Check out the new design

د قرآن کریم د معناګانو ژباړه - کنادي ژباړه - حمزه بتور * - د ژباړو فهرست (لړلیک)

PDF XML CSV Excel API
Please review the Terms and Policies

د معناګانو ژباړه سورت: انبیاء   آیت:
وَجَعَلْنٰهُمْ اَىِٕمَّةً یَّهْدُوْنَ بِاَمْرِنَا وَاَوْحَیْنَاۤ اِلَیْهِمْ فِعْلَ الْخَیْرٰتِ وَاِقَامَ الصَّلٰوةِ وَاِیْتَآءَ الزَّكٰوةِ ۚ— وَكَانُوْا لَنَا عٰبِدِیْنَ ۟ۙ
ನಾವು ಅವರನ್ನು ನಮ್ಮ ಆಜ್ಞೆಯಂತೆ ಮಾರ್ಗದರ್ಶನ ಮಾಡುವ ಮುಖಂಡರನ್ನಾಗಿ ಮಾಡಿದೆವು. ನಾವು ಅವರಿಗೆ ಸತ್ಕರ್ಮಗಳನ್ನು ಮಾಡಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ದೇವವಾಣಿಯನ್ನು (ನಿರ್ದೇಶನವನ್ನು) ನೀಡಿದೆವು. ಅವರು ನಮ್ಮನ್ನು ಮಾತ್ರ ಆರಾಧಿಸುವ ದಾಸರಾಗಿದ್ದರು.
عربي تفسیرونه:
وَلُوْطًا اٰتَیْنٰهُ حُكْمًا وَّعِلْمًا وَّنَجَّیْنٰهُ مِنَ الْقَرْیَةِ الَّتِیْ كَانَتْ تَّعْمَلُ الْخَبٰٓىِٕثَ ؕ— اِنَّهُمْ كَانُوْا قَوْمَ سَوْءٍ فٰسِقِیْنَ ۟ۙ
ನಾವು ಲೂತರಿಗೆ ತೀರ್ಪುಗಾರಿಕೆ ಮತ್ತು ಜ್ಞಾನವನ್ನು ದಯಪಾಲಿಸಿದೆವು. ಅಶ್ಲೀಲಕೃತ್ಯವನ್ನು ಮಾಡುತ್ತಿದ್ದ ಊರಿನಿಂದ ನಾವು ಅವರನ್ನು ಪಾರು ಮಾಡಿದೆವು. ನಿಶ್ಚಯವಾಗಿಯೂ ಆ ಊರಿನವರು ದುಷ್ಟ ಅವಿಧೇಯ ಜನರಾಗಿದ್ದರು.
عربي تفسیرونه:
وَاَدْخَلْنٰهُ فِیْ رَحْمَتِنَا ؕ— اِنَّهٗ مِنَ الصّٰلِحِیْنَ ۟۠
ನಾವು ಅವರನ್ನು (ಲೂತ್‍ರನ್ನು) ನಮ್ಮ ದಯೆಯಲ್ಲಿ ಸೇರಿಸಿದೆವು. ನಿಶ್ಚಯವಾಗಿಯೂ ಅವರು ನೀತಿವಂತರಲ್ಲಿ ಸೇರಿದ್ದರು.
عربي تفسیرونه:
وَنُوْحًا اِذْ نَادٰی مِنْ قَبْلُ فَاسْتَجَبْنَا لَهٗ فَنَجَّیْنٰهُ وَاَهْلَهٗ مِنَ الْكَرْبِ الْعَظِیْمِ ۟ۚ
ನೂಹರನ್ನು ಕೂಡ ನೆನಪಿಸಿಕೊಳ್ಳಿ! ಇದಕ್ಕೆ ಮೊದಲು ಅವರು ನಮ್ಮನ್ನು ಕರೆದು ಪ್ರಾರ್ಥಿಸಿದ ಸಂದರ್ಭದಲ್ಲಿ ನಾವು ಅವರ ಕರೆಗೆ ಉತ್ತರಿಸಿದೆವು. ನಂತರ ನಾವು ಅವರನ್ನು ಮತ್ತು ಅವರ ಕುಟುಂಬವನ್ನು ಮಹಾ ದುರಂತದಿಂದ ಪಾರು ಮಾಡಿದೆವು.
عربي تفسیرونه:
وَنَصَرْنٰهُ مِنَ الْقَوْمِ الَّذِیْنَ كَذَّبُوْا بِاٰیٰتِنَا ؕ— اِنَّهُمْ كَانُوْا قَوْمَ سَوْءٍ فَاَغْرَقْنٰهُمْ اَجْمَعِیْنَ ۟
ನಮ್ಮ ವಚನಗಳನ್ನು ನಿಷೇಧಿಸಿದ ಜನರ ವಿರುದ್ಧ ನಾವು ಅವರಿಗೆ (ನೂಹರಿಗೆ) ಸಹಾಯ ಮಾಡಿದೆವು. ನಿಶ್ಚಯವಾಗಿಯೂ ಅವರು ದುಷ್ಟ ಜನರಾಗಿದ್ದರು. ಆದ್ದರಿಂದ ನಾವು ಅವರೆಲ್ಲರನ್ನೂ ಮುಳುಗಿಸಿ ಕೊಂದೆವು.
عربي تفسیرونه:
وَدَاوٗدَ وَسُلَیْمٰنَ اِذْ یَحْكُمٰنِ فِی الْحَرْثِ اِذْ نَفَشَتْ فِیْهِ غَنَمُ الْقَوْمِ ۚ— وَكُنَّا لِحُكْمِهِمْ شٰهِدِیْنَ ۟ۙ
ದಾವೂದ್ ಮತ್ತು ಸುಲೈಮಾನರನ್ನು ನೆನಪಿಸಿಕೊಳ್ಳಿ! ಅವರಿಬ್ಬರು ಒಂದು ಹೊಲದ ವಿಷಯದಲ್ಲಿ ತೀರ್ಪು ನೀಡುತ್ತಿದ್ದರು. ಆ ಹೊಲಕ್ಕೆ ಕೆಲವು ಜನರ ಕುರಿಗಳು ನುಸುಳಿದ್ದವು. ಅವರು ನೀಡುವ ತೀರ್ಪಿಗೆ ನಾವು ಸಾಕ್ಷಿಯಾಗಿದ್ದೆವು.
عربي تفسیرونه:
فَفَهَّمْنٰهَا سُلَیْمٰنَ ۚ— وَكُلًّا اٰتَیْنَا حُكْمًا وَّعِلْمًا ؗ— وَّسَخَّرْنَا مَعَ دَاوٗدَ الْجِبَالَ یُسَبِّحْنَ وَالطَّیْرَ ؕ— وَكُنَّا فٰعِلِیْنَ ۟
ನಾವು ಸುಲೈಮಾನರಿಗೆ ಈ ಪ್ರಕರಣವು ಸರಿಯಾಗಿ ಅರ್ಥವಾಗುವಂತೆ ಮಾಡಿದೆವು.[1] ಅವರಿಬ್ಬರಿಗೂ ನಾವು ತೀರ್ಪುಗಾರಿಕೆ ಮತ್ತು ಜ್ಞಾನವನ್ನು ನೀಡಿದ್ದೆವು. ದಾವೂದರೊಂದಿಗೆ ಸ್ತುತಿಕೀರ್ತನೆ ಮಾಡಲು ನಾವು ಪರ್ವತಗಳನ್ನು ಮತ್ತು ಪಕ್ಷಿಗಳನ್ನು ಅವರಿಗೆ ಅಧೀನಗೊಳಿಸಿದೆವು. ನಾವು (ಅದನ್ನೆಲ್ಲಾ) ಮಾಡುವವರಾಗಿದ್ದೆವು.
[1] ಒಬ್ಬ ವ್ಯಕ್ತಿಯ ಹೊಲಕ್ಕೆ ಇನ್ನೊಬ್ಬ ವ್ಯಕ್ತಿಯ ಮೇಕೆಗಳು ಹೊಕ್ಕು ಅಲ್ಲಿದ್ದ ಬೆಳೆಗಳನ್ನೆಲ್ಲಾ ನಾಶ ಮಾಡಿದ್ದವು. ಈ ಪ್ರಕರಣದ ಬಗ್ಗೆ ದಾವೂದರಿಗೆ (ಅವರ ಮೇಲೆ ಶಾಂತಿಯಿರಲಿ) ದೂರು ಬಂದಾಗ, ಮೇಕೆಗಳ ಯಜಮಾನ ಮೇಕೆಗಳನ್ನು ಬೆಳೆಗಳನ್ನು ನಾಶ ಮಾಡಿದ್ದಕ್ಕೆ ಪರಿಹಾರವಾಗಿ ಹೊಲದ ಯಜಮಾನನಿಗೆ ನೀಡಬೇಕೆಂದು ಅವರು ತೀರ್ಪು ನೀಡಿದರು. ಆದರೆ ಸುಲೈಮಾನರು (ಅವರ ಮೇಲೆ ಶಾಂತಿಯಿರಲಿ) ನೀಡಿದ ತೀರ್ಪು ಬೇರೆ ರೀತಿಯಲ್ಲಿತ್ತು. ಒಂದು ಅವಧಿಯವರೆಗೆ ಮೇಕೆಗಳ ಯಜಮಾನ ಮೇಕೆಗಳನ್ನು ಹೊಲದ ಯಜಮಾನನಿಗೆ ಮತ್ತು ಹೊಲದ ಯಜಮಾನ ಹೊಲವನ್ನು ಮೇಕೆಗಳ ಯಜಮಾನನಿಗೆ ಕೊಡಬೇಕು. ಆ ಅವಧಿಯ ತನಕ ಹೊಲದ ಯಜಮಾನ ಮೇಕೆಗಳಿಂದ ಉಪಯೋಗ ಪಡೆಯಬೇಕು. ಅಷ್ಟರಲ್ಲಿ ಮೇಕೆಗಳ ಯಜಮಾನ ಹೊಲವನ್ನು ದುರಸ್ತಿಗೊಳಿಸಿ ಮೊದಲು ಹೇಗಿತ್ತೋ ಅದೇ ರೀತಿಯಲ್ಲಿ ಮರಳಿಸಬೇಕು. ಇದರಿಂದ ಹೊಲದ ಯಜಮಾನನಿಗೆ ಅಥವಾ ಮೇಕೆಗಳ ಯಜಮಾನನಿಗೆ ನಷ್ಟವಿಲ್ಲ. ಹೊಲವೂ ದುರಸ್ತಿಯಾಗುತ್ತದೆ, ಮೇಕೆಗಳೂ ಮರಳಿ ಸಿಗುತ್ತವೆ.
عربي تفسیرونه:
وَعَلَّمْنٰهُ صَنْعَةَ لَبُوْسٍ لَّكُمْ لِتُحْصِنَكُمْ مِّنْ بَاْسِكُمْ ۚ— فَهَلْ اَنْتُمْ شٰكِرُوْنَ ۟
ಯುದ್ಧದಲ್ಲಿ (ವೈರಿಗಳ ಏಟುಗಳಿಂದ) ನಿಮಗೆ ರಕ್ಷಣೆ ಒದಗಿಸುವ ಅಂಗಿಗಳ ತಯಾರಿಕೆಯನ್ನು ನಾವು ದಾವೂದರಿಗೆ ಕಲಿಸಿಕೊಟ್ಟೆವು.[1] ಆದರೂ ನೀವು ಕೃತಜ್ಞರಾಗುವುದಿಲ್ಲವೇ?
[1] ಅಲ್ಲಾಹು ದಾವೂದರಿಗೆ (ಅವರ ಮೇಲೆ ಶಾಂತಿಯಿರಲಿ) ಕಬ್ಬಿಣವನ್ನು ಮೃದುಗೊಳಿಸಿ ಕೊಟ್ಟಿದ್ದನು.
عربي تفسیرونه:
وَلِسُلَیْمٰنَ الرِّیْحَ عَاصِفَةً تَجْرِیْ بِاَمْرِهٖۤ اِلَی الْاَرْضِ الَّتِیْ بٰرَكْنَا فِیْهَا ؕ— وَكُنَّا بِكُلِّ شَیْءٍ عٰلِمِیْنَ ۟
ನಾವು ಸುಲೈಮಾನರಿಗೆ ಬಲವಾಗಿ ಬೀಸುವ ಗಾಳಿಯನ್ನು ಅಧೀನಗೊಳಿಸಿದೆವು. ಅದು ಅವರ ಆಜ್ಞೆಯಂತೆ ನಾವು ಸಮೃದ್ಧಗೊಳಿಸಿದ ಭೂಪ್ರದೇಶಕ್ಕೆ ಚಲಿಸುತ್ತಿತ್ತು.[1] ನಾವು ಎಲ್ಲಾ ವಿಷಯಗಳ ಬಗ್ಗೆಯೂ ಜ್ಞಾನವುಳ್ಳವರಾಗಿದ್ದೇವೆ.
[1] ಸುಲೈಮಾನರು (ಅವರ ಮೇಲೆ ಶಾಂತಿಯಿರಲಿ) ಹೇಳಿದ ಕಡೆಗೆ ಗಾಳಿ ಚಲಿಸುತ್ತಿತ್ತು. ಅವರು ಮತ್ತು ಅವರ ಆಸ್ಥಾನ ಮುಖಂಡರು ಆಸನಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಆ ಆಸನಗಳನ್ನು ಗಾಳಿಯು ಅವರು ಬಯಸುವ ಕಡೆಗೆ ಒಯ್ಯುತ್ತಿತ್ತು. ತಿಂಗಳುಗಳ ಕಾಲದ ದೂರವನ್ನು ಅವರು ಕೆಲವೇ ಕ್ಷಣಗಳಲ್ಲಿ ತಲುಪುತ್ತಿದ್ದರು.
عربي تفسیرونه:
 
د معناګانو ژباړه سورت: انبیاء
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - حمزه بتور - د ژباړو فهرست (لړلیک)

محمد حمزه بتور ژباړلی دی. د رواد الترجمة مرکز تر څارنې لاندې انکشاف ورکړل شوی.

بندول