Check out the new design

د قرآن کریم د معناګانو ژباړه - کنادي ژباړه - حمزه بتور * - د ژباړو فهرست (لړلیک)

PDF XML CSV Excel API
Please review the Terms and Policies

د معناګانو ژباړه سورت: طه   آیت:
قَالَ عِلْمُهَا عِنْدَ رَبِّیْ فِیْ كِتٰبٍ ۚ— لَا یَضِلُّ رَبِّیْ وَلَا یَنْسَی ۟ؗ
ಮೂಸಾ ಹೇಳಿದರು: “ಅವರ ಕುರಿತಾದ ಜ್ಞಾನವು ನನ್ನ ಪರಿಪಾಲಕನ (ಅಲ್ಲಾಹನ) ಬಳಿ ಒಂದು ಗ್ರಂಥದಲ್ಲಿದೆ. ನನ್ನ ಪರಿಪಾಲಕನು (ಅಲ್ಲಾಹು) ಯಾವುದೇ ಪ್ರಮಾದವೆಸಗುವುದಿಲ್ಲ; ಅವನು ಮರೆಯುವುದೂ ಇಲ್ಲ.”
عربي تفسیرونه:
الَّذِیْ جَعَلَ لَكُمُ الْاَرْضَ مَهْدًا وَّسَلَكَ لَكُمْ فِیْهَا سُبُلًا وَّاَنْزَلَ مِنَ السَّمَآءِ مَآءً ؕ— فَاَخْرَجْنَا بِهٖۤ اَزْوَاجًا مِّنْ نَّبَاتٍ شَتّٰی ۟
ಅವನು ಯಾರೆಂದರೆ, ನಿಮಗೆ ಭೂಮಿಯನ್ನು ಹಾಸಿನಂತೆ ಮಾಡಿಕೊಟ್ಟವನು, ಅದರಲ್ಲಿ ನಿಮಗೆ ನಡೆಯಲು ದಾರಿಗಳನ್ನು ತೆರೆದುಕೊಟ್ಟವನು ಮತ್ತು ಆಕಾಶದಿಂದ ಮಳೆಯನ್ನು ಇಳಿಸಿಕೊಟ್ಟವನು. ನಂತರ ಆ ನೀರಿನಿಂದ ನಾವು ವಿವಿಧ ತರಹದ ಸಸ್ಯಗಳು ಬೆಳೆಯುವಂತೆ ಮಾಡುತ್ತೇವೆ.
عربي تفسیرونه:
كُلُوْا وَارْعَوْا اَنْعَامَكُمْ ؕ— اِنَّ فِیْ ذٰلِكَ لَاٰیٰتٍ لِّاُولِی النُّهٰی ۟۠
ನೀವು ತಿನ್ನಿರಿ ಮತ್ತು ನಿಮ್ಮ ಜಾನುವಾರುಗಳನ್ನೂ ಮೇಯಿಸಿರಿ. ನಿಶ್ಚಯವಾಗಿಯೂ ಬುದ್ಧಿವಂತರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.
عربي تفسیرونه:
مِنْهَا خَلَقْنٰكُمْ وَفِیْهَا نُعِیْدُكُمْ وَمِنْهَا نُخْرِجُكُمْ تَارَةً اُخْرٰی ۟
ನಾವು ನಿಮ್ಮನ್ನು ಅದರಿಂದ (ಭೂಮಿಯಿಂದ) ಸೃಷ್ಟಿಸಿದೆವು, ನಿಮ್ಮನ್ನು ಅದಕ್ಕೇ ಮರಳಿಸುವೆವು ಮತ್ತು ಅದರಿಂದಲೇ ನಿಮ್ಮನ್ನು ಪುನಃ ಹೊರತರುವೆವು.
عربي تفسیرونه:
وَلَقَدْ اَرَیْنٰهُ اٰیٰتِنَا كُلَّهَا فَكَذَّبَ وَاَبٰی ۟
ನಾವು ಅವನಿಗೆ (ಫರೋಹನಿಗೆ) ನಮ್ಮ ಎಲ್ಲಾ ದೃಷ್ಟಾಂತಗಳನ್ನು ತೋರಿಸಿಕೊಟ್ಟೆವು. ಆದರೆ ಅವನು ನಿಷೇಧಿಸಿದನು ಮತ್ತು ನಿರಾಕರಿಸಿದನು.
عربي تفسیرونه:
قَالَ اَجِئْتَنَا لِتُخْرِجَنَا مِنْ اَرْضِنَا بِسِحْرِكَ یٰمُوْسٰی ۟
ಅವನು ಕೇಳಿದನು: “ಓ ಮೂಸಾ! ನೀನು ನಿನ್ನ ಮಾಟಗಾರಿಕೆಯನ್ನು ಬಳಸಿ ನಮ್ಮನ್ನು ನಮ್ಮ ದೇಶದಿಂದ ಓಡಿಸಲು ಇಲ್ಲಿಗೆ ಬಂದಿದ್ದೀಯಾ?
عربي تفسیرونه:
فَلَنَاْتِیَنَّكَ بِسِحْرٍ مِّثْلِهٖ فَاجْعَلْ بَیْنَنَا وَبَیْنَكَ مَوْعِدًا لَّا نُخْلِفُهٗ نَحْنُ وَلَاۤ اَنْتَ مَكَانًا سُوًی ۟
ನಾವು ಕೂಡ ಅದಕ್ಕೆ ಸಮಾನವಾದ ಮಾಟಗಾರಿಕೆಯನ್ನು ತರುವೆವು. ಆದ್ದರಿಂದ ನಮ್ಮಿಬ್ಬರ ನಡುವೆ ಒಂದು ಸಮಯವನ್ನು ನಿಶ್ಚಯಿಸು. ಅದನ್ನು ನಮ್ಮಿಬ್ಬರಲ್ಲಿ ಯಾರೂ ಉಲ್ಲಂಘಿಸಬಾರದು. ಖಾಲಿ ಮೈದಾನದಲ್ಲಿ ಸ್ಪರ್ಧೆ ನಡೆಯಲಿ.”
عربي تفسیرونه:
قَالَ مَوْعِدُكُمْ یَوْمُ الزِّیْنَةِ وَاَنْ یُّحْشَرَ النَّاسُ ضُحًی ۟
ಮೂಸಾ ಹೇಳಿದರು: “ಉತ್ಸವದ ದಿನವೇ ನಿಮಗಿರುವ ನಿಗದಿತ ಸಮಯವಾಗಿದೆ. ಪೂರ್ವಾಹ್ನದಲ್ಲೇ ಜನರು ಒಟ್ಟುಗೂಡಲಿ.”
عربي تفسیرونه:
فَتَوَلّٰی فِرْعَوْنُ فَجَمَعَ كَیْدَهٗ ثُمَّ اَتٰی ۟
ಫರೋಹ ಅಲ್ಲಿಂದ ನಿರ್ಗಮಿಸಿ ತನ್ನ ವ್ಯೂಹವನ್ನು ನಿರ್ಧರಿಸಿದನು. ನಂತರ ನಿಗದಿತ ಸಮಯಕ್ಕೆ ಬಂದನು.
عربي تفسیرونه:
قَالَ لَهُمْ مُّوْسٰی وَیْلَكُمْ لَا تَفْتَرُوْا عَلَی اللّٰهِ كَذِبًا فَیُسْحِتَكُمْ بِعَذَابٍ ۚ— وَقَدْ خَابَ مَنِ افْتَرٰی ۟
ಮೂಸಾ ಮಾಟಗಾರರೊಡನೆ ಹೇಳಿದರು: “ನಿಮಗೆ ದುರದೃಷ್ಟ ಕಾದಿದೆ! ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸಬೇಡಿ. ಹಾಗೇನಾದರೂ ಮಾಡಿದರೆ ಅವನು ನಿಮ್ಮನ್ನು ಶಿಕ್ಷೆಯ ಮೂಲಕ ಸರ್ವನಾಶ ಮಾಡುವನು. ಸುಳ್ಳನ್ನು ಆರೋಪಿಸುವವನು ಖಂಡಿತ ಪರಾಜಿತನಾಗುತ್ತಾನೆ.”
عربي تفسیرونه:
فَتَنَازَعُوْۤا اَمْرَهُمْ بَیْنَهُمْ وَاَسَرُّوا النَّجْوٰی ۟
ಜನರು ಪರಸ್ಪರ ತಮ್ಮ ತಮ್ಮಲ್ಲಿ ಭಿನ್ನ ಅಭಿಪ್ರಾಯಗಳನ್ನು ತಳೆದರು. ಅವರು ರಹಸ್ಯವಾಗಿ ಮಾತನಾಡತೊಡಗಿದರು.
عربي تفسیرونه:
قَالُوْۤا اِنْ هٰذٰنِ لَسٰحِرٰنِ یُرِیْدٰنِ اَنْ یُّخْرِجٰكُمْ مِّنْ اَرْضِكُمْ بِسِحْرِهِمَا وَیَذْهَبَا بِطَرِیْقَتِكُمُ الْمُثْلٰی ۟
ಅವರು ಹೇಳಿದರು: “ನಿಶ್ಚಯವಾಗಿಯೂ ಇವರಿಬ್ಬರು ಮಾಟಗಾರರಾಗಿದ್ದಾರೆ. ಇವರು ಇವರ ಮಾಟಗಾರಿಕೆಯಿಂದ ನಿಮ್ಮನ್ನು ಈ ದೇಶದಿಂದ ಓಡಿಸಲು ಮತ್ತು ನಿಮ್ಮ ಮಾದರಿಯೋಗ್ಯ ಸಂಪ್ರದಾಯವನ್ನು ನಾಶ ಮಾಡಲು ಬಯಸುತ್ತಾರೆ.
عربي تفسیرونه:
فَاَجْمِعُوْا كَیْدَكُمْ ثُمَّ ائْتُوْا صَفًّا ۚ— وَقَدْ اَفْلَحَ الْیَوْمَ مَنِ اسْتَعْلٰی ۟
ಆದ್ದರಿಂದ ನೀವು ನಿಮ್ಮ ತಂತ್ರದ ಬಗ್ಗೆ ದೃಢನಿರ್ಧಾರ ಮಾಡಿರಿ. ನಂತರ ಒಂದೇ ಸಾಲಿನಲ್ಲಿ ಬನ್ನಿರಿ. ಮೇಲುಗೈ ಸಾಧಿಸುವವರೇ ಇಂದು ಯಶಸ್ವಿಯಾಗುವರು.”
عربي تفسیرونه:
 
د معناګانو ژباړه سورت: طه
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - حمزه بتور - د ژباړو فهرست (لړلیک)

محمد حمزه بتور ژباړلی دی. د رواد الترجمة مرکز تر څارنې لاندې انکشاف ورکړل شوی.

بندول