು. ಇದು ಅವರು ಮರಳಲೆಂದಾಗಿದೆ.
அரபு விரிவுரைகள்:
وَمَنْ اَظْلَمُ مِمَّنْ ذُكِّرَ بِاٰیٰتِ رَبِّهٖ ثُمَّ اَعْرَضَ عَنْهَا ؕ— اِنَّا مِنَ الْمُجْرِمِیْنَ مُنْتَقِمُوْنَ ۟۠
ತನ್ನ ಪ್ರಭುವಿನ ಸೂಕ್ತಿಗಳ ಮೂಲಕ ಉಪದೇಶ ನೀಡಲಾದ ಬಳಿಕವೂ ಅವುಗಳಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಖಂಡಿತವಾಗಿಯೂ ಅಪರಾಧಿಗಳಿಂದ ನಾವು ಪ್ರತೀಕಾರ ಪಡೆಯುವೆವು.
அரபு விரிவுரைகள்:
وَلَقَدْ اٰتَیْنَا مُوْسَی الْكِتٰبَ فَلَا تَكُنْ فِیْ مِرْیَةٍ مِّنْ لِّقَآىِٕهٖ وَجَعَلْنٰهُ هُدًی لِّبَنِیْۤ اِسْرَآءِیْلَ ۟ۚ
ನಿಸ್ಸಂಶಯವಾಗಿಯು ನಾವು ಮೂಸಾರವರಿಗೆ ಗ್ರಂಥವನ್ನು ನೀಡಿದ್ದೇವು. ಆದ್ದರಿಂದ ನೀವು ಅವರನ್ನು ಭೇಟಿಯಾಗುವ ವಿಚಾರದಲ್ಲಿ ಸಂದೇಹಕ್ಕೊಳಗಾಗ ಬೇಡಿರಿ. ನಾವು ತೌರಾತನ್ನು ಇಸ್ರಾಯೀಲ್ ಸಂತತಿಗಳಿಗೆ ಸನ್ಮಾರ್ಗದರ್ಶನವನ್ನಾಗಿ ಮಾಡಿದೆವು.
அரபு விரிவுரைகள்:
وَجَعَلْنَا مِنْهُمْ اَىِٕمَّةً یَّهْدُوْنَ بِاَمْرِنَا لَمَّا صَبَرُوْا ؕ۫— وَكَانُوْا بِاٰیٰتِنَا یُوْقِنُوْنَ ۟
ಅವರು ಸಹನೆ ಪಾಲಿಸಿದಾಗ ಅವರ ಪೈಕಿ ನಮ್ಮ ಆಜ್ಞೆಯನ್ನು ಅನುಸರಿಸಿ ಮಾರ್ಗದರ್ಶನ ನೀಡುವಂತಹ ನಾಯಕರನ್ನು ನಾವು ಉಂಟುಮಾಡಿದೆವು ಮತ್ತು ಅವರು ನಮ್ಮ ಸೂಕ್ತಿಗಳ ಮೇಲೆ ದೃಢವಿಶ್ವಾಸ ಹೊಂದಿದ್ದರು
அரபு விரிவுரைகள்:
اِنَّ رَبَّكَ هُوَ یَفْصِلُ بَیْنَهُمْ یَوْمَ الْقِیٰمَةِ فِیْمَا كَانُوْا فِیْهِ یَخْتَلِفُوْنَ ۟
ಅವರು ಪರಸ್ಪರ ಭಿನ್ನತೆತೋರುವ ವಿಷಯಗಳಲ್ಲಿ ಪುನರುತ್ಥಾನ ದಿನದಂದು ಅವರ ಮಧ್ಯೆ ನಿಮ್ಮ ಪ್ರಭು ತೀರ್ಪು ನೀಡುವನು.
அரபு விரிவுரைகள்:
اَوَلَمْ یَهْدِ لَهُمْ كَمْ اَهْلَكْنَا مِنْ قَبْلِهِمْ مِّنَ الْقُرُوْنِ یَمْشُوْنَ فِیْ مَسٰكِنِهِمْ ؕ— اِنَّ فِیْ ذٰلِكَ لَاٰیٰتٍ ؕ— اَفَلَا یَسْمَعُوْنَ ۟
ಇವರಿಗಿಂತ ಮುಂಚೆ ಅದೆಷ್ಟೋ ಪೀಳಿಗೆಗಳನ್ನು ನಾವು ನಾಶಗೊಳಿಸಿದ್ದೇವೆ ಎಂಬ ವಿಚಾರವು ಇವÀರಿಗೆ ಸನ್ಮಾರ್ಗವನ್ನು ತೋರಿಸಿಕೊಡಲಿಲ್ಲವೇ? ಅವರ ನಾಡುಗಳಲ್ಲಿ ಅವರು ಹಾದು ಹೋಗುತ್ತಿದ್ದಾರೆ. ಖಂಡಿತವಾಗಿಯೂ ಇದರಲ್ಲಿ ದೊಡ್ಡ ದೃಷ್ಟಾಂತಗಳಿವೆ. ಹಾಗಿದ್ದೂ ಇವರು ಅದನ್ನು ಆಲಿಸುವುದಿಲ್ಲವೇ?
அரபு விரிவுரைகள்:
اَوَلَمْ یَرَوْا اَنَّا نَسُوْقُ الْمَآءَ اِلَی الْاَرْضِ الْجُرُزِ فَنُخْرِجُ بِهٖ زَرْعًا تَاْكُلُ مِنْهُ اَنْعَامُهُمْ وَاَنْفُسُهُمْ ؕ— اَفَلَا یُبْصِرُوْنَ ۟
ನಾವು ಬರಡು ಭೂಮಿಯೆಡೆಗೆ ನೀರನ್ನು ಹರಿಸಿ ತನ್ಮೂಲಕ ಅವರ ಜಾನುವಾರುಗಳಿಗೂ ಮತ್ತು ಸ್ವತಃ ಅವರಿಗೂ ತಿನ್ನುವಂತಹ ಕೃಷಿಯನ್ನು ನಾವು ಉತ್ಪಾದಿಸುತ್ತೇವೆ ಎಂಬುದನ್ನು ಅವರು ಕಾಣಲಿಲ್ಲವೇ? ಹಾಗಿದ್ದೂ ಅವರು ನೋಡುವುದಿಲ್ಲವೇ?
அரபு விரிவுரைகள்:
وَیَقُوْلُوْنَ مَتٰی هٰذَا الْفَتْحُ اِنْ كُنْتُمْ صٰدِقِیْنَ ۟
ಅವರು ಕೇಳುತ್ತಾರೆ, ಈ ತೀರ್ಪು ಯಾವಾಗ? ನೀವು ಸತ್ಯವಂತರಾಗಿದ್ದರೆ.
அரபு விரிவுரைகள்:
قُلْ یَوْمَ الْفَتْحِ لَا یَنْفَعُ الَّذِیْنَ كَفَرُوْۤا اِیْمَانُهُمْ وَلَا هُمْ یُنْظَرُوْنَ ۟
ಪೈಗಂಬರರೇ ಉತ್ತರಿಸಿರಿ: ಅವಿಶ್ವಾಸಿಗಳಾಗಿರುವ ಜನರಿಗೆ ತೀರ್ಪಿನ ದಿನ ವಿಶ್ವಾಸ ತಾಳುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ಅವರಿಗೆ ಕಾಲಾವಕಾಶವನ್ನೂ ನೀಡಲಾಗದು.
அரபு விரிவுரைகள்:
فَاَعْرِضْ عَنْهُمْ وَانْتَظِرْ اِنَّهُمْ مُّنْتَظِرُوْنَ ۟۠
ಆದ್ದರಿಂದ ನೀವು ಅವರನ್ನು ನಿರ್ಲಕ್ಷಿಸಿರಿ ಮತ್ತು ನಿರೀಕ್ಷಿಸುತ್ತಿರಿ. ಅವರು ಸಹ ನಿರೀಕ್ಷಿಸುವವರಾಗಿದ್ದಾರೆ.
அரபு விரிவுரைகள்:
 
மொழிபெயர்ப்பு அத்தியாயம்: அஸ்ஸஜதா
அத்தியாயங்களின் அட்டவணை பக்க எண்
 
அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி - மொழிபெயர்ப்பு அட்டவணை

அதை மொழிபெயர்த்தவர் ஷேக் பஷீர் மைசூரி. மொழிபெயர்ப்பு முன்னோடிகள் மையத்தின் கண்காணிப்பில் உருவாக்கப்பட்டது.

மூடுக